POLICE BHAVAN KALABURAGI

POLICE BHAVAN KALABURAGI

14 June 2012

GULBARGA DIST


ಅಪಜಲಪೂರ ಪೊಲಿಸ್ ರಿಂದ ನಾಲ್ಕು ದಿವಸಗಳ ಹಿಂದೆ, 5 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿಯ ಬಂದನ:


ದಿನಾಂಕ:-10-06-2012 ರಂದು ಪಿರ್ಯಾದಿ ನಾಗಮ್ಮ ಗಂಡ ಭೀಮರಾಯ ಕಂಬಾರ ಸಾ||ಮಲ್ಲಾಬಾದ ತಾ||ಅಫಜಲಪೂರ ಇವರು ಅಫಜಲಪೂರ ಠಾಣೆಗೆ ಹಾಜರಾಗಿ ಪಿರ್ಯಾದ ಕೊಟ್ಟಿದ್ದೇನಂದರೆ ದಿನಾಂಕ 10-06-2012 ರಂದು ನನ್ನ ಮಗನಾದ ವಿಜಯಕುಮಾರನ 5 ನೇ ವರ್ಷದ ಹುಟ್ಟುಹಬ್ಬ ಇದ್ದುದ್ದರಿಂದ ನಾನು ಬೆಳಿಗ್ಗೆ 11-00 ಗಂಟೆಗೆ ಸುಮಾರಿಗೆ ಮಲ್ಲಾಬಾದ ಗ್ರಾಮದಿಂದ ಅಫಜಲಪೂರಕ್ಕೆ ಹೋಗಿ ಆತನಿಗೆ ಹೊಸ ಬಟ್ಟೆಯನ್ನು ತೆಗೆದುಕೊಂಡು ಬರಲು ಹೋಗಿದ್ದು, ನಂತರ ನಾನು ಸುಮಾರು 2 ಗಂಟೆಗೆ ಅಫಜಲಪೂರದಿಂದ ನನ್ನ ಮನೆಗೆ ಬಂದು ನೋಡಲಾಗಿ, ನನ್ನ ಮಗನು ಇರಲಿಲ್ಲ. 
        ಆಗ ನಾನು ನನ್ನ ಅಕ್ಕನ ಮಗಳಾದ ಕೀರ್ತಿ ಇವಳಿಗೆ ವಿಜಯಕುಮಾರ ಎಲ್ಲಿದ್ದಾನೆ ಅಂತಾ ಕೇಳಿದಾಗ ಆಟ ಆಡಲು ಹೊರಗಡೆ ಹೋಗಿದ್ದಾನೆ ಅಂತಾ ತಿಳಿಸಿದಳು. ಆಗ ನಾನು ನನ್ನ ಮಗನನ್ನು ಲಕ್ಷ್ಮೀ ದೇವರ ಗುಡಿಪಂಚಾಯಿತಿ ಕಟ್ಟೆಮತ್ತು ರೇವಣಸಿದ್ದೇಶ್ವರ ಮಠ ಹೀಗೆ ಇತರೆ ಕಡೆಗಳಲ್ಲಿ ಹುಡುಕಿದರೂ ಸಿಗಲಿಲ್ಲ. ನನ್ನ ಮಗನನ್ನು ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ಧನಗಳ ಡಾಕ್ಟರ ಕೆಲಸ ಮಾಡುವ  ಮಾದನ ಹಿಪ್ಪರಗಾ ಗ್ರಾಮದ ಮಹಾಂತಪ್ಪ ಕಂಭಾರ ಇವರು ಆಗಾಗ ಆತನನ್ನು ಕರೆದುಕೊಂಡು ಆಟವಾಡುತ್ತಿದ್ದರು ಅದರ ಸಂಬಂಧವಾಗಿ ನಾನು ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ ಅವರು ನಾನು ಹೊರಗಡೆ ಇದ್ದೇನೆ ನಿನ್ನ ಮಗನನ್ನು ಕರೆದುಕೊಂಡು ಬಂದಿಲ್ಲ  ಅಲ್ಲೇ ಎಲ್ಲೋ ಆಟವಾಡುತ್ತಿರಬೇಕು ನೋಡಿ ಎಂದು ತಿಳಿಸಿದರು.
ನಂತರ ಮದ್ಯಾಹ್ನ 4-30 ಗಂಟೆ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ಮಹಾಂತಪ್ಪನವರು ನನ್ನ ಮನೆಯ ಹತ್ತಿರ ಬಂದು ವಿಜಯಕುಮಾರ ಸಿಕ್ಕಿದ್ದಾನಾ ಎಂದು ಕೇಳಲಾಗಿ ಇಲ್ಲ ಎಂದು ತಿಳಿಸಿದೆನು. ಆಗ ಎಲ್ಲರೂ ಸೇರಿ ಹುಡುಕಲು ಪ್ರಾರಂಭಿಸಿದರು. ನಾನು ಮನೆಯಲ್ಲಿ ಇದ್ದಾಗ ನನ್ನ  ಮೊಬೈಲಿಗೆ ಮಹಾತೇಶನು ಪೋನ ಮಾಡಿ ಅಳುತ್ತಾ ನಿನ್ನ ಮಗನನ್ನು ಯಾರೋ ಊರ ಹೊರಗಡೆ ಇರುವ ಹಳ್ಳದಲ್ಲಿ ಯಾರೋ ಕೊಲೆ ಮಾಡಿರುತ್ತಾರೆ. ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣನಾದ ಚಂದ್ರಶೇಖರ ಮತ್ತು ಇತರರು ಹೋಗಿ ನೋಡಲಾಗಿ, ನನ್ನ ಮಗ ವಿಜಯಕುಮಾರನ ಶವ ಬಿದ್ದಿದ್ದು, ನನ್ನ ಮಗನಿಗೂ, ನನಗೂ ಆಗದವರು ಯಾವುದೊ ದುರುದ್ದೇಶದಿಂದ ನನ್ನ ಮಗನ ಬಲಭಾಗದ ಹಣೆಯ ಮೇಲಿನ ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಅಂತ ಸಲ್ಲಿಸಿದ ದೂರಿನ ಮೇರೆಗೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಠಾಣೆ ಗುನ್ನೆ ನಂ 101/12 ಕಲಂ 302 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿರುತ್ತದೆ.
          ನಂತರ ಗುಲಬರ್ಗಾ ಜಿಲ್ಲೆಯ ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರಮಾನ್ಯ ಅಪರ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿಕೊಂಡು ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ, ಪಿ.ಎಸ್.ಐ.ಮಂಜುನಾಥ ಮತ್ತು ಸಿಬ್ಬಂದಿಯವರಾದ ರಾಮಚಂದ್ರ, ಅರವಿಂದ, ಜಗನ್ನಾಥ, ರಾಜಶೇಖರ, ತುಳಜಪ್ಪ, ಚಂದ್ರಕಾಂತ, ಶಿವಾನಂದ, ಭೀಮಾಶಂಕರ, ಗುಂಡಪ್ಪರವರು ಒಳಗೊಂಡ ತಂಡವನ್ನು ರಚಿಸಿರುತ್ತದೆ.
ಸದರಿ ತಂಡಗಳು ಚಿಂಚೋಳಿ, ಮಲ್ಲಬಾದ, ಮಾದನ ಹಿಪ್ಪರಗಾ, ಸಿಂದಗಿ ತಾಲೂಕಿನ ಕೊರಳ್ಳಿ, ಅಫಜಲಪೂರ ಗ್ರಾಮಗಳಲ್ಲಿ ತಂಡಗಳು ಬೇಟ್ಟಿ  ನೀಡಿ ಮಾಹಿತಿ ಕಲೆ ಹಾಕಿದ್ದು, ಆನಂತರ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಹಗಲಿರಳು ಶ್ರಮ ವಹಿಸಿ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ: 13-06-2012 ರಂದು ಮಾತೂಳಿ ಗ್ರಾಮದ ಗೇಟಿ ಬಳಿ ಬರುವದಾಗಿ ಆತನನ್ನು ಬೆಳಿಗ್ಗೆಯಿಂದ ಕಾಯುತ್ತಿದ್ದು, ಸುಮಾರು ಸಂಜೆ 6-30 ಗಂಟೆಯ ಸಮಯಕ್ಕೆ ಆಸಾಮಿ ಬರುತ್ತಿದ್ದನ್ನು ನಮ್ಮ ಜೋತೆಯಲ್ಲಿದ್ದ ಭಾತ್ಮಿ ದಾರರು ಇತನೆ ಮಹಾಂತಪ್ಪಾ ಎಂದು ಗುರಿತಿಸಿದ ಮೇರೆಗೆ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು, ಆತನನ್ನು ನಾವುಗಳು ಸಹ ಓಡಿ ಹೋಗಿ ಹಿಡಿದುಕೊಂಡು ದಸ್ತಗಿರಿ ಮಾಡಿ ಆತನ ಹೆಸರು ವಿಳಾಸ ಕೇಳಲಾಗಿ ಮಹಾಂತಪ್ಪ ತಂದೆ ಮಲ್ಲಣ್ಣಪ್ಪ ಕಂಬಾರ ಸಾ||ಮಾದನಹಿಪ್ಪರಗಾ ಹಾ||||ಮಲ್ಲಾಬಾದ ಈತನನ್ನು ದಸ್ತಗಿರಿ ಮಾಡಿ, ವಿಚಾರಣೆಗೆ ಒಳಪಡಿಸಿದಾಗ  ಆತನು ಕೆಳೆದ 15 ದಿವಸಗಳಿಂದ ಮೃತ ವಿಜಯಕುಮಾರನನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡಿದ್ದನು. ನಂತರ ವಿಚಾರಣೆಯಿಂದ ಸದರಿ ಪ್ರಕರಣವು ಪತ್ತೆ ಯಾಗಿರುತ್ತದೆ. ಈ ಕೊಲೆಯ ಉದ್ದೇಶ ಆರೋಪಿತನು ಮೃತನ ತಾಯಿ ನಾಗಮ್ಮ ಕಂಬಾರ ಈಕೆಯೊಂದಿಗೆ  ಸ್ನೇಹ ಸಂಬಂಧವನ್ನು ಬೆಳೆಸಿದ್ದು, ಆಕೆಯ ಗಂಡ ಮೃತಪಟ್ಟಿದ್ದರಿಂದ ಮುಂದೆ ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮೃತ ವಿಜಯಕುಮಾರನು ಜೀವಂತವಿದ್ದರೆ ಹಾಗು ಬೆಳೆದು ದೊಡ್ಡವನಾದರೆ ಆರೋಪಿ ಮಹಾಂತಪ್ಪನ  ಮೇಲೆ ದ್ವೇಷ ಬೆಳೆಸಿಕೊಂಡು ಆತನಿಗೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮೃತನ ತಾಯಿ ನಾಗಮ್ಮ ತನ್ನ ಮಗನ ಹುಟ್ಟುಹಬ್ಬದ ದಿನದಂದು ಮಗನಿಗೆ ಹೊಸ ಬಟ್ಟೆ ತರಲು ಅಫಜಲಪೂರಕ್ಕೆ ಹೋಗಿರುವ ಸಮಯವನ್ನು ಉಪಯೋಗಿಸಿಕೊಂಡು ಮೃತನನ್ನು ಕರೆದು ನಿನಗೆ ಜಿಲೇಬಿ ಕೊಡಿಸುತ್ತೇನೆ ಬಾ ಎಂದು ನಂಬಿಸಿ ಮಲ್ಲಾಬಾದ ಗ್ರಾಮದ ಹೊರಗೆ ಇರುವ ಹಳ್ಳಕ್ಕೆ ಕರೆದೊಯ್ದು, ಬಾಲಕ ವಿಜಯಕುಮಾರನನ್ನು ಕೆಳಗೆ ಬೀಳಿಸಿ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾನೆ. 
ಈ ಪತ್ತೆ ಕಾರ್ಯವನ್ನು ಮಾನ್ಯ ಎಸ್.ಪಿ.ಸಾಹೇಬರು ಶ್ರೀ ಪ್ರವೀಣ ಮಧುಕರ ಪವಾರವರು ಮತ್ತು ಅಪರ ಎಸ್.ಪಿ.ಸಾಹೇಬರು ಶ್ರೀ ಕಾಶಿನಾಥ ತಳಕೇರಿ ರವರು ಅಫಜಲಪೂರ ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

No comments: