POLICE BHAVAN KALABURAGI

POLICE BHAVAN KALABURAGI

09 December 2011

GULBARGA DIST REPORTED CRIMES

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ : ಶ್ರೀ ಲಕ್ಕಪ್ಪಾ ತಂದೆ ಭಿಮರಾಯ ಅಚಗೇರಿ ಸಾ: ಹಸನಾಪೂರ ರವರು ನಾನು ಮತ್ತು ಬಾಬು ಮುಮ್ಮಿನ ಇಬ್ಬರು ಕೂಡಿಕೊಂಡು ಹೊಲದಿಂದ ಎತ್ತುಗಳನ್ನು ಹೊಡೆದುಕೊಂಡು ಮನೆಗೆ ಬರುತ್ತಿದ್ದಾಗ ಧರ್ಮರಾವ ತಂದೆ ಚಿಟ್ಟಯ್ಯಾ , ದೇವನಗೌಡ ತಂದೆ ಹಣಮಂತರಾಯಗೌಡ, ಮಹಿಬೂಬ, ಅಲ್ಲಾವುದ್ದಿನ, ಶ್ಯಾಮ ಪ್ರಸಾದ ವಾಸರೇಡ್ಡಿ ತಂದೆ ಅಪ್ಪಯ್ಯಾ ಇವರು ಕೂಡಿ ಬಂದವರೆ ಧರ್ಮರಾಯ ಇತನು ನನಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನಮ್ಮ ಹೊಲದಲ್ಲಿನ ಗಳ್ಯಾ ಹೊಡೆಯುವ ದಿಂಡು ಯಾಕೆ ತಗೆದುಕೊಂಡು ಹೋಗಿದಿ ಅಂತಾ ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿದನು ನನ್ನ ಸಂಗಡ ಇದ್ದ ಬಾಬು ಮುಮ್ಮಿನ ಇತನು ಬಿಡಿಸಲು ಬಂದರೆ ಅವನಿಗೆ ದ್ಯಾವನಗೌಡ ಇತನು ತನ್ನ ಕೈಯಲ್ಲಿದ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 213/2011 ಕಲಂ 143, 147, 323, 324, 504, 506 ಸಂ: 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ: ಶ್ರೀ ಉಸ್ಮಾನ ತಂದೆ ಇಮಾಮ ಸಾಬ ನಾಯ್ಕೊಡಿ ವಯ: 36 ವರ್ಷ ಉ: ಎಸ್.ಆರ್.ಕೆ. ಕಂಪನಿಯಲ್ಲಿ ಡ್ರೈವರ ಜಾ: ಮುಸ್ಲಿಂ ಸಾ: ನೇಲೊಗಿ ರವರು ನಾನು ಎಸ್.ಆರ್.ಕೆ ಕಂಪನಿಯ ಜೀಪ ಚಲಾಯಿಸಿಕೊಂಡು ಗುಲಬರ್ಗಾದಿಂದ ಮಾಚನಾಳ ತಾಂಡಕ್ಕೆ ಬರುತ್ತಿದ್ದಾಗ ಮಾಚನಾಳ ತಾಂಡದ ಹತ್ತಿರ ರಸ್ತೆಯ ಮೇಲೆ ನನ್ನ ವಾಹನದ ಮುಂದೆ ತಾಂಡಾದ ಜನರದ ಸುಭಾಷ, ಚಂದು, ಶಂಕರ, ಬಾಬು ಮತ್ತು ಸಂಗಡ ಇಬ್ಬರು ಇವರೆಲ್ಲರೂ ಕೂಡಿ ಬಂದು ನನ್ನ ವಾಹನ ನಿಲ್ಲಿಸಿದಾಗ ನಾನು ವಾಹನ ಯಾಕೆ ನಿಲ್ಲಿಸುವದಕ್ಕೆ ಹೇಳಿದ್ದಿರಿ ಅಂತ ಅವಾಚ್ಯವಾಗಿ ಬೈದು ಶಂಕರ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು. ಇನ್ನೂಳಿದವರು ಸಹಕರಿಸರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 215/2011 ಕಲಂ 143, 147, 341, 323, 504, 506 ಸಂ: 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಟಕಾ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ. ಶ್ರೀ ಸರ್ಕಾರಿ ತರ್ಪೆಯಾಗಿ ಶ್ರೀ ಭೂಷಣ ಜಿ ಬೊರಸೆ ಐಪಿಸ್ ಸಹಾಯಕ ಅಧೀಕ್ಷಕರು {} ಉಪ ವಿಭಾಗ ಗುಲಬರ್ಗಾ ರವರು ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯಲ್ಲಿ ರಾಂಪುರೆ ವಕೀಲರ ಮನೆ ಹತ್ತಿರ ಒಂದು ಕೋಣೆಯಲ್ಲಿ ಎರಡು ಮೂರು ಜನರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಬರೆದುಕೊಳ್ಳತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಸ್ಟೇಶನ ಬಜರ ಠಾಣೆಯ ಪಿ.ಐ ರವರಾದ ಜೆ.ಎಚ್. ಇನಾಮದಾರ ಹಾಗೂ ಸಿಬ್ಬಂದಿಯವರಾದ ಭಿಮರಾಯ ಎಚ್.ಸಿ, ಪಂಚಾಕ್ಷರಿ ಸಿಪಿಸಿ, (ಎ) ಉಪ-ವಿಭಾಗ ಕಛೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿಯಾದ ರಫಿಕ ಸಿಪಿಸಿ, ಶಶಿಕಾಂತ ರಾಠೋಡ, ಶಿವರಾಜ ಸಿಪಿಸಿ, ಶಿವಪ್ರಕಾಶ ಸಿಪಿಸಿ, ದೇವೆಂದ್ರ ಸಿಪಿಸಿ ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತರಾದ ವಿಜಯಕುಮಾರ ತಂದೆ ಶರಣಬಸಪ್ಪ ಮುಗಳಿ ವ: 28 ವರ್ಷ ಉ: ವ್ಯಾಪಾರ ಸಾ: ಮುಗಳಿ ತಾ: ಅಕ್ಕಲಕೋಟ ಹಾ||ವ ಗುಲಬರ್ಗಾ , ಅನಿಲ ತಂದೆ ಶಾಂತಪ್ಪ ಕಲಶೇಟ್ಟಿ ವ: 21 ಉ: ಕೂಲಿ ಸಾ: ಜೀವಣಗಿ ಹಾ/ವ ಆಳಂದ ಕಾಲೋನಿ ಗುಲಬರ್ಗಾ ಮತ್ತು ಹಜರತಸಾಬ ತಂದೆ ಹುಸೇನ ಸಾಬ ಮುಜಾವರ ವ: 30 ಉ: ಸೈಕಲ್ ಅಂಗಡಿ ಸಾ: ಉದನೂರ ತಾ: ಗುಲಬರ್ಗಾ ಇವರುಗಳು ವಶಕ್ಕೆ ತೆಗೆದುಕೊಂಡು ಮಟಕಾಕ್ಕೆ ಸಂಬಂದಿಸಿದ ನಗದು ಹಣ 73,165/- ರೂ ಹಾಗೂ 3 ಮೊಬೈಲ್ ಮತ್ತು ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ 206/11 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮೋಟಾರ ಸೈಕಲ ವಶ :

ರೋಜಾ ಠಾಣೆ: ದಿನಾಂಕ: 26-11-2011 ರಂದು ಬೆಳಿಗ್ಗೆ 9-30 ಗಂಟೆಗೆ ರೋಜಾ ಠಾಣೆಯ ವ್ಯಾಪ್ತಿಯಲ್ಲಿರುವ ಖಾಜಾ ಕಾಲನಿ ಟೇನ್ನಿಫಲ್ಸ ಸ್ಕೂಲ ಹತ್ತಿರ ಒಬ್ಬ ಮನುಷ್ಯ ಮಹ್ಮದ ಇರ್ಷಾದ ತಂದೆ ಮಹ್ಮದ ಜಾವೀದ ವಯಾ: 28 ವರ್ಷ ಉ: ಕೆ.ಇ.ಬಿ.ಯಲ್ಲಿ ತಾತ್ಕಾಲಿಕ ಲೈನ ಮೇನ ಕೆಲಸ ಸಾ : ಬಸವಣ್ಣ ದೇವರ ಗುಡಿ ಹತ್ತಿರ ಹೀರಾಪುರ ಗುಲಬರ್ಗಾ ಎಂಬುವನು ಒಂದು ಹೀರೊ ಹೊಂಡಾ ಸ್ಲೇಂಡರ್ ನಂ: ಕೆ.ಎ-33 ಇ-7157 ಕೆಂಪು ಬಣ್ಣದ್ದು ಇಂಜಿನ ನಂಬರ್:02L18623846 ಮತ್ತು ಚಸ್ಸಿ ನಂಬರ್ 02L20F23452 ನೇದ್ದ ಅ.ಕಿ 20,000/- ಬೆಲೆಬಾಳುವುದನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದನ್ನು ಕಂಡು ಪೇಟ್ರೋಲಿಂಗ ಕರ್ತವ್ಯದ ಮೇಲಿದ್ದ ಎ.ಎಸ್.ಐ ಭೀಮಶ್ಯಾ ಮತ್ತು ಪಿ.ಸಿ ವೈಜನಾಥ ರವರು ಹಿಡಿದು ವಿಚಾರಿಸಿ ಮೋಟರ ಸೈಕಲದ ಬಗ್ಗೆ ವಿಚಾರಿಸಿದಾಗ ಯಾವುದೇ ಉಪಯುಕ್ತ ಮಾಹಿತಿ ಕೊಡಲಾರದಕ್ಕೆ ಸಂಶಯ ಬಂದು ಇನ್ನೂ ವಿಚಾರಿಸಿದಾಗ ಮೋಟಾರ ಸೈಕಲ ಬಗ್ಗೆ ಮಾಹಿತಿ ನೀಡದೆ ಇರುವದರಿಂದ ಮೋಟಾರ ಸೈಕಲ್ ಪಂಚರ ಸಮ ಕ್ಷಮದಲ್ಲಿ ಜಪ್ತಿಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 110/2011 ಕಲಂ: 41 (ಡಿ) ಸಿ.ಆರ್.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ನಂಬರವುಳ್ಳ ವಾಹನ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾದಲ್ಲಿ ರೋಜಾ ಪೊಲೀಸ್ ಠಾಣೆಗೆ ಸಂರ್ಪಕಿಸಲು ಕೊರಲಾಗಿದೆ.

ಅಪಘಾತ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ. ದಿನಾಂಕ 08/12/2011 ರಂದು 8.45 ಗಂಟೆ ಸುಮಾರಿಗೆ ಮಹಾವೀರ ತಂದೆ ಬಸವರಾಜ ಕಾಸರ ಸಾ|| ಭಟ್ಟರ್ಗಾ ಈತನು ತನ್ನ ಜೀಪ ನಂ. ಎಮ.ಹೆಚ್. 12, ಸಿ.ಡಿ 4617 ನೇದ್ದನ್ನು ದಂಗಾಪೂರದಿಂದ ಆಳಂದ ಕಡೆಗೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಭೂಸನೂರ ಕ್ರಾಸ ಹೊಡ್ಡಿನ ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32, ಆರ್ 745 ನೇದ್ದರ ಮೇಲೆ ಕುಳಿತುಕೊಂಡು ದುತ್ತರಗಾಂವದಿಂದ ದಂಗಾಪೂರ ಕಡೆಗೆ ಹೊರಟ ಬೀಮಾಶಂಕರ ಕೊತಲಿ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಜೀಪ ಚಾಲಕ ತನ್ನ ಜೀಪನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ಸಿದ್ದಪ್ಪ ತಂದೆ ಬೀರಪ್ಪಾ ಕೊತಲಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2011 ಕಲಂ 279, 337, 304(ಎ) ಐಪಿಸಿ ಮತ್ತು 187 ಐ,ಎಮ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

No comments: