POLICE BHAVAN KALABURAGI

POLICE BHAVAN KALABURAGI

06 September 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ, ಚಂದ್ರಕಾಂತ ತಂದೆ ಅಂಬಣ್ಣ ಸೂಗೂರ ಸಾ: ಕಮಲಾಪೂರ  ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ: 06-09-2012 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಚಹಾ ಕುಡಿಯಲು ಕಮಲಾಪೂರ ಬಸ್ ನಿಲ್ದಾಣದ ಹತ್ತಿರ ಇರುವ ಮಹಾರುದ್ರಪ್ಪ ಇವರ ಚಹಾ ಹೊಟೇಲಕ್ಕೆ ಬಂದು ಕಮಲಾಪೂರದ ದಾಸಿಮಯ್ಯ ಮತ್ತು ಅಣ್ಣಪ್ಪ ಇವರೊಂದಿಗೆ ಚಹಾ ಕುಡಿಯುತ್ತಾ ಕುಳಿತು ಕೊಂಡಾಗ ಹುಮನಾಬಾದ ರಸ್ತೆಯ ಕಡೆಗೆ ಇರುವ ಬಿ.ಎಸ್.ಎನ್.ಎಲ್ ಆಫೀಸ ಕಡೆಯಿಂದ ಬಿ.ಎಸ್.ಎನ್.ಎಲ್ ಆಫೀಸದಲ್ಲಿ ಸೆಕ್ಯೂರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿರುವ ನಮ್ಮ ದೊಡ್ಡಪ್ಪನ ಮಗನಾದ ಬೀರಪ್ಪ ತಂದೆ ಸಿದ್ದಮಲ್ಲಪ್ಪ ಸೂಗೂರ ವ: 55 ವರ್ಷ ಸಾ: ಕಮಲಾಪೂರ ಇವರು ತನ್ನ ಸೈಕಲ ಮೇಲೆ ಕುಳಿತಕೊಂಡು ಗುಲಬರ್ಗಾ-ಹುಮನಾಬಾದ ರಸ್ತೆಯ, ಹುಮನಾಬಾದ ಕಡೆಯಿಂದ ಕಮಲಾಪೂರ ಕಡೆಗೆ ಸುಭದ್ರಾ ಕಾಂಪ್ಲೆಕ್ಸ್ ಕಡೆಗೆ ಬರುತ್ತಿದ್ದಾಗ ಲಾರಿ ನಂ: ಹೆಚ್.ಆರ್. 55 – ಇ – 1345 ನೇದ್ದರ ಚಾಲಕನಾದ ರಿಯಾಜ ಅಹ್ಮದ್ ತಂದೆ ಗುಲಾಮೋದ್ದೀನ್ ಟಾಕರ ವ: 32 ವರ್ಷ ಸಾ; ಭರಾಖಿ ತಾ:ಕೌನಿ ಜಿ:ರಾಸಿ (ಜಮ್ಮು ಮತ್ತು ಕಾಶ್ಮೀರ ) ಈತನು  ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಿಂದ ಸೈಕಲ ಚಲಾಯಿಸಿಕೊಂಡು ಬರುತ್ತಿದ್ದ ಬೀರಪ್ಪ ಸೂಗೂರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಅಪಘಾತದಲ್ಲಿ ಬೀರಪ್ಪನ ತೆಲೆಗೆ, ಹಣೆಗೆ, ತೊಡ್ಡಿಗೆ ,ಬಲ ತೊಡೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಎರಡೂ ಕಾಲೂಗಳು ಮುರಿದಿದ್ದು, ಬಲಗಾಲಿಗೆ ಭಾರಿ ರಕ್ತಗಾಯ ಮತ್ತು ಮೈ ಕೈ ಗಳಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಆತನನ್ನು ಉಪಚಾರ ಕುರಿತು ಗುಲಬರ್ಗಾದ ಜಿಲ್ಲಾ ಸರ್ಕಾರಿ ಆಸ್ತತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಈ ಅಪಘಾತಕ್ಕೆ ಕಾರಣಾದ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ 279.304[ಎ] ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: