: ಗುಲಬರ್ಗಾ ಜಿಲ್ಲಾ ಪೊಲೀಸ್ ಕಾರ್ಯಚರಣೆ:
2 ಜನ ಕಳ್ಳರ ಬಂಧನ, ಬಂಧಿತ ಆರೋಪಿತರಿಂದ 90 ಗ್ರಾಂ ಬಂಗಾರದ ಆಭರಣ, 260 ಗ್ರಾಂ
ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 1,75,000/- ರೂಪಾಯಿಗಳ ಮಾಲು ಜಪ್ತಿ.
ಮಾನ್ಯ ಶ್ರೀ ಎನ್.
ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ
ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಹಾಗೂ ಶ್ರೀ ಹೆಚ್ ತಿಮ್ಮಪ್ಪಾ ಡಿ.ಎಸ್.ಪಿ “ಗ್ರಾಮಾಂತರ” ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ
ಶ್ರೀ ಕೆ.ಎಮ್. ಸತೀಶ ಪೊಲೀಸ್ ವೃತ್ತ ನಿರೀಕ್ಷಕರು ಗ್ರಾಮೀಣ ವೃತ್ತ ರವರ ನೇತ್ರತ್ವದಲ್ಲಿ ಸಿದ್ದಾರಾಯ ಬಳೂರ್ಗಿ ಪಿ.ಎಸ.ಐ
(ಅಪರಾಧ ವಿಭಾಗ) ಮತ್ತು ಶ್ರೀ ಆನಂದರಾವ ಪಿ.ಎಸ.ಐ (ಕಾ&ಸು) ಗ್ರಾಮೀಣ ಠಾಣೆ ರವರು ಹಾಗೂ
ಸಿಬ್ಬಂದಿಯವರಾದ ಮೋಹಿಜೋದ್ದಿನ, ಸಂಜೀವರೆಡ್ಡಿ, ಕೇಶವ ಬಿರಾದಾರ, ನರಸಿಂಹ, ರಾಜಕುಮಾರ, ಸಲೀಮೋದ್ದಿನ,
ಬಂಡೆಪ್ಪಾ, ಮಲ್ಲಿಕಾರ್ಜುನ ರವರು ದಿನಾಂಕ:14-03-2013 ರಂದು ಮಧ್ಯಾಹ್ನ ಆಳಂದ ಚೆಕ್ಕ
ಪೋಸ್ಟ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ 2 ಜನರನ್ನು ವಶಕ್ಕೆ ತೆಗೆದುಕೊಂಡು
ವಿಚಾರಿಸಲು 1)ಪ್ರವೀಣ @ ಪವ್ಯಾ ತಂದೆ ಶಿವಶಂಕ್ರಯ್ಯ ಮಠಪತಿ ವ|| 20 , ಉ|| ಕೂಲಿಕೆಲಸ ಸಾ||
ಮಿರಿಯಾಣ, ತಾ||ಚಿಂಚೋಳಿ, ಹಾ||ವ|| ಬಸವೇಶ್ವರ ಕಾಲೋನಿ ಗುಲಬರ್ಗಾ, 2)ಮಲ್ಲು @ ಮಲ್ಯಾ ತಂದೆ
ಸುಭಾಶ ಕಟಬರ ವ|| 20, ಉ|| ಕೂಲಿಕೆಲಸ ಸಾ|| ಕುಮಸಿ ತಾ|| ಗುಲಬರ್ಗಾ ರವರನ್ನು ವಿಚಾರಣೆಗೊಳಪಡಿಸಿದಾಗ
ಗುಲಬರ್ಗಾ ನಗರದ ಬಿದ್ದಾಪೂರ ಕಾಲೋನಿ, ಸಂಚಾರಿ ಹೈಕೊರ್ಟ ಪೀಠದ ಹತ್ತಿರ ಹಾಗೂ ಕುಮಸಿ. ಅವರಾಧ
(ಬಿ) ಗ್ರಾಮಗಳಲ್ಲಿ ಒಟ್ಟು 6 ಮನೆಗಳಲ್ಲಿ ಕಳ್ಳತನ ಮಾಡಿದ ಬಂಗಾರದ ಆಭರಣ 90 ಗ್ರಾಂ ಮತ್ತು ಬೆಳ್ಳಿಯ ಸಾಮಾನುಗಳು 260
ಗ್ರಾಂ ಹೀಗೆ ಒಟ್ಟು 1, 75, 000/- ಮೌಲ್ಯದ್ದು ಆರೋಪಿತರಿಂದ ವಶಪಸಿಕೊಂಡು ಆರೋಪಿತರನ್ನು ನ್ಯಾಯಾಂಗ
ಬಂದನಕ್ಕೆ ಕಳುಹಿಸಲಾಗಿದೆ.
No comments:
Post a Comment