POLICE BHAVAN KALABURAGI

POLICE BHAVAN KALABURAGI

22 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ನಾನು ಮತ್ತು ನನ್ನ ಹೆಂಡತಿ ಅನೀತಾ, ನನ್ನ ಅಣ್ಣ ರಾಜೇಂದ್ರ, ಅತ್ತಿಗೆಯಾದ ಅಶ್ವಿನಿ ನಾಲ್ಕು ಜನರು ಹಾಗೂ ಹೋಳಿ ಗ್ರಾಮದ ಇತರ 5 ಜನರು ಹಾಗೂ ನಮ್ಮ  ಗ್ರಾಮದ ರಂಜಿತ್ ಮತ್ತು ಗಣೇಶ ಎಲ್ಲರೂ ಕೂಡಿಕೊಂಡು ನಮ್ಮ ಗ್ರಾಮದಿಂದ ನಾಗರಳ್ಳಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡೆಯಲು 3 ತಿಂಗಳ ಹಿಂದೆ ಮುರಗಾನೂರ ಗ್ರಾಮಕ್ಕೆ ಬಂದು ಕೆಲಸ ಮಾಡುತ್ತಿದ್ದೆವು ದಿನಾಂಕ:21-02-2013 ರಂದು ಮುರಗಾನೂರ ಗ್ರಾಮದ ಶಿವಪೂಜೇಪ್ಪ ಒಡೆಯರ ಇವರ ಹೊಲದಲ್ಲಿಯ ಕಬ್ಬು ಕಡೆದು ಟ್ರ್ಯಾಕ್ಟರನಲ್ಲಿ ತುಂಬಲು ಟ್ರ್ಯಾಕ್ಟರ ನಂ ಕೆಎ-32/ಟಿ-995 ನೇದ್ದರಲ್ಲಿ ನನ್ನ ಅಳಿಯ ಗಣೇಶ, ರಂಜಿತ್ ಇವರಿಬ್ಬರು ನನ್ನ ಮಗನನ್ನು ತಗೆದುಕೊಂಡು ಟ್ರ್ಯಾಕ್ಟರ ನಲ್ಲಿ ಕುಳಿತುಕೊಂಡು ಶಿವಪೂಜೇಪ್ಪ ಒಡೆಯರರವರ ಹೊಲಕ್ಕೆ ಹೋರಟಿದ್ದು, ಟ್ರ್ಯಾಕರ್ ಚಾಲಕ ಸಿದ್ದಪ್ಪ ತಂದೆ ಶಂಕ್ರಪ್ಪ ಇತನು ಚಲಾಯಿಸುತ್ತಿದ್ದು, ಚಾಲಕನು ತನ್ನ ಟ್ರ್ಯಾಕ್ಟರ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸುತ್ತಾ ಹೋಗಿ ಮುಗಾನೂರದ ಶಿವಲಿಂಗಪ್ಪ ಕಾಳಗಿ ಇವರ ಹೊಲದ ಕೆನಾಲನಲ್ಲಿ ಪಲ್ಟಿ ಮಾಡಿದನು. ನನ್ನ ಮಗ ಕೃಷ್ಣಾ ಇತನ ಹೊಟ್ಟೆಗೆ ಬಡೆದಿದ್ದು, ರಂಜಿತ್ ಮತ್ತು ಗಣೇಶನಿಗೆ ಭಾರಿಗಾಯವಾಗಿರುತ್ತದೆ.  ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ನನ್ನ ಮಗನು ಮೃತಪಟ್ಟನು ಗಾಯ ಹೊಂದಿದ ರಂಜಿತ್ ಮತ್ತು ಗಣೇಶನಿಗೆ ಜೇವರ್ಗಿಯಲ್ಲಿ ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾದ ಯುನಾಯಿಟೆಡ್ ಹಾಸ್ಪಟೇಲ್ ಗೆ ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ಸಂಜಯ ತಂದೆ  ಭೀಮರಾಯ ಪವಾರ ಸಾ:ಅಸ್ಟಾ ತಾ||ಲೋಹಾರ ಜಿ:ಓಸ್ಮಾನಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2013  ಕಲಂ 279,337, 338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: