POLICE BHAVAN KALABURAGI

POLICE BHAVAN KALABURAGI

17 July 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-07-2018 ರಂದು ಮಲ್ಲಾಬಾದ ಗ್ರಾಮದ ಕನಕದಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಾಬಾದ ಗ್ರಾಮಕ್ಕೆ ಹೋಗಿ ಕನಕದಾಸ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಸರ್ಕಲ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಗಣಪತಿ ತಂದೆ ಬಸಣ್ಣ ಕಟ್ಟೋಳಿ ಸಾ|| ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3410/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ  ಠಾಣೆ : ದಿನಾಂಕ 16-07-2018 ರಂದು ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ  ಹೋಗಿ ಮರೆಯಾಗಿ ನಿಂತು ನೋಡಲು, ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುಭಾಷ ತಂದೆ ಸಿದ್ದಪ್ಪಾ ಕೊಣಿನ ಸಾಃ ಹೊನ್ನಕಿರಣಗಿ ಗ್ರಾಮ ತಾ.ಜಿಃ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2130/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ  ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚೋಳಿ ಗ್ರಾಮದ  ಸರಕಾರಿ ಪ್ರಾಥಮಿಕ ಶಾಲೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮದ  ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು   ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ ಎಲ್ಲಾ 04 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿಕಾರ್ಜುನ ತಂದೆ ಬಸಣ್ಣ ತಡಲಗಿ ಸಾ||ಚಿಂಚೋಳಿ  2) ಶಂಭೂಲಿಂಗ ತಂದೆ ತುಳಜಪ್ಪ ಜಗದಿ 3) ಚಿದಾನಂದ ತಂದೆ ಈರಣ್ಣ ಸುತಾರ 4) ಶ್ರೀಶೈಲ ತಂದೆ ಸಂಗಣ್ಣ ರೆಡ್ಡಿ ಸಾ|| ಎಲ್ಲರು ಚಿಂಚೋಳಿ ಗ್ರಾಮ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3600/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಆನೂರ ಗ್ರಾಮದ  ಚಂದ್ರಗಿರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಮಾರುತಿ ಎಎಸ್ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಆನೂರ  ಗ್ರಾಮದ  ಚಂದ್ರಗಿರಿ ದೇವಿ  ದೇವಸ್ಥಾನದ ಹತ್ತಿರ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಜಾಜಾಡುತಿದ್ದ ಎಲ್ಲಾ 08 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮನೋಹರ ತಂದೆ ಕಲ್ಲಪ್ಪ ಹಿಪ್ಪರಗಿ 2) ಪೀರಪ್ಪ ತಂದೆ ಸಿದ್ದಪ್ಪ ಭಾಸಗಿ ಸಾ|| ಇಬ್ಬರು ಆನೂರ ಗ್ರಾಮ 3) ಸಿದ್ದಪ್ಪ ತಂದೆ ಭೋಜರಾವ ಪಾಟೀಲ ಸಾ||ಬಿಲ್ವಾಡ(ಕೆ) 4) ರಾಣಪ್ಪ ತಂದೆ ಶಿವಲಿಂಗಪ್ಪ ಮಾಂಗ ಸಾ||ಆನೂರ 5) ಶಾಮರಾವ ತಂದೆ ಶರಣಪ್ಪ ಬಳೂಂಡಗಿ 6) ಗುಂಡುರಾವ  ತಂದೆ  ಶಂಕರ ಮಾಳಗೆ 7) ಸಿದ್ರಾಮಪ್ಪ ತಂದೆ ರೇವಣಸಿದ್ದಪ್ಪ ಪ್ಯಾಟಿ ಸಾ|| ಆನೂರ 8) ಸೈಫನಸಾಬ ತಂದೆ ಮೈಹಿಬೂಬಸಾಬ ಮಲಘಾಣ ಸಾ||ಬಿಲ್ವಾಡ(ಕೆ) ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 11, 52 ಇಸ್ಪೆಟ ಎಲೆಗಳನ್ನು ಮತ್ತು 11360/- ರೂ ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
 ಗ್ರಾಮೀಣ ಠಾಣೆ : ಶ್ರೀ ಗುರುಬಸಯ್ಯಾ ತಂದೆ ರುದ್ರಯ್ಯಾ ಮಠಪತಿ ಸಾ: ವಾಗಧರಿ ತಾ;ಆಳಂದ ಜಿ;ಕಲಬುರಗಿ ರವರ ಅಣ್ಣನ ಮಗನಾದ ಅಣವಿರಯ್ಯಾ ತಂದೆ ರೇವಣಯ್ಯಾ ಮಠಪತಿ ಇತನು ಸಂಗೀತಗಾರನಾಗಿದ್ದು ಅಲ್ಲದೆ ಕೂಲಿ (ಕ.ನಿ.ಸಹಾಯಕ) ಕೆಲಸ ಮಾಡಿಕೊಂಡಿದ್ದು ಅಕ್ಕ ಪಕ್ಕದ ಮನೆಯಲ್ಲಿ ಇರುತ್ತವೆ. ದಿನಾಂಕ.11-7-2018 ರಂದು ಮುಂಜಾನೆ. ನನ್ನ ಅಣ್ಣನಮಗ ಅಣವೀರಯ್ಯಾ ಮಠಪತಿ ಇತನು ತನ್ನ ಹೆಂಡತಿ ನಿರ್ಮಲಾ ಮಠಪತಿ ಇವಳಿಗೆ ಆಸ್ಪತ್ರೆಗೆ ತೋರಿಸುವ ಕುರಿತು ಮತ್ತು ತನ್ನ ಮಗಳು ಪೂಜಾ ಎಂಬುವವಳನ್ನು ಆಸ್ಪತ್ರೆಗೆ ತೋರಿಸುವ ಕುರಿತು ತನ್ನ ಮೋಟಾರ ಸೈಕಲ್ ಮೇಲೆ ಕಲಬುರಗಿಗೆ ಬಂದಿದ್ದರು , ರಾತ್ರಿ.8-00 ಗಂಟೆ ಸುಮಾರಿಗೆ ನಿರ್ಮಲಾ ಮಠಪತಿ ಹಾಗೂ ಪೂಜಾ  ಇವರಿಬ್ಬರು ಆಸ್ಪತ್ರೆಗೆ ತೋರಿಸಿಕೊಂಡು ಕಲಬುರಗಿಯಿಂದ ವಾಗ್ದರಿಗೆ ಕ್ರೋಸರದಲ್ಲಿ ಬಂದರು ಆಗ ಇವರಿಗೆ ವಿಚಾರಿಸಲು ಅಣವೀರಯ್ಯಾ ಇತನು  ಹಿಂದುಗಡೆ  ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತೇನೆ ಎಂದು ತಿಳಿಸಿರುತ್ತಾರೆ ಎಂದು ನನಗೆ ಹೇಳಿದರು. ರಾತ್ರಿ.11-00 ಗಂಟೆಯ ಸುಮಾರಿಗೆ ನನ್ನ ಮಗ ಸಂತೋಷ ಮಠಪತಿ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಅಣ್ಣನ ಮಗ ಅಣವೀರಯ್ಯಾ ಮಠಪತಿ ಇತನು ಹುಮನಾಬಾದ ರಿಂಗರೋಡ ಹತ್ತಿರ ರಾತ್ರಿ. 10-30 ಗಂಟೆಗೆ ತನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದು ತಲೆಗೆ ಕಾಲಿಗೆ ಭಾರಿ ಪೆಟ್ಟಾಗಿರುವದರಿಂದ ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಯತಲ್ಲಿ ಸೇರಿಕೆ ಮಾಡಿರುತ್ತೇವೆ ಬೇಗನೆ ಬರುವಂತಗೆ ತಿಳಿಸಿದನು ಆಗ ಗಾಬರಿಗೊಂಡು ನಾನು ಮತ್ತು ಅಣವೀರಯ್ಯಾನ ಹೆಂಡತಿ  ನಿರ್ಮಲಾ ಮಠಪತಿ , ಅವರ ಮಗ ಚನ್ನಯ್ಯಾ ಹಾಗೂ ನಮ್ಮ ಗ್ರಾಮದವರಾದ ಹಣಮಂತರಾಯ ಗುತ್ತಗೊಂಡ ಮತ್ತು ಬಸವರಾಜ ಪಾಟೀಲ್ ಎಲ್ಲರೂ ಕೂಡಿಕೊಂಡು ಒಂದು ಜೀಪನಲ್ಲಿ ಕಲಬುರಗಿಯ ಗಂಗಾ ಆಸ್ಪತ್ರೆಗೆ ಬಂದು  ನೋಡಲಾಗಿ ಅಣವೀರಯ್ಯಾ ಮಠಪತಿ ಇತನಿಗೆ ನೋಡಲಾಗಿ ತಲೆಗೆ ಭಾರಿ ಪೆಟ್ಟಾಗಿ ,ಮೂಗಿನಿಂದ ಬಾಯಿಯಿಂದ ಹಾಗೂ ಕಿವಿಯಿಂದ ರಕ್ತಸ್ರಾವ ಆಗಿದ್ದು ಮತ್ತು ಬಲಗಾಲು ಛಪ್ಪೆಗೆ ಮೊಳಕಾಲಿಗೆ ತರುದ ಗಾಯಗಳಾಗಿದ್ದು ಹಾಗೂ ಎಡಗೈ ಅಂಗೈಗೆ ತರಚಿದ ಗಾಯಗಳಾಗಿರುತ್ತವೆ. ಆತನು  ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ . ಆಗ ಅಲ್ಲಿ ಇದ್ದು ನನ್ನ ಮಗ ಸಂತೋಷ ಮಠಪತಿ ಇತನಿಗೆ ವಿಚಾರಿಸಲು ತಾನು ಕಮಲನಗರ ಕಾಲೂನಿಯಲ್ಲಿರುವಾಗ ಒಬ್ಬರು ಅಣವೀರಯ್ಯಾ ಮಠಪತಿ ಇತನ  ಮೋಬಾಯಿಲದಿಂದ ನನಗೆ ಫೋನ ಮಾಡಿ ತಿಳಸಿದ್ದೆನೆಂದರೆ ಹುಮನಾಬಾದ ರಿಂಗರೋಡ ಹತ್ತಿರ  ಅಣವೀರಯ್ಯಾ ಮಠಪತಿ ಇತನು ತನ್ನ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದರುತ್ತಾನೆ ಬೇಗನೆ ಬರುವಂತೆ ತಿಳಿಸಿದ ಮೇರೆಗೆ ಕೂಡಲೆ ನಾನು ಸ್ಥಳಕ್ಕೆ ಹೋಗಿ ನೋಡಲು ನಮ್ಮ ಅಣ್ಣ ಅಣವೀರಯ್ಯಾ  ಮಠಪತಿ ಇತನು ಸೈಡಿಗೆ ಕೂಡಿಸಿದ್ದು ಬೇಹೋಸ ಸ್ಥಿತಿಯಲ್ಲಿ ಇದ್ದನು ಆತನು ನಡೆಯಿಸುತಿದ್ದ ಮೋಟಾರಸೈಕಲ್ ಸೈಡಿಗೆ ಬಿದ್ದು ನೋಡಲಾಗಿ ಕೆ.ಎ.56 ಹೆಚ. 5447 ನೆದ್ದು ಇತ್ತು ನಂತರ ನಾನು ಇನ್ನೊಬ್ಬರು ಕೂಡಿಕೊಂಡು ಒಂದು ಅಂಬುಲೆನ್ಸನಲ್ಲಿ ಅಣವೀರಯ್ಯಾ ಮಠಪತಿ ಹಾಕಿಕೊಂಡು ಉಪಚಾರ ಕುರಿತು ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಎಂದು ತಿಳಿಸಿರುತ್ತಾನೆ. ನಂತರ ಅಣವೀರಯ್ಯಾನಿಗೆ ಹೆಚ್ಚಿನ ಉಪಚಾರ  ಕುರಿತು  ದಿನಾಂಕ. 12-7-2018 ರಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿ ಗುಣ ಮುಖನಾಗದೆ ಇಂದು ದಿನಾಂಕ. 14-7-2018 ರಂದು ಬೆಳೆಗ್ಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಮೇಶ ತಂದೆ ಈರಣ್ಣ ಹುಣಸಗಿ ಸಾ: ಕೂಡಿಗನೂರ ರವರು ದಿನಾಂಕ  14-07-2018 ರಂದು ಸಾಯಂಕಾಲ ತಮ್ಮ ಹೊಲದಲ್ಲಿ ಕಬ್ಬಿಗೆ ನೀರು ಬಿಡುತ್ತಿದ್ದಾಗ ಸಂತೋಷ ತಂದೆ ಮಲ್ಲಪ್ಪ ಬಿರಾದಾರ, ಮಾಹಾದೇವಪ್ಪ ತಂದೆ ಸಿದ್ದಣ್ಣ ಬಿರಾದಾರ, ಅಂದಣ್ಣ ತಂದೆ ಗಡ್ಡೇಪ್ಪ ಬಿರಾದಾರ ಇವರೆಲ್ಲರೂ ಕೂಡಿ ಡಸ್ಟರ ಗಾಡಿಯಲ್ಲಿ ಬಂದು ಇಳಿದು ಗ್ರಾಮದ ಒಂದು ರೋಡ ಸಿ.ಸಿ ನಡೆದಿದ್ದು  ಆ ರೋಡಿನ ಮೇಲೆ ಕರಿ ಮಣ್ಣು ಹಾಕಿದ್ದು  ನಡೆಯಲಿಕ್ಕೆ ಓಡಾಡುವದಕ್ಕೆ ಬರುವುದಿಲ್ಲ ವೆಂದು ನಾನು ಜೈ ಉಮೇಶ ಎಂಬುವವನಿಗೆ ನಾನು ಫೋನ್ ಮಾಡಿ ಕೇಳಿದಕ್ಕೆ ಈ ಮೇಲಿನ ಮೂರು ಜನರು ಕೂಡಿ ಆ ರೋಡಿಗೆ ನಿನಗೆ ಏನು ಸಂಬಂಧ ಬಾಹಾಳ ಸೊಕ್ಕು ಬಂದಿದೆ ಭೋಸಡಿ ಮಗನೇ ಅಂತಾ ಹೊಟ್ಟೆಗೆ ಕಾಲಿಗೆ, ಕಾಲಿಗೆ, ಬೆನ್ನಿಗೆ, ರಾಡಿನಿಂದ  ಹೊಡೆದಿರುತ್ತಾರೆ ಮುಂದೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಹೊಡೆಯುತ್ತೇನೆ ಎಂದು ಅಂಜಿಕೆ ಹಾಕಿರುತ್ತಾರೆ ಆ ಮೇಲೆ ಫೂನ್ ಮಾಡಿ ನನ್ನ ತಂದೆಗೆ ಫೋನ್ ಮಾಡಿ ತಿಳಿಸಿರುತ್ತೇನೆ. ಈರಣ್ಣ ತಂದೆ ನಾಗಪ್ಪ ಹುಣಸಗಿ, ಕಾಕನವರಾದ ಶರಣಬಸಪ್ಪ ತಂದೆ ನಾಗಪ್ಪ ಹುಣಸಗಿ ಇವರಿಗೆ ತಿಳಿಸಿರುತ್ತೇನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 July 2018

KALABURAGI DISTRICT REPORTeD CRIMES

ಅಪಘಾತ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಜಾನಿ ತಂದೆ ಮೊದ್ದಿನಸಾಬ ಬಾರುದವಾಲೆ ಸಾ:ಸೋನಿಯಾ ಗಾಂಧಿ ಕಾಲೋನಿ ಮಾಲಗತ್ತಿ ಕ್ರಾಸ ಕಲಬುರಗಿ ರವರ ತಮ್ಮನಾದ ಮುನಿರೋದ್ದಿನ ತಂದೆ ಮೊದ್ದಿನಸಾಬ ಟಾಂಗಾವಾಲೆ ಇತನು ಕಲಬುರಗಿ ನಗರದ ಎಸ್‌‌.ಟಿ.ಬಿ.ಟಿ ಕ್ರಾಸ ಹತ್ತಿರ ವಾಸವಿರುವ ರವಿಚಂದ್ರ ತಂದೆ ಲಕ್ಷ್ಮಣರಾವ ಕಟಕೆ ಇವರ ಬಗ್ಗಿ (ರಥ) ದ ಮೇಲೆ ಕ್ಲೀನರ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತಾನೆ.  ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಎಂ.ಎಸ್‌.ಕೆ.ಮೀಲ್‌ ಮಹ್ಮದಿ ಮಜೀದ ದಲ್ಲಿರುವ ಹಜರತ್‌ ಶಹಾ ಜಿಲಾನಿ ದರ್ಗಾ ಕಾರ್ಯಕ್ರಮದ ಉರಸ ದಿನಾಂಕ:11/07/2018 ರಂದು ಸಂದಲ ಕಾರ್ಯಕ್ರಮ ಹಾಗೂ ದಿನಾಂಕ:12/07/2018 ರಂದು ಚಿರಾಗ (ದೀಪ) ಕಾರ್ಯಕ್ರಮ ಇದ್ದು ಉರಸ ಕಾರ್ಯಕ್ರಮ ಅಂಗವಾಗಿ ಮಹ್ಮದಿ ಮಜೀದನಿಂದ ಶಹಾಜಿಲಾನಿ ದರ್ಗಾಕ್ಕೆ ಗಿಲಾಫ ತೆಗೆದುಕೊಂಡು ಹೋಗುವ ಕಾರ್ಯಕ್ರಮ ಇದ್ದು ಗಿಲಾಫ ತೆಗೆದುಕೊಂಡು ಹೋಗಲು ರವಿಚಂದ್ರ ಕಟಕಿ ಇತನ ರಥ ತರೆಸಿಕೊಂಡಿದ್ದು ಅದರ ಮೇಲೆ ನನ್ನ ತಮ್ಮ ಮುನಿರೋದ್ದಿನ ಕ್ಲೀನರ್‌ ಕೆಲಸ ಮಾಡಿಕೊಂಡು ರಥದೊಂದಿಗೆ ಬಂದಿದ್ದು ಇರುತ್ತದೆ. ದಿನಾಂಕ:12/07/2018 ರಂದು ರಾತ್ರಿ 10.00 ಗಂಟೆಗೆ ಗಿಲಾಫನ್ನು ರವಿಚಂದ್ರ ತಂದ ರಥದಲ್ಲಿ ಇಟ್ಟು ಮೆರವಣಿಗೆ ಪ್ರಾರಂಭಿಸಿದ್ದು ನನ್ನ ತಮ್ಮ ಹಾಗೂ ಇತರರು ರಥದ ಮೇಲೆ ಗಿಲಾಫ ಹಿಡಿದುಕೊಂಡು ನಿಂತಿದ್ದು ಮೇರವಣಿಗೆ ಮಹ್ಮದಿ ಮಜೀದ 2ನೇ ಕ್ರಾಸ ಹತ್ತಿರ ಹೋರಟಾಗ ರಾತ್ರಿ 10.30 ಗಂಟೆ ಸುಮಾರಿಗೆ ಫರಿದಮೀಯ್ಯಾ ಇವರ ಮನೆಯ ಮುಂದೆ ಮಗ್ಗಲಿಗೆ ಬರುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ವಿದ್ಯುತ ಕಂಬದ ಮೇಲೆ ಟಿ.ಸಿ (ವಿದ್ಯುತ ವಿತರಕ) ಅಳವಡಿಸಿದ್ದು ಈ ಟಿ.ಸಿ ರಸ್ತೆಯ ಅಂದರೆ ರಸ್ತೆಯ ಉತ್ತರ ಅಂಚಿನಿಂದ 8 ರಿಂದ 10 ಅಡಿ ರೋಡಿಗೆ ಇರುತ್ತದೆ. ಗಿಲಾಫ ಮೆರವಣಿಗೆ ಬಗ್ಗಿ ಆ ಟಿ.ಸಿ ಹತ್ತಿರ ಬಂದಾಗ ರಭಸದಿಂದ ಬೀಸಿದ ಗಾಳಿಗೆ ಗಿಲಾಫನ ಒಂದು ಅಂಚು (ಭಾಗ) ಟಿ.ಸಿ ಡಿವೆಲಗೆ ತಗುಲಿದ್ದು ಅದೇ ವೇಳೆಗೆ ಮಳೆ ಸಹಬರುತ್ತಿದ್ದು ಗಿಲಾಫ ಮತ್ತು ಬಗ್ಗಿಯಲ್ಲಿ ಕರೆಂಟ ಪ್ರಸಾರಗೊಂಡು ನನ್ನ ತಮ್ಮನಾದ ಮುನಿರೋದ್ದಿನ ಇತನಿಗೆ ಕರೆಂಟಶಾಕ ಹತ್ತಿ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲಾನಾಬಾದ ನಿವಾಸಿಗಳಾದ 1) ಜಿಲಾನ 2)ಮೈನೊದ್ದಿನ 3)ಅಮೀರ ಅಲಿ ಹಾಗೂ ಇತರರಿಗೆ ಕರೆಂಟಶಾಕ ಹತ್ತಿ ಗಾಯಗಳಾಗಿದ್ದು ಇರುತ್ತದೆ. ಸದರಿ ಘಟನೆಯನ್ನು ನೋಡಿ ನನ್ನ ತಮ್ಮನ ಮಗ ಮಹ್ಮದ, ಹಾಷಂ ಮತ್ತು ಅವನ ಅಳಿಯ ಶೇಖ ವಸೀಂ ಕೂಡಿಕೊಂಡು ಆಟೋದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ವೈದ್ಯಾಧಿಕಾರಿಗಳು ನನ್ನ ತಮ್ಮ ಮೃತ ಪಟ್ಟಿದ್ದು ದೃಢಪಡಿಸಿದ್ದು ಇರುತ್ತದೆ. ಮಹ್ಮದಿ ಕ್ರಾಸನಲ್ಲಿರುವ ಫರಿದಮೀಯ್ಯಾ ಇವರ ಮನೆಯ ಮೂಲಿಗೆ ರಸ್ತೆಯ ತಿರುವಿನಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳು ಅತಾಂತ್ರಿಕವಾಗಿ ವಿದ್ಯುತ ಕಂಬ ಹಾಕಿ ಅದಕ್ಕೆ ಟಿ.ಸಿ ಅಳವಡಿಸಿದ್ದು ಟಿ.ಸಿ ಅಳವಡಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಮತ್ತು ಅಪಾಯಕಾರಿಯಾದ ರೀತಿಯಲ್ಲಿ ಟಿ.ಸಿ ಅಳವಡಿಸಿದ್ದರಿಂದ ಅಪಘಾತವಾಗುವ ಸಾಧ್ಯತೆ ಇದ್ದು ಸದರಿ ಟಿ.ಸಿ ತೆರವು ಮಾಡಲು ಸ್ಥಳಿಯರು ಹಲವಾರು ಭಾರಿ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು ಕೂಡಾ ಜೆಸ್ಕಾಂ ಅಧಿಕಾರಿಗಳು ನಿಷ್ಕಾಳಜಿ ತೊರಿಸಿದ್ದು ಇರುತ್ತದೆ. ನಿನ್ನೆ ದಿನಾಂಕ:12/07/2018 ರಂದು ಗಿಲಾಫ ಮೇರವಣಿಗೆ ಕಾಲಕ್ಕೆ ಗಿಲಾಫನ ಒಂದು ಅಂಚು ಟಿ.ಸಿ ಡ್ಯೂವೆಲಕ್ಕೆ ತಗುಲಿ ನನ್ನ ತಮ್ಮ ವಿದ್ಯುತ ಪ್ರಸಾರವಾಗಿ ಮೃತ ಪಟ್ಟಿದ್ದು ಇರುತ್ತದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು ಮಠಪತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವೀರಭದ್ರಪ್ಪ ಮತ್ತು ಶಾಖಾಧಿಕಾರಿ ರಾಘವೇಂದ್ರ ಇವರುಗಳ ಬೇಜವಾಬ್ದಾರಿತನದಿಂದ ಮತ್ತು ನಿಷ್ಕಾಳಜಿತನದಿಂದ ಟಿ.ಸಿ ತೆಗೆಯದೆ ಇರುವದರಿಂದ ಸದರಿ ಘಟನೆ ಜರುಗಿದ್ದು ಸದರಿ ಘಟನೆಗೆ ಕಾರಣಿ ಕರ್ತರಾದ ಜೇಸ್ಕಾಂ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 13.07.2018 ರಂದು ಬೇಳಿಗ್ಗೆ ನನ್ನ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇಬ್ಬರೂ ನಮ್ಮ ಕುರಿಗಳು ಮೇಯಿಸಲು ಹೊಲಕ್ಕೆ ಹೊಡೆದುಕೊಂಡು ಹೋಗಿದ್ದರು. ಮದ್ಯಾಹ್ನ 2.35 ಗಂಟೆಯ ಸುಮಾರಿಗೆ  ನಮ್ಮೂರ ಬಸವರಾಜ ಸಗರ ಇವನು ನಮಗೆ ಪೊನ ಮಾಡಿ ಮೈಹಿಬೂಬ ಪಟೇಲ ಇವರ ಹೊಲದ ತಂತಿ ಬೇಲಿಗೆ ಕರೇಂಟ್ ಹತ್ತಿರ ನಿಮ್ಮ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇವರಿಗಲ್ಲದೆ ಮೂರು ಕುರಿಗಳಿಗೆ  ಕರೇಂಟ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಹೇಳಿದನು. ಆಗ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇತರರು ಕೂಡಿ ಮಹಿಬೂಬ ಇವರ ಹೊಲಕ್ಕೆ  ಹೊಗಿ  ನೋಡಿರುತ್ತೇವೆ. ನನ್ನ ಮಕ್ಕಳಾದ ದೇವಪ್ಪ ಮತ್ತು  ರಾಜಕುಮಾರ ಇವರು ತಂತಿ ಬೇಲಿ ಮೇಲೆ ಬಿದ್ದು  ಮೃತಪಟ್ಟಿದ್ದರು. ದೇವಪ್ಪನ ಕುತ್ತಿಗೆಗೆ, ರಾಜಕುಮಾರನ ಹೊಟ್ಟೆಗೆ ಕರೇಂಟ್ ಹತ್ತಿ ಗಾಯಗಳಾಗಿದ್ದವು. ನಮ್ಮ ಮೂರು ಕುರಿಗಳು ( ಹೊತುಗಳು) ಬೇಲಿಯಲ್ಲಿ ಬಿದ್ದು ಕರೇಂಟ್ ಹತ್ತಿ ಸತ್ತಿದ್ದವು. ಮೂರು ಕುರಿಗಳ ಬೆಲೆ 30,000/- ಆಗುತ್ತದೆ. ಬಸವರಾಜನಿಗೆ  ಕೇಳಲು ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನೀಮ್ಮ ಹುಡುಗರು ಕುರಿ ಮೇಯಿಸುವಾಗ ಮೂರು ಕುರಿಗಳು ತಂತಿ ಬೇಲಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾಗ ಹುಡುಗರು ಅವುಗಳನ್ನು ತೆಗೆಯಲು ತಂತಿ ಬೇಲಿ ಹತ್ತಿರ ಹೋಗಿದ್ದರಿಂಧ ಅವರಿಗೂ ಕೂಡಾ  ತಂತಿ ಬೇಲಿನ ಕರೇಂಟ್ ಹೊಡೆದು ಮೃತಪಟ್ಟಿರುತ್ತಾರೆಂದು ಹೇಳಿರುತ್ತಾರೆ. ನಮ್ಮೂರ ಶೇಷಪ್ಪ ಬಡಿಗೇರ ಇತನು ತನ್ನ ಹೊಲದಲ್ಲಿನ ಬೊರವೇಲ್ಲಿಗೆ ನಮ್ಮೂರ ಮೈಹಿಬೂಬ ಪಟೇಲ ಹಂಗರಗಿ ಇವರ ಹೊಲದಲ್ಲಿನ ಕಂಬದಿಂದ ಅನಧೀಕೃತವಾಗಿ ಸರ್ವಿಸ್ ವಾಯರ್ ದಿಂದ ಕರೇಂಟ್ ತೆಗೆದುಕೊಂಡಿದ್ದು ಆ ವಾಯರ್ ಕಟ್ಟಾಗಿ ಮೈಹಿಬೂಬ ಪಟೇಲ ಇವರ  ಹೊಲದ ತಂತಿ ಬೇಲಿನ ಮೇಲೆ ಬಿದ್ದಿರುವುದರಿಂದ ತಂತಿಯ ಬೇಲಿಗೆ ಎಲ್ಲಾ ವಿದ್ಯೂತ ಹರಿದು ಅದನ್ನು ನೋಡದೆ ಶೇಷಪ್ಪ ನಿರ್ಲಕ್ಷ ಮಾಡಿದ್ದು ಅಲ್ಲದೆ ಈ ಏರಿಯಾಕ್ಕೆ ಸಂಭಂಧಪಟ್ಟ ಜೇಸ್ಕಂ ಆದಿಕಾರಿಗಳು ಶೇಷಪ್ಪನು ಅನಧೀಕೃತವಾಗಿ ತನ್ನ ಹೊಲಕ್ಕೆ ಕರೇಂಟ್ ತೆಗೆದುಕೊಂಡಿರುವುದನ್ನು  ನೋಡಿ ವಿದ್ಯೂತ ಸಂಪರ್ಕ ಕಡಿತಗೊಳಿಸದೆ ನಿರ್ಲಕ್ಷತನದ ತೊರಿಸಿದರಿಂಧ  ಘಟನೆ ಸಂಭವಿಸಿರುತ್ತದೆ. ಕಾರಣ ನನ್ನ ಮಕ್ಕಳ ಹಾಗೂ ನಮ್ಮ ಮೂರು ಕುರಿಗಳ ಸಾವಿಗೆ ಕಾರಣರಾದ ನಮ್ಮೂರ ಶೇಷಪ್ಪ  ಬಡಿಗೇರ & ಜೇಸ್ಕಂ  ಇಲಾಖೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳಬೇಕು ಅಂತಾ ಶ್ರೀ ಸೊಮಲಿಂಗಪ್ಪ ತಂದೆ ಈರಪ್ಪ ಹಂಗರಗಿ  ಸಾಃ ಇಜೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ಪರತಾಬಾದ ಠಾಣೆ : ಶ್ರೀಮತಿ ಮಾಯಶ್ರೀ ಗಂಡ ರಮೇಶ ಗುಡೂರ ಸಾಃ ಫರಹತಾಬಾದ ಗ್ರಾಮ ರವರ  ಗಂಡನಾದ ರಮೇಶ ತಂದೆ ರೇವಣಸಿದ್ದ ಗುಡೂರ ಈತನು ಈಗ ಸುಮಾರು ಒಂದು ವರ್ಷದ ಹಿಂದೆ ಮನೆಯಲ್ಲಿದ್ದ ಹಣ ತೆಗೆದುಕೊಂಡು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊಗಿರುತ್ತಾನೆ ಎಲ್ಲಾ ಕಡೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 July 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-07-2018 ರಂದು  ಸೋನ್ನ ಗ್ರಾಮದ ಅಂಭಿಗರ ಚೌಡಯ್ಯ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೋನ್ನ ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೀಗರ ಚೌಡಯ್ಯ ಕರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡಪ್ಪ ಕುದರಿ ಸಾ|| ಸೋನ್ನ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1300/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಕೈಲಾಸ್ ತಂದೆ ರಾಮಪ್ರಕಾಶ  ಸಾಃ ಇಂದಲಾಪೂರ ಪೊಷ್ಟಃ ಬಾವಟಮಾಂವೋ ಥಾನಾಃ ಮಾದವಗಂಜ್ ಜಿಲ್ಲಾ ಹರದೋಯಿ ರಾಜ್ಯ; ಉತ್ತರಪ್ರದೇಶ ರವರು ತಮ್ಮೂರಿನಿಂದ ನಾನು ಮತ್ತು ನಮ್ಮೂರ ಇತರರು ಕೂಡಿಕೊಂಡು ನಮ್ಮೂರ ಮಾನಸಿಂಗ್ ಯಾದವ ಇವರ ಸಂಗಡ ಒಂದು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಗೆ ಬಂದು ಕಲಬುರಗಿ ನಂದಿಕೂರ ಗ್ರಾಮದ ಹತ್ತಿರ ವಾಸವಾಗಿದ್ದೆವು. ಮಾನಸಿಂಗ್ ಯಾದವ ಇತನು ಭಾರತ್ ಸ್ವಚ್ಚ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಹಿಡಿದು ರೆಡಿಮೇಡ್ ಸಂಡಾಸ ರೂಮಗಳು ಕಟ್ಟುವುದಕ್ಕೆ ನಾವು ಗೂಡ್ಸ ವಾಹನದಲ್ಲಿ ಹೋಗಿ ಕೆಲಸ ಮಾಡಿಕೊಂಡು ಮರಳಿ ಕಲಬುರಗಿ ನಂದಿಕೂರ ಪಾಟೀ ಹತ್ತಿರ ಬಂದು ವಸತಿ ಮಾಡುತ್ತಿದ್ದು ದಿನಾಂಕ 09.07.2018 ರಂದು ಮುಂಜಾನೆ ನಾನು ಮತ್ತು ನಮ್ಮ ಜೊತೆ ಕೆಲಸ ಮಾಡುವ 1) ಕೌಶಲ್ ತಂದೆ ಭದ್ರೀ  2) ಉಸ್ಮಾನ ತಂದೆ ಮುನೀಮ್ 3) ರಾಜಕೀಶೋರ ತಂದೆ ಶ್ಯಾಮಲಾಲ 4) ರಾಜೇಶ ತಂದೆ ಶ್ಯಾಮಲಾಲ 5) ಮೊಹನಲಾಲ ತಂದೆ  ಗಾಸಿರಾಮ್ ಪಾಲ್ 6) ಅವುದೇಶ ತಂದೆ ಮನ್ಸಾ ಮತ್ತು 7) ರಾಮಸಚ್ಚಿ ಮಂಗಲಿ ರಾಠೋಡ್  ಇವರೆಲ್ಲರೂ ಕೂಡಿಕೊಂಡು 407 ಗೂಡ್ಸ ವಾಹನ ನಂ; ಕೆಎ-32-ಬಿ-9230 ನೇದ್ದರಲ್ಲಿ ಕೆಲಸ ಮಾಡುವ ಸಾಮಾನುಗಳು ಹಾಕಿಕೊಂಡು ಅದರಲ್ಲಿಯೇ ಕುಳಿತುಕೊಂಡು ಸೂರಪೂರ ತಾಲೂಕಿನ ಯಾಳಗಿ ಗ್ರಾಮಕ್ಕೆ ಸಂಡಾಸ ರೂಮ ಕಟ್ಟಲು ಹೋಗಿದ್ದೆವು. ಅಲ್ಲಿ ಕೆಲಸ ಮಾಡಿಕೊಂಡು ಮತ್ತೆ ಕೆಂಬಾವಿ ಗ್ರಾಮಕ್ಕೆ ಹೋಗಿ ಅಲ್ಲಿ ಸಂಡಾಸ ರೂಮಗಳು ಕಟ್ಟಿ ಕೆಲಸ ಮಾಡಿ, ನಂತರ ನಾವೆಲ್ಲರೂ ಕೂಡಿ ಅದೇ ಗೂಡ್ಸ ವಾಹನದಲ್ಲಿ ಕುಳಿತುಕೊಂಡು ಕೆಂಬಾವಿಯಿಂದ ಮರಳಿ ಕಲಬುರಗಿಗೆ ಹೋಗುತ್ತಿದ್ದೇವು. ಗೂಡ್ಸ ವಾಹನವನ್ನು ವಿಜಯಕುಮಾರ ತಂದೆ ಸೈಬಣ್ಣ ರಾಂಪೂರ ಈತನು ನಡೆಯಿಸುತ್ತಿದ್ದನು. ರಾತ್ರಿ 8-30 ಗಂಟೆಯ ಸುಮಾರಿಗೆ ಜೇವರಗಿ-ಕಲಬುರಗಿ ರೋಡ ಕೃಷಿ ಕೆಂದ್ರದ ಹತ್ತಿರ ರೋಡಿನಲ್ಲಿ ನಮ್ಮ ಗೂಡ್ಸ್ ವಾಹನ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೆ ಕಟ್ ಹೊಡೆದ ಪರಿಣಾಮವಾಗಿ ಗೂಡ್ಸ ವಾಹನ ರೋಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಇದರಿಂದ ವಾಹನದಲ್ಲಿ ಇದ್ದ ಕೌಶಲ್ ತಂದೆ ಭದ್ರೀ ಈತನ ತಲೆಗೆ, ಕಾಲಿಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಉಸ್ಮಾನ ತಂದೆ ಮುನೀಮ್ ಈತನ ತಲೆಗೆ, ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ರಾಜಕೀಶೋರ ತಂದೆ ಶ್ಯಾಮಲಾಲ ಈತನಿಗೆ ಎಡ ಕಿವಿ ಕಟ್ಟಾಗಿ ರಕ್ತಗಾಯವಾಗಿದ್ದು ಬೆನ್ನಿಗೆ ಗುಪ್ತ ಗಾಯವಾಗಿರುತ್ತದೆ. ರಾಜೇಶ ತಂದೆ ಶ್ಯಾಮಲಾಲ, ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಎಡ ಭುಜಕ್ಕೆ ಭಾರಿ ಗುಪ್ತ ಗಾಯ ಮತ್ತು ರಕ್ತ ಗಾಯವಾಗಿರುತ್ತದೆ. ಮೊಹನಲಾಲ ತಂದೆ ಗಾಸಿರಾಮ್ ಪಾಲ್ ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಬೆನ್ನಿಗೆ ರಕ್ತಗಾಯ ಮತ್ತು ಗುಪ್ತ ಗಾಯವಾಗಿರುತ್ತದೆ. ಅವುದೇಶ ತಂದೆ ಮನ್ಸಾರಾಮ ಇವನಿಗು ಕೂಡ ಎಡ ಕಾಲಿನ ಹಿಮ್ಮಡಿ ಹತ್ತಿರ ರಕ್ತ ಗಾಯವಾಗಿರುತ್ತದೆ.ರಾಮಸಚ್ಚಿ ಇತನಿಗೆ ಸೊಂಟಕ್ಕೆ ಎಡ ಬುಜಕ್ಕೆ ಬೇರಳಿಗೆ ಮತ್ತು ಎಡಕಿವಿಗೆ ರಕ್ತ ಗಾಯವಾಗಿರುತ್ತದೆ.ನಂತರ ಯಾರೋ 108 ಅಂಬುಲೆನ್ಸ್ ಕ್ಕೆ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ವಾಹನದಲ್ಲಿ ಗಾಯವಾದರಿಗೆ ಮತ್ತು ಮೃತ ಕೌಶಲ್ ಈತನಿಗೆ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ. ನಂತರ ಹೆಚ್ಚಿಗೆ ಗಾಯವಾದ ಕೆಲವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆ. ನನಗೆ ಯಾವುದೇ ಗಾಯವಾಗಿರುವುದಿಲ್ಲಾ. ಚಾಲಕ ವಿಜಯಕುಮಾರ ಈತನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 1-1-2018 ರಿಂದ 9-1-2018 ರವರೆಗೆ ನಮ್ಮ ಮಾವನಾದ ಶಿವಾ ತಂದೆ ತುಕರಾಮ ರಾಠೋಡ ಇತನು ತನಗೆ ಆರೋಗ್ಯ ಸರಿಯಾಗಿಲ್ಲಾ ಅಂತಾ ಆಸ್ಪತ್ರೆಗೆ ತೋರಿಸಿಕೊಳ್ಳುವ ಕುರಿತು ನಮ್ಮ ಊರಿಗೆ ಬಂದಿದ್ದು ನಮ್ಮ ಮನೆಯಲ್ಲಿದ್ದನ್ನು ಆ ಸಮಯದಲ್ಲಿ ಶಿವಾ ರಾಠೋಡ ಇತನು ನನ್ನೊಂದಿಗೆ ತುಂಬಾ ಸಲಿಗೆಯಿಂದ ನಡೆದುಕೊಳ್ಳುವದು ,ಕೈ ಹಿಡಿದು ಎಳೆದಾಡುವದು ಚುಡಾಯಿಸುವದು ಮಾಡುತಿದ್ದನು ನಮ್ಮ ಮಾವನಾಗಬೇಕೆಂದು ಸುಮ್ಮನಾಗಿದ್ದು ದಿನಾಂಕ 4-1-2018 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದಾಗ  ನಮ್ಮ ಮಾವ ಶಿವಾ ರಾಠೋಡ ಇತನು ನಾನು ಮಲಗಿದಲ್ಲಿಗೆ ಬಂದು ನನ್ನ ಪಕ್ಕದಲ್ಲಿ ಮಲಗಿಕೊಂಡಾಗ ನಾನು ಬೇರೆಕಡೆಗೆ ಹೋಗು ಅಂತಾ ಅನ್ನುವಷ್ಟರಲ್ಲಿ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿದನು, ನಾನು ಒದ್ದಾಡುತ್ತಾ ಬಿಡಿಸಿಕೊಳ್ಲಲು ಪ್ರಯತ್ನಿಸುತಿದ್ದಾಗ ನನಗೆ ಕಾಲಲ್ಲಿ ಒತ್ತಿ ಹಿಡಿದು ಆಗ ನನಗೆ ಹೆದರಿಸಿ ಜಬರದಸ್ತಿಯಿಂದ ನಾನು ಧರಿಸಿದ್ದ  ಬಟ್ಟೆಗಳನ್ನು ತೆಗೆದು ನನಗೆ ಹಟ ಸಂಭೋಗ ಮಾಡಿರುತ್ತಾನೆ. ಬೆಳಗ್ಗೆ ಎದ್ದು ನನಗೆ ಮನೆ ಹಿಂದುಗಡೆ ಕರೆದುಕೊಂಡು ಹೋಗಿದ್ದು ಆಗ ನಾನು ಈ ವಿಷಯ ನನ್ನ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಅಂದುದಕ್ಕೆ ಆತನು ಈ ವಿಷಯ ನಿಮ್ಮ ತಂದೆ ತಾಯಿಗೆ ಹೇಳಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಹೆದರಿಸಿದ್ದರಿಂದ ನಾನು  ನಮ್ಮ ತಂದೆ ತಾಯಿವರಿಗೆ ಈ ವಿಷಯ ಹೇಳದೆ ಮಾನಕ್ಕೆ ಹೀಗೆ ನನಗ 4 ದಿವಸಗಳವರೆಗೆ ಸತತವಾಗಿ ರಾತ್ರಿವೇಳೆಯಲ್ಲಿ ನನಗೆ ಜಬರದಸ್ತಿಯಿಂದ ಹಟ ಸಂಭೋಗ ಮಾಡಿರುತ್ತಾನೆ. ದಿನಾಂಕ. 9-01-2018 ರಂದು ಮರಳಿ ತನ್ನ ಊರಾದ ವಾಡಿ ತಾಂಡಾಕ್ಕೆ ಹೋದನು. ನಂತರ ಪುನಾ 15 ದಿವಸಗಳ ನಂತರ ಪುನಾ  ನಮ್ಮ ಮಾವ ಶಿವರಾಠೋಡ ನಮ್ಮ ಮನೆಗೆ ಬಂದಿದ್ದು  ಅಂದು ರಾತ್ರಿ ಕೂಡಾ ನಮ್ಮ ಮಾವ ಶಿವ ರಾಠೋಡ ಇತನು ರಾತ್ರಿಯಾದ ಮೇಲೆ ನನ್ನ ಮಗ್ಗುಲಲ್ಲಿ ಬಂದು ಮಲಗಿ ನನ್ನ ಬಾಯಿ ಒತ್ತಿ ಹಿಡಿದು ಹೆದರಿಸಿ  ಜಬರದಸ್ತಿಯಿಂದ ಸಂಭೋಗ ಮಾಡಿರುತ್ತೇನೆ. ಮರುದಿವಸ ಬೆಳಗ್ಗೆ  ನಾನು ಒಬ್ಬಳೆ ಮನೆಯ ಮುಂದೆ ಕಸ ಗೂಡಿಸುವಾಗ ನನ್ನ ಹತ್ತಿರ ಬಂದಾಗ ನಾನು ನನ್ನ ತಂದೆ ಈ ವಿಷಯ ತಿಳಿಸುತ್ತೇನೆ ಅಂತಾ ಅಂದುದಕ್ಕೆ  ರಂಡೀ ನಾನು ಜಬರದಸ್ತಿಯಿಂದ ಹಟ ಸಂಭೋಗ ಮಾಡಿದ್ದ ಬಗ್ಗೆ ನಿಮ್ಮ ತಂದೆ ತಾಯಿಗೆ ಹೇಳಿದರೆ ನಿನಗೂ ಮತ್ತು ನಿನ್ನ ಅಣ್ಣ  ಮೇಘನಾಥನಿಗೆ ಖಲಾಸ ಮಾಡುತ್ತೇನೆ  ಅಂತಾ ಹೇದರಿಸಿದ್ದನು  ಹೀಗಾಗಿ ನನಗೂ ಮತ್ತು ನನ್ನ ಅಣ್ಣ ಮೇಘನಾಥನ ಜೀವಕ್ಕೆ ತೊಂದರೆ ಮಾಡಬಹುದೆಂದು ನಾನು ಹೆದರಿ ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿರುವದಿಲ್ಲಾ. ದಿನಾಂಕ. 4-01-2018 ದಿಂದ ರಾತ್ರಿ 12-00 ಗಂಟೆಯ ಸುಮಾರಿಗೆ ಅಪ್ರಾಪ್ತ ಬಾಲಕಿಯಾದ ನನಗೆ ಸತತವಾಗಿ 4 ದಿವಸಗಳ ವರೆಗೆ ಮನೆಯಲ್ಲಿ ಮಲಗಿದಾಗ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿ ಜಬರದಸ್ತಿಯಿಂದ ಸತತವಾಗಿ ನನಗೆ ಹಟ ಸಂಭೋಗ ಮಾಡಿರುತ್ತಾನೆ ಈಗ ನಾನು ಗರ್ಭಿಣಿಯಾಗಿರುತ್ತೇನೆ. ಆದುದರಿಂದ ನನ್ನ ಮೇಲೆ ಅತ್ಯಾಚಾರ ವೆಸಗಿ ಜಬರದಸ್ತಿಯಿಂದ ಹಟಸಂಭೋಗ ಮಾಡಿದ ಶಿವಾ ತಂದೆ ತುಕರಾಮ ರಾಠೋಡ ಸಾ/ ಲಕ್ಷ್ಮಪೂರ ವಾಡಿ ತಾ/ಚಿತ್ತಾಪೂರ ಜಿ/ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕುಮಾರಿಯವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 9/07/18 ರಂದು ಶ್ರೀ ಹಣಮಂತ ತಂದೆ ಕನಕಪ್ಪ ಜಾಧವ  ಸಾಸಿರನೂರ ತಾ: ಜಿ: ಕಲಬುರಗಿ ರವರು ಬರ್ಹಿದೆಸೆ ಮುಗಿಸಿಕೊಂಡು ಎನ್ ಹೆಚ್ 218 ರಸ್ತೆಯನ್ನು ಆ ಕಡೆಯಿಂದ ರಸ್ತೆ ದಾಟುತ್ತಿದ್ದಾಗ ಜೇವಗರಗಿ ಕಡೆಯಿಂದ  ಮೋ ಸೈಕಲ ನಂ ಕೆಎ 32 ಇಕ್ಯೂ 8053 ನೇದ್ದನ್ನು ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡೆಯಿಸಿದ್ದರಿಂದ ರಸ್ತೆ ದಾಟುತ್ತಿದ್ದ ಪಿರ್ಯಾದಿಗೆ ಬಾರಿ ಗಾಯವಾಗಿ ಎಡಗೈ ಮೊಳಕೈಎಡಕಾಲಿನ  ಹತ್ತಿರ ಬಾರಿ ಹಾಗೂ ಸಾದಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 03/07/2018 ರಂದು ಸಾಯಂಕಾಲ 1) ಸಾಜೀದ ತಂದೆ ಖಾಸಿಂ ಅಲಿ 2) ಉಮರ ತಂದೆ ಖಾಸಿಂ ಅಲಿ 3) ಶೇರು @ ಸದ್ದಾಂ ತಂದೆ ಇಸ್ಮಾಯಿಲಸಾಬ 4) ಮಟಕಾ ಮಾಜೀದ ತಂದೆ ಖಾಸಿಂ ಅಲಿ 5) ನಯೀಮ್ ತಂದೆ ಗಪೂರಸಾಬ, 6) ತಾಹೇರ ತಂದೆ ಅಲಿಸಾಬ 7) ಖಾಜಾಮಿಯ್ಯಾ ನಾಜವಾಲೇ ಸಾ:ಬಾಂಬೆ ಹೊಟೇಲ ಹತ್ತಿರ ಬಿಲಾಲಾಬಾದ ಕಲಬುರಗಿ 8) ಸೊಹೇಬ ಸಾ:ಬ್ಯಾಂಕ ಕಾಲೋನಿ ಕಲಬುರಗಿ 9) ಯೂನೀಷ ಸಾ:ಆಜಾದಪುರ ರೋಡ ಕಲಬುರಗಿ ನೇದ್ದವರು ಏರೆಲೆನ್ಸ ದಾಬಾದಲ್ಲಿ ಊಟ ಮಾಡಿದ್ದು ಆಗ ಫಿರ್ಯಾದಿದಾರನು ಸದರಿಯವರಿಗೆ ಊಟ ಮಾಡಿದ ಬಿಲ್ಲು ಕೇಳಿದರೇ ಏ ಭೋಸಡಿ ಮಗನೇ ದಾಬಾ ಮಾಲಿಕನಾಗಿ ಊಟ ಸರಿಯಾಗಿ ಕೊಡಲು ಬರುವುದಿಲ್ಲಾ ಮತ್ತು ಸಪ್ಲಾಯಿ ಕೂಡಾ ಸರಿಯಾಗಿ ಮಾಡಿಲ್ಲಾ ಅದಕ್ಕೆ ನಾವು ನಿಮಗೆ ಬಿಲ್ಲು ಕೊಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ಆಗ ಬಿಲ್ಲು ಯಾಕೇ ಕೊಡುವುದಿಲ್ಲಾ ಅಂತಾ ಕೇಳಿದ್ದಕ್ಕೆ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಈ ಮೇಲ್ಕಂಡ ಎಲ್ಲಾ ಜನರು ಅಕ್ರಮಕೂಟ ರಚಿಸಿಕೊಂಡು ಬಂದು ಅದರಲ್ಲಿ ಉಮರ ಇತನು ಫಿರ್ಯಾದಿದಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಆತನ ಹಿಂದುಗಡೆಯಿಂದ ಓಡುತ್ತಾ ಬಂದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದನು ಆಗ ಅವನು ಒಮ್ಮಲೇ ತಿರುಗಿದಾಗ ಸದರಿ ಒಡೆದ ಬಿಯರ್ ಬಾಟಲಿಯಿಂದ ಆತನ ಎಡಗಡೆ ಹೊಟ್ಟೆಗೆ ಚುಚ್ಚಲು ಬಂದಾಗ ಆಗ ಆತನು ತನ್ನ ಎಡಗೈ ರಕ್ಷಣೆಗಾಗಿ ತಂದಾಗ ಬಿಯರ್ ಬಾಟಲಿಯ ಏಟು ಆತನ ಎಡಗೈ ರಟ್ಟೆಗೆ ಹತ್ತಿ ಭಾರಿ ರಕ್ತಗಾಯವಾಯಿತು. ಆತನು ಎಡಗೈ ಅಡ್ಡ ತರದೇ ಇದ್ದರೇ ಕೊಲೆ ಮಾಡುತ್ತಿದ್ದನು ಅಂತಾ ಶ್ರೀ ಅಬ್ದುಲ್ ಲತೀಫ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಸುಲೇಮಾನ ಪಟೇಲ ಸಂಗಡ ಇನ್ನೂ ಮೂರು ಜನರು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಶ್ರೀ ಅಲ್ಲಾಪಟೇಲ ತಂದೆ ಮಹಿಬಬೂಬ ಪಟೇಲ ವಾಡಿ ಸಾಃ ಕೊಳ್ಳೂರ ಗ್ರಾಮ ರವರ ಹೊಲದಲ್ಲಿ ಅತೀ ಕ್ರಮ ಪ್ರವೇಶ ಮಾಡಿ ಹೊಲದ ಬಂದಾರಿ ಸಲುವಾಗಿ ಜಗಳ ತೆಗೆದು ಬಡಿಗೆಯಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಅಲ್ಲಾ ಪಟೇಲ ಹಾಗೂ ಆತನ ಮಕ್ಕಳು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಹೊಲದ ಬಂದಾರಿ ವಿಷಯದಲ್ಲಿ ಶ್ರೀಮತಿ ಹಾಜಿಬೇಗಂ ಗಂಡ ಬಾವಾ ಪಟೇಲ ಸಾಃ ಕೊಳ್ಳುರ ಗ್ರಾಮ ತಾ.ಜಿಃ ಕಲಬುರಗಿ ರವರೊಂದಿಗೆ ಜಗಳ ತೆಗೆದುಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಅವಮಾನ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.