ಕಳ್ಳತನ ಪ್ರಕರಣ:
ಸರ್ಕಾರಿ ಬಸ್ಸಿನ ಗಾಜು ಓಡೆದ ಬಗ್ಗೆ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ, ರಾಜಶೇಖರ ತಂದೆ ಛತ್ರಪ್ಪ ಪವಾಡಶೆಟ್ಟಿ ಉ|| ಲಾರಿ ಮಾಲಿಕ ಸಾ|| ಕಲ್ಯಾಣ ಗಡ್ಡಿ ಚಿಂಚೋಳಿ ರವರು ನಾನು ಬೀದರ ಜಿಲ್ಲೆಯ ಖಟಕ ಚಿಂಚೋಳಿಗೆ
ದಿನಾಂಕ: 06-09-2012 ರಂದು ಹೋಗಿ ಪರ್ಸಿ ಕಲ್ಲುಗಳನ್ನು ಖಾಲಿ ಮಾಡಿಕೊಂಡು ಮಧ್ಯರಾತ್ರಿ 01-30 ಗಂಟೆಗೆ
ಮರಳಿ ಚಿಂಚೋಳಿ ಪಟ್ಟಣಕ್ಕೆ ಬಂದು ಎಂದಿನಂತೆ ನನ್ನ ಅಶೋಕ ಲೇಲ್ಯಾಂಡ ಲಾರಿ ನಂ. ಕೆಎ.-32
ಬಿ.-2618 ನೇದ್ದನ್ನೂ ಚಿಂಚೋಳಿ ಪಟ್ಟಣದಲ್ಲಿರುವ (ಹಳೆಐ.ಬಿ.ಹತ್ತಿರವಿರುವ) ಭೋಗಾವತಿ ಪೆಟ್ರೋಲ್
ಬಂಕ ಎದುರುಗಡೆಯ ಚಿಂಚೋಳಿ – ಚಂದಾಪೂರ
ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಾನು ಮತ್ತು ಲಾರಿ ಚಾಲಕ
ನಾಗಮೂರ್ತಿ ಮನೆಗೆ ಹೋಗಿ ಮಲಗಿಕೊಂಡಿದ್ದು, ಅಂದೆ ದಿನಾಂಕ 06-09-2012 ರಂದು ಬೆಳಗ್ಗೆ 4-00
ಗಂಟೆ ಸುಮಾರಿಗೆ ನೋಡಲು ನಾವು ನಿಲ್ಲಿಸಿದ ಲಾರಿಯು ಆ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಲಾರಿಯ ಇಂಜಿನ ನಂ. ಸಿ.ಝೆಡ್.ಈ. 276350,ಮತ್ತು ಚೆಸ್ಸಿಸ್ ನಂ.
ಸಿ.ಜೆಡ್.ಈ. 387683 ಇರುತ್ತವೆ ಅಂತಾ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.82/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಾಳಗಿ ಪೊಲೀಸ್ ಠಾಣೆ: ಶ್ರೀ
ಗುರುನಾಥ ತಂದೆ ಶಿವಣ್ಣ ಹಡಪದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ಸ ಚಾಲಕ ಕಾಳಗಿ ಬಸ ಡಿಪೋ ರವರು ದಿನಾಂಕ:
13-09-2012 ರಂದು 1-00 ಪಿ.ಎಂ ಸುಮಾರಿಗೆ ಕೆಎ
32 ಎಫ್.1533 ನೇದ್ದನ್ನು ಮಂಗಲಗಿಯಿಂದ ಸುಪರ
ಮಾರ್ಕೆಟ ಗುಲಬರ್ಗಾಕ್ಕೆ ಚಲಾಯಿಸಿಕೊಂಡು ಬರುತ್ತಿರುವಾಗ ಮಾರ್ಗ ಮದ್ಯದ ಭರತನೂರ ಗ್ರಾಮದ ಹತ್ತಿರ
ಅನೀಲ ಕುಮಾರ ತಂದೆ ನಾಗಿಂದ್ರಪ್ಪ ಬೆರ್ಜಿ ಸಾ: ಶ್ರೀನಿವಾಸ ಸರಡಗಿ ಬಸ್ಸ ಚಾಲಕ ಕಾಳಗಿ ಘಟಕ ಇತನು
ಬಸ್ಸನ್ನು ತಡೆದು ನಿಲ್ಲಿಸಿ, ಇವತ್ತು ಯಾಕೇ ಬಸ್ಸು ಓಡುಸುತ್ತಿರಿ ಅಂತಾ ಅವಾಚ್ಯವಾಗಿ ಬೈದು
ಕಲ್ಲಿನಿಂದ ಬಸ್ಸಿನ ಮುಂದಿನ ದೊಡ್ಡ ಗ್ಲಾಸಿಗೆ ಹೊಡೆದು ಅಂದಾಜು 10-12 ಸಾವಿರದಷ್ಟು ರೂಪಾಯಿಗಳಷ್ಟು
ಹಾನಿ ಮಾಡಿದ್ದು, ಮತ್ತು ಚಿತ್ತಾಪೂರದಿಂದ ಕಾಳಗಿಗೆ ಬರುವ
ಬಸ್ಸ ನಂ ಕೆಎ 28 ಎಫ್-1613 ನೇದ್ದನ್ನು ಕೂಡ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು
ಕಲ್ಲಿನಿಂದ ಬಸ್ಸಿನ ಮುಂದಿನ ಗ್ಲಾಸಿಗೆ ಹೊಡೆದು ಅದಕ್ಕೂ ಸಹ ಅಂದಾಜು 10-12 ಸಾವಿರದಷ್ಟು ಹಾನಿ
ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:71/2012 ಕಲಂ 341,
504, 283, 427 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. ಮತ್ತು ಆರೋಪಿತ ಅನೀಲಕುಮಾರ ಇತನಿಗೆ ದಸ್ತಗಿರಿ ಮಾಡಿ
ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ.
No comments:
Post a Comment