ಹಲ್ಲೆ ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ: ಶ್ರೀ ಲಕ್ಷ್ಮಿಸಾಗರ ತಂದೆ ಹಣಮಂತಪ್ಪ ಚಿಣಮಗೇರಿ ಸಾ|| ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾರವರು
ನಾನು ದಿನಾಂಕ:12-09-2012 ರಂದು ರಾತ್ರಿ 10-30 ಗಂಟೆಗೆ ಊಟ ಮಾಡಿಕೊಂಡು, ನನ್ನ ಮನೆಯ ಮುಂದೆ
ತಿರುಗಾಡುತ್ತಿದ್ದಾಗ, ಭಾಗೇಶ ತಂದೆ ಚಿದಂಬರ ಈತನ ಜೊತೆಗೆ ಶರಣು ತಂದೆ ಬಾಬುರಾವ ಸಂಗಡ ಇನ್ನೂ
4 ಜನರು ಕೂಡಿಕೊಂಡು ಬಂದು ಹೋದ ವರ್ಷ ನನ್ನ ವಿರುದ್ದ ಕೇಸು ಮಾಡಿದ್ದಿ, ಈಗ ನಿನ್ನ ಸುದ್ದಿ
ಏನಂತದ ಅಂತ ಅಂದವನೇ ಕೈ ಮುಷ್ಠಿ ಮಾಡಿ ಮೂಗಿನ ಮೇಲೆ ಹೊಡೆದು ರಕ್ತಗಾಯಪಡಿಸಿದನು, ಅತನ
ಜೊತೆಗಿದ್ದವರು ಬಡಿಗೆಯಿಂದ ಹೊಡೆದು, ನೆಲಕ್ಕೆ
ಕೆಡವಿ ಕಲ್ಲಿನಿಂದ ಹೊಡೆದು, ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಭಾಗೇಶ ಈತನು ನನ್ನ ಶರ್ಟದಲ್ಲಿದ್ದ
ಮೊಬೈಲ್ ಹಾಗು 5000/-ರೂಪಾಯಿಗಳು ತೆಗೆದುಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ 143, 147, 148, 341, 323, 324, 504, 506
ಸಂಗಡ 149 ಐಪಿಸಿ ಪ್ರಕಾರ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ ಕುರಿತು:
ಸ್ಟೇಶನ ಬಜಾರ ಪೊಲೀಸ್ ಠಾಣೆ: ದಿನಾಂಕ:13-09-2012 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಿಬ್ಬಂದಿಯವರು ವೇತನ ಪರಿಷ್ಕರಣೆಗಾಗಿ ಹಾಗೂ ಕೈಗಾರಿಕಾ ಒಪ್ಪಂದ ಮಾಡಲು ಒತ್ತಾಯಿಸಿ ಮುಷ್ಕರ ಮಾಡುವರೆಂದು ಅಲ್ಲದೆ ಸಂಘಟನೆಗಳ ದುರಿಣರು ಸಂಸ್ಥೆಯ ನಿಷ್ಠಾವಂತ ಮತ್ತು ಪ್ರಮಾಣಿಕ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಅಡ್ಡಿಪಡಿಸುವ ಸಾಧ್ಯತೆ ಇರುವದರಿಂದ , ಅಲ್ಲದೆ ಸಂಸ್ಥೆಯ ಕೆಲಸ ಕಾರ್ಯಗಳನ್ನು ದಿನಾಂಕ:13-09-2012 ರಿಂದ ಸ್ಥಗಿತಗೊಳಿಸುವಂತೆ ಮತ್ತು ಸಂಸ್ಥೆಯ ವಾಹನ ಹಾಗೂ ಆಸ್ತಿ ಪಾಸ್ತಿಗಳಿಗೆ ಹಾನಿ ಆಗುವ ಸಾದ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಭಧ್ರತಾ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಶ್ರೀ ಇನಾಯತ ಬಾಗವಾನ ವಿಭಾಗಿಯ ನಿಯಂತ್ರಣಾಧಿಕಾರಿ ಈ.ಕ.ರ.ಸಾ ಸಂಸ್ಥೆ ಗುಲಬಗಾ ವಿಭಾಗ-2 ಅಲ್ಲದೆ ಎ.ಹೆಚ್.ನಾಗೇಶ ಈ.ಕ.ರ.ಸಾ. ಸಂಸ್ಥೆ ಗುಲಬರ್ಗಾ ವಿಭಾಗ -1 ಮತ್ತು ವಿಭಾಗಿಯ ನಿಯಂತ್ರಣ ಅಧಿಕಾರಿ ಈ.ಕ.ರ.ಸಾ ಸಂಸ್ಥೆ ಗುಲಬರ್ಗಾ ವಿಭಾಗ -2 ರವರು ಈ ಪೊಲೀಸ್ ಠಾಣೆಗೆ ಅರ್ಜಿ ಸಲ್ಲಿಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋ ನಂ-01 ರ ಮುಂದೆ ಹೋದಾಗ ಅಲ್ಲಿ ನಾಲ್ಕು ಜನರು ಗುಂಪಾಗಿ ನಿಂತುಕೊಂಡಿದ್ದನ್ನು , ಗಮನಿಸಿ ಅವರನ್ನು ವಿಚಾರಿಸಿ ತಿಳಿದುಕೊಳ್ಳಲಾಗಿ ತಮ್ಮ ಹೆಸರು ಶೌಖತ ಅಲಿ ತಂದೆ ನಬಿಸಾಬ ಆಲೂರ ಉ|| ಸಿ.ಪಿ.ಐ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಮತ್ತು ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಮತ್ತು ವಕರ್ಸ ಫೇಡರೇಶನ್ ಜೆಂಟಿ ಕಾರ್ಯದರ್ಶಿ, ಮೋಹಲ್ಲಾ ಮುಲ್ಲಾ ತಂದೆ ದಾವಲಸಾಬ ಉ|| ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸಾ|| ಆಳಂದ, ಶರಣಪ್ಪ ತಂದೆ ಮಲ್ಲಪ್ಪ ಯಕಂಚಿ ವರ್ಷ ಉ|| ಕೆ.ಎಸ್.ಆರ್.ಟಿ.ಸಿ ಚಾಲಕ ಸಾ|| ಪ್ಲಾಟ ನಂ:23 ಆರ್,ಜಿ. ನಗರ ಗುಲಬರ್ಗಾ, ಸಿದ್ದಣ್ಣ ತಂದೆ ಭೀಮರಾಯ ರಾಜವಾಳ ವರ್ಷ ಉ|| ಸಿ.ಪಿ.ಐ ಜಿಲ್ಲಾ ಸಹಾಯಕ ಕಾರ್ಯದರ್ಶೀ ಸಾ|| ಎಮ್.ಐ.ಜಿ-31 ಹೌಸಿಂಗ್ ಬೋರ್ಡ ಕಾಲೋನಿ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ಅಂತಾ ಹೇಳಿದ್ದು ನಾಳೆ ದಿನಾಂಕ:13-09-2012 ರಂದು ನಡೆಯುವ ಮುಷ್ಕರದ ಪ್ರಯುಕ್ತ ಇವರು ಇಂದು ದಿನಾಂಕ:12-09-2012 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹೀಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಮುಂಜಾಗೃತ ಕ್ರಮ ಕುರಿತು ಈ ಮೇಲ್ಕಂಡವರನ್ನು ವಶಕ್ಕೆ ತೆಗೆದುಕೊಂಡು ನಂತರ, ಕ.ರಾ.ರ.ಸಾ.ಸಂಸ್ಥೆ ವಿಭಾಗೀಯ ಕಛೇರಿಯ ಆವರಣದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯವರಾದ ಬಸವರಾಜ ತಂದೆ ಗುಂಡಪ್ಪ ಯಾಧವ ಉ|| ಕೆ.ಎಸ್.ಆರ್.ಟಿ.ಸಿ ಡಿಪೋ ನಂ:2 ಮೇಕ್ಯಾನಿಕ್ ಸಾ|| ರೋಳ ವಾಡಿ ತಾ|| ಬಸವ ಕಲ್ಯಾಣ, ಗಣಪತರಾವ ತಂದೆ ಗುಂಡೆರಾವ ದೂದ ಕವಡೆ ವರ್ಷ ಉ|| ಕೆ.ಎಸ್.ಆರ್.ಟಿ.ಸಿ ಡಿಪೋ ನಂ-2 ಹೇಡ್ ಮೇಕ್ಯಾನಿಕ್ ಸಾ|| ಪ್ಲಾಟ ನಂ:51 ನಿಯರ್ ಕೆ.ಇ.ಬಿ ಪವರ ಹೌಸ ಶಿವಾಜಿ ನಗರ ಗುಲಬರ್ಗಾ, ಗುರು ತಂದೆ ಶೆಟ್ಟೆಪ್ಪಾ ದೋಡ್ಡಮನಿ ವರ್ಷ ಉ|| ಕೆ.ಎಸ್.ಆರ್..ಟಿ,ಸಿ ಡಿಪೋ ನಂ:01 ರಲ್ಲಿ ಕಂಡೇಕ್ಟರ್ ಸಾ|| ಕಾಚಾಪೂರ ತಾ|| ಜೇವರ್ಗಿ ಅಂತಾ ಹೇಳಿದ್ದು, ನಾಳೆ ನಡೆಯಲ್ಲಿರುವ ಮುಷ್ಕರದ ಪ್ರಯುಕ್ತವಾಗಿ ಇವರು ಸಹ ಇಲಾಖೆಯ ಬಸ್ಸುಗಳಿಗೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದಕ್ಕಾಗಿ ಗುಂಪಾಗಿ ನಿಂತಿರುವ ಬಗ್ಗೆ ತಿಳಿದು ಬಂದಿದ್ದರಿಂದ ಇವರನ್ನು ಹಿಗೆ ಬಿಟ್ಟಲ್ಲಿ ಯಾವುದಾದರೂ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವವರೆಂದು ತಿಳಿದು ಬಂದಿದ್ದರಿಂದ ಶ್ರೀ ವಿಜಯಕುಮಾರ ಪಿ.ಎಸ್.ಐ (ಅ.ವಿ) ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾ ರವರು ಸರಕಾರಿ ತರ್ಫೇಯಾಗಿ ಠಾಣೆ ಗುನ್ನೆ ನಂ:117/2012 ಕಲಂ 107, 151 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡಿರುತ್ತಾರೆ.
No comments:
Post a Comment