ದರೋಡೆ ಪ್ರರಕಣ :
ಅಶೋಕ ನಗರ ಠಾಣೆ : ಶ್ರೀ ನಂದಕಿಶೋರ ತಂದೆ ಸತ್ಯನಾರಾಯಣ ಜೋಶಿ ಸಾ|| ಆಜಾರಾ (ಎಕತಾಲ್ ಕಾಂಪ್ಲೇಕ್ಸ 'ಬಿ' ಬ್ಲಾಂಕ್ ಬಿಲ್ಡಿಂಗ ನಂ. 113 ರೂಮ್ ನಂ. 12 ತಾ: ಕರವೀರ ಜಿಲ್ಲಾ: ಕೊಲ್ಲಾಪುರ (ಮಾಹಾರಾಷ್ಟ್ರ ರಾಜ್ಯ) ರವರು ನಾನು ದಿನಾಂಕ 11/07/2011 ರಂದು ಕೆಲಸದ ನಿಮಿತ್ಯ ಗುಲಬರ್ಗಾಕ್ಕೆ ಬಂದ್ದಿದ್ದು ಕೆಲಸ ಮುಗಿಸಿಕೊಂಡು ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದು ಕೊಲ್ಲಾಪುರಕ್ಕೆ ಹೋಗಲು ರೇಲ್ವೆ ಸಮಯ ಕೇಳುವ ಕುರಿತು ಬಸ್ಸ ನಿಲ್ದಾಣದ ಹೊರಗಡೆ ಬಂದು ಒಬ್ಬ ವ್ಯಕ್ತಿಗೆ ವಿಚಾರಿಸಿ ನಂತರ ಲ್ಯಾಪ್ ಟಾಪ್ ನಲ್ಲಿ ಮೇಸೆಜ್ ಮಾಡಿದ್ದು ಆ ವ್ಯಕ್ತಿ 28 ರಿಂದ 30 ವಯಸ್ಸ ಉಳ್ಳನಿದ್ದು ತಾನು ಸಹ ಸ್ಟೇಷನಕ್ಕೆ ಬರುವುದಾಗಿ ಹೇಳಿ ನನಗೆ ಬಸ್ಸ ನಿಲ್ದಾಣದ ಎಡರಸ್ತೆಗೆ ಕರೆತಂದು ಪೋನಿನಲ್ಲಿ ಮಾತನಾಡುತ್ತಾ ನಂತರ 3 ಜನರು ಮೋಟಾರ ಸೈಕಲ್ ಮೇಲೆ ಬಂದವರೇ ನನಗೆ ಹೊಡೆಬಡೆ ಮಾಡಿ ನನ್ನ ಹತ್ತಿರ ಇದ್ದ ಲ್ಯಾಪ್ ಟಾಪ್ ಅ.ಕಿ. 9000/- ರೂ, ಎರಡು ಮೋಬಾಯಿಲ್ ಅ.ಕಿ. 10,000/- ರೂ, ಒಂದು ಕ್ಯಾಮರಾ ಅ.ಕಿ. 500/- ರೂ, ರುದ್ರಾಕ್ಷಿ ಹರಳು ಅ.ಕಿ. 12,000/- ರೂ ಎ.ಟಿ.ಎಮ್.ಕಾರ್ , ಡ್ರೈವಿಂಗ ಲೈಸನ್ಸ, ಚುನಾವಣೆ ಗುರುತಿನ ಚೀಟಿ, ನಗದು ಹಣ 3200/- ರೂ ಹೀಗೆ ಒಟ್ಟು 34,700/- ರೂ ಸಾಮಾನುಗಳು ನನಗೆ ಹೊಡೆ ಬಡೆ ಮಾಡಿ ಮೋಟಾರ ಸೈಕಲ್ ಕೆ.ಎ-32 /1431, ಇನ್ನೊಂದು ಮೋಟಾರ ಸೈಕಲ್ ನಂ. ಕೆ.ಎ-32 /9008 ಇನ್ನೊಂದು ಗಾಡಿಯು ಹೊಸದಾಗಿ ಇದ್ದು ಅದಕ್ಕೆ ನಂಬರ ಪ್ಲೇಟ ಬರೆದಿರುವುದಿಲ್ಲಾ. ಮೋಟಾರ ಸೈಕಲ್ ಪ್ಲಸರದಾಗಿದ್ದು ಕಪ್ಪು ಬಣ್ಣದಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲೀಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಮಟಾಕ ಪ್ರಕರಣ :
ರೋಜಾ ಠಾಣೆ : ಸರ್ಕಾರಿ ತರ್ಪೆಯಾಗಿ ನಾನು ಶ್ರೀ ರಾಜಣ್ಣ ಪಿ.ಐ ರೋಜ ಠಾಣೆ ನನಗೆ ದಿನಾಂಕ:11/07/2011 ರಂದು ಸಾಯಂಕಾಲ್ ಮಾಹಿತಿ ಬಂದಿದ್ದೇನೆಂದರೆ ರಾಮಜೀ ನಗರ ಖುರೇಶಿ ಮಜ್ಜೀದ ಹತ್ತಿರ ರಾಜಶೇಖರ ತಂದೆ ರಾಮಚಂದ್ರ ಮರತೂರ ಸಾ:ಹರಳಯ್ಯಾ ಸಮಾಜ ರಾಮಜೀ ನಗರ ಗುಲಬರ್ಗಾ ಇತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ತಿಳಿಸಿದ ಮೇರೆಗೆ ನಾನು ಮತ್ತು ಠಾನೆಯ ಸಿಬ್ಬಂದಿಯವರು ಡಿ.ಎಸ.ಪಿ ಸಾಹೇಬರ ಮಾರ್ಗದರ್ಶನ ಮೇರೆಗೆ ಆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆತನಿಂದ ಮಟಕಾ ಚೀಟಿಗಳು, ನಗದು ಹಣ 1640/- ರೂಪಾಯಿ ನೋಕಿಯಾ ಮೊಬಾಯಿಲ್ ಜಪ್ತಿ ಮಾಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರೋಜಾ ಠಾಣೆ : ಸೈಯ್ಯದ ಅಜೀಮ ತಂದೆ ಸೈಯ್ಯದ ಉಮರ ಸಾ:ಟಿಪ್ಪು ಸುಲ್ತಾನ ಚೌಕ ಹತ್ತಿರ ಆಜಾದಪೂರ ರೋಡ್ ಗುಲಬರ್ಗಾ ರವರು ನಾನು ದಿನಾಂಕ;10/07/2011 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಖಾಜಾ ಬಜಾರದ ಹಿಂದಿನ ಗೇಟಿನ ಹತ್ತಿರ ಅಟೋದಿಂದ ಇಳಿಸಿ 25/- ರೂಪಾಯಿ ಭಾಡಿಗೆ ಕೆಳಲು ಮುಜಿಬಸಾಭ ಇತನು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಚಾಕುದಿಂದ ಹೊಡೆದು ರಕ್ತಗಾಯ ಪಡೆಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯದ ಬಾಟಲಿಗಳ ಜಪ್ತಿ ಪ್ರಕರಣ:
ಸೇಡಂ ಠಾಣೆ: ಸೇಡಂ ಠಾಣೆಯ ಸರಹದ್ದಿನ ಧಾಬಾದಲ್ಲಿ ಕಾಶಿನಾಥ ತಂದೆ ರಾಮಚಂದ್ರ ಹರಿಹರ್ ಜೆ,ಕೆ ರೋಡ ಕಾವೇರಿ ದಾಭಾ ಸೇಡಂ ಹಾಗು ಶೇಸಿ ತಂದೆ ಅಶೋಕ ಗುತ್ತೆದಾರ್ ಸಾ|| ಗುರುರಾಜ ವೈನ್ಸ್ ಶಾಪ ಸೇಡಂ, ರವರು ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಸೇಡಂ ಠಾಣೆಯ ಪಿ,ಎಸ್,ಐ ರವರು ಹಾಗೂ ಸಿಬ್ಬಂದಿ ಜನರ ಕೂಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ,ಬೀಯರ್ ಬಾಟಲ್, ಎಂಸಿ. ವಿಸ್ಕಿ ಎಂಎಲನ, ಬಾಟಲಿಗಳು ಹಾಗು ನಗದು ಹಣ 350/- ನಗದು ಹಣ, ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸೈಯದ ಶಾಹೀನ ಗಂಡ ಸೈಯದ ಶಹಾಬುಜರುಕ ಸಾಹೇಬ ಸಾ|| ನಂದೂರ (ಬಿ) ಗ್ರಾಮ ತಾ:ಜಿ:ಗುಲಬರ್ಗಾ ರವರು ದಿನಾಂಕ 11-07-2011 ರಂದು ಸೀಮೆ ಎಣ್ಣೆ ಹಂಚುವ ಕುರಿತು ತಮ್ಮ ಮನೆಯ ಹಿಂಭಾಗದ ಜಾಗೆಯಲ್ಲಿ ಮೈಬೂಬಸಾಬ ತಂದೆ ಮಶಾಕಸಾಬ ಹರಕಂಚಿ, ಖಾಜಾಬೀ ಗಂಡ ದಿ| ಮಶಾಕಸಾಬ ಆಸ್ಮಾ ಗಂಡ ಮೈಬೂಬಸಾಬ ಸಾ: ಎಲ್ಲರು ನಂದೂರ(ಬಿ) ಗ್ರಾಮ ತಾ:ಜಿ:ಗುಲಬರ್ಗಾ , ರವರು ನನ್ನ ಜಾಗೆಯಲ್ಲಿದ್ದ ಸಂಡಾಸ ರೂಮಿನ ಹತ್ತಿರ ಬಂದು ಮಧ್ಯಾಹ್ನ ಸುಮಾರಿಗೆ ಸಂಡಾಸ ಶೌಚಾಲಯದ ಬಾಗಿಲಿಗೆ ಕೀಲಿ ಹಾಕಿ ಮುಳ್ಳು ಹಚ್ಚುತ್ತಿದ್ದಾಗ ನಾನು ಅವರಿಗೆ ನಮ್ಮ ಶೌಚಾಲಯಕ್ಕೆ ಯಾಕೆ ಕೀಲಿ ಹಾಕಿದ್ದಿರಿ ಅಂತಾ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
No comments:
Post a Comment