ರಾಘವೇಂದ್ರ ನಗರ ಠಾಣೆ : ಶ್ರೀ ಅಶೋಕ ತಂದೆ ಕಮಲಾಕರರಾವ ಕುಲಕರ್ಣಿ ಉ|| ಎಸ್.ಬಿ.ಹೆಚ್ ಸಂಗಮೇಶ್ವರ ಕಾಲೋನಿ ಬ್ರಾಂಚ ಮ್ಯಾನೇಜರ ಸಾ|| ಬ್ರಹ್ಮಪೂರ ಗುಲಬರ್ಗಾ ರವರು, ನಾನು ಸಂಗಮೇಶ್ವರ ಕಾಲೋನಿಯ ಎಸ್.ಬಿ.ಹೆಚ್ ಬ್ಯಾಂಕ್ನ ದಿನಾಂಕ 21-10-2011 ರಂದು ಸಾಯಂಕಾಲ 6-30 ಗಂಟೆಯವರೆಗೆ ಕೆಲಸ ಮುಗಿಸಿ ಬ್ಯಾಂಕ ಬೀಗ ಹಾಕಿಕೊಂಡು ಹೋಗಿದ್ದು ಇಂದು ಬೆಳಗಿನ ಜಾವ 8 ಗಂಟೆಗೆ ಬ್ಯಾಂಕಿಗೆ ಬಂದು ಬೀಗ ತೆರೆದು ಒಳಗೆ ಹೋಗಿ ನೋಡಲು ಬ್ಯಾಂಕಿನ ಗೋಡೆ ಒಡೆದು ಯಾರೋ ಅಪರಿಚಿತ ಕಳ್ಳರು ಒಳಗೆ ಪ್ರವೇಶ ಮಾಡಿ ಕಳುವು ಮಾಡಲು ಪ್ರಯತ್ನ ಮಾಡಿದ್ದು ಬ್ಯಾಂಕಿನಲ್ಲಿದ್ದ ಯಾವುದೇ ವಸ್ತುಗಳು ಕಳುವು ಆಗಿರುವುದಿಲ್ಲಾ, ಕಳುವು ಮಾಡಲು ಪ್ರಯತ್ನಸಿದ ಕಳ್ಳರ ಬಗ್ಗೆ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆ ಗುನ್ನೆ ನಂ 82/11 ಕಲಂ 457, 380, 511 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಕು|| ಡಾ|| ಲಲೀತಾ ತಂದೆ ಎಮ್.ಡಿ.ನಾಯ್ಡು ಉ: ವೈದ್ಯಕೀಯ ವಿದ್ಯಾರ್ಥಿನಿ ಸಾ: ಲಕ್ಷ್ಮಿ ಕ್ಲಿನಿಕ ವಿಶಾಖ ಪಟ್ಟಣ [ಎ.ಪಿ.] ರವರು, ನಾನು ದಿ: 19-10-11 ರಂದು 12=30 ಪಿ.ಎಮ್.ಕ್ಕೆ ನಗರದ ಆರ್.ಪಿ. ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ಕೋರ್ಟ ಕ್ರಾಸ್ ಹತ್ತಿರ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಈತನ ಮೋಟಾರ ಸೈಕಲ್ ನಂಬರ ಕೆಎ 01 ವಾಯಿ 6633 ನೇದ್ದರ ಮೇಲೆ ಕುಳಿತುಕೊಂಡು ಬರುತ್ತಿರುವಾಗ ಡಾ|| ಜಿ.ವಿ ಹರೀಶ ತಂದೆ ವೆಂಕಟರತ್ನಂ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ತನ್ನಿಂದ ತಾನೆ ಮೋಟಾರ್ ಸೈಕಲ್ ಮೇಲಿಂದ ಕೆಳಗೆ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ನನಗೂ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆ ಗುನ್ನೆ ನಂ. 133/11 ಕಲಂ: 279 .338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಲಕ್ಷ್ಮಣ ತಂದೆ ಸಂಗಪ್ಪ ಕೊಡಲಗಹಂಗರಗಾ ಸಾ: ಜಮಗಾ (ಆರ್) ತಾ: ಆಳಂದ ಜಿ : ಗುಲಬರ್ಗಾ ರವರು, ನನ್ನ ಮಗಳಾದ ಅಂಬಿಕಾ ಇವಳು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ 5 ನೇ ಸೆಮಿಸ್ಟರದಲ್ಲಿ ಫೇಲಾಗಿದ್ದು ಮಾನಸಿಕ ಮಾಡಿಕೊಂಡು ಜಿಗುಪ್ಸೆಗೊಂಡು ದಿ:19-10-11 ರಂದು ವಿಷ ಸೇವನೆ ಮಾಡಿ ಉಪಚಾರ ಹೊಂದುತ್ತಾ ದಿ:20-10-11 ರಂದು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆ ಯು.ಡಿ.ಆರ್. ನಂ.14/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಮುನಿರಪಾಶಾ ತಂದೆ ಬಾಬಾಸಾಬ ಕಣ್ಣಿ ಸಾ|| ಸಟಪಟನಹಳ್ಳಿ ರವರು, ಹೊಸ ನೀರು ಶುದ್ದಿಕರಣ ಘಟಕ ಪ್ರಾರಂಭಗೊಂಡ ಪ್ರಯುಕ್ತ ನಾನು ಹಾಗೂ ಶಿವಯ್ಯ ಪಠಪತಿ ಇಬ್ಬರೂಕೂಡಿ ಮೋಟಾರ ಸೈಕಲ್ ನಂ. ಎಂ,ಹೆಚ್, 13/ಎ,ಸಿ 3279 ನೇದ್ದರ ಮೇಲೆ ಸೇಡಂದಿಂದ ಸಟಪಟನಹಳ್ಳಿಗೆ ಹೋಗಿ ಪಂಪ್ ಚಾಲು ಮಾಡಿ ಪೈಪಲೆನ ಲೀಕೆಜ ಚೆಕ್ ಮಾಡುತ್ತಾ ಮೋಟಾರ್ ಸೈಕಲ ಮೇಲೆ ಬರುತ್ತಿರುವಾಗ ಮುರೆಗೇಂದ್ರಪ್ಪ ಕೋಳಕುರ್ ಇವರ ಹೊಲದ ಹತ್ತಿರ ಸೇಡಂ ಕಡೆಯಿಂದ ಬರುತ್ತಿದ್ದ ಮುನವರ್ ರೋಡ ಲೈನ್ಸ್ ಟಿಪ್ಪರ ಲಾರಿ ನಂ ಕೆಎ 32 -4565 ನೇದ್ದರ ಚಾಲಕ ನರಸಾಪ್ಪ ತಂದೆ ಹಣಮಂತ ಸಾ|| ಮಳಖೇಡ ನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆಅಪಘಾತ ಪಡಿಸಿದ್ದು ನನಗೆ ಮತ್ತು ಶಿವಯ್ಯ ನಿಗೆ ಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 181/2011 ಕಲಂ 279,337,338, ಐಪಿಸಿ ಸಂಗಡ 187 ಐಎಂವಿ ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀಮತಿ ದೇವಕಿ ಗಂಡ ಶರಣಾಪ್ಪ ಇಂಗಳಗಿ ಸಾ|| ಸಾಯಿಬಾಬಾ ಕಾಲೋನಿ ಸೇಡಂ ರವರು, ಜೆ.ಕೆ ರೋಡ ಸಾಯಿಬಾಬಾ ಕಾಲೋನಿಯಲ್ಲಿ ಇರುವ ಅಂಗಡಿಯನ್ನು ರಾಮಲು ಮೇಕ್ಯಾನೀಕ ಇವರ ಮಕ್ಕಳಿಗೆ ಕೋಟ್ಟಿದ್ದು ಅವರು ಗ್ಯಾರೆಜ ಹಚ್ಚಿದ್ದು ಇತ್ತು, ಅವರಿಗೆ ನಮಗೆ ಅಗದೆ ಇದ್ದರಿಂದ ಸದರಿ ಗ್ಯಾರೆಜ ಖಾಲಿ ಮಾಡಲು ಹೇಳಿದ್ದು ಇತ್ತು. ನನ್ನ ಗಂಡ ತಾಂಡೂರಕ್ಕೆ ಹೋಗಿದ್ದು ನೋಡಿ ಅಂಗಡಿಯಲ್ಲಿ ಇವರು ಲೇಥ ಮಶಿನ ವಗೆರೆ ಕಿತ್ತುವಾಗ ಸಪ್ಪಳ ಕೇಳಿ ಬಂದು ನೋಡಲು ಲೇಥ ಮಶೀನ ಯಾಕೆ? ಕಿತ್ತುತ್ತಿರಿ ಅದು ನಮ್ಮದು ಇದೆ ಅಂತಾ ಹೇಳಿದಾಗ ಅವರಲ್ಲಿ ಮಲ್ಲು ಪೆಂಚಂಪಳ್ಳಿ ಮತ್ತು ಹಣಮಂತ ಮಕ್ಯಾನೀಕ ಇವರು ನೀನು ನಮಗೆ ಏನು ಕೇಳುತ್ತಿ ? ಇದು ನಮ್ಮ ಲೇಥ ಮಶೀನ ಇದೆ ಅಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಬಡೆ ಮಾಡಿರುತ್ತಾರೆ. ಆಗ ರಘೂ ಮೇಕ್ಯಾನಿಕ್ ಮತ್ತು ರಾಮು ಮೇಕ್ಯಾನಿಕ್ ಇವರು ತಮ್ಮ ವೆಲ್ಡಿಂಗ ಮಶೀನ ಒಡೆದುಹಾಕಿ ಹಾನಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ 182/2011 ಕಲಂ 341,323,354,504,427, ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ರವಿಚಂದ್ರ ತಂದೆ ತಿಮ್ಮಯ್ಯ ಜೇಟಿ ಉ:ವಾಸವದತ್ತಾ ಸಿಮೆಂಟ ಕಂಪನಿ ಸೇಡಂದಲ್ಲಿ ಟರಬೈನ್ಆಪರೇಟರ ಕೆಲಸ ಸಾ|| ಭದ್ರಾವತಿ ಜಿ: ಶಿವಮೋಗ್ಗ ಹಾ,ವ: ವಾಸವದತ್ತಾ ಕಾಲೋನಿ ಸೇಡಂ ರವರು, ದಿ:18-10-11 ರಂದು ಗುಲಬರ್ಗಾದಿಂದ ಸೇಡಂಕ್ಕೆ ಬರುವ ಬಸ್ಸ ನಂಬರ ಕೆಎ-32 ಎಫ್-39 ನೇದ್ದರಲ್ಲಿ ಬೆಳಿಗ್ಗೆ 7-15 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಹಾಗು ನನ್ನ ಮಾವ ಮತ್ತು ನನ್ನ ಎರಡು ಮಕ್ಕಳು ಸೂಟಕೇಸ್ ಸಮೇತ ಬಸ್ಸನಲ್ಲಿ ಕುಳಿತು ಬರುವಾಗ ಮಳಖೇಡಕ್ಕೆ ಬಂದು ನನ್ನ ಸೂಟಕೇಸ್ ನೋಡಲಾಗಿ ಇರಲಿಲ್ಲಾ ಕಾರಣ ನನ್ನ ಸೂಟಕೇಸ್ದಲ್ಲಿದ್ದ ಎಟಿಎಮ್ ಕಾರ್ಡ, ಪ್ಯಾನ್ ಕಾರ್ಡ, 2 ಬಂಗಾರದ ಉಂಗುರ ನಗದು ಹಣ ಒಟ್ಟು 5.000/- ಹೀಗೆ ಹಾಗು ದಾಖಲಾತಿಗಳು ಸೇರಿದಂತೆ ಬೆಳ್ಳಿಮತ್ತು ಬಂಗಾರದ ಒಡವೆಗಳಿದ್ದ ಸೂಟಕೇಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಪತ್ತೆ ಹಚ್ಚಿ ಕೊಡಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆ ಗುನ್ನೆ ನಂ. 96/2011 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment