POLICE BHAVAN KALABURAGI

POLICE BHAVAN KALABURAGI

08 August 2012

GULBARGA DISTRICT REPORTED CRIMES

ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಗಳಿಂದ ಕಾರ್ಯಚರಣೆ.
ಅನೈತಿಕ ಸಂಬಂಧ ಸಲುವಾಗಿ ಗಂಡನನ್ನೆ ಕೊಲೆ ಮಾಡಿಸಿದ ಹೆಂಡತಿ ಮತ್ತು ಆಕೆಯ ಪ್ರಿಯಕರ ಬಂದನ:
ದಿನಾಂಕ: 24/05/2010 ರಂದು ಮಹಾಗಾಂವ ಠಾಣೆ ಗುನ್ನೆ ನಂ: 59/2010 ಕಲಂ: 302, 201 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ 30-40 ವರ್ಷ ವಯಸ್ಸಿನ ಗಂಡು ಮನುಷ್ಯನ ಕೊಲೆಯನ್ನು  ಯಾರೋ ದುಷ್ಕರ್ಮಿಗಳು ಮಾಡಿ ಶವನ್ನು ಕುರಿಕೊಟಾ ಯಕ್ಕಂಚಿ ರೋಡಿನ ಮಗ್ಗಲಿನ ಕಂಟಿಯಲ್ಲಿ ಬಿಸಾಕಿ ಸೀಮೆಎಣ್ಣೆ ಹಾಕಿ ಅರ್ದಮರ್ದ ಸುಟ್ಟು ಸಾಕ್ಷಿ ಪುರಾವೆ ನಾಶ ಮಾಡಿ ಹಾಗೂ ಮೃತನ ಗುರುತು ಸಿಗಲಾರದಂತೆ ಮಾಡಿದ್ದು ತನಿಖೆ ಕಾಲಕ್ಕೆ ಮೃತನ ಎಲುಬುಗಳ ಬಗ್ಗೆ ಡಿ.ಎನ್.ಎ ಪರೀಕ್ಷೆ ಕುರಿತು ಕಳುಹಿಸಲು ಸ್ಟೇಶನ್ ಬಜಾರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಬಗ್ಗೆ ಗುನ್ನೆ ನಂ: 169/2010 ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಸದರಿ ಪ್ರರಕಣದಲ್ಲಿಯ ಕಾಣೆಯಾದ ವ್ಯಕ್ತಿಯ ಅಕ್ಕನಾದ ಸುಜಾತ ಇವಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯ ಮಡಿವಾಳ ಬೆಂಗಳೂರು ರವರಲ್ಲಿ ಡಿ.ಎನ್.ಎ ಪರೀಕ್ಷೆ ಕುರಿತು ಕಳುಹಿಸಿದ್ದು ಮೃತನ ಎಲುಬು ಮತ್ತು ರಕ್ತದ ಮಾದರಿ ಒಂದೇ ಅಂತಾ ತಜ್ಞರ ಅಭಿಪ್ರಾಯ ಬಂದ ಮೇರೆಗೆ ಮೃತನ ಹೆಂಡತಿಯು ಸುಮಾರು 53 ದಿನಗಳ ನಂತರ ತನ್ನ ಗಂಡ ಕಾಣೆಯಾದ ಬಗ್ಗೆ ಫಿರ್ಯಾಧಿ ದಾಖಲಿಸಿದ ಸಂಶಯದ ಮೇರೆಗೆ ವಿಚಾರಣೆ ಮಾಡಲು ಮೃತನ ಹೆಂಡತಿ ಶಿಲ್ಪಾ ಇವಳು ನದಿಮ್ ಹುಸೇನ್ ಎನ್ನುವ ಸಂತ್ರಾಸವಾಡಿಯ ಯುವಕನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರಿಂದ ಮೃತನು ಅದಕ್ಕೆ ಅಡ್ಡಿಪಡಿಸಬಹುದು ಎಂದು ಆಕೆಯ ಪ್ರಚೋದನೆ ಮೇರೆಗೆ ನದಿಮ್ ಹುಸೇನ ಹಾಗೂ ಆತನ ಗೆಳೆಯನಾದ ಮಶಾಖ್ ಸಾ||ಸಂತ್ರಾಸವಾಡಿ ಇಬ್ಬರೂ ಕೂಡಿ ಎಮ್.ಜಿ ರೋಡಿನ ಪಕ್ಕದ ಕಂಟಿಯಲ್ಲಿ ರಾಡ ಹಾಗೂ ಚಾಕುವಿನಿಂದ ಪ್ರಸನ್ನ ಕುಲಕರ್ಣಿ ಇತನಿಗೆ ಗಾಯಗೊಳಿಸಿ ಕೊಲೆ ಮಾಡಿ ಮುಚ್ಚಿ ಹಾಕಿದ್ದು ಅದೆ. ಡಿ.ಎನ್.ಎ ವರದಿಯಿಂದ ಗುನ್ನೆಯನ್ನು ಪತ್ತೆ ಹಚ್ಚಲು ಅನುಕೂಲವಾಗಿರುವದರಿಂದ ಗ್ರಾಮೀಣ ವೃತ್ತದ ಸಿ.ಪಿ.ಐ ರವರಾದ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶಾಂತಿನಾಥ ಪಿ.ಎಸ್.ಐ, ಆನಂದರಾವ ಪಿ.ಎಸ್.ಐ ಮತ್ತು ನಡಗಡ್ಡಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಸೂರ್ಯಕಾಂತ, ಪ್ರಭುಲಿಂಗ, ರಾಜಕುಮಾರ, ಹುಸೇನಬಾಷಾ, ನರಸಿಂಹಚಾರಿ, ಮಂಜುಳಾ ಜೀಪ ಚಾಲಕ ಬಂಡೆಪ್ಪ ಇವರು ಪ್ರಯತ್ನಪಟ್ಟು ಕೊಲೆ ಕೇಸನ್ನು ಬೇದಿಸಿ ಮೃತನ ಹೆಂಡತಿ ಶಿಲ್ಪಾ ನದಿಮ್ ಹುಸೇನ್ ಮತ್ತು ಮಶಾಖ್ ಇವರನ್ನು ದಸ್ತಗಿರಿ ಮಾಡಿದ್ದು ಆರೋಪಿತರಿಂದ ಮೃತನ ಮೊಬೈಲ್ ಫೋನ್ ಮತ್ತು ಹೀರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ: ಕೆ.ಎ-32-ಎಲ್-1391 ನೇದ್ದನ್ನು ಜಪ್ತಿ ಮಾಡಿದ್ದು ಅದೆ. ಸಿಬ್ಬಂದಿಯವರಿಗೆ ಮಾನ್ಯ ಐ.ಜಿ.ಪಿ ಸಾಹೇಬರು ಹಾಗೂ ಎಸ್.ಪಿ ಮತ್ತು ಅಪರ ಎಸ್.ಪಿ ಹಾಗೂ ಡಿ.ಎಸ್.ಪಿ ತಿಮ್ಮಪ್ಪ ಇವರು ಮಾರ್ಗದರ್ಶನ ಮಾಡಿದ್ದು ಅದೆ. 
ಅಂಗಡಿಯಲ್ಲಿರುವ ಮಹಿಳೆಗೆ ತಮ್ಮ ತಾಯಿಗೆ ಆರಾಮ ಇರುವದಿಲ್ಲ ದೇವರಿಗೆ 2000/- ದಾನ ಮಾಡುವಂತೆ ಹಣ ನೀಡಿ , ಬಂಗಾರದ ಆಭರಣ ಮತ್ತು 2000/- ರೂ ಮೋಸ ಮಾಡಿದ ಬಗ್ಗೆ.
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಉಷಾ ಗಂಡ ದಿ: ಮರಲಿಂಗಪ್ಪ ರದ್ದೆವಾಡಿ ವ:52 ಸಾ: ಪ್ಲಾಟ ನಂ.130 ನಿರ್ಮಲ ನಿವಾಸ ಸಿಐಬಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 07-08-2012 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಸ್ನಾನದ ಸಾಬೂನಿನ ಬಗ್ಗೆ ವಿಚಾರಿಸಿದರು. ನಂತರ ಕೊಲ್ಡ ಡ್ರಿಂಕ್ಸ ಕೇಳಿದರು ಅದರಲ್ಲಿ ಒಬ್ಬನ್ನು ಕೊಲ್ಡ್ ಡ್ರಿಂಕ್ಸ ತೆಗೆದುಕೊಂಡು ಕುಡಿಯುತ್ತಿದ್ದ,  ಇನ್ನೊಬ್ಬನು ತನ್ನ ತಾಯಿಗೆ ಆರಾಮ ಇಲ್ಲ ಅದಕ್ಕಾಗಿ ಹತ್ತಿರದಲ್ಲಿ ದೇವಸ್ಥಾನಗಳ ಬಗ್ಗೆ ಕೇಳಿದನು ನಾನು ಹತ್ತಿರದಲ್ಲಿರುವ ಭವಾನಿ ಮಂದಿರದ ಬಗ್ಗೆ ಹೇಳಿದೇನು. ಆಗ ಅವರು ರಾಮ ಮಂದಿರ ಎಷ್ಟು ದೂರ ಆಗುತ್ತದೆ. ಅಲ್ಲಿಗೆ ಹೋಗಿ ನಮ್ಮ ತಾಯಿಯ ಹೆಸರಿನಲ್ಲಿ 2000/- ರೂ ದಾನ ಮಾಡುವಂತೆ ಹೇಳಿದರು. ಆಗ ನಾನು ನಿರಾಕರಿಸಿದೆ ಅಷ್ಟರಲ್ಲಿಯೆ ನಮ್ಮ ಕಾಲೋನಿಯ ಬಾಲಕೃಷ್ಣ ತಂದೆ ಶಿವಲಿಂಗಪ್ಪ ಉಪ್ಪಾರ ಇವರು ತಮಗೆ ಕೊಲ್ಗೇಟ ಬೇಕೆಂದು ತೆಗೆದುಕೊಳ್ಳಲು ಅಂಗಡಿಗೆ ಬಂದಾಗ ಅವರು ಸ್ವಲ್ಪ ದೂರ ಸರಿದು ನಿಂತರು. ಆಗ ನಾನು ಬಾಲಕೃಷ್ಣ ಅವರೊಂದಿಗೆ ಗಿರಾಕಿ ಮಾಡುತ್ತಾ  ಅವರು ನನಗೆ 2000/- ರೂ ಕೊಡುತ್ತಿರುವ ಬಗ್ಗೆ ತಿಳಿಸಿದೆ,  ಅದಕ್ಕೆ ಅವರು ಯಾಕ ತೊಗೋತ್ತಿರಿ ಅಂತ ಹೇಳಿದರು ಅವರು ಕೂಡಾ ಅಪರಿಚಿತ 2  ವ್ಯಕ್ತಿಗಳಲ್ಲಿ ಒಬ್ಬನೊಂದಿಗೆ ಮಾತನಾಡಿದರು. ರಾಮ ಮಂದಿರ ಎಷ್ಟು ದೂರ ಅಂತಾ ಆ ವ್ಯಕ್ತಿ ಬಾಲಕೃಷ್ಣ ಅವರಿಗೆ ಕೇಳಿದನು ಆಗ ಹೋಗುವ ದಾರಿ ತೊರಿಸಿದರು. ಬಾಲಕೃಷ್ಣ ಅವರು ಹೋದ ಮೇಲೆ ಮತ್ತೆ ಆ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಹತ್ತಿರ ಬಂದವರೇ 2000/-  ರೂ ಗಳನ್ನು ನನ್ನ ಕೈಯಲ್ಲಿ ಕೊಟ್ಟು ದಾನ ಮಾಡುವಂತೆ ತಿಳಿಸಿದರು. ಅದಕ್ಕೆ ನನ್ನ ಕೊರಳಲ್ಲಿ ಇದ್ದ ಬಂಗಾರದ 2 ತೊಲೆ ಲಾಕೀಟನ್ನು ಸುತ್ತುವಂತೆ ತಿಳಿಸಿದರು. ನಾನು ನನ್ನ ಕೊರಳಲ್ಲಿದ್ದ ಬಂಗಾರದ ಎರಡು ಏಳೆ ಲಾಕೀಟನ್ನು ತೆಗೆದು ಅದಕ್ಕೆ ಸುತ್ತಿ ನಂತರ ಅದನ್ನು ಅಂಗಡಿಯ ಗಲ್ಲದಲ್ಲೆ ಇಟ್ಟಿರುತ್ತೇನೆ. ಆಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿಂದ ಹೋದರು. ಮತ್ತೆ ಗಿರಾಕಿ ಬಂದಿರುವುದ್ದರಿಂದ ನಾನು ಗಿರಾಕಿಗೆ ತಡೆದು ಗಲ್ಲದಲ್ಲಿನ ಅವರು ಕೊಟ್ಟ 2000/-  ರೂ ಗಳಿಗೆ ನನ್ನ 2 ತೊಲೆ ಬಂಗಾರದೆ ಲಾಕೀಟ ಸುತ್ತಿರುವುದನ್ನು ನೋಡಲಾಗಿ ಗಲ್ಲದಲ್ಲಿ ಕಾಣಲಿಲ್ಲಾ. ನನ್ನ ಮಕ್ಕಳಿಗೆ ತಿಳಿಸಿದೇನು. ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಅಂಗಡಿಗೆ ಬಂದು ನನಗೆ ಮೊಸ ಮಾಡಿ ಅವರು ಕೊಟ್ಟ 2000/-  ರೂ ಗಳೊಂದಿಗೆ ನನ್ನ 2 ತೊಲೆ ಬಂಗಾರದ ಲಾಕೀಟ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.68/2012 ಕಲಂ 420, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಪ್ರಭು ತಂದೆ ಮಲ್ಲಪ್ಪಾ ಮಾಳಗೆ, ಪ್ರಾಚಾರ್ಯರರು ಡಾ|| ಬಿ.ಆರ್. ಅಂಬೇಡ್ಕರ ಕೈಗಾರಿಕಾ ತರಬೇತಿ ಕೇಂದ್ರ ಕಮಲಾಪೂರ ಸಾ|| ಅಶೋಕ ನಗರ ಗುಲಬರ್ಗಾ ರವರು ಡಾ||.ಬಿ.ಆರ್.ಅಂಬೇಡ್ಕರ ಐಟಿಐ ಕಾಲೇಜಿಗೆ ಶ್ರೀ ಲೊಕೇಶ ತಂದೆ ಶಿವಲಿಂಗಪ್ಪಾ ಅಮಲೇಕರ ಸಾ||ಕುರಿಕೋಟಾ ಇವನು ಕಾವಲುಗಾರನಾಗಿ ಕೆಲಸ ಮಾಡುತ್ತಿರುತ್ತಾನೆ. ದಿಃ 07-08-2012 ರಂದು ರಾತ್ರಿ 9-45 ಕಾವಲುಗಾರನಾದ ಲೊಕೇಶ ಈತನು ಫೋನ ಮಾಡಿ ಸಂಸ್ಠೆಯಲ್ಲಿನ ಕಂಪ್ಯೂಟರ್ ಕಳ್ಳತನವಾಗಿದೆ ಅಂತಾ ವಿಷಯ ತಿಳಿಸಿದನು. ನಾನು ದಿನಾಂಕ:08-08-2012 ರಂದು ಬೆಳಿಗ್ಗೆ  ನಮ್ಮ ಡಾ//.ಬಿ.ಆರ್. ಅಂಬೇಡ್ಕರ ಐಟಿಐ ಕಾಲೇಜ ಕಮಲಾಪುರಕ್ಕೆ ಬಂದು ನೋಡಲಾಗಿ, 1) Intel LCD Screen 18.5 Net Value Rs. 14,400-00. 2. Key Board Net Value Rs. 200-00 3) V. Gourd UPS Net Value Rs. 2400/- Total Value Rs. 17,000-00 ಕಿಮ್ಮತಿನ ಕಂಪ್ಯೂಟರ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;93/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: