POLICE BHAVAN KALABURAGI

POLICE BHAVAN KALABURAGI

04 February 2012

GULBARGA DIST REPORTED CRIMES


ವೈಧ್ಯರ ನಿರ್ಲಕ್ಷತನದಿಂದ ಒಂದು ಕಂದಮ್ಮ ಸಾವು:
ಅಶೋಕ ನಗರ ಠಾಣೆ :ಶ್ರೀಮತಿ ಅಂಬಿಕಾ ಗಂಡ ಕಾಶಿನಾಥ ಸಾ: ಭೂಪಾಲ ತೆಗ್ಗನೂರ ರವರು ನನಗೆ ದಿನಾಂಕ 25/11/2011 ರಂದು ಹೆಣ್ಣು ಮಗು ಜನಿಸಿದ್ದು ಮಗುವಿಗೆ ಖಫವಾದ ಕಾರಣದಿಂದ ಈ ಮೂದಲು ಡಾ|| ಸುರೇಶ ಪಾವಲೇ ಇವರ ಹತ್ತಿರ ತೊರಿಸಿ ಹೆಚ್ಚಿನ ಉಪಚಾರಕ್ಕಾಗಿ ಸಂಗಮೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು,ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿದನಿಂದಲೂ ವೈದ್ಯಾಧಿಕಾರಿಗಳು ಸರಿಯಾಗಿ ಚಿಕಿತ್ಸೆ ನೀಡದೇ ದಿನಾಂಕ 01/02/2012 ರಂದು ಸಾಯಂಕಾಲ ವೇಳೆಗೆ ಮಗುವಿಗೆ ಅತೀಯಾಗಿ ವಾಂತಿ-ಬೇದಿ ಆಗುತ್ತಿದೆ ಅಂತಾ ಡಾಕ್ಟರಗೆ ಹೇಳಿದರೂ ಸಹ ಡಾಕ್ಟರಗಳು ಅಥವಾ ಸಿಬ್ಬಂದಿಗಳು ಮಗುವಿಗೆ ನೋಡಲಿಲ್ಲ , ಮರುದಿವಸ ಮುಂಜಾನೆ ನನ್ನ ಮಗುವಿಗೆ ಬಾಯಿ ಮುಗು ಮತ್ತು ಸಂಡಾಸದಲ್ಲಿ ರಕ್ತ ಬರುತ್ತಿದ್ದರೂ ಸಹ ಡಾಕ್ಟರ ಬಂದು ಚಿಕಿತ್ಸೆ ಕೊಟ್ಟಿರುವುದಿಲ್ಲಾ. ದಿನಾಂಕ 03/02/2012 ರಂದು ಮುಂಜಾನೆ 10-30 ಗಂಟೆಗೆ ನನ್ನ ಹೆಣ್ಣು ಮಗು ಆಸ್ಪತ್ರೆಯಲ್ಲಿ ವೈದ್ಯಾರು ಸರಿಯಾಗಿ ಚಿಕಿತ್ಸೆ ನೀಡದಕ್ಕೆ ಮೃತ ಪಟ್ಟಿದ್ದು ಇರುತ್ತದೆ. ಡಾಕ್ಟರ ರವರು 10,000/- ರೂಪಾಯಿ ಬಿಲ್ ಕಟ್ಟುವಂತೆ ತಿಳಿಸುತ್ತಿದ್ದು ಆದರೆ ಮುಂಜಾನೆ 10-30 ಗಂಟೆಗೆ ಮೃತಪಟ್ಟ ಕುಸಿಗೆ ಯಾರು ಬಂದು ನೋಡಿರುವುದಿಲ್ಲಾ. ಇದಕ್ಕೆ ಸಂಗಮೇಶ್ವರ ಆಸ್ಪತ್ರೆಯ ಡಾ|| ಬಿ.ಪಾಟೀಲ ಮತ್ತು ಅಧೀಕ್ಷಕರು ಹಾಗು ಸಿಬ್ಬಂದಿಯವರು ಸರಿಯಾಗಿ ಚಿಕಿತ್ಸೆ ನೀಡದಕ್ಕೆ ಅವರ ನಿರ್ಲಕ್ಷತನ ಬೇಜವಾಬ್ದಾರಿತನ ವಹಿಸಿದ್ದರಿಂದ ಮಗು ಮೃತ ಪಟ್ಟಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 12/2012 ಕಲಂ 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಒಂದು ಸಾವು:
ಮಹಿಳಾ ಪೋಲಿಸ ಠಾಣೆ.:
ಶ್ರೀಮತಿ ನವನಿತಾ ಗಂಡ ಪ್ರೇಮರಾಜ ಸಾ: ಸಿಕಂದ್ರಾಬಾದ ತಿರಮಲಕೇರಿ ಸುಭಾಶ ನಗರ ಹೈದ್ರಾಬಾದ ರವರು ನನ್ನ ಮಗಳಾದ ಮೊನಿಕಾ ಇವಳಿಗೆ ಸ್ಟೀಫನ ತಂದೆ ದಿ|| ಸ್ವಾಮಿದಾಸ ಸಾ|| ಕಂಪೆಂಪು ನಗರ ಗುಲಬರ್ಗಾ ಇತನ್ನೊಂದಿಗೆ ಮದುವೆ ಮಾಡಿದ್ದು, ಮದುವೆಯ ಸಮಯದಲ್ಲಿ 1,50,000/- ರೂ , 2 1/2 ತೊಲೆ ಬಂಗಾರ ಮಗಳಿಗೆ 12 ತೊಲೆ ಬಂಗಾರ ಕೊಟ್ಟಿರುತ್ತೆವೆ.
ಆಕೆಯ ಅತ್ತೆ, ನಾದಿನಿಯರು , ನೀನು ಮದುವೆಕ್ಕಿಂತ ಮುಂಚೆ ನನ್ನ ಮಗನ ಜೊತೆ ಮಲಗಿದ್ದಿಯಾ ನಿನ್ನಲ್ಲಿ ಹೆಣ್ಣಿನ ಲಕ್ಷಣ ಇಲ್ಲಾ. ನನ್ನ ಮಗನಿಗೆ ಬೇರೆಕಡೆ ಮದುವೆ ಮಾಡಿದರೆ, ಇನ್ನೂ ಜಾಸ್ತಿ ವರದಕ್ಷಿಣೆ ಕೊಡುತ್ತಿದ್ದರು ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು.ಅಳಿಯ ಗುಲಬರ್ಗಾ ಎನ್.ಸಿ.ಸಿ ಯಲ್ಲಿ ಕರ್ತವ್ಯ ಮಾಡುತ್ತಿದ್ದು,ಹೆಂಡತಿಯ ಮೇಲೆ ಸಂಶಯ ಮಾಡಿ ಹೊಡೆ-ಬಡೆ ಮಾಡುತ್ತಿದ್ದನು. ಇದೆಲ್ಲಾ ಕಿರುಕುಳ ತಾಳದೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವುಂತೆ ಮಾಡಿರುವ ಆಕೆಯ ಗಂಡ, ಅತ್ತೆ, ನಾದಿನಯರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿರುವ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 09/12 ಕಲಂ. 498(ಎ), 306, 304 (ಬಿ), ಸಂ. 149 ಐ.ಪಿ.ಸಿ & 3 & 4 ಡಿ.ಪಿ.ಕಾಯ್ದೆ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಬೈಕ್ ಅಪಘಾತ ಒಂದು ಸಾವು :
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 03/02/2012 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಹುಮನಾಬಾದದಲ್ಲಿದ್ದಾಗ ನಮ್ಮ ಭಾವ ಗಣಪತಿ ಕುಶಪ್ಪನೂರ ಇವರ ಮೋಬೈಯಿಲನಿಂದ ಯಾರೋ ಜನರು ನನ್ನ ಮೋಬೈಯಿಲ ಫೋನಿಗೆ ಫೋನ ಮಾಡಿ, ಗಣಪತಿ ಇವರು ತಮ್ಮ ಹೀರೋ ಹೊಂಡಾ ಫ್ಯಾಶನ ಪ್ಲಸ ಮೋಟಾರ ಸೈಕಲ ಮೇಲೆ ಕೆರೆ ಭೋಸಗಾ ಕ್ರಾಸ ದಾಟಿ 1/2 K.M ದೂರದಲ್ಲಿ ಹೊರಟಾಗ ಎದುರಿನಿಂದ ಆಳಂದ ಕಡೆಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನಿಮ್ಮ ಭಾವ ಗಣಪತಿ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಅವರ ತಲೆಗೆ ಮುಖಕ್ಕೆ ಕಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ ಆತನಿಗೆ ಉಪಚಾರ ಕುರಿತು ಸರಕಾರಿ ದವಖಾನೆ ಗುಲಬರ್ಗಾಕ್ಕೆ ಕಳುಹಿಸಿ ಕೊಡುತ್ತೇವೆ ಎಂದು ತಿಳಿಸಿದರು ಮೋಟಾರ ಸೈಕಲಿಗೆ ಡಿಕ್ಕಿ ಹೋಡೆದ ಲಾರಿ ನಂಬರ KA 32 A 3311 ಅವನ ಹೆಸರು ಹಣಮಂತರಾಯ ತಂದೆ ಗುಪುಪಾದಪ್ಪಾ ಮಾಹೂರು ಸಾ ಕೋಟನೂರ (ಡಿ) ಅಂತಾ ತಿಳಿಸಿದರು , ನಾನು ಸರಕಾರಿ ದವಾಖಾನೆಗೆ ಒಂದು ನೋಡಲಾಗಿ ನನ್ನ ಭಾವ ಗಣಪತಿ ಇವರು ಮಧ್ಯಾಹ್ನ 3-20 ಗಂಟೆ ಸುಮಾರಿಗೆ 108 ಗಾಡಿಯಲ್ಲಿ ತರುವಾಗಲೇ ಮೃತ ಪಟ್ಟಿರುತ್ತಾರೆ ಎಂದು ಆಸ್ಪತ್ರೆಯಲ್ಲಿ ಕೇಳಿ ಗೋತ್ತಾಗಿರುತ್ತದೆ ಕಾರಣ ನನ್ನ ಭಾವ ಗಣಪತಿ ಇವರ ಮೋಟಾರ ಸೈಕಲಕ್ಕೆ ಲಾರಿ KA 32 A 3311 ಚಾಲಕ ಹಣಮಂತರಾಯ ತಂದೆ ಗುರುಪಾದಪ್ಪಾ ಮಾಹೂರ ರವರು ಅತೀವೇಗದಿಂದ ನಡೆಸುತ್ತಾ ಬಂದು ಡಿಕ್ಕಿ ಪಡಿಸಿದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 33/2012 ಕಲಂ 279 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: