ಗ್ರಾಮೀಣ ಠಾಣೆ : ಶ್ರೀ ಬಕ್ಕಣ್ಣಾ ತಂದೆ ಗುಂಡಪ್ಪ ಕೋಡ್ಡಿನ ಸಾ: ಉಡಬಾಳ ತಾ: ಹುಮ್ನಾಬಾದ ಹಾ:ವ: ಪಂಡಿತ ದೀನ ದಯಾಳ ಕಾಲೋನಿ ಗುಲಬರ್ಗಾ ರವರು, ದಿ: 21-08-12 ರಂದು ಸಂಜೆ 7-00 ಗಂಟೆ ಸುಮಾರಿಗೆ ನನ್ನ ಟಿವಿಎಸ್ ಗಾಡಿ ಕೆಎ 33 ಜೆ 5721 ನೇದ್ದರಲ್ಲಿ ಹುಮನಾಬಾದಕ್ಕೆ ಹೋಗಿ ಮರಳಿ ಮನೆಯ ಕಡೆ ಎಡ ಬದಿ ರೋಡ ಸೈಡ ಹಿಡಿದುಕೊಂಡು ರುಕುಂತೋಲಾ ದರ್ಗಾ ಇನ್ನೂ ಫರ್ಲಾಂಗ ಸ್ವಲ್ಪ ಮುಂದೆ ಇರುವಂತೆ ಒಂದು ದಾಲಮಿಲ್ಲ ಹೆಸರು ಗೊತ್ತಿಲ್ಲಾ ಎದುರಿನ ರೋಡಿನ ಮೇಲೆ ಹೊರಟಾಗ ಎದುರುನಿಂದ ರುಕುಂತೋಲಾ ದರ್ಗಾ ಕಡೆಯಿಂದ ಆಟೋ ರಿಕ್ಷಾ ಕೆಎ 32 ಬಿ 3038 ಚಾಲಕ ಅಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಅಪಘಾತಪಡಿಸಿ ಗಾಯಗೊಳಿಸಿ, ಆಟೋ ಅಲ್ಲಿಯೇ ನಿಲ್ಲಿಸಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 272/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹರೀಶ ತಂದೆ ಚಂದಪ್ಪ ದೊಡಮನಿ ಸಾ: ಕಾಂತ ಕಾಲೋನಿ ಗುಲಬರ್ಗಾ ರವರು, ದಿನಾಂಕ 20-08-12 ರಂದು ಸಾಯಂಕಾಲ 7-30 ಗಂಟೆಗೆ ಆರ್.ಪಿ ಸರ್ಕಲ ದಿಂದ ರಾಮಮಂದಿರ ರೋಡ ಮೇಲೆ ಯಾತ್ರಿಕ ನಿವಾಸ ಎದುರಿನ ಬಿ.ಹೆಚ್ ಪಾಟೀಲ ಆಸ್ಪತ್ರೆ ಎದುರುಗಡೆ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ಈತನು ತನ್ನ ಮೋಟಾರ ಸೈಕಲ ನಂ ಕೆಎ-39 ಜೆ-3912 ನೇದ್ದರ ಮೇಲೆ ನನ್ನನ್ನು ಕೂಡಿಸಿಕೊಂಡು ರಾಮಮಂದಿರದಿಂದ ಮನೆಗೆ ಬರುವಾಗ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಾನು ನಿಧಾನವಾಗಿ ಚಲಾಯಿಸಿಲು ತಿಳಿಸಿದರು ಕೂಡಾ ಕೇಳದೆ ಅತೀವೇಗದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೋಟಾರ ಸೈಕಲನ್ನು ನೋಡಿ ಕಟ್ ಹೊಡಿದು ಒಮ್ಮೆಲೆ ಬ್ರೇಕ ಹಾಕಿ ಮೋ/ಸೈಕಲ ಕೆಳಗೆ ಕೆಡುವಿದರಿಂದ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ನು ಕೆಳಗಡೆ ಬಿದ್ದು ತಲೆಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿ ಮಾತನಾಡಲಿಕ್ಕೆ ಬರುತ್ತಿರಲಿಲ್ಲಾ ತಾವು ಮುಂದಿನ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 85/12 ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಮಹಿಳಾ ಪೊಲೀಸ ಠಾಣೆ : ಶ್ರೀಮತಿ ಅನಿತಾ ಗಂಡ ಬಸವರಾಜ ಠಣಕೆದಾರ ಸಾ : ಬಾಲಾಜಿ ನಗರ ಗುಲಬರ್ಗಾ ರವರು, ನನ್ನ ಮದುವೆಯನ್ನು ದಿನಾಂಕ 28.06.2012 ರಂದು ಸಂಪ್ರದಾಯದಂತೆ ಹಿರಿಯರೆಲ್ಲರೂ ಕೂಡಿಕೊಂಡು ಬಸವರಾಜ ತಂದೆ ಮಲ್ಲಪ್ಪಾ ಠಣಕೆದಾರ ಸಾ: ಹತ್ತಿಗುಡೂರ ತಾ: ಶಹಾಪುರ ಹಾ:ವ: ನಂದೀಶ್ವರ ಕಾಲೋನಿ ಬೀದರ.ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು 4 ಲಕ್ಷ ರೂಪಾಯಿ ಕೊಟ್ಟಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ನನ್ನೋಂದಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ ನನಗೆ ನೀನು ಇಷ್ಟವಿಲ್ಲ ಮತ್ತು ಇನ್ನು 10 ಲಕ್ಷ ರೂಪಾಯಿ ಹಣ ನಿಮ್ಮ ತಂದೆ ಕಡೆಯಿಂದ ತೆಗೆದುಕೊಂಡು ಬರಬೇಕೆಂದು ಜಗಳ ತೆಗೆಯುತ್ತಿದ್ದನು. ಹೀಗಿದ್ದು ದಿನಾಂಕ 20.08.2012 ರಂದು ರಾತ್ರಿ 10 ಗಂಟೆಗೆ ಬಾಲಾಜಿನಗರದಲ್ಲಿರುವ ನಮ್ಮ ಚಿಕ್ಕಪ್ಪನ ಮನೆಗೆ ಬಂದು ಸಿಕ್ಕಾಪಟ್ಟೆ ಗಲಾಟೆ ಮಾಡಿ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಏಕೆಂದರೆ ನೀನು ನಾನು ಹೇಳಿದ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲಾ ನಿನಗೆ ತಕ್ಕ ಪಾಠ ಕಲಿಸುತ್ತೆನೆಂದು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ಹೊರಟು ಹೋದನು. ಕಾರಣ ನನಗೆ ಮದುವೆಯಾದಾಗಿನಿಂದಲೂ ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟ ನನ್ನ ಗಂಡ ಬಸವರಾಜ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಗುನ್ನೆ ಸಂಖ್ಯೆ 59/2012 ಕಲಂ 498(ಎ) 506 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.
No comments:
Post a Comment