ಕಳ್ಳತನ
ಪ್ರಕರಣ:
ಆಶೋಕ
ನಗರ ಪೊಲೀಸ್ ಠಾಣೆ: ಶ್ರೀ. ವೀರಶೇಟ್ಟಿ ತಂದೆ ಸೈದಪ್ಪಾ ದೊಡ್ಡಮನಿ ಸಾ:
ವಿದ್ಯಾನಗರ ಗುಲಬರ್ಗಾ ರವರು ನಾನು ದಿನಾಂಕ: 01-09-2012 ರಂದು ಸಾಯಂಕಾಲ 7 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ನನ್ನ ಅಣ್ಣನಾದ ಪ್ರಭಾಕರ
ರವರಿಗೆ ಆರಾಮ ಇರಲಾರದಕ್ಕೆ ಮಾತಾಡಿಸಲು ಬೀದರಕ್ಕೆ ಹೋಗಿದ್ದು, ದಿನಾಂಕ:05-09-2012
ಬೆಳಿಗ್ಗೆ 9-30 ಗಂಟೆಗೆ ಮನೆಗೆ ಬಂದು ನೋಡಲು ಮನೆ
ಬಾಗಿಲು ಫಳಿ ತೆರೆದಿದ್ದು, ನೊಡಲು
ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮನೆಯಲ್ಲಿಟ್ಟಿರುವ ಒಂದು ಬಂಗಾರದ ಆಭರಣಗಳು
ಮತ್ತು ಬೆಳ್ಳಿಯ ಸಾಮನುಗಳು ಕ್ಯಾಮಾರ ಹೀಗೇ ಒಟ್ಟು 85000/- ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ
ಸಾಮಾನುಗಳು ಹಾಗು ಡಿಜಿಟಲ್ ಕ್ಯಾಮರಾಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 78/2012
ಕಲಂ. 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಾತಿ
ನಿಂದನೆ ಪ್ರಕರಣ:
ಅಫಜಲಪೂರ
ಪೊಲೀಸ್ ಠಾಣೆ: ಮಹಾಂತಪ್ಪ ತಂದೆ ನಿಂಗಪ್ಪ ಗಾಯಕವಾಡ ಸಾ|| ಬಳೂಂಡಗಿ ರವರು ನಾನು ದಿನಾಂಕ:04-09-2012 ರಂದುವ
11-00 ಗಂಟೆಗೆ ಭೀಮಾ ಏತ ನೀರಾವರಿ ಯೋಜನೆ ಕ್ಯಾಂಪನ ಕಾರ್ಯಪಾಲಕ ಅಭಿಯಂತರರಾದ ಶ್ರೀ ಎಸ್ ಜಿ
ಬಿರಾದಾರ ಇವರಿಗೆ ಬೇಟಿಯಾಗಿ ನಮ್ಮ ಗ್ರಾಮದ ಅಂಬೇಡ್ಕರ ಭವನ ಸುಧಾರಣೆ ಮಾಡಿಕೊಡಿ ಮತ್ತು ನಮ್ಮ
ಸಮುಧಾಯಕ್ಕೆ ಸ್ಮಷಾನ ಭೂಮಿ ಕೇಳಿದವು, ಅದಕ್ಕೆ ಅವರು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ
152/2012 ಕಲಂ. 3 (1) (10) ಎಸ.ಸಿ / ಎಸ.ಟಿ ಆಕ್ಟ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment