POLICE BHAVAN KALABURAGI

POLICE BHAVAN KALABURAGI

29 October 2012

GULBARGA DISTRICT REPORTED CRIMES


ಹಲ್ಲೆ ಮತ್ತು ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ ರುಕ್ಕಪ್ಪಾ ಹಂಗರಗಿ ಸಾ:ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:28/10/2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಹೆಂಡತಿ ಸುಮಲತಾ ನಾನು ಇಬ್ಬರು ಮೋಟರ ಸೈಕಲ ಮೇಲೆ ಸಾಯಿ ಮಂದಿರಕ್ಕೆ ಹೊಗಿ ಮರಳಿ ಮನೆಗೆ ಬರುತ್ತಿರುವಾಗ ಸಾಯಿ ಮಂದಿರ ಕ್ರಾಸಿನ ಹತ್ತಿರ  ಚಂದ್ರಕಾಂತ ತಂದೆ ಕ್ರಿಷ್ಣಪ್ಪಾ ಫತ್ತೆ ನಾಯಕ  ಮತ್ತು ಅತನ ಸಂಗಡ 2-3 ಜನರು ನಮ್ಮನ್ನು ಅಡ್ಡಗಟ್ಟಿ ಚಂದ್ರಕಾಂತನು   ಎಷ್ಟು ದುಡ್ಡ ಆದಲೇ ರಂಡಿ ಮಗನೇ, ನನಗೆ ದುಡ್ಡ ಕೇಳತ್ತಿ ಭೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ರಾಡಿನಿಂದ  ಎಡಗೈ ರಟ್ಟೆಗೆ ಹೊಡೆದಿದ್ದರಿಂದ  ಭಾರಿ ಪೆಟ್ಟಾಗಿ ಕೈ ಮುರಿದಿರುತ್ತದೆ. ಉಳಿದವರು  ಕೈಯಿಂದ  ಮುಖಕ್ಕೆ, ಮೈ-ಕೈ ಮೇಲೆ ಹೊಡೆದಿದ್ದರಿಂದ ಬಲಗಣ್ಣಿನ ಉಬ್ಬಿಗೆ ಗಾಯವಾಗಿ ಉಬ್ಬಿರುತ್ತದೆ. ಮತ್ತು ಸದರಿಯವರು ಜೇಬಿನಲ್ಲಿ ಕೈ ಹಾಕಿ  ಎರಡು ಮೊಬೈಲ ಫೋನಗಳು, ನಗದು ಹಣ 10,000/- ರೂಪಾಯಿ ಮತ್ತು ಕೊರಳಲ್ಲಿಯ ಒಂದು ತೊಲೆ ಬಂಗಾರದ ಚೈನ ಅ:ಕಿ: 20,000/- ರೂ ನೇದ್ದನ್ನು  ಜಬರದಸ್ತಿಯಿಂದ  ಕಸಿದುಕೊಂಡಿದ್ದು ಹೋಗಿರುತ್ತಾರೆ. ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಸುಮಲತಾಳಿಗೂ  ಕೈಯಿಂದ ಹೊಡೆದು ದಬ್ಬಿಕೊಟ್ಟಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:95/2012 ಕಲಂ. 341, 323, 324, 326, 504, 397 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: