POLICE BHAVAN KALABURAGI

POLICE BHAVAN KALABURAGI

18 September 2013

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀ ಶರಣಪ್ಪಾ ತಂದೆ ಸಾಯಿಬಣ್ಣಾ ಹಣಮಂತವಾಡಿ  ಸಾಃ ಕಿಣ್ಣಿ ಸಡಕ  ರವರು ದಿನಾಂಕ; 16-09-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹೊಲದ ಪಕ್ಕದಲ್ಲಿ ಎಮ್ಮೆ ಮೇಯಿಸುತ್ತಾ ರಸ್ತೆಯ ಬಲಬದಿಯಲ್ಲಿ ಗುಲಬರ್ಗಾ-ಹುಮನಾಬಾದ ಎನ್.ಹೆಚ್. 218  ರಸ್ತೆಯ ಕೆಳಗೆ ನಿಂತುಕೊಂಡಿದ್ದಾಗ ಕಮಲಾಪೂರ ಕಡೆಯಿಂದ  ಒಬ್ಬ ಪಿಕಅಪ್ ಜೀಪ್ ಚಾಲಕನು ತನ್ನ ಜೀಪನ್ನು ರಸ್ತೆಯ ತುಂಬೆಲ್ಲಾ ಅಡ್ಡಾದಿಡ್ಡಿಯಾಗಿ ನಡೆಯಿಸುತ್ತಾ ಬಂದವನೇ ರಸ್ತೆಯ ಕೆಳಗೆ ನಿಂತಿದ್ದ ತನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಈ ಅಪಘಾತವನ್ನು ನೋಡಿ ಅಲ್ಲಿಯೇ ದನ ಮೇಯಿಸುತ್ತಿದ್ದ ನಮ್ಮೂರ ಭೀಮಾಶಂಕರ ತಂದೆ ಮಾಣಿಕಪ್ಪ ಪಾಟೀಲ್ ಇವರು ಬಂದು ನನಗೆ ಎಬ್ಬಿಸಿದ್ದು, ನೋಡಲಾಗಿ ನನಗೆ ತೆಲೆಯ ಹಿಂದುಗಡೆ ರಕ್ತಗಾಯ, ಬಲಗೈ ರಟ್ಟೆಗೆ ಮತ್ತು ಬಲ ಎದೆಗೆ ಗುಪ್ತಗಾಯವಾಗಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಅಪಘಾತ ಪಡಿಸಿದ ಜೀಪ ಚಾಲಕನು ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: