POLICE BHAVAN KALABURAGI

POLICE BHAVAN KALABURAGI

13 October 2011

GULBARGA DIST REPORTED C RIMES

ಕೊಲೆ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ಭೀಮರಾವ ತಂದೆ ಪಂಡಿತರಾವ ಸಂಗೋಳಿ ಸಾ|| ಭೀಮನಾಳ ಹಾ||ವ|| ರೋಡಕಿಣ್ಣಿ ತಾ|| ಜಿ|| ಗುಲಬರ್ಗಾ ರವರು ನಾವು ಸದ್ಯ ಹೊಟ್ಟೆಪಾಡಿಗಾಗಿ ರೋಡಕಿಣ್ಣಿ ಗ್ರಾಮದಲ್ಲಿ ಬಂದು ಉಳಿದುಕೊಂಡಿದ್ದು, ತಮ್ಮನಾದ ರವಿಕಾಂತ ಈತನು ನಮ್ಮ ಸೋದರ ಮಾವ ಬಸವರಾಜ ಗೋಗಿ ಈತನ ಮಗಳಾದ ಅಂಬಿಕಾಳನ್ನು ಸುಮಾರು 3 ವರ್ಷಗಳ ಹಿಂದೆ ಪ್ರಿತಿಸಿ ಮದುವೆಯಾಗಿದ್ದು, ಈ ಮದುವೆಯ ಸಮಯಕ್ಕೆ ನಮ್ಮ ತಂದೆ-ತಾಯಿ ಮತ್ತು ಅಂಬಿಕಾ ಇವಳ ಅಣ್ಣನಾದ ಶಿವಶಂಕರ ತಂದೆ ಬಸವರಾಜ ಗೋಗಿ ಇಬ್ಬರ ಮದ್ಯೆ ಬಾಯಿ ಮಾತಿನ ತಕರಾರು ಆಗಿದ್ದು, ಅಂದಿನಿಂದ ಅಂಬಿಕಾ ಇವಳನ್ನು ತವರು ಮನೆಗೆ ಕಳುಹಿಸಿರುವುದಿಲ್ಲ, ಅಂದಿನಿಂದ ಶಿವಶಂಕರ ಈತನು ನಮ್ಮ ತಂದೆ ಪಂಡಿತರಾವ ಇವರ ವಿರುದ್ದ ವೈಮನಸ್ಸು ಬೆಳೆಸಿಕೊಂಡಿರುತ್ತಾನೆ, ದಿನಾಂಕ:12/10/2011 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ಶಿವಶಂಕರ @ ಶಿವಪ್ಪ ಈತನು ನಮ್ಮ ಮನೆಗೆ ಬಂದು ಹಬ್ಬಕ್ಕೆ ತನ್ನ ತಂಗಿಗೆ ತವರು ಮನೆಗೆ ಕಳುಹಿಸಿಕೊಡಿ ಅಂತಾ ಕೇಳಿದ್ದಕ್ಕೆ ನಮ್ಮ ತಂದೆ ಮೊದಲು ನೀವು ಸರಿಯಾಗಿರಿ, ಆಮೇಲೆ ಬಂದು ನಿನ್ನ ತಂಗಿಯನ್ನು ಕರೆದುಕೊಂಡು ಹೋಗು ಅಂದಾಗ ಶಿವಶಂಕರ ಈತನು ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ನೀವು ನಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲಾ ಮತ್ತು ನಮ್ಮನ್ನು ಕೀಳಾಗಿ ಕಾಣುತ್ತಿದ್ದೀರಿ ನಿಮಗೆ ಊರಲ್ಲಿ ಬದುಕಲು ಬಿಡುವುದಿಲ್ಲ ಅಂತಾ ಬೈಯುತ್ತಿದ್ದಾಗ ಆತನನ್ನು ಅಲ್ಲಿಂದ ಕಳುಹಿಸಿದ್ದು, ಇಂದು ದಿನಾಂಕ:13/10/2011 ರಂದು ಬೆಳೆಗ್ಗೆ 07-00 ಗಂಟೆ ಸುಮಾರಿಗೆ ಎಂದಿನಂತೆ ನಮ್ಮ ತಂದೆ ಮತ್ತು ನಾನು ಕೂಡಿಕೊಂಡು ನಮ್ಮ ಊರಿನ ಸರ್ಕಾರಿ ಪಶು ಆಸ್ಪತ್ರೆಯ ಕಡೆಗೆ ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ಶಿವಶಂಕರ ಈತನು ತನ್ನ ಕೈಯಲ್ಲಿ ಕಬ್ಬಿಣದ ಪೈಪಿನಿಂದ ನಮ್ಮ ತಂದೆಯ ತೆಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು, ಆಗ ನಾನು ಮತ್ತು ನಮ್ಮೂರ ರಾಜಕುಮಾರ ಚವ್ಹಾಣ, ಹಬೀಬಿ ಗಂಡ ಅಬ್ದುಲ್ ಅಜೀಜ್ ಜಮಾದಾರ ಇವರು ಓಡಿ ಬರುವಷ್ಟರಲ್ಲಿ ಶಿವಶಂಕರ ಈತನು ನಿಮ್ಮ ಅಪ್ಪನಿಗೆ ಖಲಾಸ ಮಾಡಿದ್ದೇನೆ ಈಗ ಹೋಯ್ಕೋಳ್ಳಿ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಓಡಿ ಹೋಗಿದ್ದು, ನಾವು ಬಂದು ನಮ್ಮ ತಂದೆಗೆ ನೋಡುವಷ್ಟರಲ್ಲಿ ನಮ್ಮ ತಂದೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಎಡಕಿವಿ ಕತ್ತರಿಸಿದಂತಾಗಿ ಎಡಕಿವಿಯ ಹಿಂದುಗಡೆ ತೆಲೆಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2011 ಕಲಂ 302, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಮುಂಜಾಗ್ರತೆ ಕ್ರಮ

ಬ್ರಹ್ಮಪೂರ ಠಾಣೆ : ಶ್ರೀ.ಮಹಾಂತೇಶ ಸಿ.ಪಿ.ಸಿ 1728 ಬ್ರಹ್ಮಪೂರ ಠಾಣೆರವರು ದಿನಾಂಕ: 13/10/11 ರಂದು ಬೆಳಿಗ್ಗೆ ನಾನು ಮತ್ತು ರಾಜಕುಮಾರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಪಬ್ಲಿಕ ಗಾರ್ಡನ ಟೌನ ಹಾಲ ಹತ್ತಿರ ಮಧ್ಯಾಹ್ನ ಹೋದಾಗ ಅಲ್ಲಿ ಇಬ್ಬರು ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಶ್ರೀನಿವಾಸ ತಂದೆ ಸಿದ್ರಾಮಪ್ಪ ಉಪಾದ್ಯ, ವಯ|| 18 ವರ್ಷ, ಅರ್ಜುನ ತಂದೆ ವಿಜಯ ಕಾಂಬಳೆ, ಸಾ|| ಇಬ್ಬರೂ ಬಾಪೂನಗರ ಮಾಂಗರವಾಡಿ ಗಲ್ಲಿ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವರನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಢಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರಿಂದ ಠಾಣಾ ಗುನ್ನೆ ನಂ: 193/11 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀಮತಿ ಜಯಶ್ರೀ ಗಂಡ ಸುದಾಕರ ಜವಳಕರ ಸಾ:ಚಿಮ್ಮನಚೋಡ ತಾ ಚಿಂಚೋಳಿ ಹಾ:ವ:ಓಂನಗರ ಅರವಿಂದ ಆಶ್ರಮ ಹಿಂದುಗಡೆ ಗುಲಬರ್ಗಾ ರವರು ನನ್ನ ಗಂಡ ಸುಧಾಕರ ಇತನು ಗುಲಬರ್ಗಾದಿಂದ ರಾಜೇಶ್ವರಕ್ಕೆ ನನ್ನ ಅಣ್ಣನ ಮಗನು ಬಾಂಬೆಯಿಂದ ಬಂದಿದ್ದು ಅವನಿಗೆ ಮಾತನಾಡಿಸಲು ಹೋಗುತ್ತೇನೆ ಅಂತ ಹೇಳಿ ಮೋಟಾರ ಸೈಕಲ ನಂ ಕೆಎ 32 ಡಬ್ಲು 1155 ನೇದ್ದರಲ್ಲಿ ಹೋಗಿ ರಾತ್ರಿಯಾದರು ವಾಪಸ್ಸ ಬಂದಿರುವುದಿಲ್ಲ ನಂತರ ದಿನಾಂಕ 13/10/2011 ಜಾವ 4:30 ಗಂಟೆಯ ಸುಮಾರಿಗೆ ನನ್ನ ಗಂಡನು ಹುಮನಾಬಾದ-ಗುಲಬರ್ಗಾ ರೋಡಿನ ಮೇಲೆ ತಾವರಗೇರಾ ಕ್ರಾಸ ದಾಟಿ ಸ್ಪಲ್ಪ ಮುಂದುಗಡೆ ಇಳುಕಿನಲ್ಲಿ ಯಾವುದೋ ವಾಹನವು ನನ್ನ ವಾಹನ ಇವರ ಮೋಟಾರ ಸೈಕಲಕ್ಕೆ ಅಪಘಾತ ಪಡಿಸಿ ಅವನ ತಲೆಗೆ ಭಾರಿ ರಕ್ತಗಾಯವಾಗಿ ಸ್ದಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿದ್ದರಿಂದ ನಾನು ಮತ್ತು ನನ್ನ ಮಗಳು ಹಾಗು ಮನೆಯ ಮಾಲಿಕರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಇದ್ದ ಅವರಾದ (ಬಿ) ಗ್ರಾಮದ ಕೆಲವು ಜನರು ನಿನ್ನೆ ರಾತ್ರಿ 11:00 ಗಂಟೆಯ ಸುಮಾರಿಗೆ ಟಾಟಾ ಸುಮೊ ನಂ ಕೆಎ32 ಎಮ್- 9909 ನೇದ್ದರ ಚಾಲಕನು ಅತೀವೇಗದಿಂದ & ಅಲಕ್ಷತನದಿಂದ ನಡೆಸುತ್ತಾ ಮೋಟಾರ ಸೈಕಲ ನಂ ಕೆ.ಎ.32 ಡಬ್ಲೂ 1155 ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ವಾಹನ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಮೇಲಿಂದ ಠಾಣೆ ಗುನ್ನೆ ನಂ.297/2011 ಕಲಂ 279,304 (ಎ) ಐ.ಪಿ.ಸಿ ಸಂಗಡ 187 ಐ ಎಮ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ.

No comments: