ಸರಗಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ
ಠಾಣೆ : ದಿನಾಂಕ
14/06/2014 ರಂದು ಶ್ರೀ.
ಮಂಜುನಾಥ ತಂದೆ ರಾಯಪ್ಪಾ ತಳವಾರ ಸಾ: ಪ್ಲಾಟ ನಂ. 82 ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ರಾತ್ರಿ
ಊಟ ಮೂಗಿಸಿಕೊಂಡು ರಾತ್ರಿ 10-30
ನಿಮಿಷಕ್ಕೆ ತಮ್ಮ ಮನೆ ಮುಂದೆ ವಾಕಿಂಗ ಮಾಡುವಾಗ ಒಬ್ಬ ಅಪರಿಚಿತ ವ್ಯಕ್ತಿ ಅವರ ಕೊರಳಲ್ಲಿದ್ದ ಚಿನ್ನದ 30 ಗ್ರಾಂನ ಲಾಕೇಟ
ದೊಚಿ ಮೊಟರ ವಾಹನ ಮೇಲೆ ಹೋದ ಬಗ್ಗೆ ಸಲ್ಲಲಿಸಿದ
ದೂರು ಸಾರಾಂಶದ ಮೆಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕ ನಗರ ಠಾಣೆ: ದಿನಾಂಕ 14/06/2014 ರಂದು ಶ್ರೀಮತಿ ರುಕ್ಮೀಣಿಬಾಯಿ ಗಂಡ ಪ್ರಕಾಶ
ಕಮಲಾಪೂರಕರ ವಿಳಾಸ: ಪ್ಲಾಟ ನಂ 6 ಎನ್.ಜಿ.ಓ.ಎಸ್ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಬಂದು ಇಂದು ಸೂಪರ
ಮಾರ್ಕೆಟನ ವಿಜಯ ಬ್ಯಾಂಕಿಗೆ ಹೋಗಿ ರೂ 1,10,000/- ಹಣ ಡ್ರಾ ಮಾಡಿ ನನ್ನ ವೆನಟಿಬ್ಯಾಗಿನಲ್ಲಿಟ್ಟುಕೊಂಡು
ಸಿಟಿ ಬಸ್ಸಿನಲ್ಲಿ ಸಂತೋಷ ಕಾಲೊನಿಗೆ ಬಂದು ತನ್ನ
ನಾದಿನಿ ಶಶಿಕಲಾ ಗಂಡ ಸೈದಪ್ಪ ಗೌರೆ ರವರ ಮನೆಗೆ ಹೋಗುತ್ತಿರುವಾಗ ಸಂತೋಷ ಕಾಲೋನಿಯ ಶಕ್ತಿ ಕಿರಣಾ
ಅಂಗಡಿಯ ಎದುರುಗಡೆ ಮದ್ಯಾಹ್ನ 12-15 ಗಂಟೆ ಸುಮಾರಿಗೆ ಎದುರುಗಡೆಯಿಂದ ಮೋಟಾರ ಸೈಕಲ ಮೇಲೆ ಬಂದ ಇಬ್ಬರು
ಸವಾರರು ತನ್ನ ಕೈಯಲ್ಲಿದ್ದ ವೆನಟಿಬ್ಯಾಗನ್ನು ಕಸಿದುಕೊಂಡು ಹೋಗಿದ್ದು. ಅದರಲ್ಲಿ
1) ನಗದು ಹಣ 1,10,000=00 ರೂ 2) ಒಂದು ನೋಕಿಯಾ ಮೊಬಾಯಲ್ ಸೀಮ ನಂ 8123758908 3)
ವಿಜಯ ಬ್ಯಾಂಕಿನ ಪಾಸಬುಕ್ ಮತ್ತು ಚೆಕ್ ಬುಕ್
ಹಾಗೂ 4) ನನ್ನ ಕನ್ನಡಕ , ಪಾಕೇಟ ಇದ್ದು. ನಗದು ಹಣ ಮತ್ತು ವಸ್ತುಗಳನ್ನು ಕಸಿದುಕೊಂಡು ಹೋದ ಮೋಟಾರ ಸೈಕಲ
ಸವಾರರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ
ಮೇಲಿಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮುಧೋಳ ಠಾಣೆ:ದಿನಾಂಕ: 13.06.14
ರಂದು ಶ್ರೀ ಮಹಾದೇವ ತಂದೆ ಶಾಂತಪ್ಪ ಮುಖ್ಯಗುರುಗಳು ಸರ್ಕಾರಿ ಪ್ರೌಡ ಶಾಲೆ ಚಂದಾಪೂರ ಇವರು
ಠಾಣೆಗೆ ಚಂದಾಪೂರ ಗ್ರಾಮದ ಸರ್ಕಾರಿ ಪ್ರೌಡ ಶಾಲೆಗೆ 2011-2012 ನೇ ಸಾಲಿನಲ್ಲಿ ಕಂಪ್ಯೂಟರ
ಮಶೀನಗೆ ಬೇಕಾಗುವ Qualta ಕಂಪನಿಯ 15 ಬ್ಯಾಟರಿಗಳು ಒದಗಿಸಿದ ಬ್ಯಾಟರಿಗಳನ್ನು ಶಾಲೆಯ ಸ್ಟೂ
ರೂಮ್ ನಲ್ಲಿ ಇಟ್ಟಿದ್ದು. ದಿನಾಂಕ: 12.06.14 ರಂದು ಬೆಳಿಗ್ಗೆ ಕಂಪ್ಯೂಟರ ಮಶೀನಿನ ಎನ್ ಜಿ ಓ
ಸಿಬ್ಬಂದಿಯವರು ಪರಿಶೀಲನೆ ಮಾಡಲು ಬಂದಿರುವುದರಿಂದ ಆಗ ನಾನು ಬ್ಯಾಟರಿ ಇಟ್ಟಿದ ಕೋಣೆಯ
ಚಾವಿಯನ್ನು ತೆಗೆದು ನೋಡಿದಾಗ ಕಬ್ಬಿಣ ಸ್ಟ್ಯಾಂಡ ಮೇಲೆ ಇಟ್ಟಿದ್ದ 15 ಬ್ಯಾಟರಿಗಳ ಫೈಕಿ 5
ಬ್ಯಾಟರಿಗಳು ಸ್ಟ್ಯಾಂಡ ಮೇಲೆ ಇದ್ದು ಉಳಿದ 10 ಬ್ಯಾಟರಿಗಳು ಇಟ್ಟ ಸ್ಥಳದಲ್ಲಿ ಇರಲಿಲ್ಲ. ದಿನಾಂಕ: 06.06.14 ರಿಂದ ದಿನಾಂಕ: 12.06.14 ರ ಮುಂಜಾನೆ
9 ಗಂಟೆ ಅವಧಿಯಲ್ಲಿ ಯಾರೊ ಕಳ್ಳರು ಶಾಲೆಯ ಸ್ಟೋರ ರೂಮಿನಲ್ಲಿ ಒಳಗೆ ಪ್ರವೇಶ ಮಾಡಿ ಅಂಧಾಜು 19,000/- ರೂ ಗಳ
ಕಿಮ್ಮತ್ತಿನ ಬ್ಯಾಟರಿಗಳು ಕಳವುಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ಶ್ರೀ ಗುರುನಾಥ
ತಂದೆ ವೀರಭದ್ರಪ್ಪ ರವರು ದಿನಾಂಕ 06-06-2014 ರಂದು ಬೆಳಿಗ್ಗೆ 10-45 ಗಂಟೆಗೆ ಸಂಗಮೇಶ್ವರ ಆಸ್ಪತ್ರೆಯ
ಎದುರುಗಡೆ ರೋಡ ದಾಟುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ
ನಂಬರ ಕೆಎ-32 ಇಸಿ-8820 ರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಶ್ರೀ ಗುರುನಾಥರವರಿಗೆಗೆ ಅಪಘಾತಪಡಿಸಿ ಗಾಯಗೊಳಿಸಿ ಮೋಟಾರ ಸೈಕಲ ಸಮೇತ
ಹೊರಟು ಹೋದ ಬಗ್ಗೆ ಎಂದು ದಿ: 14-06-2014 ರಂದು ದೂರು ಸಲ್ಲಿಸಿದ್ದು ಫಿರ್ಯಾದಿಯ ದೂರು ಸಾರಂಶದ
ಮೇಲಿಂದ ಮೋ.ಸೈ ಚಾಲಕನ ವಿರುದ್ದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
No comments:
Post a Comment