ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ:ಶ್ರೀ ರೇವಣಸಿದ್ದಪ್ಪ ತಂದೆ ಸಿದ್ರಾಮಪ್ಪ ಮಾಗಾ ಸಾಃ ಸುಲೇಪೇಟ ರವರು ನನ್ನ ಹೋಲ ಭಂಟನಳ್ಳಿ ಸೀಮಾಂತರದಲ್ಲಿ ಸರ್ವೇ ನಂ. 8/5 ನೇದ್ದರ ಪಕ್ಕದ ಹೊಲದವನಾದ ಬಸವಂತರಾವ ತಂದೆ ವೀರಭದ್ರಪ್ಪ ಪಾಟೀಲ ಇವರು ಹೊಲ ಅತೀ ಕ್ರಮ ಮಾಡಿದ ಬಗ್ಗೆ ಚಿಂಚೋಳಿ ತಹಸೀಲ್ ಕಾರ್ಯಾಲಯದಿಂದ ನೋಟೀಸ್ ಹೊರಡಿಸಿದ ವಿಷಯದಲ್ಲಿ ನನ್ನ ಮೇಲೇ ವೈಮನಸ್ಸು ಬೆಳೆಸಿಕೊಂಡು ದಿನಾಂಕಃ 04/02/2012 ರಂದು ಮುಂಜಾನೆ ಸುಮಾರಿಗೆ ನಾನು ಭಂಟನಳ್ಳಿಗೆ ಹೋದಾಗ ಬಸವಂತರಾವ ಇತನ ಮಗನಾದ ಸಂಗಪ್ಪ ಪಾಟೀಲ ಮತ್ತು ಬಸವಂತರಾವ ಪಾಟೀಲ ಇಬ್ಬರೂ ಸೇರಿಕೊಂಡು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಠಿ ಮಾಡಿ ಬಾಯಿ ಮೇಲೆ ಕೈಯಿಂದ ಗುದ್ದಿದ್ದರಿಂದ ಒಂದು ಹಲ್ಲು ಬಿದ್ದಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 11/2012 ಕಲಂ. 325, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
POLICE BHAVAN KALABURAGI

04 February 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment