ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಸುಬಾಷಚಂದ್ರ ತಂದೆ ಯಶ್ವಂತ ರಾವ ಕೊಕ್ರೆ ಸಾ|| ಪಟ್ಟಣ ಗ್ರಾಮ ತಾ||ಜಿ||ಗುಲಬರ್ಗಾರವರು
ನಾನು ದಿ:06-08-2012 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ
ನನ್ನ
ಅಣ್ಣ ಲಕ್ಷ್ಮಿಕಾಂತ ಇತನ ಮನೆಗೆ ಹೋಗಿ ಖರೀದಿ ಮಾಡಿದ ಹೊಲವನ್ನು ನನ್ನ ಹೆಸರಿಗೆ
ಮಾಡಿಕೊಡಲು ಕೇಳಿದಾಗ ಲಕ್ಷ್ಮಿಕಾಂತ ಅವನ ಹೆಂಡತಿ ಮತ್ತು ತಮ್ಮ 3 ಜನರು ಕೂಡಿ ಕೊಂಡು ಅವಾಚ್ಚವಾಗಿ ಬೈದು
ಕೈಯಿಂದ ಹೊಡೆ ಬಡೆ ಮಾಡಿ ನಿನಗೆ ಹೊಲವನ್ನು ರಜೀಸ್ಟರ್ ಮಾಡಿಕೊಡುವದಿಲ್ಲಾ ಅಂತಾ ನಿಂದಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 258/2012 ಕಲಂ 341, 323,
504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಸ್ಟೇಷನ ಬಜಾರ
ಪೊಲೀಸ
ಠಾಣೆ: ಶ್ರೀ ಸುಜಾತ ತಂದೆ ಮಲ್ಲಿಕಾರ್ಜುನ್ ಚಿಲಶೆಟ್ಟಿ ಸಾ|| ಪ್ಲಾಟ್ ನಂ: 4 ಬಸ್ಟ್ತಾಂಡ ಹಿಂದುಗಡೆ ಸಿ.ಐ.ಬಿ ಕಾಲೂನಿ ಗುಲಬರ್ಗಾರವರು ನಾನು ದಿನಾಂಕ.08.08.2012
ರಂದು ರಾತ್ರಿ 19.30 ಗಂಟೆ ಸುಮಾರಿಗೆ ಟಿ.ಎ.ಪಾಟೀಲ್ ಕ್ರಾಸ್ ಹತ್ತಿರವಿರುವ ನನ್ನ ಗೆಳತಿ
ವಿಜಯಲಕ್ಷ್ಮಿ ಯವರ ಮನೆಯ ಮುಂದೆ ತನ್ನ ಸ್ಕೂಟಿ ಗಾಡಿ ನಿಲ್ಲಿಸಿ ಇಳಿಯುತ್ತಿರುವಾಗ ಯಾರೋ ಒಬ್ಬನು
ಬಂದವನೆ ಕೊರಳಿಗೆ ಕೈ ಹಾಕಿ ಕೊರಳಲ್ಲಿಯ 10 ಗ್ರಾಂ ಬಂಗಾರದ ಚೈನ್ ಅ|| ಕಿ|| 30,000/- ರೂ ನೇದ್ದನ್ನು ಕಿತ್ತುಕೊಂಡು ಓಡುತ್ತಿರುವಾಗ ನಾನು ಬೆನ್ನು ಹತ್ತಿದಾಗ ಮುಂದೆ
ನಿಂತಿದ ಸೈಕಲ್ ಮೊಟಾರ್ ಮೇಲೆ ಕುಳಿತು ಪರಾರಿಯಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.106/2012 ಕಲಂ
392 ಐ.ಪಿ.ಸಿ ನೆದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಮಳಖೇಡ ಪೊಲೀಸ ಠಾಣೆ:ಮಂಗಲಕೂಮಾರ ತಂದೆ ಬಲಿಭೈಯ್ಯಾ ವಯಾ|| 35 ವರ್ಷ ಜಾ|| ಭೈಯ್ಯಾ ಉ|| ಕೂಲಿ ಕೆಲಸ ಸಾ|| ಭರಮೂರಿಯಾ ರಾ|| ಜಾರ್ಖಂಡ ಹಾ||ವ|| ಆರ್.ಸಿ.ಎಫ್ ಮಳಖೇಡ ಇತನು ದಿನಾಂಕ
13/07/2012 ರಂದು ಸಾಯಂಕಾಲ ಕೂಲಿ ಕೆಲಸ ಮಾಡುತ್ತಿರುವಾಗ ಎತ್ತರದಿಂದ ಆಕಸ್ಮಿಕವಾಗಿ ಕಾಲು ಜಾರಿ
ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿದ್ದು ಉಪಚಾರ ಕುರಿತು ಹೈದ್ರಾಬಾದ್ ನ ಗಾಂದಿ
ಆಸ್ಪತ್ರೆಗೆ ದಾಖಲು ಮಾಡಿದ್ದು,08/08/2012 ರಂದು ಉಪಚಾರ ಪಡೆಯುತ್ತ ಮೃತಪಟ್ಟಿರುತ್ತಾನೆ ಅಂತಾ ಗೆಂದುಕುಮಾರ
ತಂದೆ ಬಲಿಭೈಯ್ಯಾ ಸಾ|| ಜಾರ್ಖಂಡ ಹಾ||ವ|| ಆರ್.ಸಿ.ಎಫ್ ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:10/2012 ಕಲಂ 174 ಸಿಅರ್.ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment