POLICE BHAVAN KALABURAGI

POLICE BHAVAN KALABURAGI

29 October 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಗುರುಶಾಂತ ತಂದೆ ವಿಜಯಕುಮಾರ ಪಾಟೀಲ ಉ|| ಗುತ್ತಿಗೆದಾರರು ಸಾ|| ಭೂಸನೂರ ಗ್ರಾಮ ರವರು ಬೂಸನೂರದಿಂದ  ಮಾಡಿಯಾಳಕೆ ಹೋಗುವ ದೇವಮತಗಿ ಹಳ್ಳದ ಬ್ರಿಜ ನಿರ್ಮಾಣದ ಕಾಮಗಾರಿಯ ಕೆಲಸವನ್ನು ದಿನಾಂಕ:07/10/2012 ರಂದು ಪರಿಶೀಲನೆ ಮಾಡಿ ಮರಳಿ ಸಾಯಾಂಕಾಲ ಗುಲಬರ್ಗಾಕೆ ಹೋಗಿರುತ್ತೆನೆ. ದಿನಾಂಕ: 08/10/2012 ರಂದು ಮುಂಜಾನೆ 09-30 ಗಂಟೆ ಸುಮಾರಿಗೆ ಬ್ರಿಜ್ಗೆ ನೀರು ಹಾಕುವ ಸಿದ್ರಾಮ ಇವನು  ಪೋನ ಮಾಡಿ ಬ್ರಿಜ ಮೇಲ್ ಛಾವಣಿ ನಿರ್ಮಾಣ ವೇಳೆಯಲ್ಲಿ ಜೋಡಿಸಿರುವ ಶೆಂಟ್ರಿಂಗ ಪ್ಲೆಟಗಳು  ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಬಂದು ನೋಡಲು ಮೇಲ್ ಛಾವಣಿಗೆ ಜೋಡಿಸಿದ 82 ಕಬ್ಬಿಣದ ಪ್ಲೆಟಗಳು ಅ||ಕಿ|| 65600/- ರೂಪಾಯಿಗಳದ್ದು ಯಾರೋ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೇ ಇದಕ್ಕಿಂತ ಮುಂಚೆ ಸೈಟಿನ ಪಕ್ಕದಲ್ಲಿ  ಇರುವ ಶೇಡ್ಡಿನ ಹೋರಗೆ ಇಟ್ಟಿದ 10, ಎಮ ಎಮ,ಕಬ್ಬಿಣದ ರಾಡು ಡಿಗ್ಗಿಯಲ್ಲಿ ಅಂದಾಜು 1 ಟನ್ನ  ರಾಡನ್ನು ಅ,ಕಿ, 45000/- ಮತ್ತು ಒಂದು ಸ್ಟೀಲ ಕಟರ ಮಷಿನ ಅಂದಾಜು ಕಿಮ್ಮತ್ತು 4900/-ನೇದ್ದವುಗಳು ಕಳವು ಮಾಡಿರುತ್ತಾರೆಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 454,457,380,379  ಐಪಿಸಿ   ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳದಿಂದ ಗೃಹಿಣೆ ಆತ್ಮಹತ್ಯೆ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ ಚಂದ್ರಕಲಾ ಗಂಡ ಪ್ರಕಾಶ ಗುಡ್ಡ ಟೋಸ್ನೆ ವಾಲೇ ಲೇಔಟ ನವಜೀವನ ಏರಿಯಾ ಗುಲಬರ್ಗಾ ರವರು ನನ್ನ ಮಗಳಾದ ಪ್ರತಿಭಾ @ ಸೌಮ್ಯ ಇವಳಿಗೆ ದಿನಾಂಕ:20.02.2010 ರಂದು ಗಾಂದಿನಗರದ ಮಲ್ಲಿಕಾರ್ಜುನ ತಂದೆ ಸಂಗಪ್ಪ ಬ್ಯಾದಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ 2 ವರ್ಷದ ಗಂಡು ಮಗವಿರುತ್ತದೆ. ನನ್ನ ಮಗಳಿಗೆ ಮದುವೆಯಾದಾಗಿನಿಂದ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ನನ್ನ ಗಂಡ  ಮಲ್ಲಿಕಾರ್ಜುನ, ಅತ್ತೆಯಾದ ಇಮಲಾಬಾಯಿ ಹಾಗೂ ಮೈದುನರಾದ ಶ್ರೀಶೈಲ ಶ್ರೀನಾಥ ರವರು ಕಿರುಕುಳ ನೀಡುತ್ತಿದ್ದಾರೆಂದು ನನ್ನ ಮಗಳು ತವರು ಮನಗೆ ಬಂದಾಗ ಹೇಳುತ್ತಿದ್ದಳು. ದಿನಾಂಕ 28.10.2012 ರಂದು ಮುಂಜಾನೆ 10-00 ಗಂಟೆಗೆ ನನ್ನ ಮಗಳು ಪೋನ ಮಾಡಿ, ನಾನು ತವರು ಮನೆಗೆ ಬರಬೇಕು ಅಂತಾ ಹೇಳಿದರೆ ನನ್ನ ಗಂಡನು ಕಳುಹಿಸುತ್ತಿಲ್ಲಾ ನನ್ನ ಗಂಡನಿಗೆ 1 ಲಕ್ಷ ರೂಪಾಯಿ ಕೊಟ್ಟರೆ ತವರು ಮನೆಗೆ ಕಳುಹಿಸುತ್ತೆನೆಂದು ಹೇಳುತ್ತಿದ್ದಾನೆ ಅಂತಾ ತಿಳಿಸಿರುತ್ತಾಳೆ. ದಿನಾಂಕ 28.10.2012 ರಂದು 7-00 ಗಂಟೆಗೆ ನಾನು ನನ್ನ ಮೋಬೈಲದಿಂದ ನನ್ನ ಮಗಳ ಮೊಬೈಲ ನಂಬರಿಗೆ ಪೋನ ಮಾಡಿದಾಗ ನನ್ನ ಮಗಳ ಅತ್ತೆಯಾದ ಇಮಲಾಬಾಯಿ ಪೋನನಲ್ಲಿ ಮಾತಾಡಿ ನಿನ್ನ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ ಅಂತಾ ಹೇಳಿದ್ದರಿಂದ ನಾವು ಮನೆಯವರೆಲ್ಲರೂ ಕೂಡಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗಳು ನನಗೆ ತಿಳಿಸಿದ್ದೆನೆಂದರೆ ನನ್ನ ಗಂಡ, ಅತ್ತೆ, ನಾದಿನಿಯರೂ ಹಾಗೂ ಮೈದುನರರೂ ಕೂಡಿ ನನಗೆ  3 ಲಕ್ಷ ರೂಪಾಯಿ ತೆಗೆದುಕೊಂಡು ಬರುವ ವಿಷಯದಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ತಿಳಿಸಿದಳು ನನ್ನ ಮಗಳು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು  ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:77/2012 ಕಲಂ 498(ಎ) 304(ಬಿ) 302 ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: