POLICE BHAVAN KALABURAGI

POLICE BHAVAN KALABURAGI

13 October 2011

GULBRGA DIST REPORTED CRIMES

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ನಸೀರೊದ್ದಿನ್ ತಂದೆ ಮೈನೊದ್ದಿನ್ ಸಾ|| ವಿದ್ಯಾ ನಗರ ಗುಲಬರ್ಗಾ ರವರು ನನ್ನ ಬಜಾಜ ಪಲ್ಸರ ಮೋಟಾರ ಸೈಕಲ್ ನಂ. ಕೆಎ-32 ಕ್ಯೂ-3460 ವಾಹನ ಮನೆ ಮುಂದೆ ದಿನಾಂಕ : 28/09/2011 ರಂದು ಇಟ್ಟಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ನನ್ನ ಮೋಟಾರ ಸೈಕಲ್ ದ ಬಿಡಿ ಭಾಗಗಳು ಯಾರೋ ಕಿತ್ತಿಕೊಂಡು ಹೋಗಿರುತ್ತಾರೆ ವಾಹನದ ವಿಮಾ ಯೋಜನೆಯ ಲಾಭ ಪಡೆದುಕೊಳ್ಳಲು ಪ್ರಥಮ ವರದಿಯ ಪ್ರತಿಯ ಅವಶ್ಯಕತೆ ಇದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಠಾನೆ ಗುನ್ನೆ ನಂ: 110/2011 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಮಾದನ ಹಿಪ್ಪರಗಾ ಠಾಣೆ :ಶ್ರೀ ಶರಣಮ್ಮ ಗಂಡ ಜಗನಾಥ @ಜಗಧೀಶ ಜಮಾದಾರ ವಯ:20ವರ್ಷ ಜಾತಿ:ಕಬ್ಬಲಿಗ ಉ: ಮನೆಕೇಲಸ ಸಾ: ಮಾದನ ಹಿಪ್ಪರಗಾ ಹಾ.ವ. ಚಿಂಚೋಳ್ಳಿ ತಾ: ಆಳಂದ ರವರು ಸುಮಾರು 18 ರಿಂದ 20 ದಿವಸಗಳ ಹಿಂದೆ ನನ್ನ ತಂದೆ ತಾಯಿ ಮತ್ತು ನಮ್ಮೂರಿನ ಹಿರಿಯರು ಮಾದನ ಹಿಪ್ಪರಗಾಕ್ಕೆ ಬಂದು ನನ್ನ ಗಂಡನ ಮನೆಯಲ್ಲಿ ನನ್ನನ್ನು ಬಿಟ್ಟು ಹೊದರು ಆಗ ನನ್ನ ಗಂಡನು ನನಗೆ ಕರೆದುಕೊಂಡು ಮುಂಬೈಯಲ್ಲಿ ನನ್ನ ಅತ್ತೆ ಮಾವಂದಿರ ಹತ್ತಿರ ಕರೆದುಕೊಂಡು ಹೋಗಿ ನಾವು ಇಬ್ಬರು ಗಂಡ ಹೆಂಡತಿ ಮುಂಬೈ ಚರ್ಚಗೇಟ್ ಮಿನಿಸ್ಟರ್ ಸರ್ವೆ ನಂ 4 ಮನೆಯಲ್ಲಿ ವಾಸಗಾಗಿದ್ದೆವು ದಿನಾಂಕ: 06/10/2011 ರಂದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ಗಂಡನಾದ ಜಗನ್ನಾಥ ಇತನು ವರದಕ್ಷಿಣೆ ತರುವಂತೆ ಪಿಡಿಸಿ ಹೊಡೆ ಬಡೆ ಮಾಡಿರುತ್ತಾನೆ ಅಲ್ಲದೇ ನಾನು ಈಗ ಬಸುರಿಯಾಗಿದ್ದು ಅಂತಾ ಗಂಡನ ಮನೆಯವರೆಲ್ಲರೂ ಅವಾಚ್ಯವಾಗಿ ಬೈದು ಹೊಡೆ ಬಡೆ ಮಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 63/2011 ಕಲಂ 143,147, 504,506 498(ಎ) ಸಂಗಡ 149 ಐಪಿಸಿ ಮತ್ತು 3 & 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸಾರ್ವಜನಿಕ ರಸ್ತೆಯ ಮೇಲೆ ರಸ್ತೆ ಮಾಡಿದ ಬಗ್ಗೆ:

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 12/10/11 ರಂದು ಮುಂಜಾನೆ 10:15 ರಿಂದ 11:15 ಎಎಮ ವರೆಗೆ ರಿಂಗ ರೋಡ ಹೀರಾಪೂರ ಕ್ರಾಸದಲ್ಲಿ ಹೀರಾಪೂರ ಗ್ರಾಮದ ಪ್ರಕಾಶ ಮಾಲಿ ಪಾಟೀಲ ಇನ್ನೂ 100 ರಿಂದ 115 ಜನರು ಸೇರಿಕೊಂಡು ತಮ್ಮ ಗ್ರಾಮದ ಸರ್ವೆ ನಂ. 6 ರಲ್ಲಿ ಹಿಂದು ಸ್ಮಶಾನ ಭೂಮಿ ಇದ್ದು ಸದರಿ ಸ್ಮಶಾನ ಭೂಮಿಯ ರಕ್ಷಣೆಗಾಗಿ ಕಾನೂನಿನ ಪ್ರಕಾರ ಕಂಪೌಂಡ ಗೋಡೆ ನಿರ್ಮಿಸಿದ್ದು ಅದನ್ನು ಮುಸ್ಲಿಂ ಸಮುದಾಯದವರು ಕಂಪೌಂಡ ಗೋಡೆಯನ್ನು ಕೆಡವಿದ್ದನ್ನು ಪ್ರತಿಭಟಿಸಿ ರಿಂಗ ರೋಡ ಹೀರಾಪೂರ ಕ್ರಾಸದಲ್ಲಿ ಸುಮಾರು 1 ಗಂಟೆಯ ವರೆಗೆ ರಸ್ತೆ ತಡೆ ಚಳುವಳಿಯನ್ನು ನಡೆಯಿಸಿ ಸಾರ್ವಜನಿಕರಿಗೆ ಹಾಗೂ ಹೋಗಿ ಬರುವ ವಾಹನಗಳಿಗೆ ಅಡತಡೆ ಮಾಡಿದ್ದರಿಂದ ಸಕಾರಿ ತರ್ಪೆಯಾಗಿ ಪಿಎಸ ಐ ರವರು ಠಾಣೆ ಗುನ್ನೆ ನಂ: 296/2011 ಕಲಂ. ಕಲಂ 143, 147, 341, 283 ಸಂಗಡ 149 ಐಪಿಸಿ ಪ್ರರಕಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ


 

No comments: