POLICE BHAVAN KALABURAGI

POLICE BHAVAN KALABURAGI

01 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ಶ್ರೀ. ಬಸಯ್ಯ ತಂದೆ ಚನ್ನಯ್ಯ ಮಠಪತಿ ವ: 28 ವರ್ಷ ಜಾ;ಜಂಗಮ ಉ: ಕ್ರೂಜರ್ ಜೀಪ್ ಚಾಲಕ ಸಾ||ಬಾಚನಾಳ ತಾ||ಜಿ||ಗುಲಬರ್ಗಾ ರವರು ದಿನಾಂಕ; 30/11/2011 ರಂದು ಮಧ್ಯಾಹ್ನ 2-00 ಗಂಟೆಗೆ ತಾನು ಮತ್ತು ತನ್ನ ಸ್ನೇಹಿತನಾದ ವೀರಪ್ಪ ತಂದೆ ಸಿದ್ದಣ್ಣ ಅವಟಗಿ ಸಾ; ಬಾಚನಾಳ ರವರನ್ನು ಕೂಡಿಕೊಂಡು ನಮ್ಮ ಕ್ರೂಜರ್ ಜೀಪಿನಲ್ಲಿ ಚಂದನಕೇರಾ ಗ್ರಾಮಕ್ಕೆ ಗ್ರಾಮ ಪಂಚಾಯತ ಕಟ್ಟಡ ಉದ್ಘಾಟನೆ ಪ್ರಯುಕ್ತ ಹೋಗಿದ್ದು, ಮರಳಿ ರಾತ್ರಿ 8-00 ಗಂಟೆ ಸುಮಾರಿಗೆ ಮನೆಗೆ ಬಂದಿರುತ್ತೇವೆ. ನನ್ನ ಹೆಂಡತಿ ಕಾವೇರಿ ಇವಳು ಈಗ ಸುಮಾರು 3 ದಿವಸಗಳ ಹಿಂದೆ ತನ್ನ ತವರು ಮನೆಯಾದ ಗುಲಬರ್ಗಾಕ್ಕೆ ಹೋಗಿದ್ದು, ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇಂದುಮತಿ ಇಬ್ಬರೇ ಇದ್ದು, ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿರುತ್ತೇವೆ. ನಮ್ಮ ಮನೆಯಲ್ಲಿ ಒಟ್ಟು ಮೂರು ಕೋಣೆಗಳಿದ್ದು, ಎರಡೂ ಕೋಣೆಗಳು ಒಂದರಲ್ಲಿ ಒಂದು ಇದ್ದು, ಇನ್ನೊಂದು ಕೋಣೆ (ಹಾಲ್ ) ಬೇರೆಯಾಗಿ ಇರುತ್ತದೆ. ನನ್ನ ತಾಯಿ ಇಂದುಮತಿ ಇವರು ಎರಡು ಕೋಣೆಗಳ ಮನೆಯಲ್ಲಿ ಮಲಗಿ ಕೊಂಡಿದ್ದು ಇರುತ್ತದೆ. ನಾನು ನಮ್ಮ ಮನೆಯ ಹಾಲಿನ ಕೋಣೆ ಬಾಗಿಲಿಗೆ ಕೀಲಿ ಹಾಕಿಕೊಂಡು ಹೋಗಿ ಕ್ರೂಜರ್ ಜೀಪಿನಲ್ಲಿ ಮಲಗಿಕೊಂಡಿರುತ್ತೇನೆ. ಹೀಗಿದ್ದು ರಾತ್ರಿ 11-45 ಗಂಟೆ ಸುಮಾರಿಗೆ ನಮ್ಮ ತಾಯಿ ಗಾಬರಿಗೊಂಡ ಚಿರಾಡುವ ಸಪ್ಪಳ ಕೇಳಿ ನಾನು ಕ್ರೂಜರ್ ಜೀಪಿನಿಂದ ಎದ್ದು ಹೋಗಿ ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಹಾಲಿನಲ್ಲಿಟ್ಟಿದ್ದ ಅಲಮೇರಾದ ಬೀಗ ಮುರಿದು ಅದರಲ್ಲಿದ್ದ ಎರಡೂವರೆ ತೊಲೆ ಬಂಗಾರದ ಆಭರಣಗಳು, ನಗದು ಹಣ 6000/- ರೂಪಾಯಿ ಎಂಟು ಸೀರೆಗಳು ಹೀಗೆ ಒಟ್ಟು 45000/- ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 149/2011 ಕಲಂ 457. 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಬೆದರಿಕೆ ಕರೆ :

ಶಹಾಬಾದ ನಗರ ಠಾಣೆ: ದಿನಾಂಕ 29/11/11 ರಂದು ರಾತ್ರಿ 10-31 ಮೊಬಾಯಿಲ್ ನಂ: 9972147983 ನೇದ್ದರಿಂದ ಪೋನ್ ಮಾಡಿ ನಾನು ರಾಜು ತಂದೆ ಗಿರಿಮಲ್ಲಪ್ಪಾ ಹುಗ್ಗಿ ಇತನು ನನ್ನ ಮೋಬೈಲ ನಂ 9739880440 ನೇದ್ದಕ್ಕೆ ಕಾಲ ಮಾಡಿ ನಿನ್ನದ್ದು ಬಹಳಷ್ಟು ನಡೆದಿದೆ ದಮ್ಮು ಇದ್ದರೇ ಹೆಂಡತ್ತಿ ತಾಳೆ ತೆಗೆದುಬಾ ನನ್ನ ಹತ್ತಿರ ತಲವಾರ ಇವೆ. ನಿನಗೆ ಖಲಾಸ ಮಾಡತ್ತಿನಿ ಬಾ ಅಂತಾ ರಾತ್ರಿ ವೇಳೆಯಲ್ಲಿ ಪೋನನಲ್ಲಿ ಮಾತಾಡಿರುತ್ತಾನೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 184/11 ಕಲಂ 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಆಬ್ದುಲ್ ಅಲೀಮ ತಂದೆ ಶೇಖ ಗುಡು ಸಾ; ಮನೆ ನಂ: 11-47 ಅಂಬಾ ಭವಾನಿ ಗುಡಿ ಹಿಂದುಗಡೆ ಲಾಲಗೇರಿ ಗುಲಬರ್ಗಾ ರವರು ನಾನು ನಗರದ ಪಟೇಲ್ ಸರ್ಕಲದಿಂದ ಮಿನಿ ವಿಧಾನ ಸೌದ ಮುಖ್ಯ ದ್ವಾರದ ರೋಡಿನ ಹತ್ತಿರ ನಿಂತಾಗ ಅಟೋ ನಂ: ಕೆಎ 32 ಬಿ 1224 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಟೋರೀಕ್ಷಾ ಪಲ್ಟಿ ಆಗಿದ್ದು ಆತನ ಮೈ ಮೇಲೆ ಅಟೊರಿಕ್ಷಾ ಬಿದ್ದು ನನಗೆ ತಾನು ಅಟೋ ಚಾಲಕನಿಗೆ ಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 155/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ರಾಘವೇಂದ್ರ ನಗರ ಠಾಣೆ : ನಾನು ಶರಣು ತಂದೆ ಭೀಮಶ್ಯಾ ಕೊಲ್ಲೂರ ದಿನಾಂಕ 30-11-2011 ರಂದು ರಾತ್ರಿ ಗಂಗಾ ನಗರ ಕ್ರಾಸ್ ನಲ್ಲಿ ಅಟೋ ನಿಲ್ಲಿಸಿದ್ದು ನನ್ನ ಹತ್ತಿರ ಅಶೋಕ ತಂದೆ ಈರಣ್ಣ ಕೂಡಿ ಹಾಗು ಅವನ ಗೆಳೆಯ ರವಿ ತಂದೆ ಗುಂಡಪ್ಪ ಕೂಡಿ ಇಬ್ಬರು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 95/11 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗೃಹ ಬಳಕೆಯ ಸಿಲೆಂಡರಗಳು ಹಾಗು ಯಂತ್ರೋಪಕರಣಗಳು ಜಪ್ತಿ:

ರಾಘವೇಂದ್ರ ನಗರ ಠಾಣೆ :ಶ್ರೀ ಆರ್. ವಿ. ಸಾವಳಗಿ ಪಿ.ಐ. ಆರ್.ಸಿ.ಐ.ಬಿ. ಸಿಐಡಿ ಗುಲಬರ್ಗಾ ಹಾಗು ಸಿಬ್ಬಂದಿ ವರ್ಗದವರು ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಆರ್ ನಗರ ಬಡಾವಣೆಯಲ್ಲಿ ಗ್ರಹ ಬಳಕೆಯ ಅನಿಲ ಸಿಲೆಂಡರಗಳಿಂದ ಅನಿಲ ತೆಗೆದು ಅಟೋಗಳಿಗೆ ಅಳವಡಿಸಿದ ಸಿಲೆಂಡರಕ್ಕೆ ಯಂತ್ರಗಳ ಸಹಾಯದಿಂದ ಅನಿಲ ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ದಾಳಿ ನಡೆಸಿದ್ದು, ದಾಳಿ ಕಾಲಕ್ಕೆ ಪ್ರಕಾಶ ತಂದೆ ಪ್ರವೀಣಸಿಂಗ್ ರಜಪೂತ ವ || 24 ಸಾ|| ಜೆ.ಆರ್. ನಗರ ಗುಲಬರ್ಗಾ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆತನಿಂದ ಎರಡು ಹೆಚ್. ಪಿ. ಸಿಲೆಂಡರಗಳು, ಒಂದು ಸಣ್ಣ ಗಾತ್ರದ ಖಾಲಿ ಸಿಲೆಂಡರ್, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, 1 ಹೆಚ್.ಪಿ ಎಲೆಟ್ರೀಕಲ್ ಮೋಟಾರ್, 1 ನೊಕಿಯಾ ಕಂಪನಿ ಎನ್.73 ಮೊಬಾಯಲ್,ನಗದು ಹಣ 3500=00 ರೂ.ಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 96/11 ಕಲಂ 3 L.P.G. RESTRICTION ON USE ORDER 1974 R/W 3 & 7 E.C. ACT ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಬಸವರೆಡ್ಡಿ ತಂದೆ ಶರಣರೆಡ್ಡಿ ಮಾಲಿ ಪಾಟೀಲ ಸಾ: ಮನೆ ನಂ. 1-1495/59/1, ಗೊದುತಾಯಿ ನಗರ ಗುಲಬರ್ಗಾ ವರುನನ್ನ ಮಗನಾದ ಶಿವರಾಜ ಇತನು ವಯಸ್ಸು 25 ವರ್ಷ ಇತನು ಎಸ್‌.ಬಿ ವಿಜ್ಞಾನ ಮಹಾವಿದ್ಯಾಲಯ ಗುಲಬರ್ಗಾ ದಲ್ಲಿ ಬಿಎಸ್‌ಸಿ 4ನೇ ಸೇಮ ಒದುತ್ತಿದ್ದು 4ನೇ ಸೇಮನಲ್ಲಿ ಅನುತಿರ್ಣನಾಗಿದ್ದರಿಂದ ಸುಮಾರು ದಿನಗಳಿಂದ ಮಾನಸಿಕವಾಗಿ ನೊಂದಿದ್ದು ದಿನಾಂಕ 18/08/2011 ರಂದು ಮನೆ ಬಿಟ್ಟು ಹೊದವನು ತಿರುಗಿ ವಾಪಸ ಮನೆಗೆ ಬಂದಿರುವುದಿಲ್ಲಾ. ನಾವು ನಮ್ಮ ಸಂಬಂಧಿಕರಿಗೆ ಮತ್ತು ನಮ್ಮ ಪರಿಚಯಸ್ಥರ ಮನೆಗಳಿಗೆ ಎಲ್ಲೂ ವಿಚಾರಿಸಿದರು ಇದುವರೆಗೂ ಅವನ ಸುಳಿವು ಸಿಕ್ಕಿರುವುದಿಲ್ಲಾ ಆತನ ಚಹರೆ ಪಟ್ಟಿ ಸಾಧರಣ ಮೈಕಟ್ಟು, ಗೋದಿ ಬಣ್ಣದ ದುಂಡು ಮುಖ ಉದ್ದನೇಯ ಮುಗು ಹೊಂದಿದ್ದು, ನೀಲಿ ಬಣ್ಣದ ಟೀ-ಶರ್ಟ ಮತ್ತು ಜೀನ್ಸ ಪ್ಯಾಂಟ ಹಾಕಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ. 129/2011 ಕಲಂ ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: