ಕೊಲೆ ಪ್ರಯತ್ನ ಪ್ರಕರಣ:
ಫರಹತಾಬಾದ ಠಾಣೆ :ಶ್ರೀಮತಿ ಸರುಬಾಯಿ ಗಂಡ ಬಂಡಪ್ಪಾ ಜಾನಕರ ಸಾ:ನಂದಿಕೂರ ಹಾ:ವ:ಉದನೂರ ರವರು ನಮ್ಮ ಜಮೀನ ನಂದಿಕೂರ ಗ್ರಾಮದಲ್ಲಿದ್ದು, ಸದರಿ ಜಮೀನನ್ನು ಸಾರ್ವಜನಿಕರಿಗೆ ಸಂಡಾಸಕ್ಕೆಂದು ಸರಕಾರವು ವಶಪಡಿಸಿಕೊಂಡಿದ್ದು, ಅದರ ಹಣವನ್ನು ತರಲು ನನ್ನ ಗಂಡನಾದ ಬಂಡಪ್ಪಾ ಇತನು ದಿನಾಂಕ: 9-7-2011 ರಂದು ಮುಂಜಾನೆ ಉದನೂರ ಗ್ರಾಮದಿಂದ ನಂದಿಕೂರ ಗ್ರಾಮಕ್ಕೆ ಹೋಗಿದ್ದು, ಅದೇ ದಿವಸ ಸಾಯಂಕಾಲ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಕೇಂದ್ರ ಕಾರಾಗೃಹದ ಮುಂದೆ ಇರುವ ಸಾರ್ದಜಿ ದಾಭಾದ ಹತ್ತಿರ ಮಾರುತಿ ಹೊಸಮನಿ ಮತ್ತು ಸಂಗಡಿಗರು ಕೂಡಿಕೊಂಡು ನನ್ನ ಗಂಡನಿಗೆ ಹಣ ಕೊಡು ಅಂತಾ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ, ಕಲ್ಲಿನಿಂದ ಹಣೆಗೆ, ಎದೆಗೆ, ಹೊಡೆದು ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಪ್ರಕರಣ :
ಶಹಾಬಾದ ನಗರ ಠಾಣೆ : ಶ್ರೀಮತಿ ಇಮ್ತಿಯಾಜಬೀ ಗಂಡ ಅಬ್ದುಲ ಅಲಿಂ ಸಾ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಂಬೊ ಫೈಲ ಶಹಾಬಾದ ರವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದ ಕೋನೆಯ ಬಾಗೀಲ ಬೀಗ ಮುರಿದು ಮಕ್ಕಳಿಗೆ ಊಟ ಮಾಡಲು ಬಳಸುತ್ತಿದ್ದ 2 ಗ್ಯಾಸ್ ಸಿಲಿಂಡರಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಅಪಘಾತ ಪ್ರಕರಣ :
ನೆಲೋಗಿ ಠಾಣೆ :ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪಾ ಬಡಿಗೇರ ಸಾ|| ಚಾಂದಕೋಟೆ ಹಾ|| ವ|| ಮಂದೆವಾಲ್ ರವರು ನನ್ನ ಗಂಡ ಮಲ್ಲಪ್ಪ ಇತನು ಮಕ್ಕಳಿಗೆ ತಿನ್ನಲು ಹಣ್ಣುಗಳು ತರಲು ಮಂದೆವಾಲ್ ಬಸ್ಸ ನಿಲ್ದಾಣದಕ್ಕೆ ಬಂದು ಹಣ್ಣುಗಳನ್ನು ತೆಗೆದುಕೊಂಡು ಸೈಕಲ್ ಮೇಲೆ ಬರುತ್ತಿರುವಾಗ ಜೇವರ್ಗಿ –ಸಿಂದಗಿ ಮುಖ್ಯ ರಸ್ತೆಯ ಬ್ರಿಡ್ಜ ಹತ್ತಿರ ಜೇವರ್ಗಿ ಕಡೆಯಿಂದ ಚಾಲುಕ್ಯ ಬಸ್ ನಂ: ಕೆಎ 19 ಸಿ- 4824 ನೇದ್ದರ ಚಾಲಕ ಹಣಮಂತ ಶಿವಣಗಿ ಇತನು ತನ್ನ ಬಸ್ಸ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಗಂಡನಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಯತ್ನ ಪ್ರಕರಣ:
ಮಹಿಳಾ ಠಾಣೆ : ಶ್ರೀಮತಿ ಗೀತಾ ಗಂಡ ವಿಕಾಸ ಹೂಗಾರ ಸಾ|| ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮದುವೆಯು ವಿಕಾಸ ತಂದೆ ವೀರಣ್ಣಾ ಹೂಗಾರ ಸಾ|| ಶಿವಾಜಿ ನಗರ ಎಂಬಾತನೊಂದಿಗೆ ದಿನಾಂಕ: 20-02-2011 ರಂದು ನೇರವರಿದ್ದು, ಮದುವೆ ಕಾಲಕ್ಕೆ 11 ಸಾವಿರ ರೂಪಾಯಿ ನಗದು ಹಣ 2 ತೊಲಿ ಬಂಗಾರ ಹಾಗು ಇನ್ನಿತರ ಸಾಮಾನುಗಳು ತೆಗೆದುಕೊಂಡು ಮದುವೆ ಮಾಡಿಕೊಂಡಿದ್ದು . ಮದುವೆ ಯಾದ ಒಂದು ವಾರ ನನ್ನ ಜೋತೆ ಸರಿಯಾಗಿದ್ದು ನಂತರ ಶೀಲ ಶಂಕಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮನೆಯಲ್ಲಿದ ಸ್ಟೋ ಎತ್ತಿ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment