ಹಲ್ಲೆ
ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ ಜಗನ್ನಾಥ ತಂದೆ ಧಾನಪ್ಪಾ ಸೋನಕಾಂಬಳೆ ಸಾ:ಕಿಣ್ಣಿ ಅಬ್ಬಾಸ ತಾ:ಆಳಂದ ಇವರು ದಿನಾಂಕ:15/06/2014
ರಂದು ಮದ್ಯಾಹ್ನ 02:30 ಗಂಟೆಗೆ ತಮ್ಮ ಅಕ್ಕನಾದ ಶಿವಮ್ಮ ಇವಳನ್ನು ನಿಮ್ಮ ಮನೆಗೆ ಏಕೆ
ಕರೆದುಕೊಂಡು ಹೋಗಿದಿರಿ ಏನು ಕಲಿಸಿದಿರಿ ಅಂತಾ ವಿಚಾರಿಸುವಾಗ ನಮ್ಮ ಎರಡನೇ ಅಣ್ಣ
ತಮ್ಮಕೀಯವರಾದ 1] ರಮೇಶ ತಂದೆ ಲಕ್ಷ್ಮಣ
ಸೊನಕಾಂಬಳೆ 2] ಸುಭಾಷ ತಂದೆ ಲಕ್ಷ್ಮಣ ಸೊನಕಾಂಬಳೆ 3] ಖಾಜಪ್ಪಾ ತಂದೆ ಲಕ್ಷ್ಮಣ ಸೊನಕಾಂಬಳೆ4] ಪುತಳಾಬಾಯಿ ಗಂಡ ಲಕ್ಷ್ಮಣ ಸೊನಕಾಂಬಳೆ
5] ಮಂಜುಳಾ ಗಂಡ ಸುಭಾಷ ಸೊನಕಾಂಬಳೆ 6] ಲಕ್ಷ್ಮಿಬಾಯಿ ಗಂಡ ಖಾಜಪ್ಪಾ ಸೊನಕಾಂಬಳೆ ಸಾ:ಎಲ್ಲರೂ
ಕಿಣ್ಣಿ ಅಬ್ಬಾಸ ಇವರೆಲ್ಲರೂ ಕೂಡಿಕೊಂಡು ನನಗೆ ಮತ್ತು ನನ್ನ ಹೆಂಡತಿ ಮಹಾದೇವಿಗೆ ಕೈಯಿಂದ ಮತ್ತು
ಕಲ್ಲಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡೆಸಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ ಸುಬಾಷ ತಂದೆ ಲಕ್ಷ್ಮಿಣ ಸೋನಕಾಂಬಳೆ ಸಾ:ಕಿಣ್ಣಿ ಅಬ್ಬಾಸ ತಾ:ಆಳಂದ ಇವರು ದಿನಾಂಕ: 15/06/2014
ರಂದು ಮದ್ಯಾಹ್ನ 02:30 ಗಂಟೆಗೆ ನಮ್ಮ ಮನೆಯ ಮುಂದೆ ನಮ್ಮ ತಾಯಿಯಾದ ಪುತಳಾಬಾಯಿ ಗಂಡ ಲಕ್ಷ್ಮಿಣ
ಸೋನಕಾಂಬಳೆ ಇವಳೊಂದಿಗೆ ಸುರೇಖಾ ಗಂಡ ಚಂದನ ಬಸಸೋಡೆ ಮತ್ತು ಮಹಾದೇವಿ ಗಂಡ ಜಗನ್ನಾಥ ಸೋನಕಾಂಬಳೆ
ಇವರು ಎಲ್ಲರೂ ಸೇರಿ ನಮ್ಮ ಅಕ್ಕನಿಗೆ ನಿಮ್ಮ ಮನೆಗೆ ಏಕೆ ಕರೆದುಕೊಂಡು ಹೋಗಿದಿರಿ ಅಂತಾ ನಮ್ಮ
ತಾಯಿ ಸಂಗಡ ತಕರಾರು ಮಾಡುತ್ತಿದಾಗ ಜಗನ್ನಾಥ ಇತನು ಬಂದು ನನ್ನ ತಾಯಿಗೆ ಕೈಯಿಂದ ಕಪಾಳ ಮೇಲೆ
ಎರಡು ಏಟು ಹೊಡೆದಾಗ ನಾನು ಅವನಿಗೆ ನಿಮ್ಮ ಅಕ್ಕ ನಮ್ಮ ಮನೆಗೆ ಬಂದರೆ ನಾವು ಏನು ಮಾಡಬೇಕು ಅಂತಾ
ಅಂದಿದಕ್ಕೆ ಜಗನ್ನಾಥ ಇತನು ಅಲೆ ಇದ್ದ ಒಂದು ಹಿಡಿಗಲ್ಲು ತಗೆದುಕೊಂಡು ನನ್ನ ಹಣೆಗೆ ಹೊಡೆದು
ರಕ್ತಗಾಯ ಪಡಿಸಿರುತ್ತಾನೆ. ಆಗ ಬಿಡಿಸಲು ಬಂದ ನನ್ನ ಅಣ್ಣಾ ಖಾಜಪ್ಪಾ ಇತನಿಗೆ ಚಂದನ್ ತಂದೆ
ಮಹಾದೇವ ಬನಸೋಡೆ ಇವನು ಅಲ್ಲೆ ಬಿದ್ದ ಹಿಡಿಗಲ್ಲು ತಗೆದುಕೊಂಡು ತಲೆಗೆ ಹೊಡೆದಿದ್ದರಿಂದ ಬುಗಟ್ಟಿ
ಬಂದಿರುತ್ತದೆ. ಮಹಾದೇವಿ ಗಂಡ ಜಗನ್ನಾಥ ಸೋನಕಾಂಬಳೆ, ಸುರೇಖಾ ಗಂಡ ಚಂದನ್ ಬನಸೋಡೆ ಇವರಿಬ್ಬರೂ ನನ್ನ ತಾಯಿಗೆ
ಕೈ ಹಿಡಿದು ಜಗ್ಗಾಡಿ ಇವರಿಗೆ ಸೊಕ್ಕು ಬಹಳ ಬಿಡಬೇಡಿರಿ ಇನ್ನೂ ಹೊಡೆಯಿರಿ ಅಂತಾ ಜೀವದ ಭಯ
ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀಮತಿ
ಶಶಿಕಲಾ ಗಂಡ ದೇವೀಂದ್ರಪ್ಪ ತಳವಾರ ಸಾ:ಇವಣಿ ಇವರ ಗಂಡನ ಹೆಸರಿಗೆ 10 ಗುಂಟೆ ಜಮೀನಿದ್ದು. ಅವರ ಅಣ್ಣ ತಮ್ಮಕಿಯ ಸೂರ್ಯಕಾಂತ ತಂದೆ ಗುಂಡಪ್ಪ
ತಳವಾರ ಇವರ ಹೊಲವು ಸದರಿ ಹೊಲಕ್ಕೆ ಹೊಂದಿಕೊಂಡಿದ್ದು. ಈಗ ಕೆಲವು ದಿವಸಗಳಿಂದ ಸದರಿ ಸೂರ್ಯಕಾಂತ ತಂದೆ
ಗುಂಡಪ್ಪ ಆತನ ಹೆಂಡತಿ ತಾರಾಬಾಯಿ ಆತನ ಮಕ್ಕಳಾದ ಗುಂಡಪ್ಪ ಹಾಗೂ ದೇವಪ್ಪ ಇವರು ಸದರಿ ಹೊಲದಲ್ಲಿ ತಮಗೂ
ಸಹ ಪಾಲು ಬರುತ್ತದೆ ಅಂತಾ ಈಗ ಕೆಲವು ದಿವಸಗಳಿಂದ ತಂಟೆ ತಕರಾರು ಮಾಡುತ್ತಾ ಬಂದು ಒಬ್ಬರಿಗೊಬ್ಬರು
ಹೊಡೆದಾಡಿದ್ದರಿಮದ ಹೋದ ವರ್ಷ ಕೇಸುಗಳು ದಾಖಲಾಗಿದ್ದು. ಅದೆ ವೈಮನಸ್ಸಿನಿಂದ ದಿನಾಂಕ:-
14-06-2014 ರಂದು 5.30 ಪಿ.ಎಮ್. ಸುಮಾರಿಗೆ ಪಿರ್ಯಾದಿಯ ಗಂಡ ತಮ್ಮ ಮನೆಯ ಹತ್ತಿರ ಇರುವ
ಅಗಸಿಯ ಹತ್ತಿರ ಸದರಿ ಹೊಲದ ವಿಷಯದ ಸಂಬಂದ ಮಾತನಾಡುತ್ತಾ ಕುಳಿತ್ತಿದ್ದಾಗ, ಮೇಲೆ ನಮೂದಿಸಿದ ಅಪಾದಿತರು ಕೈಯಲ್ಲಿ ಕೊಡಲಿ ಬಡಿಗೆ ಹಿಡಿದುಕೊಂಡು
ಬಂದು ಫಿರ್ಯಾದಿ ಗಂಡನಿಗೆ ಭೋಸಡಿ ಮಗನೆ ಹೊಲ ಹೇಗೆ ಮಾರಾಟ ಮಾಡುತ್ತಿ ಅದರಲ್ಲಿ ನಮಗೆ ಪಾಲು ಬರುತ್ತದೆ
ಅಂತಾ ಜಗಳ ತೆಗೆದು ಜೀವದ ಬೆದರಿಕೆ ಹಾಕಿ ಕೊಡಲಿಯಿಂದ ನನ್ನ ಗಂಡನ ತೆಲೆ ಹಿಂದೆ ಹೊಡೆದು ಭಾರಿ ರಕ್ತಗಾಯ
ಪಡಿಸಿ ಅದನ್ನು ನೋಡಿ ನಾನು ಬಿಡಿಸಲು ಹೋದಾಗ ನನಗೂ ಸಹ ಕಟ್ಟಿಗೆಯಿಂದ ಕೈಯಿಂದ ಕಾಲಿನಿಂದ ಹೊಡೆ ಬಡೆ
ಮಾಡಿ ಭಾರಿ ಗುಪ್ತಗಾಯ ಪಡಿಸಿ ಮರಣಾಂತಿಕ ಹಲ್ಲೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-06-2014 ರಂದು ಮಧ್ಯಾಹ್ನ 3=15 ಗಂಟೆ ಸುಮಾರಿಗೆ ನನ್ನ ಗಂಡನಾಧ
ಭಾರತ ಇವರು ಅವರು ಕೆಲಸ ಮಾಡುವ ವಿ.ಜಿ.ವುಮೇನ್ಸ ಹಾಸ್ಟೆಲ್ ದಿಂದ ಮನೆಗೆ ಬರುವ ಸಲುವಾಗಿ
ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಏಶಿಯಾನ ಮಹಲ್ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಇ-3168 ರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ
ಅಂತಾ ಶ್ರೀಮತಿ ಜಯಶ್ರೀಬಾಯಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 15-06-14 ರಂದು 5-30 ಪಿಎಂ
ಸುಮಾರಿಗೆ ಗುಲಬರ್ಗಾ ಕಡೆಯಿಂದ ಕ್ರೋಜರ ಎಪಿ 02 ಡಬ್ಲ್ಯೂ 7888 ಚಾಲಕ ಮಾನವನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಪ್ರಯಾಣಿಕರನ್ನು ಕ್ರೋಜರ ಎಪಿ 02 ಡಬ್ಲ್ಯೂ 7888 ನೇದ್ದರ ಒಳಗಡೆ ಹಿಂದೆ ಮುಂದೆ ಹಾಗೂ ಪುಟ್ಟ್ ರೆಸ್ಟ ನಿಲ್ಲಿಸಿಕೊಂಡು,ಪರ್ಮಿಟ ನಿಯಮಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕೂಡಿಸಿಕೊಂಡು ಮತ್ತು ನಿಲ್ಲಿಸಿಕೊಂಡು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ, ಪರ್ಮಿಟ್ ನಿಯಮ್ ಉಲ್ಲಂಘನೆ ಮಾಡಿರುತರ್ತಾನೆ ಅಂತಾ ಶ್ರೀ ಗೋವಿಂದ ಎ.ಎಸ್.ಐ. ಮಾಹಾಗಾಂವ ಪೊಲೀಸ ಠಾಣೆ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 15/06/2014 ರಂದು ದಂಗಾಪೂರ
ಗ್ರಾಮದಿಂದ ಕಡಗಂಚಿಗೆ ಹೋಗುವ ರೋಡಿಗೆ ಕೆನಲ ಹತ್ತಿರ ಇರುವ ಹಳ್ಳದ ಮುಂದೆ ಸಾರ್ವಜನಿಕ ರೋಡಿನ
ಮೇಲೆ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು
ಸಿಬ್ಬಂದಿ ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ದಂಗಾಪೂರ ಗ್ರಾಮದಿಂದ ಕಡಗಂಚಿಗೆ ಹೋಗುವ ರೋಡಿನ
ಕೆನಲ ಹತ್ತಿರ ಇರುವ ಹಳ್ಳದಲ್ಲಿ ಮರೆಯಾಗಿ ನಿಂತು ನೋಡಲಾಗಿ 07 ಜನ ವ್ಯಕ್ತಿಗಳು ದಂಗಾಪೂರ
ಗ್ರಾಮದಿಂದ ಕಡಗಂಚಿಗೆ ಹೋಗುವ ರೋಡಿನ ಕೆನಲ ಹತ್ತಿರ ಇರುವ ಹಳ್ಳದ ಮುಂದೆ ಸಾರ್ವಜನಿಕ ರೋಡಿನ
ಮೇಲೆ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ
ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ
ವಿಚಾರಿಸಿ ಚೆಕ ಮಾಡಲಾಗಿ 01] ದಾವಲಸಾಬ ತಂದೆ ಮೈಬೂಬಸಾಬ ಭೈರಾಮಡಗಿ 02] ನಾಗರಾಜ ತಂದೆ
ಬರಗಾಲಸಿದ್ದ ಪೂಜಾರಿ 03] ವೀರೆಂದ್ರ ತಂದೆ ಸಿದ್ದಣ್ಣಾ ಶೇಗಜಿ, 04] ಶರಣಬಸಪ್ಪ ತಂದೆ ಬೀರಣ್ಣಾ ಪೂಜಾರಿ 05] ಅಬ್ದುಲ ಖಾದರ ತಂದೆ ಲಾಡ್ಲೆ ಸಾಬ 06] ಮದರ
ಪಟೇಲ ತಂದೆ ಸಾಹೇಬ ಪಟೇಲ 07] ದೇವೆಂದ್ರ ತಂದೆ ಶಿವಶರಣಪ್ಪ
ನಾಟೀಕಾರ ಸಾ||
ಎಲ್ಲರು ದಂಗಾಪೂರ ಇವರಿಂದ ಒಟ್ಟು 12,560/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತ
ಮಾಡಿಕೊಂಡು ಮರಳಿ ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ
ದಾಖಲಿಸಲಾಗಿದೆ.
ನಿಂಬರ್ಗಾ
ಠಾಣೆ : ದಿನಾಂಕ 15/06/2014
ರಂದು ಜವಳಿ (ಡಿ) ಗ್ರಾಮದ ಶರಣ ನಗರದ ಮಜೀದಿಯ ಹಿಂದುಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಇಸ್ಪೇಟ್
ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು
ಸಿಬ್ಬಂದಿಯವರು ಮತ್ತು ಪಂಚರು ಕುಡಿಕೊಂಡು ಬಾತ್ಮಿ ಬಂದ ಸ್ಥಳವಾದ ಶರಣ ನಗರದ ಮಜೀದಿಯ ಹಿಂದುಗಡೆ
ಮರೆಯಲ್ಲಿ ನಿಂತು ನೋಡಲಾಗಿ 04 ಜನ ವ್ಯಕ್ತಿಗಳು ಮಜೀದಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ
ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ
ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ
ವಿಚಾರಿಸಿ ಚೆಕ ಮಾಡಲಾಗಿ 01] ಶಿವರಾಯ ತಂದೆ ಮಾಯಪ್ಪಾ ಪೂಜಾರಿ 02] ಹಣಮಂತ ತಂದೆ ಶ್ರೀಮಂತ
ಒಡೆಯರ 03] ಬಸವರಾಜ ತಂದೆ ಚಂದ್ರಶಾ ಖೇಡ 04] ಸಿದ್ದಾರಾಮ ತಂದೆ ಜಟ್ಟೆಪ್ಪಾ ಒಡೆಯರ ಸಾ||
ಎಲ್ಲರು ಜವಳಿ (ಡಿ) ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2300/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ
ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಮರಳಿ ನಿಂಬರ್ಗಾ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ
ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ
: ಶ್ರೀಮತಿ ಸೈಯದ ಅಜಮತ ನಾಜಮಿನ ಗಂಡ ಸೈಯದ ಮಸ್ತಾನ ಅಲಿ ಸಾ: ಮನೆ ನಂ 13 ಎಂ, ಆರ್ ಮೆಡಿಕಲ ಕಾಲೇಜ ಸೇಡಂ
ರಸ್ತೆ ಗುಲಬರ್ಗಾ ಇವರ ಮದುವೆಯು ಸುಮಾರು 4ವರ್ಷಗಳ
ಹಿಂದೆ ಅಂದರೆ 02.11.2010 ರಂದು ಸೈಯದ ಮಸ್ತಾನ
ಅಲಿ ತಂದೆ ಸೈಯದ ಹಿಮಾಯತ ಅಲಿ ಸಾ|| ಹುಮನಾಬಾದ ತಾ: ಹುಮನಾಬಾದ ಜಿ. ಬೀದರ ಇವರೊಂದಿಗೆ ಗುಲಬರ್ಗಾದ ಮೆಜಸ್ಟಿಕ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿರುತ್ತದೆ
ವಿವಾಹ ಸಮಯದಲ್ಲಿ ನನ್ನ ತಂದೆ ಮತ್ತು ಸಹೋದರರು ಕೂಡಿ 25,000/-ರೂ ಹಣ ಮತ್ತು 2
ತೊಲೆ ಬಂಗಾರದ ನಕ್ಲೇಸ,19 ತೊಲೆ ಬೆಳ್ಳಿ ಚೈನುಗಳು ಮತ್ತು ಮದುವೆ
ಸಮಯದಲ್ಲಿ ನನ್ನ ಗಂಡನಿಗೆ ಅರ್ಧ ತೊಲೆ ಬಂಗಾರದ ರಿಂಗ್ ಮತ್ತು ಅರ್ಧ ತೊಲೆ ಲಾಕೀಟ್ ಹಾಗೂ 150 ಸಿ.ಸಿ ಫಲ್ಸರ ದ್ವೀ
ಚಕ್ರವಾಹನವನ್ನು ಹಾಗೂ ಗೃಹ ಉಪಯೋಗ ಸಾಮಾನುಗಳು ಅಂದಾಜು 2 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿ
ವಿವಾಹ ಮಾಡಿಕೊಟ್ಟಿದ್ದು ಇರುತ್ತದೆ. ವಿವಾಹ
ಸಮಯದಲ್ಲಿ ನನ್ನ ತಂದೆಯವರು ವಿವಾಹಕ್ಕಾಗಿ ಸುಮಾರು 5-6 ಲಕ್ಷ ಖರ್ಚು ಮಾಡಿ ವಿವಾಹ ಮಾಡಿ ಕೊಟ್ಟಿರುತ್ತಾರೆ. ವಿವಾಹದ ನಂತರ
ನನ್ನ ಪತಿಯಾದ ಸೈಯದ ಮಸ್ತಾನ ಹಾಗೂ ಅವರ ಮನೆಯವರು ಕೆಲವು ದಿನಗಳವರೆಗೆ ನನ್ನನ್ನು ಚೆನ್ನಾಗಿ
ನೋಡಿಕೊಂಡಿದ್ದು ವಿವಾಹವಾದ 4-5 ತಿಂಗಳ ನಂತರ ನನ್ನ
ಜೊತೆಯಲ್ಲಿ ನನ್ನ ಪತಿಯಾದ ಸೈಯದ ಮಸ್ತಾನ ಹಾಗೂ ಅವರ ಕುಟುಂಬ ಸದಸ್ಯರಾದ ಅಂದರೆ ನನ್ನ
ಗಂಡನ ಸಹೋದರಿಯರಾದ ರಜೀಯಾ, ಬಾನು ಬೇಗಂ, ಹಾಗೂ ಮೈದುನರಾದ ಸೈಯದ
ಮಹಿಬೂಬ, ಸೈಯದ ಮಹ್ಮದ, ಸೈಯದ ಇಸ್ಮ್ಲಾಯಿಲ್ ,ಸೈಯದ ಯಾಸೀನ ಹಾಗೂ ಮಾವ ಸೈಯದ ಹಿಮಾಯತ ಅಲಿ ಇವರೆಲ್ಲರೂ ಕೂಡಿಕೊಂಡು ಪ್ರತಿನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ
ಕೊಡುವ ಮೂಲಕ ಏ ರಂಡಿ, ಭೋಸಡಿ ನೀನು ನಿನ್ನ ತವರು ಮನೆಗೆ ಹೋಗಿ ಇನ್ನೂ ಹಣವನ್ನು ತಗೆದುಕೊಂಡು ಬಾ ಇಲ್ಲಾವಾದರೆ
ನಮ್ಮ ಸಹೋದರನಿಗೆ ಹಾಗೂ ಮಗನಾದ ಸೈಯದ ಮಸ್ತಾನ ಇತನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಎಂದು ದಿನಾಲೂ ನನ್ನನ್ನು ಪಿಡಿಸುತ್ತಿದ್ದರು, ನನ್ನ ತವರು ಮನೆಯವರು
ಹಂತ ಹಂತವಾಗಿ 2ಲಕ್ಷ 50ಸಾವಿರ ರೂಪಾಯಿ ತೆಗೆದುಕೊಂಡು
ಮತ್ತು ನಿನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡಿದ್ದರಿಂದ
ನಾನುಈಗ ಸುಮಾರು 8 ತಿಂಗಳಿಂದ ನನ್ನ ತವರು
ಮನೆಯಲ್ಲಿಯೇ ಇದ್ದೇನು. ದಿನಾಂಕ: 08.04.2014 ರಂದು ರಾತ್ರಿ 9 ಗಂಟೆಗೆ ನನ್ನ ಗಂಡ ನನ್ನ ತವರು
ಮನೆಗೆ ಬಂದು 2 ಲಕ್ಷ 50 ಸಾವಿರ ರೂಪಾಯಿ ಹಣ ತೆಗೆದುಕೊಂಡು ಬರದ್ದೇ ತವರು ಮನೆಯಲ್ಲಿಯೇ
ಕುಳಿತುಕೊಂಡಿದ್ದಿ ಅಂತಾ ನನಗೆ ಮತ್ತು ನನ್ನ
ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ನನಗೆ
ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment