POLICE BHAVAN KALABURAGI

POLICE BHAVAN KALABURAGI

11 July 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-07-2018 ರಂದು  ಸೋನ್ನ ಗ್ರಾಮದ ಅಂಭಿಗರ ಚೌಡಯ್ಯ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೋನ್ನ ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೀಗರ ಚೌಡಯ್ಯ ಕರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡಪ್ಪ ಕುದರಿ ಸಾ|| ಸೋನ್ನ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1300/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಕೈಲಾಸ್ ತಂದೆ ರಾಮಪ್ರಕಾಶ  ಸಾಃ ಇಂದಲಾಪೂರ ಪೊಷ್ಟಃ ಬಾವಟಮಾಂವೋ ಥಾನಾಃ ಮಾದವಗಂಜ್ ಜಿಲ್ಲಾ ಹರದೋಯಿ ರಾಜ್ಯ; ಉತ್ತರಪ್ರದೇಶ ರವರು ತಮ್ಮೂರಿನಿಂದ ನಾನು ಮತ್ತು ನಮ್ಮೂರ ಇತರರು ಕೂಡಿಕೊಂಡು ನಮ್ಮೂರ ಮಾನಸಿಂಗ್ ಯಾದವ ಇವರ ಸಂಗಡ ಒಂದು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಗೆ ಬಂದು ಕಲಬುರಗಿ ನಂದಿಕೂರ ಗ್ರಾಮದ ಹತ್ತಿರ ವಾಸವಾಗಿದ್ದೆವು. ಮಾನಸಿಂಗ್ ಯಾದವ ಇತನು ಭಾರತ್ ಸ್ವಚ್ಚ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಹಿಡಿದು ರೆಡಿಮೇಡ್ ಸಂಡಾಸ ರೂಮಗಳು ಕಟ್ಟುವುದಕ್ಕೆ ನಾವು ಗೂಡ್ಸ ವಾಹನದಲ್ಲಿ ಹೋಗಿ ಕೆಲಸ ಮಾಡಿಕೊಂಡು ಮರಳಿ ಕಲಬುರಗಿ ನಂದಿಕೂರ ಪಾಟೀ ಹತ್ತಿರ ಬಂದು ವಸತಿ ಮಾಡುತ್ತಿದ್ದು ದಿನಾಂಕ 09.07.2018 ರಂದು ಮುಂಜಾನೆ ನಾನು ಮತ್ತು ನಮ್ಮ ಜೊತೆ ಕೆಲಸ ಮಾಡುವ 1) ಕೌಶಲ್ ತಂದೆ ಭದ್ರೀ  2) ಉಸ್ಮಾನ ತಂದೆ ಮುನೀಮ್ 3) ರಾಜಕೀಶೋರ ತಂದೆ ಶ್ಯಾಮಲಾಲ 4) ರಾಜೇಶ ತಂದೆ ಶ್ಯಾಮಲಾಲ 5) ಮೊಹನಲಾಲ ತಂದೆ  ಗಾಸಿರಾಮ್ ಪಾಲ್ 6) ಅವುದೇಶ ತಂದೆ ಮನ್ಸಾ ಮತ್ತು 7) ರಾಮಸಚ್ಚಿ ಮಂಗಲಿ ರಾಠೋಡ್  ಇವರೆಲ್ಲರೂ ಕೂಡಿಕೊಂಡು 407 ಗೂಡ್ಸ ವಾಹನ ನಂ; ಕೆಎ-32-ಬಿ-9230 ನೇದ್ದರಲ್ಲಿ ಕೆಲಸ ಮಾಡುವ ಸಾಮಾನುಗಳು ಹಾಕಿಕೊಂಡು ಅದರಲ್ಲಿಯೇ ಕುಳಿತುಕೊಂಡು ಸೂರಪೂರ ತಾಲೂಕಿನ ಯಾಳಗಿ ಗ್ರಾಮಕ್ಕೆ ಸಂಡಾಸ ರೂಮ ಕಟ್ಟಲು ಹೋಗಿದ್ದೆವು. ಅಲ್ಲಿ ಕೆಲಸ ಮಾಡಿಕೊಂಡು ಮತ್ತೆ ಕೆಂಬಾವಿ ಗ್ರಾಮಕ್ಕೆ ಹೋಗಿ ಅಲ್ಲಿ ಸಂಡಾಸ ರೂಮಗಳು ಕಟ್ಟಿ ಕೆಲಸ ಮಾಡಿ, ನಂತರ ನಾವೆಲ್ಲರೂ ಕೂಡಿ ಅದೇ ಗೂಡ್ಸ ವಾಹನದಲ್ಲಿ ಕುಳಿತುಕೊಂಡು ಕೆಂಬಾವಿಯಿಂದ ಮರಳಿ ಕಲಬುರಗಿಗೆ ಹೋಗುತ್ತಿದ್ದೇವು. ಗೂಡ್ಸ ವಾಹನವನ್ನು ವಿಜಯಕುಮಾರ ತಂದೆ ಸೈಬಣ್ಣ ರಾಂಪೂರ ಈತನು ನಡೆಯಿಸುತ್ತಿದ್ದನು. ರಾತ್ರಿ 8-30 ಗಂಟೆಯ ಸುಮಾರಿಗೆ ಜೇವರಗಿ-ಕಲಬುರಗಿ ರೋಡ ಕೃಷಿ ಕೆಂದ್ರದ ಹತ್ತಿರ ರೋಡಿನಲ್ಲಿ ನಮ್ಮ ಗೂಡ್ಸ್ ವಾಹನ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೆ ಕಟ್ ಹೊಡೆದ ಪರಿಣಾಮವಾಗಿ ಗೂಡ್ಸ ವಾಹನ ರೋಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಇದರಿಂದ ವಾಹನದಲ್ಲಿ ಇದ್ದ ಕೌಶಲ್ ತಂದೆ ಭದ್ರೀ ಈತನ ತಲೆಗೆ, ಕಾಲಿಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಉಸ್ಮಾನ ತಂದೆ ಮುನೀಮ್ ಈತನ ತಲೆಗೆ, ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ರಾಜಕೀಶೋರ ತಂದೆ ಶ್ಯಾಮಲಾಲ ಈತನಿಗೆ ಎಡ ಕಿವಿ ಕಟ್ಟಾಗಿ ರಕ್ತಗಾಯವಾಗಿದ್ದು ಬೆನ್ನಿಗೆ ಗುಪ್ತ ಗಾಯವಾಗಿರುತ್ತದೆ. ರಾಜೇಶ ತಂದೆ ಶ್ಯಾಮಲಾಲ, ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಎಡ ಭುಜಕ್ಕೆ ಭಾರಿ ಗುಪ್ತ ಗಾಯ ಮತ್ತು ರಕ್ತ ಗಾಯವಾಗಿರುತ್ತದೆ. ಮೊಹನಲಾಲ ತಂದೆ ಗಾಸಿರಾಮ್ ಪಾಲ್ ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಬೆನ್ನಿಗೆ ರಕ್ತಗಾಯ ಮತ್ತು ಗುಪ್ತ ಗಾಯವಾಗಿರುತ್ತದೆ. ಅವುದೇಶ ತಂದೆ ಮನ್ಸಾರಾಮ ಇವನಿಗು ಕೂಡ ಎಡ ಕಾಲಿನ ಹಿಮ್ಮಡಿ ಹತ್ತಿರ ರಕ್ತ ಗಾಯವಾಗಿರುತ್ತದೆ.ರಾಮಸಚ್ಚಿ ಇತನಿಗೆ ಸೊಂಟಕ್ಕೆ ಎಡ ಬುಜಕ್ಕೆ ಬೇರಳಿಗೆ ಮತ್ತು ಎಡಕಿವಿಗೆ ರಕ್ತ ಗಾಯವಾಗಿರುತ್ತದೆ.ನಂತರ ಯಾರೋ 108 ಅಂಬುಲೆನ್ಸ್ ಕ್ಕೆ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ವಾಹನದಲ್ಲಿ ಗಾಯವಾದರಿಗೆ ಮತ್ತು ಮೃತ ಕೌಶಲ್ ಈತನಿಗೆ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ. ನಂತರ ಹೆಚ್ಚಿಗೆ ಗಾಯವಾದ ಕೆಲವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆ. ನನಗೆ ಯಾವುದೇ ಗಾಯವಾಗಿರುವುದಿಲ್ಲಾ. ಚಾಲಕ ವಿಜಯಕುಮಾರ ಈತನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 1-1-2018 ರಿಂದ 9-1-2018 ರವರೆಗೆ ನಮ್ಮ ಮಾವನಾದ ಶಿವಾ ತಂದೆ ತುಕರಾಮ ರಾಠೋಡ ಇತನು ತನಗೆ ಆರೋಗ್ಯ ಸರಿಯಾಗಿಲ್ಲಾ ಅಂತಾ ಆಸ್ಪತ್ರೆಗೆ ತೋರಿಸಿಕೊಳ್ಳುವ ಕುರಿತು ನಮ್ಮ ಊರಿಗೆ ಬಂದಿದ್ದು ನಮ್ಮ ಮನೆಯಲ್ಲಿದ್ದನ್ನು ಆ ಸಮಯದಲ್ಲಿ ಶಿವಾ ರಾಠೋಡ ಇತನು ನನ್ನೊಂದಿಗೆ ತುಂಬಾ ಸಲಿಗೆಯಿಂದ ನಡೆದುಕೊಳ್ಳುವದು ,ಕೈ ಹಿಡಿದು ಎಳೆದಾಡುವದು ಚುಡಾಯಿಸುವದು ಮಾಡುತಿದ್ದನು ನಮ್ಮ ಮಾವನಾಗಬೇಕೆಂದು ಸುಮ್ಮನಾಗಿದ್ದು ದಿನಾಂಕ 4-1-2018 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದಾಗ  ನಮ್ಮ ಮಾವ ಶಿವಾ ರಾಠೋಡ ಇತನು ನಾನು ಮಲಗಿದಲ್ಲಿಗೆ ಬಂದು ನನ್ನ ಪಕ್ಕದಲ್ಲಿ ಮಲಗಿಕೊಂಡಾಗ ನಾನು ಬೇರೆಕಡೆಗೆ ಹೋಗು ಅಂತಾ ಅನ್ನುವಷ್ಟರಲ್ಲಿ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿದನು, ನಾನು ಒದ್ದಾಡುತ್ತಾ ಬಿಡಿಸಿಕೊಳ್ಲಲು ಪ್ರಯತ್ನಿಸುತಿದ್ದಾಗ ನನಗೆ ಕಾಲಲ್ಲಿ ಒತ್ತಿ ಹಿಡಿದು ಆಗ ನನಗೆ ಹೆದರಿಸಿ ಜಬರದಸ್ತಿಯಿಂದ ನಾನು ಧರಿಸಿದ್ದ  ಬಟ್ಟೆಗಳನ್ನು ತೆಗೆದು ನನಗೆ ಹಟ ಸಂಭೋಗ ಮಾಡಿರುತ್ತಾನೆ. ಬೆಳಗ್ಗೆ ಎದ್ದು ನನಗೆ ಮನೆ ಹಿಂದುಗಡೆ ಕರೆದುಕೊಂಡು ಹೋಗಿದ್ದು ಆಗ ನಾನು ಈ ವಿಷಯ ನನ್ನ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಅಂದುದಕ್ಕೆ ಆತನು ಈ ವಿಷಯ ನಿಮ್ಮ ತಂದೆ ತಾಯಿಗೆ ಹೇಳಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಹೆದರಿಸಿದ್ದರಿಂದ ನಾನು  ನಮ್ಮ ತಂದೆ ತಾಯಿವರಿಗೆ ಈ ವಿಷಯ ಹೇಳದೆ ಮಾನಕ್ಕೆ ಹೀಗೆ ನನಗ 4 ದಿವಸಗಳವರೆಗೆ ಸತತವಾಗಿ ರಾತ್ರಿವೇಳೆಯಲ್ಲಿ ನನಗೆ ಜಬರದಸ್ತಿಯಿಂದ ಹಟ ಸಂಭೋಗ ಮಾಡಿರುತ್ತಾನೆ. ದಿನಾಂಕ. 9-01-2018 ರಂದು ಮರಳಿ ತನ್ನ ಊರಾದ ವಾಡಿ ತಾಂಡಾಕ್ಕೆ ಹೋದನು. ನಂತರ ಪುನಾ 15 ದಿವಸಗಳ ನಂತರ ಪುನಾ  ನಮ್ಮ ಮಾವ ಶಿವರಾಠೋಡ ನಮ್ಮ ಮನೆಗೆ ಬಂದಿದ್ದು  ಅಂದು ರಾತ್ರಿ ಕೂಡಾ ನಮ್ಮ ಮಾವ ಶಿವ ರಾಠೋಡ ಇತನು ರಾತ್ರಿಯಾದ ಮೇಲೆ ನನ್ನ ಮಗ್ಗುಲಲ್ಲಿ ಬಂದು ಮಲಗಿ ನನ್ನ ಬಾಯಿ ಒತ್ತಿ ಹಿಡಿದು ಹೆದರಿಸಿ  ಜಬರದಸ್ತಿಯಿಂದ ಸಂಭೋಗ ಮಾಡಿರುತ್ತೇನೆ. ಮರುದಿವಸ ಬೆಳಗ್ಗೆ  ನಾನು ಒಬ್ಬಳೆ ಮನೆಯ ಮುಂದೆ ಕಸ ಗೂಡಿಸುವಾಗ ನನ್ನ ಹತ್ತಿರ ಬಂದಾಗ ನಾನು ನನ್ನ ತಂದೆ ಈ ವಿಷಯ ತಿಳಿಸುತ್ತೇನೆ ಅಂತಾ ಅಂದುದಕ್ಕೆ  ರಂಡೀ ನಾನು ಜಬರದಸ್ತಿಯಿಂದ ಹಟ ಸಂಭೋಗ ಮಾಡಿದ್ದ ಬಗ್ಗೆ ನಿಮ್ಮ ತಂದೆ ತಾಯಿಗೆ ಹೇಳಿದರೆ ನಿನಗೂ ಮತ್ತು ನಿನ್ನ ಅಣ್ಣ  ಮೇಘನಾಥನಿಗೆ ಖಲಾಸ ಮಾಡುತ್ತೇನೆ  ಅಂತಾ ಹೇದರಿಸಿದ್ದನು  ಹೀಗಾಗಿ ನನಗೂ ಮತ್ತು ನನ್ನ ಅಣ್ಣ ಮೇಘನಾಥನ ಜೀವಕ್ಕೆ ತೊಂದರೆ ಮಾಡಬಹುದೆಂದು ನಾನು ಹೆದರಿ ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿರುವದಿಲ್ಲಾ. ದಿನಾಂಕ. 4-01-2018 ದಿಂದ ರಾತ್ರಿ 12-00 ಗಂಟೆಯ ಸುಮಾರಿಗೆ ಅಪ್ರಾಪ್ತ ಬಾಲಕಿಯಾದ ನನಗೆ ಸತತವಾಗಿ 4 ದಿವಸಗಳ ವರೆಗೆ ಮನೆಯಲ್ಲಿ ಮಲಗಿದಾಗ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿ ಜಬರದಸ್ತಿಯಿಂದ ಸತತವಾಗಿ ನನಗೆ ಹಟ ಸಂಭೋಗ ಮಾಡಿರುತ್ತಾನೆ ಈಗ ನಾನು ಗರ್ಭಿಣಿಯಾಗಿರುತ್ತೇನೆ. ಆದುದರಿಂದ ನನ್ನ ಮೇಲೆ ಅತ್ಯಾಚಾರ ವೆಸಗಿ ಜಬರದಸ್ತಿಯಿಂದ ಹಟಸಂಭೋಗ ಮಾಡಿದ ಶಿವಾ ತಂದೆ ತುಕರಾಮ ರಾಠೋಡ ಸಾ/ ಲಕ್ಷ್ಮಪೂರ ವಾಡಿ ತಾ/ಚಿತ್ತಾಪೂರ ಜಿ/ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕುಮಾರಿಯವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 9/07/18 ರಂದು ಶ್ರೀ ಹಣಮಂತ ತಂದೆ ಕನಕಪ್ಪ ಜಾಧವ  ಸಾಸಿರನೂರ ತಾ: ಜಿ: ಕಲಬುರಗಿ ರವರು ಬರ್ಹಿದೆಸೆ ಮುಗಿಸಿಕೊಂಡು ಎನ್ ಹೆಚ್ 218 ರಸ್ತೆಯನ್ನು ಆ ಕಡೆಯಿಂದ ರಸ್ತೆ ದಾಟುತ್ತಿದ್ದಾಗ ಜೇವಗರಗಿ ಕಡೆಯಿಂದ  ಮೋ ಸೈಕಲ ನಂ ಕೆಎ 32 ಇಕ್ಯೂ 8053 ನೇದ್ದನ್ನು ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡೆಯಿಸಿದ್ದರಿಂದ ರಸ್ತೆ ದಾಟುತ್ತಿದ್ದ ಪಿರ್ಯಾದಿಗೆ ಬಾರಿ ಗಾಯವಾಗಿ ಎಡಗೈ ಮೊಳಕೈಎಡಕಾಲಿನ  ಹತ್ತಿರ ಬಾರಿ ಹಾಗೂ ಸಾದಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 03/07/2018 ರಂದು ಸಾಯಂಕಾಲ 1) ಸಾಜೀದ ತಂದೆ ಖಾಸಿಂ ಅಲಿ 2) ಉಮರ ತಂದೆ ಖಾಸಿಂ ಅಲಿ 3) ಶೇರು @ ಸದ್ದಾಂ ತಂದೆ ಇಸ್ಮಾಯಿಲಸಾಬ 4) ಮಟಕಾ ಮಾಜೀದ ತಂದೆ ಖಾಸಿಂ ಅಲಿ 5) ನಯೀಮ್ ತಂದೆ ಗಪೂರಸಾಬ, 6) ತಾಹೇರ ತಂದೆ ಅಲಿಸಾಬ 7) ಖಾಜಾಮಿಯ್ಯಾ ನಾಜವಾಲೇ ಸಾ:ಬಾಂಬೆ ಹೊಟೇಲ ಹತ್ತಿರ ಬಿಲಾಲಾಬಾದ ಕಲಬುರಗಿ 8) ಸೊಹೇಬ ಸಾ:ಬ್ಯಾಂಕ ಕಾಲೋನಿ ಕಲಬುರಗಿ 9) ಯೂನೀಷ ಸಾ:ಆಜಾದಪುರ ರೋಡ ಕಲಬುರಗಿ ನೇದ್ದವರು ಏರೆಲೆನ್ಸ ದಾಬಾದಲ್ಲಿ ಊಟ ಮಾಡಿದ್ದು ಆಗ ಫಿರ್ಯಾದಿದಾರನು ಸದರಿಯವರಿಗೆ ಊಟ ಮಾಡಿದ ಬಿಲ್ಲು ಕೇಳಿದರೇ ಏ ಭೋಸಡಿ ಮಗನೇ ದಾಬಾ ಮಾಲಿಕನಾಗಿ ಊಟ ಸರಿಯಾಗಿ ಕೊಡಲು ಬರುವುದಿಲ್ಲಾ ಮತ್ತು ಸಪ್ಲಾಯಿ ಕೂಡಾ ಸರಿಯಾಗಿ ಮಾಡಿಲ್ಲಾ ಅದಕ್ಕೆ ನಾವು ನಿಮಗೆ ಬಿಲ್ಲು ಕೊಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ಆಗ ಬಿಲ್ಲು ಯಾಕೇ ಕೊಡುವುದಿಲ್ಲಾ ಅಂತಾ ಕೇಳಿದ್ದಕ್ಕೆ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಈ ಮೇಲ್ಕಂಡ ಎಲ್ಲಾ ಜನರು ಅಕ್ರಮಕೂಟ ರಚಿಸಿಕೊಂಡು ಬಂದು ಅದರಲ್ಲಿ ಉಮರ ಇತನು ಫಿರ್ಯಾದಿದಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಆತನ ಹಿಂದುಗಡೆಯಿಂದ ಓಡುತ್ತಾ ಬಂದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದನು ಆಗ ಅವನು ಒಮ್ಮಲೇ ತಿರುಗಿದಾಗ ಸದರಿ ಒಡೆದ ಬಿಯರ್ ಬಾಟಲಿಯಿಂದ ಆತನ ಎಡಗಡೆ ಹೊಟ್ಟೆಗೆ ಚುಚ್ಚಲು ಬಂದಾಗ ಆಗ ಆತನು ತನ್ನ ಎಡಗೈ ರಕ್ಷಣೆಗಾಗಿ ತಂದಾಗ ಬಿಯರ್ ಬಾಟಲಿಯ ಏಟು ಆತನ ಎಡಗೈ ರಟ್ಟೆಗೆ ಹತ್ತಿ ಭಾರಿ ರಕ್ತಗಾಯವಾಯಿತು. ಆತನು ಎಡಗೈ ಅಡ್ಡ ತರದೇ ಇದ್ದರೇ ಕೊಲೆ ಮಾಡುತ್ತಿದ್ದನು ಅಂತಾ ಶ್ರೀ ಅಬ್ದುಲ್ ಲತೀಫ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಸುಲೇಮಾನ ಪಟೇಲ ಸಂಗಡ ಇನ್ನೂ ಮೂರು ಜನರು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಶ್ರೀ ಅಲ್ಲಾಪಟೇಲ ತಂದೆ ಮಹಿಬಬೂಬ ಪಟೇಲ ವಾಡಿ ಸಾಃ ಕೊಳ್ಳೂರ ಗ್ರಾಮ ರವರ ಹೊಲದಲ್ಲಿ ಅತೀ ಕ್ರಮ ಪ್ರವೇಶ ಮಾಡಿ ಹೊಲದ ಬಂದಾರಿ ಸಲುವಾಗಿ ಜಗಳ ತೆಗೆದು ಬಡಿಗೆಯಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಅಲ್ಲಾ ಪಟೇಲ ಹಾಗೂ ಆತನ ಮಕ್ಕಳು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಹೊಲದ ಬಂದಾರಿ ವಿಷಯದಲ್ಲಿ ಶ್ರೀಮತಿ ಹಾಜಿಬೇಗಂ ಗಂಡ ಬಾವಾ ಪಟೇಲ ಸಾಃ ಕೊಳ್ಳುರ ಗ್ರಾಮ ತಾ.ಜಿಃ ಕಲಬುರಗಿ ರವರೊಂದಿಗೆ ಜಗಳ ತೆಗೆದುಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಅವಮಾನ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: