POLICE BHAVAN KALABURAGI

POLICE BHAVAN KALABURAGI

24 May 2012

GULBARGA DIST REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ:ಮಾನ್ಯ ತಾಲೂಕ ದಂಡಾಧಿಕಾರಿಗಳು ಗುಲಬರ್ಗಾರವರು  ಈಶಾನ್ಯ ಪದವೀಧರ ಮತಕ್ಷೇತ್ರದ  ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದಂತ  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದೆ ಎಂದು ತಿಳಿಸುತ್ತಾ , ಸನ್ಮಾನ್ಯ ಪ್ರಾದೇಶಿಕ ಆಯುಕ್ತರು ಹಾಗು ಚುನಾವಣಾ  ಈಶ್ಯಾನ್ಯ ಪದವಿಧರರ ಮತಕ್ಷೇತ್ರ  ಇವರು ಇಂಡೀಯನ್ ಎಕ್ಸಪ್ರೇಸ್ ದಿನ ಪತ್ರಿಕೆ ದಿನಾಂಕ 18/05/2012 ವರದಿಯನ್ನು ಆಧರಿಸಿ  ಗುಲಬರ್ಗಾ ನಗರದಲ್ಲಿರುವ ಡಾ|| ಎಸ್.ಎಂ ಪಂಡಿತ ರಂಗಮಂದಿರದಲ್ಲಿ ದಿನಾಂಕ 16/05/2012 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತೇಂದು. ಈ ರಂಗ ಮಂದಿರದ ಹೊರಭಾಗದಲ್ಲಿ ಒಂದು ಭಿತ್ತಿ ಪತ್ರವನ್ನು ಲಗತ್ತಿಸಲಾಗಿತ್ತೆಂದು, ಹಾಗು ಈ ಭಿತ್ತಿ ಪತ್ರ ಭಾರತಿ ಜನತಾ ಪಾರ್ಟಿಯ ಅಭ್ಯರ್ಥಿಯಾದ ಶ್ರೀ. ಅಮರನಾಥ ಪಾಟೀಲ್ ಇವರ ಪರವಾಗಿ ಮತಗಳನ್ನು ಚಲಾಯಿಸಲು ಕೋರಿಕೊಳ್ಳಲಾಗಿತ್ತೆಂದು ತಿಳಿಸಿರುತ್ತಾರೆ. ಮುಖ್ಯವಾಗಿ ಈ  ಸಮಾರಂಭವು  ಶಂಕರ ಶಾಲಾ ಸಮಾರಂಭವು ಎಂಬ  ಪುಸ್ತಕ ಬಿಡುಗಡೆಗಾಗಿ ಆಯೋಜಿಸಲಾಗಿತ್ತು. ಆದರೆ ಈ ಸಮಾರಂದ ಉಪಯುಕ್ತತೆಯನ್ನು ಶ್ರೀ ಅಮರನಾಥ ಪಾಟೀಲ್ ಇವರು ತಮ್ಮ ಪರವಾಗಿ ಮತ ಚಲಾಯಿಸಲು ಭಿತ್ತಿ ಪತ್ರ  ಲಗತ್ತಿಸಿ ಕೋರಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿರುವದು ವ್ಯಕ್ತವಾಗುತ್ತದೆ ಅಂತಾ ಅರ್ಜಿ ವಸೂಲಾಗಿದ್ದರಿಂದ ಭಾರತೀಯ ದಂಡ ಸಂಹಿತೆ 171(ಸಿ) ಹಾಗು ಪ್ರಜಾಪ್ರತಿನಿದಿ ಕಾಯ್ದೆ 1951 ಕಲಂ 123 ರನ್ವಯ ಪ್ರಕರಣ ದಾಖಲಿಸಲು ಕೋರಿದ್ದರಿಂದ ಠಾಣೆ ಗುನ್ನೆ ನಂ: 64/2012 ಕಲಂ: 171(ಸಿ) ಐ.ಪಿ.ಸಿ ಮತ್ತು 123 ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀಮತಿ ಸೈದಾಬಿ ಗಂಡ ಖಾಸಿಂ ಪಟೇಲ್ ಸಾ|| ರಹಿತಮ ನಗರ ಗುಲಬರ್ಗಾ ರವರು ನಮ್ಮ ಮನೆಗೆ ಈ ದಿನಾಂಕ : 21/05/2012 ಮಧ್ಯರಾತ್ರಿ 1.00 ಗಂಟೆಗೆ ಸುಮಾರಿಗೆ ಮನೆಗೆ ಹತ್ತಿ ಮನೆಯಲ್ಲಿರುವ ಸಾಮಾನುಗಳು ಹಾಗೂ ಮನೆಯು                                                ಸುಟ್ಟ ಅಂದಾಜು  56,700=ರೂಗಳಷ್ಟು ಸುಟ್ಟು ಹಾನಿಯಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾತ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು,ಡಿ,ಅರ್ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಬಸಮ್ಮ ಗಂಡ ಭೂತಾಳಿ ಟಕ್ಕಳಿಕಿ ಸಾ|| ವಿವೇಕಾನಂದ ನಗರ ಆಳಂದರೋಡ ಗುಲಬರ್ಗಾ ರವರು ನನ್ನ ಗಂಡನು ಕೇಂದ್ರ ಮೀಸಲು ಪಡೆ  ಶ್ರೀನಗರದಲ್ಲಿ ಕರ್ತವ್ಯ ಮಾಡುತ್ತಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿಯೆ ಇರುತ್ತೆನೆ. ಮಗ ರವಿಕಿರಣ ಈತನು ಸ್ವಾಮಿ ವಿವೇಕಾನಂದ ಕಾಲೇಜದಲ್ಲಿ ಎಮ್.ಬಿ.ಎ. ಅಂತಾ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ ಕೆಲವು ದಿವಸಗಳಿಂದ ನಾನು ವಿಧ್ಯಾಭ್ಯಾಸ ಮಾಡುವದಿಲ್ಲಾ ಅಂತಾ ಹೇಳುತ್ತಿದ್ದನು. ದಿನಾಂಕ 23.05.2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನನ್ನ ಮಕ್ಕಳೊಂದಿಗೆ ಊಟ ಮಾಡಿ ಮನೆಯ ಛತ್ತಿನ ಮೇಲೆ ಮಲಗಿಕೊಳ್ಳಲು ಹೋಗಿರುತ್ತೆನೆ. ಸ್ವಲ್ಪ ಸಮಯದ ನಂತರ  ಯಾಕೆ ಇವನು ಮೇಲೆ  ಬರಲಿಲ್ಲ ಅಂತಾ ಕೆಳಗೆ ಬಂದು ನೋಡಲಾಗಿ ರವಿ ಈತನು ಛತ್ತಿನ ಕಬ್ಬಿಣದ ಕೊಂಡಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಯು.ಡಿ.ಆರ್ ನಂ: 5/12 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: