POLICE BHAVAN KALABURAGI

POLICE BHAVAN KALABURAGI

23 August 2012

GULBARGA DISTRICT REPORTED CRIMES


ಅಶೋಕ ನಗರ ಪೊಲೀಸರ ಕಾರ್ಯಚರಣೆ ಮೋಸ ಮಾಡಿ ಬಂಗಾರ ಕಳ್ಳತನ ಮಾಡುವವರ ಬಂದನ:

ಗುಲಬರ್ಗಾ ನಗರದ ವಿದ್ಯಾನಗರದ ಕಾಂಬ್ಳೆ ಬಿಲ್ಡಿಂಗದಲ್ಲಿ ಬಾಡಿಗೆ ರೂಮದಲ್ಲಿರತುವ ನನ್ನ ರೂಮಿನ ಪಕ್ಕದಲ್ಲಿ 8 ದಿವಸದ ಹಿಂದೆ  ನಿರ್ಮಲಾ ಎನ್ನುವ ಹೆಣ್ಣುಮಗಳು ತಾನು ನರ್ಸ ಕೆಲಸ ಮಾಡಿಕೊಂಡುರುವುದಾಗಿ ಹೇಳಿ  ಬಾಡಿಗೆ ರೂಮಿನಲ್ಲಿ ಇದ್ದು,  ದಿನಾಂಕ 08/08/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಹತ್ತಿರ ಬಂದು  ಫೋಟೊ ತೆಗೆಸಿಕೊಂಡು ಬರುವುದಾಗಿ ಹೇಳಿ ನಂಬಿಸಿ, ನನ್ನ  ಹತ್ತಿರ ಇದ್ದ ಬಂಗಾರದ ಕಿವಿ ಹೂವುಗಳು,  ಬಂಗಾರದ ಜೈನ  ಒಟ್ಟು 24,000/- ರೂಪಾಯ ಮೌಲ್ಯದ ವಡವೆಗಳನ್ನು ಮೊಸದಿಂದ ಕಳ್ಳತನ ಮಾಡಿಕೊಂಡು ಹೊಗಿರುತ್ತಾಳೆ. ಅಂತಾ ಕು|| ಮೀರಾ ತಂದೆ ಭೀಮಶ್ಯಾ ನಾಯ್ಕೊಡಿ ಸಾ: ಹೂವಿನಹಳ್ಳಿ ತಾ: ಅಫಜಲಪೂರ  ಇವಳು ಗುಲಬರ್ಗಾ ನಗರದಲ್ಲಿಯ ಓಂ ಕಾರ ಡಿಸ್ಟ್ರಿಬೂಟರದಲ್ಲಿ ಕಂಪ್ಯೂಟರ ಕೆಲಸ ರವರು ದೂರು ನೀಡಿದ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ. 420, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. . ಪ್ರಕರಣದ  ತನಿಖೆ ಕೈಕೊಂಡ ಶ್ರೀ. ಟಿ.ಹೆಚ್‌.ಕರಿಕಲ್‌, ಪಿಐ  ಮತ್ತು ಸುರೇಶ  ಪಿಸಿ 1150,  ಬಸವರಾಜ ಪಿಸಿ 05,  ಉಮಣ್ಣ ಪಿಸಿ 118, ಶಂಕರಲಿಂಗ ಪಿಸಿ 1673,  ಉಮೇಶ ಪಿಸಿ 30 ರವರನ್ನೊಳಗೊಂಡ ತಂಡವು   ಘಟನಾ ಸ್ಥಳದಲ್ಲಿ ದೊರೆತ ಸಣ್ಣ ಕುರುಹು ಆಧಾರದ ಮೇಲಿಂದ, ಪೊಲೀಸ ತಂತ್ರಜ್ಞಾನದ ಸಹಾಯ ತೆಗೆದುಕೊಂಡು,  ದಿನಾಂಕ 13/08/2012 ರಂದು  ಮೋಸ ಮಾಡಿ ಬಂಗಾರ ಕಳ್ಳತನ ಮಾಡಿಕೊಂಡು ಹೊಗಿರುವ  ನಿರ್ಮಲಾ @ ಅಂಬಿಕಾ  ಗಂಡ ಅಂಬರೀಶ ಕೊಂಡ ಇವಳಿಗೆ ಪತ್ತೆ ಹಚ್ಚಿ, 10,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಕಿವಿ ಹೂವುಗಳನ್ನು ವಶಪಡಿಸಿಕೊಂಡು , ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಮತ್ತು ಇವಳ ಸಹಚರ  ಅಂಬರೀಶ ತಂದೆ ಸೈಬಣ್ಣ ಕೊಂಡ ಸಾ: ವಕೀಲ ಕಾಲೋನಿ ಗುಲಬರ್ಗಾ ಎನ್ನುವಳಿಗೆ ದಿನಾಂಕ 21/08/2012 ರಂದು ದಸ್ತಗಿರಿ ಮಾಡಿ, ಬಂಗಾರದ ಚೈನ ಹಾಗು  ಅಪರಾಧಕ್ಕೆ ಬಳಸಿದ  ಕರಿಸ್ಮಾ  ದ್ವಿಚಕ್ರ ವಾಹನ ನಂ. ಕೆಎ-32 ವಿ-5961 ಹೀಗೆ ಒಟ್ಟು 50,000/- ರೂಪಾಯಿ ಮೌಲ್ಯದ  ವಸ್ತುಗಳನ್ನು ವಶಡಿಸಿಕೊಂಡು, ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಈ ರೀತಿ ಮೊಸ ಮಾಡಿ ಕಳ್ಳತನ ಮಾಡುವ ಆರೋಪಿತರ ಜಾಲ ಪತ್ತೆ ಹಚ್ಚಿದ್ದು, ಇನ್ನೊಬ್ಬ ಆರೋಪಿ ತಲೆ ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ.  ಪತ್ತೆ ಮಾಡಿದ ಸಿಬ್ಬಂಧಿಯವರ ಕಾರ್ಯವನ್ನು ಮಾನ್ಯ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘನೆ ಮಾಡಿರುತ್ತಾರೆ.

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ಜಾಫರ ಅಲಿ ತಂದೆ ಅಬ್ದುಲ ಅಹ್ಮದ ಸಾಬ ವ|| 38,  ಉ|| ಖಾಸಗಿ ಕೆಲಸ, ಸಾ|| ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್  ಗುಲಬರ್ಗಾ ರವರು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ 15-08-2012 ರಂದು ಬೆಂಗಳೂರಿಗೆ ಹೋಗಿರುದ್ದೆವು. ದಿನಾಂಕ 21-08-2012 ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯ ಮುಂದಿನ ಮನೆಯವರಾದ ಶ್ರೀ ಉಬೇದ ಉಲ್ಲಾ ರವರು ಮೋಬಾಯಿಲ್ ಗೆ ಕರೆ ಮಾಡಿ  ನಿಮ್ಮ ಮನೆಯ ಬಾಗಿಲು ತೆರೆದಿದೆ  ಅಂತಾ ತಿಳಿಸಿದ್ದು, ನಾನು ಸದರಿಯವರಿಗೆ ಒಳಗೆ ಹೋಗಿ ನೋಡಲು ಹೇಳಿದಾಗ  ಸದರಿ ಉಬೇದ ಉಲ್ಲಾ ಇವರು ನಮ್ಮ ಮನೆಯೊಳಗೆ ಎಲ್ಲಾ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಅಂತಾ ತಿಳಿಸಿರುತ್ತಾರೆ. ನಾವು  ದಿನಾಂಕ 22-08-2012 ರಂದು ಬೆಂಗಳೂರಿನಿಂದ  ಬಂದು ನೋಡಲು ಮನೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರಿಯಲ್ಲಿಟ್ಟಿದ್ದ   35,000/- ರೂ. ನಗದು ಹಣ, ಬಂಗಾರದ ಕಿವಿರಿಂಗ್   ಅ|| ಕಿ|| 3600/-,ಒಂದು ಗ್ಯಾಸ ಸಿಲೆಂಡರ್  ಅ|| ಕಿ|| 1200/-,ಒಂದು ಇನ್ ವೇಟರ್‌ ಅ|| ಕಿ|| 6000/-.ಸೀರೆಗಳು  ಅ|| ಕಿ|| 4000/-ರೂ, ಹೀಗೆ ಒಟ್ಟು 49,800/-ರೂಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ಬಾಬುರಾವ ತಂದೆ ಹಣಮಂತಪ್ಪ ನೇಲೋಗಿ ಸಾ|| ಶಿವಸಾಗರ ಎಲೇಟ್ರಾನಿಕ ಪಾಲ ಕಾಂಪ್ಲೇಕ್ಸ್ ಸಿ,ಟಿ ಬಸಸ್ಟ್ಯಾಂಡ ಎದರುಗಡೆ ಗುಲಬರ್ಗಾ ರವರು ನಾವು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ: 20/08/2012 ರಂದು ರಾತ್ರಿ 00-40 ಗಂಟೆ ಸುಮಾರಿಗೆ ಸುಪರ ಮಾರ್ಕೆಟದ ಗೌರಿ ಸಾರಿ ಸೆಂಟರ ಎದರುಗಡೆ ಗೆಳೆಯರ ಜೋತೆ ನಿಂತು ಮಾತನಾಡುವಾಗ ನನ್ನ  ಜೇಬಿನಲ್ಲಿ ಇದ್ದ 32000/- ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:103/12 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: