POLICE BHAVAN KALABURAGI

POLICE BHAVAN KALABURAGI

16 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸುನೀಲ ತಂದೆ ಬಸವರಾಜ ಮಡ್ನಳ್ಳಿ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ  ರವರು ದಿನಾಂಕ 14-09-2019 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ ನನ್ನ ಅಣ್ಣನ ಗೆಳೆಯನಾದ ಶ್ರೀಮಂತ ತಂದೆ ಪಾಂಡು ಪೂಜಾರಿ ಸಾ|| ಮಾತೋಳಿ ಈತನು ನಮ್ಮ ಮನೆಗೆ ಬಂದು ನಮ್ಮ ಊರಿನಲ್ಲಿ ಗಣಪತಿ ಮೇರವಣಿಗೆ ಇರುತ್ತದೆ ಹೋಗೋಣು ಭಾ ಅಂತಾ ನನ್ನ ಅಣ್ಣನಿಗೆ ಕರೆದುಕೊಂಡು ಹೋಗಿರುತ್ತಾನೆ. ನಂತರ ರಾತ್ರಿ 03:00 ಗಂಟೆ ಸುಮಾರಿಗೆ ನಮ್ಮ ಮನೆಯ ಮಾಲಿಕನಾದ ನಿಂಗಣ್ಣ ಪ್ರಧಾನಿ  ರವರು ನನಗೆ ಎಬ್ಬಿಸಿ ನಿಮ್ಮ ಅಣ್ಣನಿಗೆ ಮಲ್ಲಾಬಾದ ಗ್ರಾಮದ ಕಲಬುರಗಿ ರೋಡಿಗೆ ಇರುವ ಎಸ್.ಕೆ.ಜಿ ಡಾಬಾ ಹತ್ತಿರ ಎಕ್ಸಿಡೆಂಟ ಆಗಿದೆ ಅಂತ ನಿನ್ನ ಅಣ್ಣನ ಗೆಳೆಯನಾದ ಶ್ರೀಮಂತ ಪೂಜಾರಿ ಈತನು ಪೋನ ಮಾಡಿದ್ದಾನೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಿಂಗಣ್ಣ ಪ್ರಧಾನಿ ಹಾಗೂ ನಮ್ಮ ದೊಡ್ಡಪ್ಪನ ಮಗನಾದ ಕಾಶಿನಾಥ ಮಡ್ನಳ್ಳಿ, ಶಿವಾನಂದ ಸಲಗರ ರವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನು ಅಫಜಲಪೂರ - ಕಲಬುರಗಿ ರೋಡಿಗೆ ಇರುವ ಮಲ್ಲಾಬಾದ ಗ್ರಾಮದ ಎಸ್.ಕೆ.ಜಿ ಡಾಬಾದ ಮುಂದೆ ರೋಡಿನ ಮೇಲೆ ಅಫಘಾತ ಹೊಂದಿ ಮೃತ ಪಟ್ಟಿದ್ದನು. ನಂತರ ನಾನು ನನ್ನ ಅಣ್ಣನ ಜೋತೆಗೆ ಇದ್ದ ಶ್ರೀಮಂತ ಪೂಜಾರಿ ಈತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ, ನಾನು ಮತ್ತು ನಿಮ್ಮ ಅಣ್ಣ ಇಬ್ಬರು ನಮ್ಮೂರಿನಲ್ಲಿ ಗಣಪತಿ ಮೆರವಣಿಗೆ ಮುಗಿಸಿ ಊಟ ಮಾಡಬೆಕೆಂದು ನಡೆದುಕೊಂಡು ಎಸ್.ಕೆ.ಜಿ ಡಾಬಾಕ್ಕೆ ಹೋಗಿ ಕೆಳಲಾಗಿ ಡಾಬಾದಲ್ಲಿ ಊಟ ಇರುವುದಿಲ್ಲ ಎಂದು ತಿಳಿಸಿದ್ದರಿಂದ ಮರಳಿ ಮದ್ಯ ರಾತ್ರಿ 02:30 ಗಂಟೆ ಸುಮಾರಿಗೆ ವಾಪಸ ಬರುತ್ತಿದ್ದಾಗ ಅಫಜಲಪೂರದ ಕಡೆಯಿಂದ ಬರುತ್ತಿದ್ದ ಒಂದು ಕಾರ ನಿಮ್ಮ ಅಣ್ಣನಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯಾದ ತಕ್ಷಣ ಸದರಿ ಕಾರಿನ ಚಾಲಕ ಸ್ವಲ್ಪ ಮುಂದೆ ತಗೆದುಕೊಂಡು ಹೋಗಿ ನಿಲ್ಲಿಸಿದನು. ಆಗ ನಾನು ಮತ್ತು ಡಾಬಾದ ಮಾಲಿಕನಾದ ರಜಾಕ ತಂದೆ ನಬಿಲಾಲ ಮೋರಟಗಿ ಇಬ್ಬರು ಸದರಿ ಕಾರನ್ನು ನೋಡಿದ್ದು, ಸದರಿ ಕಾರಿನ ನಂ ಕೆಎ-32 ಎಮ್-6718 ಇದ್ದು, ಸದರಿ ಕಾರಿನ ಚಾಲಕ ನಾವು ಕಾರಿನ ಹತ್ತಿರ ಹೋಗುತ್ತಿದ್ದಂತೆ ಕಾರ ತಗೆದುಕೊಂಡು ಹೋದನು. ನಂತರ ನಿಮ್ಮ ಅಣ್ಣಎನಿಗೆ ನೋಡಲಾಗಿ ನಿಮ್ಮ ಅಣ್ಣನ ತಲೆಗೆ ಹಾಗೂ ಮೈ ಕೈಗೆ ಭಾರಿ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿದ್ದನು. ದಿನಾಂಕ 15-09-2019 ರಂದು ಮದ್ಯ ರಾತ್ರಿ 02:30 ಗಂಟೆ ಸುಮಾರಿಗೆ ನನ್ನ ಅಣ್ಣನಾದ ರಾಜಶೇಖರ @ ರಾಜು ಈತನು ಅಫಜಲಪೂರ ಕಲಬುರಗಿ ರೋಡಿಗೆ ಮಲ್ಲಾಬಾದ ಗ್ರಾಮದ ಹತ್ತಿರ ಇರುವ ಎಸ್.ಕೆ.ಜಿ ಡಾಬಾದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ ಕೆಎ-32 ಎಮ್-6718 ನೇದ್ದರ ಚಾಲಕ, ಕಾರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಣ್ಣನಿಗೆ ಡಿಕ್ಕಿ ಪಡಿಸಿ, ಕಾರನೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ 13/09/2019 ರಂದು ಸಾಯಂಕಾಲ ಶ್ರೀ ರಾಣಪ್ಪ ತಂದೆ ಮಾಪಣ್ಣ ಕಂಭಾ ರವರು  ಮನೆಯಲ್ಲಿರುವಾಗ ನನ್ನ ತಮ್ಮ ನಮ್ಮೂರಿನ ಕ್ರಾಸ್ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಹೊರಟು ಹೊದನು ನಂತರ ರಾತ್ರಿ 8 ಗಂಟೆ ಸುಮಾರಿಗೆ ನಮ್ಮೂರಿನ ಗೌತಮ ತಂದೆ ರಾಣಪ್ಪ ವಗ್ಗೆ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿನ್ನ ತಮ್ಮ ಕುಮಾರ ಈತನಿಗೆ ಲಾಡ ಚಿಂಚೋಳಿ ಕ್ರಾಸ್ ದಾಟ ಸಲ್ಪ ಮುಂದೆರಸ್ತೆ ಅಪಘಾತವಾಗಿ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಮೃತ ಪಟ್ಟಿರುತ್ತಾನೆ ನೀನು ಬೇಗ ಭಾ ಅಂತ ತಿಳಿಸಿದಾಗ ನಾನು ಹಾಗೂ ನಮ್ಮೂರಿನ ಪ್ರಭು ತಂದೆ ವಿಠಲ ಶಿಲ್ಡ ಮತ್ತು ಈರಣ್ಣ ತಂದೆ ಕಾಶಿರಾಯ ಎಲ್ಲರು ಕೂಡಿ ಸ್ವಲ್ಪ ಸಮಯದ ನಂತರ ಲಾಡ ಚಿಂಚೋಳಿ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ಕ್ರಾಸ್ ದಾಟಿ ಸುಮಾರು 30 ಫೀಟ್ ಅಅಂತರದಲ್ಲಿ ರೋಡಿನ ಮೇಲೆ ನನ್ನ ತಮ್ಮ ಕುಮಾರ ಈತನಿಗೆ ಎಡ ಹಣೆ ಹತ್ತಿರ ಭಾರಿ ರಕ್ತಗಾಯ ಎರಡು ಕೈಗಳಿಗೆ ಎದೆಗೆ ತರಚಿದ ರಕ್ತಗಾಯ ಬಲಗಾಲ ತೊಡೆ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಕಂಡು ಬಂದಿದ್ದು ಸ್ತಳದಲ್ಲಿಯೇ ಮೃತಪಟ್ಟಿರುತ್ತಾನೆ ಅಲ್ಲೇ ಸ್ಥಳದಲ್ಲಿದ್ದ ನಮ್ಮೂರಿನ ಗೌತಮ ಈತನಿಗೆ ವಿಚಾರಿಸಲಾಗಿ ಇಂದು ಆಳಂದದಲ್ಲಿ ಖಾಸಗಿ ಕೆಲಸವಿದ್ದ ಕಾರಣ ಮೋ/ಸೈಕಲ ಮೇಲೆ ಹೋಗಿ ಮರಳಿ ಮನೆಗೆ ಬರುವಾಗ ಚಿಂಚೋಳಿ ಕ್ರಾಸ್ ಹತ್ತಿರ ರಾತ್ರಿ ಬರುವಾಗ ಕಲಬುರಗಿ ಆಳಂದ ಮುಖ್ಯ ರಸ್ತೆಯಿಂದ ಕಲಬುರಗಿ ಕಡೆಯಿಂದ ಒಬ್ಬ ಟಾಟಾ ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರೋಡಿನ ಪಕ್ಕದಿಂದ ನಡೆದುಕೊಂಡು ಹೋರಟಿದ್ದ ನಿಮ್ಮ ತಮ್ಮ ಕುಮಾರನಿಗೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಆತನಿಗೆ ಹೋಗಿ ಬರುವ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿರುತ್ತೇನೆ ಆತನಿಗೆ ನಡಿದರೆ ಗುರುತಿಸುತ್ತೇನೆ, ಅಂತಾ ತಿಳಿಸಿದ್ದು ಟಾಟಾ ಗೂಡ್ಸ ವಾಹನದ ನಂಬರ ನೋಡಲಾಗಿ ಕೆ.22 5410 ಅಂತಾ ಇರುತ್ತದೆ, ಕಾರಣ ಮಾನ್ಯರವರು ಬಗ್ಗೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀ ಉಮೇಶ ತಂದೆ ಮಾಹಾದೇವಪ್ಪ ಹುಬ್ಬಳ್ಳಿ ಸಾ:ನಾಲವಾರ ರವರು ದಿನಾಂಕ 13/09/2019 ರಂದು ರಾತ್ರಿ ನಾನು ಮತ್ತು ನಮ್ಮ ಗ್ರಾಮದ ನಾಗರಾಜ ತಂದೆ ಬಸವರಾಜ ಕುಲಕುಂದಿ ರವರು ಕೂಡಿಕೊಂಡು ನನ್ನ ಮೊಟರ ಸೈಕಲ ನಂಬರ ಕೆಎ-32 ಇಕ್ಯೂ-2086 ನೇದ್ದರ ಮೇಲೆ ಕುಳಿತುಕೊಂಡು ನಾಲವಾರ ಸ್ಟೇಷನ ಆಚೆ ಇರುವ ಆನಂದ ಮಾಲಕರ ದಾಬಾಕ್ಕೆ ಹೋಗಿ ಊಟ ಮುಗಿಸಿಕೊಂಡು ಮರಳಿ 10-30 ಪಿ.ಎಮ್ ಸುಮಾರು ಮೊಟರ ಸೈಕಲ ಮೇಲೆ ನಮ್ಮೂರಿಗೆ ಬರುವ ಕಾಲಕ್ಕೆ ನಮ್ಮೂರಿನ ಕ್ರಾಸ ಹತ್ತಿರ ರೊಡಿಗೆ ರೊಡ ಕ್ರಾಸ ಮಾಡಬೇಕೆನ್ನುವಷ್ಟರಲ್ಲಿ ಕುಂಬಾರಹಳ್ಳಿ ಕಡೆಯಿಂದ ಒಂದು ವಾಹನ ಚಾಲಕ ವಾಹನವನ್ನು ಅತೀ ವೇಗ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಮೊಟರ ಸೈಕಲ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ನಾವು ಕೆಳಗಡೆ ಬಿಳುವಾಗ ದಾರಿಗೆ ಹೊರಟ ನಮ್ಮ ಗ್ರಾಮದ ಸಿದ್ದರಾಜ ತಂದೆ ಸಂಗಣ್ಣಾ ಲಾಡ್ಲಾಪೂರ ಇತನಿಗೆ ಬೈಕ ಬಡಿದು ಆತನು ಸಹ ಕೆಳಗಡೆ ಬಿದ್ದನು. ನಂತರ ನಾವು ನಿಧಾನವಾಗಿ ಎದ್ದು ಕುಳಿತುಕೊಂಡೆವು. ವಾಹನ ಚಾಲಕನು ಮುಂದೆ ಹೋಗಿ ನಿಲ್ಲಿಸಿದ್ದು ನೋಡಲಾಗಿ ಟಿಪ್ಪರ ಇದ್ದು ಅದರ ನಂಬರ ಕಾಣಿಸಲಿಲ್ಲ. ಟಿಪ್ಪರ ಹಿಂದುಗಡೆ SRC ಅಂತಾ ಬರೆದಿರುತ್ತದೆ. ಟಿಪ್ಪರ ಚಾಲಕನು  ಕೆಳಗೆ ಇಳಿದು ನಮಗೆ ನೋಡಿ ಮತ್ತೆ ತನ್ನ ವಾಹನ ತೆಗೆದುಕೊಂಡು ಯಾದಗೀರ ಕಡೆಗೆ ಹೊರಟು ಹೋದನು. ನನ್ನ ತಲೆಯ ಎಡಗಡೆ ಹಿಂದೆ, ಬಲಗಣ್ಣಿನ ಮೇಲೆ ಹಾಗೂ ಕೆಳಗಡೆ ಬಲಗಾಲ ಕೆಳಗೆ ರಕ್ತಗಾಯವಾಗಿ, ನಾಗರಾಜ ಇತನಿಗೆ ಮುಗಿನ ಮೇಲೆ ರಕ್ತಗಾಯವಾಗಿ, ತಲೆಗೆ ಭಾರಿ ಗುಪ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಿದ್ದರಾಜ ಇತನಿಗೆ ಮೈ ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದವು.ಆಗ ಘಟನೆ ನೋಡಿದ ಸಾಬಣ್ಣಾ ತಂದೆ ಶಿವರಾಯ ರವರು ಬಂದು ನೋಡಿ ನಮಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ವಾಡಿ ಸರ್ಕಾರಿ ಆಸ್ಪತ್ರೆಯ ವರೆಗೆ ತಂದು ಅಲ್ಲಿಂದ ಅಂಬುಲೇನ್ಸದಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ಟಿಪ್ಪರ ಹಾಗೂ ಚಾಲಕನಿಗೆ ನೋಡಿದ್ದು ಮತ್ತೆ ನೋಡಿದ್ದಲ್ಲಿ ಗುರ್ತಿಸುತ್ತೆನೆ.  ಟಿಪ್ಪರ ಚಾಲಕನ ಅಲಕ್ಷತನದಿಂದ ಈ ಘಟನೆ ಸಂಭವಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಗೋಪಿನಾಥ ತಂದೆ ಹಾಮು ರಾಠೋಡ ಉ : ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮುಖ್ಯ ಶೀಕ್ಷಕ ಸಾ: ಕಿಣಗಿ ತಾಂಡಾ ತಾ : ಕಮಲಾಪೂರ ಜಿ: ಕಲಬುರಗಿ ರವರು  ದಿನಾಂಕ:14/09/2019 ರಂದು 07.45 ಎ,ಎಮ್ ಕ್ಕೆ ನಾನು ಹಾಗು ನಮ್ಮ ಸಹ ಶೀಕ್ಷಕರು ಶಾಲೆಗೆ ಬಂದಾಗ ಶಾಲೆಯ ಕಂಪ್ಯೂಟರ ಕೋಣೆಯ ಗೇಟಿನ ಬಾಗಿಲು ಅರ್ಧ ತೆರೆದಿತ್ತು. ನಾವು ಕೋಣೆಯ ಹತ್ತೀರ ಹೋಗಿ ನೋಡಲಾಗಿ ಅದರ ಬಾಗಿಲಿಗೆ ಹಾಕಿದ 02 ಕೀಲಿಗಳನ್ನು ಕಲ್ಲಿನಿಂದ ಜಜ್ಜಿ ಮುರಿದಿದ್ದು ಇತ್ತು. ಒಳಗೆ ಹೋಗಿ ನೋಡಲಾಗಿ ಸರಕಾರಿದಿಂದ ವಿದ್ಯಾರ್ಥಿಗಳ ಕಂಪ್ಯೂಟರ ಕಲಿಕೆಗಾಗಿ ಮಂಜೂರು ಆದ 05 HP ಕಂಪನಿಯ ಕಂಪ್ಯೂಟರಗಳಲ್ಲಿ 03 ಮಾನಿಟರ್ ನಂಬರ 01) CNC-172P99-238900010438197001. 02) CNC-172P8IX38900010438197001 ಹಾಗೂ 03) CNC-712PQBG38900010438197001. ಅ.ಕಿ.9,000 ರೂಪಾಯಿ, ಹಾಗೂ 03 ಸಿ.ಪಿ.ಯು ಅ.ಕಿ. 12000 ರೂಪಾಯಿ ಮತ್ತು 05 ಕೀ-ಬೋರ್ಡಗಳು ಅ.ಕಿ. 1,500 ರೂಪಾಯಿ. ಒಟ್ಟು 22,500/- ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ:13/09/2019 ರಂದು 05.30 ಪಿ,ಎಮ್ ದಿಂದ ಇಂದು ದಿನಾಂಕ:14/09/2019 ರಂದು 07.45 ಎ,ಎಮ್ ಮಧ್ಯದ ಅವಧಿಯಲ್ಲಿ ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಕೋಣೆಯ ಗೇಟಿನ ಬಾಗಿಲು ಮುರಿದು HP ಪಂಪನಿಯ 03 ಮಾನಿಟರ್, 03 ಸಿ.ಪಿ.ಯು ಹಾಗೂ 05 ಕೀ-ಬೋರ್ಡ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಋಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 September 2019

KALABURAGI DISTRICT REPORTED CRIMES

ಮಟಕಾ ಜೂಝಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 13/09/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ  ಲಾಡಚಿಂಚೋಳಿ ಕ್ರಾಸನಲ್ಲಿರುವ ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋಣಾ ಠಾಣೆ ಹಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಾಡಚಿಂಚೋಳಿ ಕ್ರಾಸನಲ್ಲಿರುವ  ಬಸ್‌ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸ್‌ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬನು ಓಡಿಹೋಗಿದ್ದು ಉಳಿದ ಒಬ್ಬನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಈರಣ್ಣಾ ತಂದೆ ಗಿರಿಮಲ್ಲಪ್ಪಾ ಧುತ್ತರಗಾಂವ, ಸಾ:ಲಾಡಚಿಂಚೋಳಿ ಗ್ರಾಮ ಅಂತಾ ತಿಳಿಸಿದ್ದು, ಓಡಿಹೋದವನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ಮಲ್ಲಪ್ಪ ತಂದೆ ಬೀರಪ್ಪಾಝಳಕಿ, ಸಾ:ಕಡಗಂಚಿ ಅಂತಾ ತಿಳಿದು ಬಂದಿರುತ್ತದೆ.  ಸದರಿ ಈರಣ್ಣನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 820/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.