POLICE BHAVAN KALABURAGI

POLICE BHAVAN KALABURAGI

21 October 2011

GULBARGA DIST REPORTED CRIMES

ಸ್ಟೇಷನ ಬಜಾರ ಠಾಣೆ : ಶ್ರೀ ಮಾನಪ್ಪ ತಂದೆ ಯಲ್ಲಪ್ಪ ಕೆ.ಜಿ.ಬ್ಯಾಂಕನಲ್ಲಿ ಮ್ಯಾನೇಜರ. ಸಾ: ಮನೆ ನಂ9-82 ನಾಯ್ಡು ಲೇಔಟ ರಾಜಾಪೂರ ಕಾಲೋನಿ ಗುಲಬರ್ಗಾ ರವರು ದಿನಾಂಕ : 20/07/2010 ರಿಂದ 04/06/2011 ರ ಅವಧಿಯಲ್ಲಿ ಇದೇ ಬ್ಯಾಂಕಿನಲ್ಲಿ ಆರ್.ಡಿ.ಓ. ಅಂತಾ ಕರ್ತವ್ಯ ನಿರ್ವಹಿಸಿದ ಬಲಭೀಮ ಆರ್. ರಾಂಪೂರೆ ಸಂಗಡ ಸಾರ್ವಜನಿಕರಾದ ರಾಮೇಶ ತಂದೆ ಹಣಮಂತ ವಾಡೇಕರ್, ಬ್ರಹ್ಮಾನಂದ ತಂದೆ ಭೀಮರಾವ್ ಬುಳ್ಳಾ, ಕು : ಪ್ರತಿಭಾ ತಂದೆ ಲಕ್ಷ್ಮಣ ಬಜಂತ್ರಿ, ಬಸವರಾಜ ತಂದೆ ಚಂದ್ರಶಾ ಉಷಾರೆ ಇವರೆಲ್ಲರು ಸೇರಿ ಸರಕಾರದ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಮಂಜೂರಾದ ಸಹಾಯಧನ/ಸಬ್ಸಿಡಿ ಒಟ್ಟು ಹಣ 24,34,012=00 ರೂಪಾಯಿಗಳನ್ನು ಅವರವರ ಫಲಾನುಭವಿಗಳ ಸಹಾಯಧನವನ್ನು ಅವರ ಖಾತೆಗೆ ಜಮಾ ಮಾಡದೇ ಸಂಬಂದವಿಲ್ಲದವರ ಖಾತೆಗಳಿಗೆ ಬಲಭೀಮ ಇವರು ಸ್ವತಃ ತನ್ನ ಸಹಿಯನ್ನು ಚಕ್ ಜಮಾ ಓಚರಗಳ ಮೇಲೆ ಹಾಕಿ ಸರಕಾರಕ್ಕೆ ಮತ್ತು ಬ್ಯಾಂಕಿಗೆ ಇವರೆಲ್ಲರು ಕೂಡಿ ಅಪರಾಧಿಕ ನಂಬಿಕೆ ದ್ರೋಹ ಎಸಗಿದ್ದು ಅಲ್ಲದೇ ಮತ್ತೊಬ್ಬರಂತೆ ನಟಿಸಿ ಬಲಭೀಮ ಇತನು ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರುಗುಳನ್ನು ಕಾಗದ ಪತ್ರಗಳ ಮತ್ತು ಚಕ್ ಗಳ ಮೇಲೆಹಾಕಿ ಅಧಿಕಾರದಲ್ಲಿ ನಂಬಿಕೆದ್ರೋಹ ಎಸಗಿದ್ದು ಮತ್ತ ಬ್ಯಾಂಕ ನೌಕರರನಾಗಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ ಮಾಡಿ ಮೋಸ ವಂಚನೆ ಎಸಗಿದ್ದಲ್ಲದೆ ಸುಳ್ಳು ಸ್ಟಷ್ಟನೆ ಮಾಡಿದ್ದು ವಂಚಿಸುವ ಉದ್ದೇಶಕ್ಕಾಗಿ ದಸ್ತಾವೇಜುಗಳನ್ನು ಉಪಯೋಗಿಸಿ ಇವರೆಲ್ಲರು ಸೇರಿ ಸರಕಾರಕ್ಕೆ/ಬ್ಯಾಂಕಿಗೆ ವಂಚನೆ ಮಾಡಿ ಒಟ್ಟು ಮೊತ್ತ 24,34,012=00 ನಷ್ಟವನ್ನುಂಟು ಮಾಡಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಗುನ್ನೆ ಸಂಖ್ಯೆ 187/11 ಕಲಂ 147, 406, 419, 408, 409, 420, 465, 468, ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

No comments: