POLICE BHAVAN KALABURAGI

POLICE BHAVAN KALABURAGI

10 June 2014

Gulbarga District Reported Crimes

ಗೃಹಣಿಗೆ ಕಿರುಕಳ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಹುಸನಾಬಾನು ಗಂಡ ಇಫ್ತೆಕಾರ್ಅಲಿ ಸಾ: ದರ್ಗಾ ಕಾಲೋನಿ ಮಳಖೇಡ ತಾ : ಸೇಡಂ ರವರಿಗೆ  1.  ಇಫ್ತೆಕಾರ್ ಅಲಿ ತಂದೆ ಮಹ್ಮದ್ ಅಲಿ 2. ವಹೀದ ಉನ್ನಿಸಾ ಗಂಡ ಮಹ್ಮದ್ ಅಲಿ 3. ಇಜಾಜ್ ಅಲಿ ತಂದೆ ಮಹ್ಮದ್ ಅಲಿ 4.  ಇಮ್ತಿಯಾಜ್ ಅಲಿ ತಂದೆ ಮಹ್ಮದ್ ಅಲಿ  ಸಾ :  ಎಲ್ಲರು ಭಿಲಾಯಿ ನಗರ ಜಿ: ದುರ್ಗ ರಾಜ್ಯ : ಛತ್ತಿಸ್‌ಘಡ್  ಇರೆಲ್ಲರು ಕೂಡಿಕೊಂಡು ಮಾನಸೀಕ ಹಿಂಸೆ ನಿಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                     
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಚಿಂಚೋಳಿ ಠಾಣೆ : ದಿನಾಂಕ 09/06/2014 ರಂದು ರಾತ್ರಿ 07:20 ಗಂಟೆ ಸುಮಾರಿಗೆ ಗುಲಬರ್ಗಾ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗಾರಂಪಳ್ಳಿ ಗ್ರಾಮದಲ್ಲಿ ಹನುಮಾನ ದೇವಾಲಯದ ಕಟ್ಟೆಯ ಮೇಲೆ ಬಕ್ಕಪ್ಪ ತಂದೆ ಮರೇಪ್ಪ ಮರಪಳ್ಳಿ ವಯ-50ವರ್ಷ, ಸಾ-ಗಾರಂಪಳ್ಳಿ,ತಾ- ಚಿಂಚೋಳಿ, ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ಈ ಘಟಕದ ಫ್ರಭಾರದಲ್ಲಿರುವ ಶ್ರೀ. ಯು.ಶರಣಪ್ಪ. ಪೊಲೀಸ್ ಇನ್ಸಪೆಕ್ಟರ ರವರ ಮಾರ್ಗದರ್ಶನದಲ್ಲಿ ಶ್ರೀ.ದತ್ತಾತ್ರೇಯ ಎ.ಎಸ್.ಐ ಹಾಗೂ ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಸದರಿಯವನಿಗೆ ಹಿಡಿದುಕೊಂಡು ಅವನ ಕಡೆಯಿಂದ ಮಟಕಾ ನಂಬರ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ನಗದು ಹಣ 7050/- ರೂಪಾಯಿ, ಜಪ್ತು ಮಾಡಿಕೊಂಡು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಅಬ್ದುಲ ರುಮಾನ ತಂದೆ ಮಹ್ಮದ ಅಬ್ದಲ್ ರಜಾಕ್ ಸಾ||  ಅಪಾರ್ಟಮೆಂಟ ಜಿ-1 ಕೊಮಪಲ್ಲಿ ಪಿಸ್ತಾ  ಹೈದ್ರಾಬಾದ ಇವರು ಐವಾನ ಶಾಹಿ ರೋಡಿನಲ್ಲಿರು ಇನಾಮದಾರ ಕಾಂಪ್ಲೆಕ್ಸದಲ್ಲಿ ವಾಸವಾಗಿದ್ದು ಎಮ್‌ಬಿಬಿಎಸ್‌ ಓದುತಿದ್ದೇನೆ ನನ್ನ ಜೋತೆಗೆ ಮಹ್ಮದ ಮೋಸಿನ ಅಲಿ, ಸೈಯದ ಹಖಿಮೊದ್ದಿನ, ಅಬ್ದುಲ್ ವದ್ದುದ ಪೈಜಾಮ, ಶೇಖ ಹಾರುನ ರಶೀದ ಹೀಗೆ ಆರು ಜನರು ಕೋಡಿಕೊಂಡು ಇರುತ್ತೇವೆ ನಾನು ಕೆಬಿಎನ್‌ ಮೇಡಿಕಲ್ ಕಾಲೇಜಿನಲ್ಲಿ ಓದುತ್ತೇನೆ ದಿನಾಂಕ; 08/06/2014 ರಂದು 00;30 ಗಂಟೆ ಸುಮಾರಿಗೆ ನಾವಿದ್ದ ರೂಮಿಗೆ 5 ಜನರು ಬಂದು ನಮ್ಮ ಸ್ನೆಹಿತನಿಗೆ ಯಾಕೆ ಹೊಡೆದಿದ್ದಿರಿ ಅಂತಾ ನನಗೂ ಮತ್ತು ನನ್ನ ಜೋತೆಗಿದ್ದವರಿಗೆ ಕೇಳಿದರು ಅದಕ್ಕೆ ನಾವು ಯಾರೂ ನಿಮ್ಮ ಗೆಳೆಯನಿಗೆ ಹೊಡೆದಿರುವದಿಲ್ಲ ಅವರು ಯಾರು ಯಾರು ಎನ್ನುವದ ಗೋತ್ತಿಲ್ಲ ಎಂದು ಹೇಳಿದಾಗ ಸದರಿಯವರು ರೂಮ್‌ನಲ್ಲಿ ಸಿಗರೇಟ ಸೇದಿ ಕೈಕೈ ಮಿಲಾಯಿಸಿ ಹೊದರು ಇಂದು ದಿನಾಂಕ; 10/06/2014 ರಂದು 00;20 ಗಂಟೆಗೆ ನಾನು ಹಾಗು ಮೇಲೆ ನಮೂದು ಮಾಡಿದ 5 ಜನರು ಓದುತ್ತಾ ಕುಳಿತಾಗ ಒಮ್ಮಲೆ 10 ರಿಂದ 12 ಜನರ ಗುಂಪು ಬಂದವರೆ ಕೈಲ್ಲಿ ಜಂಬೆ ಹಾಗು ರಾಡ ಹಿಡಿದುಕೊಂಡು ಬಂದು ನನಗೆ ಹೊಡೆಯುತ್ತಿರಾ ಮಕ್ಕಳೆ ಅಂತಾ ಚಾಕು ಮತ್ತು ರಾಡ ತೋರಿಸಿ ನಿಮಗೆ ಹೊಡೆಯುತ್ತೇವೆ ಅಂತಾ ನನಗೆ ಹಿಡಿದುಕೊಂಡು ನನ್ನ ಹತ್ತಿರ ಇದ್ದ ಹೆಚ್‌ಟಿಸಿ ಮೋಬೈಲ್ ನಂ; 85006786 ಹಾಗು 10000/- ರೂ ಕಸಿದುಕೊಮಡು ಚಾಕುವಿನ ಹಿಡಿಕೆಯಿಂದ ಎಡಗಡೆ ಮೆಲಕಿನ ಹತ್ತಿರ ತಿವಿದಿದ್ದು ಪಟ್ಟಾಗಿರುತ್ತದೆ. ನನ್ನಮತೆ ಅಬ್ದುಲ್ ವದ್ದುದ ಪೈಜಾನನ ಹತ್ತಿರ ಇದ್ದ 12000/- ರೂ ಹಾಗು ಸಿ-2 ನೂಕಿಯಾ ಮೋಬೈಲ್ ನಂ; 8019317342 ಹಾಗು 3 ಎಟಿಎಮ್‌ ಕಾರ್ಡ, ಐಡಿ ಕಾರ್ಡ. ಸೈಯದ ಮುಖಿಮುದ್ದಿನನ ಗ್ಯಾಲಾಕ್ಸಿ ನೆಕ್ಸಸ್ಸ್ ಮೋಬೈಲ್ ನಂ; 9880575901. ಶೇಖ ಹಾರುನ ರಸಿದನ ಗ್ಯಾಲಾಕ್ಸಿ ಎಸ್‌-3 ಮೋಬೈಲ್ ನಂ; 9886446960 ಕಸಿದುಕೊಂಡರು ನನಗೆ ಹೆಚ್ಚಿಗೆ ಪಟ್ಟಾಗಿರುವದಿಲ್ಲ ಆಸ್ಪಾತ್ರೆಗೆ ಹೊಗುವದಿಲ್ಲ ಹೀಗೆ ಒಟ್ಟು 10 ರಿಂದ 12 ಜನರ ಗುಂಪು ಕಟ್ಟಿಕೊಂಡು ನಾವು ವಾಸಿಸುತ್ತಿದ್ದ ಇನಾಮದಾರ ಕಾಂಪ್ಲೆಕ್ಸದ ಎರಡನೇ ಮಹಡಿಯ ಕೊಟಡಿಯಲ್ಲಿ ನುಗ್ಗಿ ನಮಗೆ ಹೆದರಿಸಿ ಹಣ ಮೋಬೈಲ್ ಕಸಿದುಕೊಂಡು   ರೂಮನಲ್ಲಿಕೂಡಿಹಾಕಿ ಹೊರಗಿನಿಂದ ಕೊಂಡಿ ಹಾಕಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಲಿಂಗಪ್ಪ ತಂ ಬೀಮಶ್ಯಾ ನಾಟೀಕಾರ  ಮತ್ತುಶ್ರೀ   ಧೂಳಪ್ಪ ತಂದೆ ಶಿವಶರಣಪ್ಪ ಡೆಂಗಿ  ಇಬ್ಬರು ತಮ್ಮ ಖಾಸಗಿ ಕೆಲಸದ ನಿಮಿತ್ಯ ಧೂಳಪ್ಪನ ಟಿ.ವಿ.ಎಸ್. ಎಕ್ಸಎಲ್ ಹೇವಿಡ್ಯೂಟಿ  ಕೆಎ 32 ಇಇ 8125 ಮೇಲೆ ಕುಳಿತುಕೊಂಡು  ನಮ್ಮೂರಿನಿಂದ ಮಧ್ಯಾಹ್ನ 01-00 ಗಂಟೆಗೆ ಹೊರಟು ಮಾಹಾಗಾಂವ ಕ್ರಾಸಿಗೆ ಬಂದು  ಕೆಲಸ ಮುಗಿಸಿಕೊಂಡು ವಾಪಸ್ಸು ಅದೇ ಮೋಟಾರ ಸೈಕಲ ಕುಳಿತು ನಮ್ಮೂರಿಗೆ ಹೊರಟಿದ್ದು, ಸದರ ಮೋಟಾರ ಸೈಕಲ ಧೂಳಪ್ಪ ಡೆಂಗಿ ಇತನು ನಡೆಸುತ್ತಿದ್ದು, ಹಿಂದೆ ನಾನು ಕುಳಿತುಕೊಂಡಿದ್ದೆ. ಮಾಹಾಗಾಂವ ಕ್ರಾಸದಿಂದ  ಕುರಿಕೋಟಾ ಗ್ರಾಮದ ಕಡೆಗೆ ಹೋಗುತ್ತಿದ್ದಾಗ, ದಾರಿಯ ಮಧ್ಯದಲ್ಲಿ  ಗಂಡೋರಿ ನಾಲಾ ಕಾಲುವೆ ಬ್ರೀಡ್ಜ  ದಾಟಿ  ಸ್ವಲ್ಪ ಮುಂದೆ ರೋಡಿನ ಎಡಗಡೆಯಿಂದ ಧೂಳಪ್ಪ ಮೋಟಾರ ಸೈಕಲ ಸಾವಕಾಶವಾಗಿ ನಡೆಸುತ್ತಾ ಹೊರಟಾಗ,ಆಗ  ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಕ್ರೋಜರ ಜೀಪ ಚಾಲಕನು ತನ್ನ ವಶದಲ್ಲಿದ್ದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ನಾವು ಕುಳಿತ ಟಿವಿಎಸ್ ಎಕ್ಸ ಎಲ್ ಗಾಡಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಈ ಅಪಘಾತದಲ್ಲಿ ನನಗೆ  ಬಲಗಾಲ ಮೊಣಕಾಲ  ಮೇಲೆ ಮತ್ತು ಕೆಳೆಗೆ ಬಲಗಾಲ  ತೊಡೆಗೆ ಮತ್ತು ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿರುತ್ತದೆ.  ಹಣೆಯ ಬಲಗಡೆ ಮತ್ತು ಬಲಗಣ್ಣಿನ ಪಕ್ಕದಲ್ಲಿ ಮೂಗಿಗೆ ತರಚಿದ ರಕ್ತಗಾಯಗಳಾಗಿರುತ್ತೇವೆ. ಧೂಳಪ್ಪ ಇತನಿಗೆ ನೋಡಲಾಗಿ ಬಲಗಾಲ ಮೊಳಕಾಲಿಗೆ  ತರಚಿದ ಭಾರಿ ರಕ್ತಗಾಯವಾಗಿದ್ದುಬಲಗಲ್ಲಕ್ಕೆ ತರಚಿದ ರಕ್ತಗಾಯವಾಗಿದ್ದು, ಬಲಗಾಲಿನ ಬೆರಳುಗಳಿಗೆ ಭಾರಿರಕ್ತಗಾಯವಾಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಗಿದೆ. 

No comments: