ಹಲ್ಲೆ ಜಾತಿ ನಿಂದನೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರಿ ಬಾಬುರಾವ ತಂದೆ
ಗುಂಡಪ್ಪ ಗಂಗನಪಳ್ಳಿ ಜಾ|| ಪರಿಶಿಷ್ಟ ಸಾ||ಅಣವಾರ ಗ್ರಾಮ ತಾ||ಚಿಂಚೋಳಿ ಜಿ||ಗುಲ್ಬರ್ಗಾ
ರವರು ದಿನಾಂಕ:14-03-2013 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ
ನಾನು ನನ್ನ ಹೆಂಡತಿ ಮನೆಯಲ್ಲಿದ್ದಾಗ ಮಲ್ಲಪ್ಪ ತಂದೆ ಹನಮಂತ ಘಾಳನೋರ, ಹನಮಂತ ತಂದೆ ಸಾಯಬಣ್ಣ
ಘಾಳನೋರ, ಶ್ರೀದೇವಿ ಗಂಡ ಮಲ್ಲಪ್ಪ ಘಾಳನೋರ, ಯಲ್ಲಮ್ಮ ಗಂಡ ಹನಮಂತ ಘಾಳನೋರ ಎಂಬುವವರು
ಎಲ್ಲರೂ ಕುರುಬ ಜಾತಿಗೆ ಸೇರಿದವರು ನಮ್ಮ ಮನೆಯ
ಮುಂದೆ ಬಂದು ನಿಂತು ಜಾತಿ ನಿಂದನೆ ಮಾಡಿ ಮಲ್ಲಪ್ಪಾ ಅನ್ನುವವನು ನನ್ನ ತಾಯಿಗೆ ಬಿಸಿಯೂಟದ ಅಡಿಗೆ
ಕೆಲಸದಿಂದ ತೆಗೆದು ಹಾಕುತ್ತಿ ಅಂತಾ ನಿಂದನೆ ಮಾಡಿ ಹೊಡೆ ಬಡೆ ಮಾಡಿದ್ದಾರೆ. ಜಗಳ ಬಿಡಿಸಲು ಬಂದ
ನನ್ನ ಹೆಂಡತಿಗೆ ಬಳೆಗಳು ಒಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಂತಾ ಬಾಬುರಾವ ರವರು ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ, 323 354 504 506 ಸಂಗಡ 34
ಐಪಿಸಿ ಹಾಗೂ 3 (i) (x) (xi) SC/ST PA ACT 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ
ದೀವಾ ಗಂಡ ಮಹೇಶ ಕೋತ್ಲಿ ಸಾ||ವಿದ್ಯಾ ನಗರ ಬಡೆಪೂರ ಸೇಡಂ ರೋಡ ಗುಲಬರ್ಗಾರವರು ನನ್ನ ಮದುವೆಯು ದಿನಾಂಕ:13-05-2009
ರಂದು ಹಿಂದು ಸಂಪ್ರದಾಯದಂತೆ ಡಾ|| ಮಹೇಶ ತಂದೆ ಬಾಬುರಾವ ಕೊತ್ಲಿ ಎಂಬುವರ ಜೊತೆ ಹಿರಿಯರ ಸಮ್ಮುಖದಲ್ಲಿ ನೇರವೇರಿಸಲಾಗಿರುತ್ತದೆ. ಮದುವೆ ಕಾಲಕ್ಕೆ ಹಿರಿಯರ ಸಮ್ಮುಖದಲ್ಲಿ ಗಂಡನ ಮನೆಯವರು ರೂ.10, 00,000/- ಮತ್ತು 150 ಗ್ರಾಂ ಬಂಗಾರ ವರದಕ್ಷಿಣೆಯಾಗಿ ಹಾಗೂ ಗೃಹ ಬಳಕೆಯ ಬೆಳ್ಳಿ ಸಾಮಾನುಗಳೊಂದಿಗೆ, ವರೋಪಚಾರವಾಗಿ ಕೊಡಲು ಬೇಡಿಕೆ ಇಟ್ಟರು. ಸದರಿ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರು ಪರಸ್ಥಿತಿಯ ಒತ್ತಡಕ್ಕೆ ಮಣಿದು ನನ್ನ ತಂದೆ ತಾಯಿ ನಿವೇಶನ ಮಾರಾಟ ಮಾಡಿ ನಾಲ್ಕು ಲಕ್ಷ ರೂಪಾಯಿ ಹಾಗೂ 150 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ನನ್ನ ಗಂಡನ ಮನೆಯವರಿಗೆ ಕೊಟ್ಟಿರುತ್ತಾರೆ. ಅದಲ್ಲದೆ 25 ತೊಲೆ ಬಂಗಾರದ ಆಭರಣಗಳು ನನ್ನ ಜೀವನ ಸಂರಕ್ಷಣೆಗಾಗಿ ನನ್ನ ಮೈಮೇಲೆ ಹಾಕಿ ಮದುವೆ ಮಾಡಿರುತ್ತಾರೆ. ಮದುವೆಯಾದ
ಕೆಲವೇ ದಿನಗಳಲ್ಲಿ ನನ್ನ ಗಂಡನ ಮನೆಯವರು ವರದಕ್ಷಿಣೆ ಕಡಿಮೆ ತಂದಿರುತ್ತಿ ಅಂತಾ
ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ನನ್ನ ಗಂಡ ನನ್ನನ್ನು ಬಿಟ್ಟು ತಾನು ಕೆಲಸ ಮಾಡುವ ಇಂಗ್ಲೆಂಡಿಗೆ ಹೋರಟು ಹೋದನು. ನಾನು ಕೂಡ ದಿನಾಂಕ:28-06-2009 ರಂದು ಇಂಗ್ಲೆಂಡಿಗೆ ದೇಶಕ್ಕೆ ಹೋಗಿದ್ದು, ನಾನು ಹೋಗುವಾಗ ನನ್ನ ಮೈಮೇಲೆ ಇದ್ದ 25 ತೊಲೆ ಬಂಗಾರದ ಆಭರಣಗಳು ನನ್ನ ಅತ್ತೆಯ ಕೈಗೆ ಕೊಟ್ಟು ಹೋಗಿರುತ್ತೆನೆ, ನಾನು ಇಂಗ್ಲೆಂಡಿನಲ್ಲಿರುವ ನಾಲ್ಕು ತಿಂಗಳು ನನ್ನ ಗಂಡನು ಚಿತ್ರಹಿಂಸೆ ಕೊಟ್ಟು ಸರಿಯಾದ ಊಟಕೊಡಲಿಲ್ಲ. ಬೇರೊಂದು ಹೆಂಗಸಿನ
ಜೊತೆ ಸಂಬಂಧ ಇಟ್ಟುಕೊಂಡು ಅವನು ನನಗೆ ಹೊಡೆ-ಬಡೆ ಮಾಡಿ 2009 ರ ಅಕ್ಟೋಬರ ತಿಂಗಳಲ್ಲಿ ನನಗೆ ಏನು ಹೇಳದೆ ಕೇಳದೆ ಗ್ಲಾಸಗೋ ನಗರಕ್ಕೆ ಹೋರಟು ಹೋದನು. ನಾನು ಅಲ್ಲಿಂದ ಮರಳಿ ಬಂದು ನನ್ನ ಗಂಡನ ಮನೆಯಲ್ಲಿಯೇ ವಾಸವಾಗಿದ್ದಾಗ ದಿನಾಂಕ: 14-03-2013 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ಒಂದು ಟಾಟಾ ಸುಮೊ ವಾಹನದಲ್ಲಿ ನಮ್ಮ ಅತ್ತೆ ರತ್ನಾ, ಮಾವ ಬಾಬುರಾವ, ನಾದನಿ ಸೋನಾಬಾಯಿ, ಮೈದುನರಾದ ರಾಕೇಶ, ಉಮೇಶ ಹಾಗೂ ಅವರ ಹೆಂಡಂದಿರಾದ ಚೇತನ, ಅರ್ಚನಾ ಇವರೆಲ್ಲ ಇಳಿದು ಬರುವದು ನೋಡಿ ನಾನು ಬಾಗಿಲು ತೆಗೆದು ಒಳಗೆ ಬಂದು ಅವರೆಲ್ಲ ಒಂದು ಕ್ಷಣ ಸುಮ್ಮನೆ ನನ್ನ ಮುಖ ನೋಡುತ್ತಿರುವಾಗ ನಾನು ಭಯವಾಗಿ ಜೋರಾಗಿ ಚೀರಿದೆ. ತಕ್ಷಣ ಉಮೇಶ ನನ್ನ ಬಾಯಿ ಒತ್ತಿ ಹಿಡಿದು ಮುಚ್ಚಿಸಿದರು. ರಾಕೇಶ ನನ್ನ ಎರಡು ಕೈಗಳು ಹಿಂದೆ ಮಾಡಿ ಹಿಡಿದುಕೊಂಡ ಕೂಡಲೇ ನಮ್ಮತ್ತೆ ನನ್ನ ಕುತ್ತಿಗೆ ಹಿಸುಕುತ್ತಿರುವಾಗ ಉಳಿದವರು ಈ ರಂಡಿಗೆ ಒಂದೇ ಸಲಕ್ಕೆ ಮುಗಿಸಿ ಬಿಡಿರಿ ಎಂದು ಚೀರಾಡುತ್ತಿದ್ದರು. ಅಷ್ಟರಲ್ಲೆ ಅಡುಗೆ ಮನೆಯಲ್ಲಿದ್ದ ನಮ್ಮ ತಾಯಿ ಚೀರಾಡುತ್ತಾ ರೋಡಿನ ಕಡೆಗೆ ಓಡಿ ಹೋದಳು. ನನ್ನ ಮಗ ಕಟ್ಟಿಸಿದ ಮನಿ ಇದೆ. ನಿಮ್ಮಪ್ಪನ ಮನೆಗೆ ಹೋಗು ಇಲ್ಲ ಅಂದರೆ ಉಳಿದ ವರದಕ್ಷಣಿ ಹಣ ಮೂರು ಲಕ್ಷ ರೂಪಾಯಿಗಳು ಒಂದು ಘಂಟೆಯಲ್ಲಿ ತಂದು ಕೊಡಲು ಹೇಳು ಅಂತಾ ಹೇಳಿ ಹೋಗಿರುತ್ತಾರೆ ಅಂತಾ ಶ್ರೀಮತಿ
ದಿವಾ ಗಂಡ ಮಹೇಶ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2013 ಕಲಂ, 498 (ಎ) 324, 504, 506, ಸಂಗಡ
34 ಐಪಿಸಿ 3 ಮತ್ತು 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment