POLICE BHAVAN KALABURAGI

POLICE BHAVAN KALABURAGI

19 September 2013

ಕೊಲೆ ಪ್ರಕರಣ :
ಮುಧೋಳ ಠಾಣೆ : ಮೃತ ರಾಮುಲು ತಂದೆ ನರಸಪ್ಪ ಪಿಟ್ಟಾಲ್ ಸಾ: ಚಂದಾಪೂರ ರವರು  ದಿನಾಂಕ: 18-09-2013 ರಂದು ಬೆಳಗ್ಗೆ ನಮ್ಮೂರ ಹತ್ತಿರ ಇರುವ ನಮ್ಮ ಹೊಲ ಸರ್ವೆ ನಂ 199 ರಲ್ಲಿ ಕವಳಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ,  ಅವರ  ತಮ್ಮನ ಮಕ್ಕಳಾದ 1. ಮಲ್ಲಪ್ಪ ತಂದೆ ಸಣ್ಣ ರಾಮಪ್ಪಾ ಪಿಟ್ಟಲ್, 2. ರಮೇಶ ತಂದೆ ಸಣ್ಣ ರಾಮಪ್ಪ ಪಿಟ್ಟಲ್ , 3. ನರಸಪ್ಪ ತಂದೆ ಸಣ್ಣ ರಾಮಪ್ಪ ಪಿಟ್ಟಲ್ ಹಾಗು ಅವರ ಸಂಗಡಿಗನಾದ 4. ಶ್ರೀಶೈಲ್ ತಂದೆ ಕಾಶಪ್ಪ ಭಂಟು ಸಾ: ಚಂದಾಪೂರ ಇವರುಗಳು ಕೈಯಲ್ಲಿ ಕೊಡಲಿ ಹಾಗು ಹರಿತವಾದ ಕಮ್ಮಲ ಕೊಯಿತಿ ಹಿಡಿದುಕೊಂಡು, ನಮ್ಮ ಹೊಲದಲ್ಲಿ ಅತಿ ಕ್ರಮವಾಗಿ ಬಂದು, ಮಗನೆ ನೀನು ನಮಗೆ ಆಸ್ತಿಯಲ್ಲಿ ಸರಿಯಾಗಿ ಪಾಲು ಕೊಟ್ಟಿರುವದಿಲ್ಲಾ. ನಿನಗೆ ಈಗ ಹೊಡೆದು ಇಲ್ಲೆ ಮುಗಿಸಿ ಬಿಡುತ್ತೇವೆ ಅಂತಾ ಕೊಲೆ ಮಾಡುವ ಉದ್ದೇಶದಿಂದ  ಹೊಡೆದು, ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನಾನು ಕುಸಿದು ಕೆಳಗೆ ಬಿದ್ದಾಗ, ಎಲ್ಲರು ಕೂಡಿ ಅವರನ್ನು ಗದ್ದೆಯ ಕೆಸರಿನಲ್ಲಿ ಹಾಕಿ ತುಳಿದು, ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ಸಣ್ಣ ನರಸಪ್ಪ ಹೇಳೂರ, ಹಣಮಂತ ಕಡತಾಳ ಮತ್ತು ನಮ್ಮ ಅಳಿಯನಾದ ಮಾಣೀಕಪ್ಪ ಕುರಬುರ ಇವರು ಬಂದು ಬಿಡಿಸಿ ಉಪಚಾರ ಕುರಿತು ಒಂದು ಜೀಪನಲ್ಲಿ ಹಾಕಿ ಕೊಂಡು ಸೇಡಂ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಶಿವಕುಮಾರ ಯರಗೋಳ ಸಾ: ರಾಂಪುರ ಇವರು ಠಾಣೆಗೆ ದಿನಾಂಕ 17-09-13 ರಂದು ಸಾಯಂಕಾಲ 6-00 ಗಂಟೆಗೆ ರಾಂಪುರ ಗ್ರಾಮದ ಬಸವರಾಜ ಇವರ ಮನೆಯ ಮುಂದೆ ರಸ್ತೆಯಲ್ಲಿ ಬರುತ್ತಿದ್ದಾಗ ಮಂಜುನಾಥ ತಂದೆ ರಾಮಚಂದ್ರ ನಾಯ್ಕೊಡಿ  ಸಂಗಡ 08 ಜನರು ಸಾ: ಎಲ್ಲಾರೂ ರಾಂಪೂರ ಗ್ರಾಮದವರು.ಗುಂಪು ಕಟ್ಟಿಕೊಂಡು ಬಂದು ನನಗು ಮತ್ತು ರಮೇಶ ದೊದ್ದಮನಿ ಇವರಿಗೆ ಕುಡುಗೊಲದಿಂದ ಮತ್ತು ಬಡಿಗಡಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬಯ ಹಾಕಿರುತ್ತಾರೆ ಕಾರಣ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ :  ಶ್ರೀ ಇಸ್ತಿಯಾಕ್ ತಂದೆ ಖಾಜಾ ಮೊಹೀನ ಶೇಖ ಸಾ: ನೂರಾನಿ ಮೊಹಲ್ಲಾ ಹಾಗರಗಾ ರೊಡ ಗುಲಬರ್ಗಾ ದಿನಾಂಕ: 18-9-2013 ರಂದು ಬೆಳಗ್ಗೆ 8-45 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳಯರಾದ ಮಹ್ಮದ ಇಂತಿಯಾಸ್ ಮತ್ತು ಸತೀಶ ಕೂಡಿಕೊಂಡು ಹಿರೋಹೊಂಡಾ ಮೊಟಾರ ಸೈಕಲ ನಂ: ಕೆಎ-32 ಎಕ್ಸ್- 8631 ನೇದ್ದರ ಮೇಲೆ ಕಟ್ಟಿ ಸಂಗಾವಿ ಹತ್ತಿರ ಬೀಮಾ ಬ್ರೀಜ್‌‌ದಲ್ಲಿ ಮೀನು ಹಿಡಿಯಲು ಗುಲಬರ್ಗಾದಿಂದ ಹೊರಟಿದ್ದು  ಶಾಹಾಬಾದ ಕ್ರಾಸ ದಾಟಿ ರಾಷ್ಟ್ರೀಯ ಹೆದ್ದಾರಿ 218 ರೋಡಿನ ಹಸನಾಪೂರ ಕ್ರಾಸ ಸಮೀಪ ಹೋಗುತ್ತಿದ್ದಾಗ ಬೆಳಗ್ಗೆ 9-30 ಗಂಟೆಯ ಸುಮಾರಿಗೆ ಜೇವರ್ಗಿ ಕಡೆಯಿಂದ ನಮ್ಮ ಎದುರುಗಡೆಗೆ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ,  ಮಹ್ಮದ ಇಂತಿಯಾಸನಿಗೆ ಭಾರಿ ರಕ್ತಗಾಯವಾಗಿರುತ್ತದೆ. ಬಲಗೈ ಬೆರಳುಗಳಿಗೆ ಗಾಯವಾಗಿದ್ದು ಇರುತ್ತದೆ. ಸತೀಶ ಈತನಿಗೆ  ತಲೆ ಹಿಂಬದಿಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಕಾಲಿನ ಮೊಳಕಾಲ ಹತ್ತಿರ ಕಾಲು ಮುರಿದು ಭಾರಿ ರಕ್ತಗಾಯವಾಗಿದ್ದು, ಬಲಗೈ ಭುಜಕ್ಕೆ ಭಾರಿ ರಕ್ತಗಾಯ ಮತ್ತು ಎದೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ನಮಗೆ ಡಿಕ್ಕಿ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಎಮ್.ಹೆಚ್-04 ಸಿಜಿ-6795 ನೇದ್ದು ಇದ್ದು, ಅದರ ಚಾಲಕನು ಟಿಪ್ಪರವನ್ನು ಅಲ್ಲೇಯೇ ಬಿಟ್ಟು ಓಡಿ ಹೋಗಿರುತ್ತಾನೆ. ನಂತರ ನಮಗೆ 108 ಅಂಬ್ಯೂಲೇನ್ಸ್‌ದಲ್ಲಿ ಯುನೇಟೆಡ್ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿರುತ್ತಾರೆ. ಸತೀಶ ಈತನಿಗೆ ಹೆಚ್ಚಿನ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸಂತೋಷ ತಂದೆ ಭೀಮಸಿಂಗ್ ಚವ್ಹಾಣ ಸಾಃ ಚವ್ಹಾಣ ತಾಂಡಾ ಕಮಲಾಪೂರ ಇವರು ದಿನಾಂಕ: 16-09-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ನಾನು, ಮತ್ತು ನಮ್ಮ ತಾಂಡಾ ಸುರೇಶ ತಂದೆ ಟೋಪು ಚವ್ಹಾಣ ಇಬ್ಬರು ಕೂಡಿಕೊಂಡ ಖಾಸಗಿ ಕೆಲಸದ ಪ್ರಯುಕ್ತ ನನ್ನ ಮೋಟಾರ ಸೈಕಲ ಮೇಲೆ ಕಮಲಾಪುರದಿಂದ ಹುಮನಾಬಾದಕ್ಕೆ ಹೊರಟಿದ್ದು. ಮುಂದೆ ಗುಲಬರ್ಗಾ -ಹುಮನಾಬಾದ ಎನ್.ಹೆಚ್. 218 ನೇದ್ದರ ರೋಡಿನ ಚಿಂದಿ ಬಸವಣ್ಣನ ಗುಡಿ ದಾಟಿ ಹೋಗುತ್ತಿದ್ದಾಗ ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮ ಹಿಂದುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋ. ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಮುಂದೆ ನಮಗೆ ಕಟ್ ಹೊಡೆದು ಸುಮಾರು 100 ಮೀಟರ್ ಮುಂದುಗಡೆ ಹೋಗಿ ತನ್ನ ಮೋಟಾರ ಸೈಕಲ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿ ಬಿದ್ದಾಗ ನಾನು, ಮತ್ತು ಸುರೇಶ ಇಬ್ಬರು ಹೋಗಿ ಎಬ್ಬಿಸಿ, ನೋಡಲಾಗಿ, ಆತನಿಗೆ, ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ ಮತ್ತು ಎರಡು ಕೈಗಳಿಗೆ ತರಚಿದ ರಕ್ತಗಾಯಗಳಾಗಿದ್ದು. ಆತನ ಹೆಸರು ವಿಚಾರಿಸಲಾಗಿ, ಆತನು ತನ್ನ ಹೆಸರು ನೀಲಕಂಠ ತಂದೆ ಚಂದ್ರು ಪವಾರ ಸಾಃಜೋತು ನಾಯ್ಕ ತಾಂಡಾ ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರ್ಡನ ಮತ್ತು ವಾಚಮನ ನಿಷ್ಕಾಳಜಿತನದಿಂದ  ವಿದ್ಯಾರ್ಥಿನಿ ಆತ್ಮ ಹತ್ಯ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಮಧುಕರ ದೋತ್ರೆ ಸಾ: ಚೌಡಾಪೂರ  ರವರು ದಿನಾಂಕ 18-09-2013 ರಂದು  ಮನೆಯಲ್ಲಿದ್ದಾಗ ಹಾಸ್ಟೇಲದಲ್ಲಿದ್ದ ಪ್ರಿಯಾ ಎಂಬ ಹುಡುಗಿ ಪೋನ ಮುಖಾಂತರ ತಿಳಿಸಿದೆನೆಂದರೆ ನಿಮ್ಮ ಮಗಳು ಪೂಜಾ ಇವಳು ಹಾಸ್ಟೇಲದಲ್ಲಿ ರೂಂ ನಲ್ಲಿ ಬಾಗಿಲ ಒಳಗಿನ ಕೊಂಡಿ ಹಾಕಿಕೊಂಡು ಅಂದಾಜು 11 ಎಎಂ ದಿಂದ 12 ಪಿ.ಎಂದ ಅವಧಿಯಲ್ಲಿ ಪ್ಯಾನಗೆ ಓಡ್ನಿಯಿಂದ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದ ಬಳಿಕ ನಾನು ಗಾಬರಿಯಾಗಿ ಗುಲಬರ್ಗಾಕ್ಕೆ ಬಂದು ಹಾಸ್ಟೇಲದಲ್ಲಿ ಜನ ನೆರಿದ್ದು ನಾನು ಅವರ ಸಂಗಡ ರೂಮನ ಹತ್ತಿರ ಹೋಗಿ ಬಾಗಿಲ ಒದ್ದು ತೆರೆದೆ ನಂತರ ನನ್ನ ಮಗಳು ಉರುಲು ಹಾಕಿಕೊಂಡಿದ್ದು ನೋಡಿದ್ದು ನಿಜ ಇರುತ್ತದೆ. ಇದಕ್ಕೆ ಕಾರಣ ಹಾಸ್ಟೇಲ ವಾರ್ಡನ ಇವರಿಗೆ ನಾನು ಪೋನ ಮಾಡಿದ ನಂತರ ನಾನು ಹಾಸ್ಟೇಲದಲ್ಲಿ ನನ್ನ ಮಗಳು ಉರುಲು  ಹಾಕಿಕೊಳ್ಳುತ್ತಿದ್ದಾಳೆ ಹೋಗಿ ಅಂತ ತಿಳಿಸಿದರು ಕೂಡಾ ಅವರು ಹೋಗಿ ಬಾಗಿಲು ತೆರೆದು ನೋಡಲಿಲ್ಲಾ ವಾರ್ಡನ ಮತ್ತು ವಾಚಮಾನ ಇವರ ನಿಷ್ಕಾಳಜಿತನದಿಂದ ನನ್ನ ಮಗಳು ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ . ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಜ್ಞಾನಲತಾ ಗಂಡ ಇಮಾಮ ಸಾ:ಕೆ.ಹೆಚ್.ಬಿ ಕಾಲೋನಿ ಗುಲಬರ್ಗಾ ಇವರು ಚಿಂಚೋಳಿ ಕೋರ್ಟಿನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವಾಗ ಅದೇ ಗ್ರಾಮದ ಇಮಾಮ ಈತನ ಪರಿಚಯವಾಗಿ ನಮ್ಮಿಬ್ಬರ ನಡುವೆ ಪ್ರೀತಿಯಾಗಿ ನಾವಿಬ್ಬರೂ ಕೂಡಿ ದಿನಾಂಕ 05-12-2012 ರಂದು ರಜಿಸ್ಟರ ಆಫೀಸ ಗುಲಬರ್ಗಾದಲ್ಲಿ ನೋಂದಣಿ ವಿವಾಹ ಮಾಡಿಕೊಂಡಿರುತ್ತೇವೆ. ದಿನಾಂಕ 03.09.2013 ರಂದು 4 ಗಂಟೆಯ ಸುಮಾರಿಗೆ ನನ್ನ ಅತ್ತೆ ಹನೀಫಾಬಿ ಗಂಡ ಇಮಾಮ ಕೂಡಿ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡದೇ ಸುಮ್ಮನೆ ಕುಳಿತಿರುವಿಯಾ ನನ್ನ ಗಂಡ ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ನಮ್ಮ ಅತ್ತೆ ಹನೀಫಾಬಿ ನನಗೆ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ. ಆಗ ನನ್ನ ತಾಯಿ ಶಾಲಿನಿ ತಂಗಿ ಮಾಧುರಿ ಕೂಡಿ ಜಗಳ ಬಿಡಿಸಿದರು. ಆಗ ನನ್ನ ಗಂಡ ಅತ್ತೆ, ನೀನು 2 ಲಕ್ಷ ರೂಪಾಯಿ ಹಣ ತರದೇ ಇದ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೊರಟು ಹೋಗಿರುತ್ತಾರೆ ನನಗೆ ಹೊಡೆ ಬಡೆ ಮಾಡಿ ಕಿರುಕಳ ನೀಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: