ಅಪಘಾತ
ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಸುನೀಲ ತಂದೆ ಬಸವರಾಜ ಮಡ್ನಳ್ಳಿ ಸಾ|| ಮಲ್ಲಿಕಾರ್ಜುನ ಚೌಕ ಅಫಜಲಪೂರ ರವರು ದಿನಾಂಕ 14-09-2019 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ
ನನ್ನ ಅಣ್ಣನ ಗೆಳೆಯನಾದ ಶ್ರೀಮಂತ ತಂದೆ ಪಾಂಡು ಪೂಜಾರಿ ಸಾ||
ಮಾತೋಳಿ ಈತನು ನಮ್ಮ ಮನೆಗೆ ಬಂದು ನಮ್ಮ ಊರಿನಲ್ಲಿ ಗಣಪತಿ ಮೇರವಣಿಗೆ ಇರುತ್ತದೆ ಹೋಗೋಣು ಭಾ
ಅಂತಾ ನನ್ನ ಅಣ್ಣನಿಗೆ ಕರೆದುಕೊಂಡು ಹೋಗಿರುತ್ತಾನೆ. ನಂತರ ರಾತ್ರಿ 03:00 ಗಂಟೆ ಸುಮಾರಿಗೆ ನಮ್ಮ ಮನೆಯ ಮಾಲಿಕನಾದ ನಿಂಗಣ್ಣ ಪ್ರಧಾನಿ
ರವರು ನನಗೆ ಎಬ್ಬಿಸಿ ನಿಮ್ಮ ಅಣ್ಣನಿಗೆ ಮಲ್ಲಾಬಾದ ಗ್ರಾಮದ ಕಲಬುರಗಿ ರೋಡಿಗೆ ಇರುವ ಎಸ್.ಕೆ.ಜಿ ಡಾಬಾ ಹತ್ತಿರ ಎಕ್ಸಿಡೆಂಟ ಆಗಿದೆ ಅಂತ ನಿನ್ನ ಅಣ್ಣನ ಗೆಳೆಯನಾದ ಶ್ರೀಮಂತ ಪೂಜಾರಿ ಈತನು ಪೋನ ಮಾಡಿದ್ದಾನೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಿಂಗಣ್ಣ ಪ್ರಧಾನಿ ಹಾಗೂ ನಮ್ಮ ದೊಡ್ಡಪ್ಪನ ಮಗನಾದ ಕಾಶಿನಾಥ ಮಡ್ನಳ್ಳಿ, ಶಿವಾನಂದ ಸಲಗರ ರವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನು ಅಫಜಲಪೂರ - ಕಲಬುರಗಿ ರೋಡಿಗೆ ಇರುವ ಮಲ್ಲಾಬಾದ ಗ್ರಾಮದ ಎಸ್.ಕೆ.ಜಿ ಡಾಬಾದ ಮುಂದೆ ರೋಡಿನ ಮೇಲೆ ಅಫಘಾತ ಹೊಂದಿ ಮೃತ ಪಟ್ಟಿದ್ದನು. ನಂತರ ನಾನು ನನ್ನ ಅಣ್ಣನ ಜೋತೆಗೆ ಇದ್ದ ಶ್ರೀಮಂತ ಪೂಜಾರಿ ಈತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ,
ನಾನು ಮತ್ತು ನಿಮ್ಮ ಅಣ್ಣ ಇಬ್ಬರು ನಮ್ಮೂರಿನಲ್ಲಿ ಗಣಪತಿ ಮೆರವಣಿಗೆ ಮುಗಿಸಿ ಊಟ ಮಾಡಬೆಕೆಂದು ನಡೆದುಕೊಂಡು ಎಸ್.ಕೆ.ಜಿ ಡಾಬಾಕ್ಕೆ ಹೋಗಿ ಕೆಳಲಾಗಿ ಡಾಬಾದಲ್ಲಿ ಊಟ ಇರುವುದಿಲ್ಲ ಎಂದು ತಿಳಿಸಿದ್ದರಿಂದ
ಮರಳಿ ಮದ್ಯ ರಾತ್ರಿ 02:30 ಗಂಟೆ ಸುಮಾರಿಗೆ ವಾಪಸ ಬರುತ್ತಿದ್ದಾಗ ಅಫಜಲಪೂರದ ಕಡೆಯಿಂದ ಬರುತ್ತಿದ್ದ ಒಂದು ಕಾರ ನಿಮ್ಮ ಅಣ್ಣನಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯಾದ ತಕ್ಷಣ ಸದರಿ ಕಾರಿನ ಚಾಲಕ ಸ್ವಲ್ಪ ಮುಂದೆ ತಗೆದುಕೊಂಡು ಹೋಗಿ ನಿಲ್ಲಿಸಿದನು. ಆಗ ನಾನು ಮತ್ತು ಡಾಬಾದ ಮಾಲಿಕನಾದ ರಜಾಕ ತಂದೆ ನಬಿಲಾಲ ಮೋರಟಗಿ ಇಬ್ಬರು ಸದರಿ ಕಾರನ್ನು ನೋಡಿದ್ದು, ಸದರಿ ಕಾರಿನ ನಂ ಕೆಎ-32 ಎಮ್-6718 ಇದ್ದು, ಸದರಿ ಕಾರಿನ ಚಾಲಕ ನಾವು ಕಾರಿನ ಹತ್ತಿರ ಹೋಗುತ್ತಿದ್ದಂತೆ
ಕಾರ
ತಗೆದುಕೊಂಡು ಹೋದನು. ನಂತರ ನಿಮ್ಮ ಅಣ್ಣಎನಿಗೆ ನೋಡಲಾಗಿ ನಿಮ್ಮ ಅಣ್ಣನ ತಲೆಗೆ ಹಾಗೂ ಮೈ ಕೈಗೆ ಭಾರಿ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿದ್ದನು.
ದಿನಾಂಕ 15-09-2019 ರಂದು ಮದ್ಯ ರಾತ್ರಿ 02:30 ಗಂಟೆ ಸುಮಾರಿಗೆ ನನ್ನ ಅಣ್ಣನಾದ ರಾಜಶೇಖರ @ ರಾಜು ಈತನು ಅಫಜಲಪೂರ –
ಕಲಬುರಗಿ ರೋಡಿಗೆ ಮಲ್ಲಾಬಾದ ಗ್ರಾಮದ ಹತ್ತಿರ ಇರುವ ಎಸ್.ಕೆ.ಜಿ ಡಾಬಾದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ ಕೆಎ-32 ಎಮ್-6718 ನೇದ್ದರ ಚಾಲಕ, ಕಾರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಣ್ಣನಿಗೆ ಡಿಕ್ಕಿ ಪಡಿಸಿ, ಕಾರನೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment