ಅಪಘಾತ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಚಂದ್ರಕಾಂತ ತಂದೆ ನಾಗೇಂದ್ರಪ್ಪ ಗಿರೆಪ್ಪಗೋಳ ಸಾ: ಕಣ್ಣಿ ತಾ||ಜಿ||ಗುಲಬರ್ಗಾರವರು ನಮ್ಮ ಅಣ್ಣ ತಮ್ಮಕಿಯವರು ಹಾಗೂ ನಮ್ಮ ಗ್ರಾಮದವರೊಂದಿಗೆ
ಕಾಯಿಪಲ್ಲೆ ವ್ಯಾಪಾರ ಕುರಿತು ಗುಲಬರ್ಗಾಕ್ಕೆ ಹೋಗುವಾಗ ಶರಣಸಿರಸಗಿ ಮಡ್ಡಿ ಹತ್ತಿರ ಪೆಟ್ರೋಲ ಪಂಪ ಹತ್ತಿರ ಸಂತೋಷ ತಂದೆ ಶರಣಬಸಪ್ಪ
ಚನ್ನಪ್ಪಗೋಳ ಸಾ: ಕಣ್ಣಿ ಗ್ರಾಮ ಮಹೇಂದ್ರ ಮಾಕ್ಸ ಪಿಕ್‌ಅಪ್
ಗಾಡಿ ಕೆಎ 23 9383 ನೇದ್ದರ ಚಾಲಕ ಮತ್ತು ಟಂಟಂ ನಂಬರ ಕೆಎ 32 ಬಿ 3192 ನೇದ್ದರ ಚಾಲಕರು ತಮ್ಮ ವಾಹನಗಳನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು
ಒಬ್ಬರಿಗೊಬ್ಬರು ಡಿಕ್ಕಿ ಪಡೆಯಿಸಿಕೊಂಡಿದ್ದರಿಂದ ಚಂದ್ರಕಾಂತ ತಂದೆ ನಾಗೇಂದ್ರಪ್ಪ ಗಿರೆಪ್ಪಗೋಳ,ಶಿವರಾಯ ತಂದೆ ಹಣಮಂತ
ರಾಯ ಗಿರೆಪ್ಪಗೋಳ, ಭೀಮಾಶಂಕರ ತಂದೆ ಶಿವಶರಣಪ್ಪ ಬಾಗಲಕೋಟ,ಶಿವ ಲಿಂಗಯ್ಯ ತಂದೆ ಶಿವಶರಣಯ್ಯ ಹಿರೇಮಠ,ಉಮೇಶ ತಂದೆ ಶಿವಯೋಗಪ್ಪ ಗಿರೆಪ್ಪ ಗೋಳ,ಸಂತೋಷ ತಂದೆ ಗುಂಡಪ್ಪ ಅವರಾದ,ಶಬ್ಬೀರ ತಂದೆ ರುಕ್ಕಮೋದ್ದಿನ ಮಾಸಿಲದಾರ
ಸಾ: ಎಲ್ಲರೂ ಕಣ್ಣಿ ಗ್ರಾಮದವರಿಗೆ ಸಾದಾ ಹಾಗೂ ಭಾರಿಗಾಯಗಳು ಆಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ: 296/2012 ಕಲಂ 279 337 338 ಐಪಿಸಿ ಸಂ/ 187
ಐಎಂವಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ ಅಂಬವ್ವ ಗಂಡ ರಾಣಪ್ಪಾ ಕಾಳನೂರ ಸಾ|| ಉಪಳಾಂವ ತಾ|| ಜಿ|| ಗುಲಬರ್ಗಾ ರವರು ನಾನು ಮತ್ತು
ಶಾಂತಬಾಯಿ ಗಂಡ ಪ್ರಕಾಶ ಕಾಳನೂರ ವಯ;26 ವರ್ಷ
ಸಾ; ಉಪಳಾಂವ ರವರು ಕೂಡಿಕೊಂಡು ದಿನಾಂಕ: 19/09/2012 ರಂದು ಮುಂಜಾನೆ ಗಂಟೆಗೆ ಕ್ರೋಜರ
ನಂ.ಕೆಎ.39-7260 ನೇದ್ದರಲ್ಲಿ ಉಪಳಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಬರುತಿರುವಾಗ ಗುಲಬರ್ಗಾ
ಹುಮನಾಬಾದ ರೋಡನ ಕಪನೂರ ಹತ್ತಿರ ಚಕ್ಕಪೋಸ್ಟ
ಎದರುಗಡೆ ಕ್ರೋಜರ ಜೀಪ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ
ನಡೆಯಿಸಿಕೊಂಡು ಬಂದು ಲಾರಿ ನಂ.ಎಪಿ.13-ಡಬ್ಲೂ.6759 ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕ್ರೋಜರದಲ್ಲಿ ಕುಳಿತವರಿಗೆ
ಗಾಯಗೊಳಿಸಿ ತನ್ನ ಕ್ರೋಜರ ಜೀಪನ್ನು ಬಿಟ್ಟು ಓಡಿ
ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:297/12 ಕಲಂ
279,337.ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ
ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ದೇವೆಂದ್ರ ತಂದೆ ಭೀಮರಾವ ಬಾಲ್ಕಿ ಸಾ:ಕಾಳಗಿ
ತಾ:ಚಿತ್ತಾಪುರ ಜಿ:ಗುಲಬರ್ಗಾರವರು ನಾನು ಮತ್ತು ಗೌಸ ಪಟೇಲ & ಹಣಮಂತ ಚೀಲಾ
ರವರು ದಿನಾಂಕ:-19/09/2012 ರಂದು ಮದ್ಯಾಹ್ನ
12:30 ಗಂಟೆ ಸುಮಾರಿಗೆ ಟಂಟಂ ಚಾಲಕ ಪಾಂಡು ತಂದೆ ಚಂದ್ರಣ್ಣಾ ಇತನು ತನ್ನ ಟಂಟಂ ದಲ್ಲಿ ಗಣೇಶನ
ಮೂರ್ತಿ ತರುವ ಕುರಿತು ಗುಲಬರ್ಗಾಕ್ಕೆ ಕಾಳಗಿಯಿಂದ ಬರುವಾಗ ಹಾಗರಗಾ ಕ್ರಾಸ ದಾಟಿ ಹುಮನಾಬಾದ
ರಿಂಗ ರೋಡ ಕಡೆಗೆ ಬರುವಾಗ ಟಂಟಂ ಚಾಲಕ ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ
ನಡೆಸುತ್ತಾ ನಿಯಂತ್ರಣ ತಪ್ಪಿ ಪಲ್ಟಿ ಮಾಡಿ ಸಾದಾ & ಭಾರಿ ರಕ್ತ & ಗುಪ್ತಗಾಯ ಪಡಿಸಿ
ಟಂಟಂ ತೆಗದುಕೊಂಡು ಓಡಿ ಹೋಗಿರುತ್ತಾನೆ ಅಂತಾ ದೂರು
ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
298/12 ಕಲಂ 279
337 338 ಐಪಿಸಿ ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ.
ಸೈಫ್ ಅಲಿ ತಂದೆ ಸಫೀಕ್ ಅಲಿ ಸಾ|| ಪ್ಲಾಟ ನಂ. 22 ಘಾಟಗೇ ಲೇಔಟ ಗುಲಬರ್ಗಾರವರು ನನಗೆ
ಸುಮಾರು 3 ತಿಂಗಳ ಹಿಂದೆ ರಹಿಮಾನ ಜೂಲಕರ ಇತನು ನನ್ನ ಹತ್ತಿರ ಹಣ
ಕೇಳಿದ್ದು ನನ್ನ ಹತ್ತಿರ ಹಣ ಇರುವುದಿಲ್ಲಾ ಅಂತಾ ಹೇಳಿದಕ್ಕೆ ಜಗಳ ತಂಟೆ ತಕರಾರು
ಮಾಡಿದ್ದನು. ಆಗ ಕೆಲವರು
ಬುದ್ದಿವಾದ ಹೇಳಿ ಇಬ್ಬರಿಗೆ ಸಮಾಧಾನ ಪಡಿಸಿದ್ದರು.ಹಣ ಕೊಡದೇ
ಇರುವುದ್ದರಿಂದ ದಿನಾಂಕ:19/09/2012 ರಂದು ಸಾಯಂಕಾಲ 5-30
ಗಂಟೆ ಸುಮಾರಿಗೆ ನಾನು ಘಾಟಗೆ ಲೇಔಟ ದಿಂದ ಎಂ.ಎಸ್.ಕೆ ಮೀಲಕ್ಕೆ ನನ್ನ ಗೆಳೆಯರಿಗೆ ಹತ್ತಿರ
ಹೊಗುತ್ತಿರುವಾಗ ಸಿದ್ದಾರ್ಥ ನಗರ ಬುದ್ದ ಮಂದಿರ
ಹತ್ತಿರ ಎದರುಗಡೆಯಿಂದ ರಹಿಮಾನ ಜೂಲಕರ ಮತ್ತು ಸೋಹೆಲ
ಇಬ್ಬರು ಮೊಟರ ಸೈಕಲ ನಂ. ಕೆಎ 05-ಇಆರ್-5390 ನೇದ್ದರ ಮೇಲೆ ಬಂದವರೇ ಮೊಟರ ಸೈಕಲ ಅಡ್ಡಗಟ್ಟಿ ನನಗೆ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಕಬ್ಬಿಣದ ರಾಡನ್ನು
ತೆಗೆದುಕೊಂಡು ನನ್ನ ತೆಲೆಯ ಹಿಂದೆ ಕಿವಿ ಹತ್ತಿರ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದ್ದು, ಮತ್ತು
ಕೈಯಿಂದ ಹೊಡೆದು ಗುಪ್ತಗಾಯಗೊಳಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:80/2012
ಕಲಂ. 341, 323, 324, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment