POLICE BHAVAN KALABURAGI

POLICE BHAVAN KALABURAGI

14 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಬ್ದುಲ ಹಾದಿ ತಂದೆ ಅಬ್ದುಲ ಅಜೀಜ ಸಾ: ಮನೆ ನಂ 5-960 ಪಾಷಾಪೂರ ರೋಜಾ (ಕೆ) ಗುಲಬರ್ಗಾ ರವರು ನನ್ನ ಮಗ ಮಹ್ಮದ ಆರೀಫ ಎಕ್ಬಾಲ ಮತ್ತು ಮಿರ್ಜಾ ಖದೀರಬೇಗ ಹಾಗು ಮಹ್ಮದ ಸಾದಿಕ ಮೂವರು ದಿನಾಂಕ: 14-06-2012 ರಂದು 10-00 ಗಂಟೆ ಸುಮಾರಿಗೆ ಐಷರ ಗೂಡ್ಸ ವಾಹನ ಸಂಖ್ಯೆ ಎಪಿ 28 ಯು 1185 ನೇದ್ದರಲ್ಲಿದ್ದ ಮಾರಬಲ್ ಸ್ಲ್ಯಾಬಗಳನ್ನು ಇಳಿಸುತ್ತಿರುವಾಗ ವಾಹನ ಚಾಲಕ ಮಹ್ಮದ ಅಹ್ಮದ ತಂದೆ ಮಹ್ಮದ ಜಿಂದಾವಲಿ ಇತನು ನಿರ್ಲಕ್ಷತನದಿಂದ ಒಮ್ಮೇಲೆ ತನ್ನ ವಾಹನವನ್ನು ಮುಂದಕ್ಕೆ ಚಲಾಯಿಸಿ ಬ್ರೇಕ್ ಹಾಕಿದ್ದರಿಂದ ಮಾರ್ಬಲ ಸ್ಲ್ಯಾಬಿಗೆ ಕಟ್ಟಿದ ಹಗ್ಗ ತುಂಡಾಗಿ ಮಾರ್ಬಲ್ ಸ್ಲ್ಯಾಬಗಳು ಮೂವರ ಮೈಮೇಲೆ ಬಿದ್ದು ಭಾರಿಗಾಯಗಳಾಗಿ ಮಿರ್ಜಾ ಖದೀರ ಬೇಗ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಮಹ್ಮದ ಸಾದೀಕ ಇತನು ಕೆ.ಬಿ.ಎನ್ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿದ್ದು, ಮಹ್ಮದ ಆರೀಫ ಎಕ್ಬಾಲ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಗೂಡ್ಸ ಚಾಲಕನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಅಬ್ದುಲ ಹಾದಿಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2012 ಕಲಂ 279,338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ: ಶ್ರೀಮತಿ.ಸುನೀತಾ ಗಂಡ ರಾಜು ಮಾಹೂರಕರ್, ವಯ|| 40 ವರ್ಷ, || ಮನೆ ಕೆಲಸ, ಸಾ|| ಗುಲಬರ್ಗಾರವರು ನನ್ನ ಮಗನಾಧ ಶ್ರೀಧರ ಇವನು ಬಸವರಾಜ ಎಂಬುವವನ ಮಗಳಾದ ಪ್ರಿಯಾಂಕಾ ಎಂಬುವಳೊಂದಿಗೆ 2011 ನೇ ಸಾಲಿನ ನವ್ಹೆಂಬರ ತಿಂಗಳಲ್ಲಿ ರಾಮತೀರ್ಥ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದು, ನನ್ನ ಮಗ ಪ್ರಿಯಾಂಕಾ ಇವಳಿಗೆ  ಮದುವೆ ಮಾಡಿಕೊಂಡ ದಿನದಂದು ಅವಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ, ಮಕ್ಕಳಾದ ಶಕ್ತಿ ಪ್ರಸಾದ, ಶಿವಕುಮಾರ ಇವರು ನನ್ನ ಮಗನಿಗೆ ಕಿರುಕುಳ ನೀಡುತ್ತಾ ಬಂದಿದ್ದು, ಅಲ್ಲದೆ ದಿನಾಂಕ: 11/06/2012 ರಂದು ರಾತ್ರಿ 8:30 ಗಂಟೆಗೆ ಸುಂದರ ನಗರದಲ್ಲಿರುವ ನಮ್ಮ ಮನೆಗೆ ನಮ್ಮ ಸೊಸೆ ಪ್ರಿಯಾಂಕಾ ಮೇಲ ಮಹಡಿಯಿಂದ ಉಲ್ಟಿ ಮಾಡಿ ಕೆಳಗೆ ಬಿದ್ದು ಭಾರಿ ಗಾಯ ಹೊಂದಿದ್ದನ್ನು ನೋಡಿ ನಾನು ಮತ್ತು ನನ್ನ ಮಗ ಇಬ್ಬರು ಕೂಡಿ ಉಪಚಾರಕ್ಕಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಈ ವಿಷಯ ರಾತ್ರಿ 9:00 ಗಂಟೆಗೆ ಗೊತ್ತಾಗಿ ಪ್ರಿಯಾಂಕಾಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ ಅಣ್ಣ ತಮ್ಮಂದಿರರಾದ ಶಕ್ತಿ ಪ್ರಸಾದ, ಶಿವಕುಮಾರ, ಇವರು ಬಂದು ನನ್ನ ಮಗನಿಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ. ಜಗಳ ಬಿಡಿಸಲು ಹೋದಾಗ ನನಗೆ ಬಸವರಾಜ, ಶಕ್ತಿ ಪ್ರಸಾದ, ಇವರು ನನಗೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ: 323, 354, 504, 506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: