ದರೋಡೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗುರು ತಂದೆ ಗುಂಡಪ್ಪ ಹೀರೆಗೌಡ ಮು: ಬೈರಾಮಡಗಿ ಸದ್ಯ ಗೋದುತಾಯಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 1/7/2011 ರಂದು ನಾನು ನನ್ನ ವೈನ ಶಾಪನಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಸುಮಾರಿಗೆ ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು ವಯಸ್ಸು 20-25 ವರ್ಷದವನು ಇರಬಹುದು ಬಂದವನೇ ಮಚ್ಚು ಮತ್ತು ಒಂದು ಪಿಸ್ತೂಲನ್ನು ನನ್ನ ಎದೆಗೆ ಹಚ್ಚಿ ಪೈಸಾ ನಿಖಾಲೊ ಅನ್ನುತ್ತಾ ಇರುವಾಗ ನಾನು ಹಿಂದೇ ಮುಂದೆ ನೋಡುವಾಗ ಮಚ್ಚಿನಿಂದ ನನ್ನ ಎಡಗೈ ಮುಂಗೈ ಹತ್ತಿರ ಹೊಡೆದು ಬಾರಿ ಗಾಯ ಪಡಿಸಿ ಅದರಿಂದಲೇ ತಿರುಗಿಸಿ ನನ್ನ ಎಡಗೈ ಬುಜಕ್ಕೆ ಹೊಡೆದು ಗಾಯ ಪಡಿಸಿದ ಆಗ ನನ್ನ ಗಲ್ಲದಲ್ಲಿದ್ದ ನಗದು ಹಣ 8000/- ರೂ ಒಂದು ಮೋಬೈಲ ಅಂದಾಜು ಕಿಮ್ಮತ್ತ 2000/- ರೂ ಗಳನ್ನು ಜಬರ ದಸ್ತಿಯಿಂದ ಕಸಿದುಕೊಂಡನು ಹಾಗೂ ವೈನ ಶಾಪದ ಹತ್ತಿರ ಬರುತ್ತಿರುವ ಚನ್ನಬಸಪ್ಪ ತಂದೆ ಚಂದ್ರಶೇಖರ ಕಾಡಾದಿ ಇವರಿಗೂ ಕೂಡಾ ಪಿಸ್ತೂಲ ತೋರಿಸಿ ಅವರಿಂದ ಒಂದುವರೆ ತೋಲೆ ಬಂಗಾರದ ಲಾಕೇಟ ಅಂದಾಜು ಕಿಮ್ಮತ್ತು 30,000/- ರೂ ನಗದು ಹಣ 1130/- ರೂ ಹಾಗೂ 1 ನೋಕಿಯಾ ಮೋಬೈಲ ಹೀಗೆ ಒಟ್ಟು 43,130-00 ರೂ. ಮೌಲ್ಯದನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾನೆ, ಹೋಗುವಾಗ ವೈನಶಾಪದಲ್ಲಿ ಕೆಲಸ ಮಾಡುವ ಚಂದ್ರಕಾಂತ ದಿಕ್ಕಸಂಗಿ, ಮೈಲಾರಿ ಕನಗೂರ ಇವರಿಗೂ ಕೂಡ ಹೆದರಿಸಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI
02 July 2011
GULBARGA DISTRICT REPORTED CRIME
Subscribe to:
Post Comments (Atom)
No comments:
Post a Comment