POLICE BHAVAN KALABURAGI

POLICE BHAVAN KALABURAGI

29 May 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ  ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 28.05.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ದಿಂದ ಸ್ವಲ್ಪ ದೂರದಲ್ಲಿ ಹೋಗಿ ನಿಂತುಕೊಂಡು ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಅಬ್ದುಲ ರಜಾಕ ತಂದೆ ಅಬ್ದುಲ ಸುಕುರ ರಜಾಕಸಾಹೇಬ ಸಾ: ರೇಷನ್ ಅಂಗಡಿ ಪಕ್ಕದಲ್ಲಿ ಖದೀರ ಚೌಕ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1320/-ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ಮತ್ತು 4) ಒಂದು ಎಲ್.ಎಫ್.ವ್ಯಾಯಿ ಮೊಬೈಲ ಅ:ಕಿ: 300/- ರೂ ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 27/05/2018 ರಂದು 10.00 ಗಂಟೆಯ ಸುಮಾರಿಗೆ ತನ್ನ ಮಗನಾದ ಓಂಕಾರ ಈತನು ಕಾರ ನಂ ಕೆಎ-32 ಎನ್-0765 ನೆದ್ದು ತೆಗೆದುಕೊಂಡು ತನ್ನ ಹೆಂಡತಿಯ ತವರೂರಾದ ಶಹಾಪೂರ ತಾಲೂಕಿನ ಕರಕಳ್ಳಿ ತಾಂಡಾಕ್ಕೆ ಕಲಬುರಗಿಯಿಂದ ಹೊಗಿದ್ದು, ಮದ್ಯ ರಾತ್ರಿ ಅಂದರೆ ದಿನಾಂಕ 28/05/2018 ರಂದು 12.45 ಎ.ಎಮದ ಸುಮಾರಿಗೆ ತನ್ನ ಮಗನಾದ ಓಂಕಾರ ಈತನಿಗೆ ರಾಷ್ಟ್ರೀಯ ಹೆದ್ದಾರಿ 218ರ ಶಹಾಬಾದ ಕ್ರಾಸ ಹತ್ತಿರ ರಸ್ತೆ ಅಪಘಾತವಾಗಿ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ತಿಳಿದು ಎಲ್ಲರೂ ಹೋಗಿ ನೋಡಲಾಗಿ ಓಂಕಾರ ಈತನು ತಲೆಗೆ & ಹಣೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಎರಡು ಕೈಗಳಿಗೆ ಭಾರಿ ಗುಪ್ತಗಾಯ, ಎಡಗಾಲಿನ ಮೊಳಕಾಲಿಗೆ ಭಾರಿರಕ್ತಗಾಯ, ಬಲಗಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಕಾರ ನೋಡಲಾಗಿ ಸಂಪೂರ್ಣ ಜಜ್ಜಿ ಹೊಗಿದ್ದು, ಯಾವುದೋ ಒಂದು ಭಾರಿ ವಾಹನದ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಓಂಕಾರ ಈತನು ಚಲಾಯಿಸುತ್ತಿದ್ದ ಕಾರ ನಂ ಕೆಎ-32 ಎನ್-0765 ನೇದ್ದಕ್ಕೆ ಡಿಕ್ಕಿಪಡಿಸಿದ ಹಾಗೇಯೆ ಚಲಾಯಿಸಿಕೊಂಡು ಹೊಗಿರುತ್ತಾನೆ. ಸದರಿ ಘಟನೆ ನಡೆದಾಗ ಸುಮಯ ಸುಮಾರು 11.30 ಪಿ.ಎಮ್ ಆಗಿರಬಹುದು ಸದರಿ ಅಪರಿಚಿತ ಭಾರಿ ವಾಹನದ ಚಾಲಕನ ವಿರುದ್ದ ಸೂಕ್ರ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಶ್ರೀ ತುಳಸಿರಾಮ ತಂದೆ ವಿಠಲ ಪವಾರ ಸಾ : ಶಕ್ತಿ ನಗರ ಶಾಹಾಬಾದ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 May 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ ಲಕ್ಷ್ಮಣರಾವ ಜಾಧವ  ಸಾ- ವಿದ್ಯಾಶ್ರೀ ರೆಸಿಡಿನ್ಸಿ, ಗ್ರೌಂಡ್ ಪ್ಲೋರ್ (ಬಿ), ವೀರಭದ್ರೇಶ್ವರ ಕಾಲೋನಿ ಜಯತೀರ್ಥ ಕಲ್ಯಾಣ ಮಂಟಪ್ ಹತ್ತಿರ ಕಲಬುರಗಿ ಇವರು ಮೆಡಿಕಲ್ ರಿಪ್ರೆಜೆಂಟಿಟಿವ್ ಕೆಲಸ ಮಾಡಿಕೊಂಡು ಇರುತ್ತೇನೆ ಹಾಗೂ ನನ್ನ ಹೆಂಡತಿ ಸ್ವಾತಿ ಇವರು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ದಿನಾಂಕ 21-05-2018  ರಂದು ಬೆಳಿಗ್ಗೆ 11-00 ಎ.ಎಮ್ ಕ್ಕೆ ನಾನು ನನ್ನ ಕೆಲಸಕ್ಕೆ ತಯ್ಯಾರಾಗಿದ್ದು ನನ್ನ ಜೊತೆಯಲ್ಲಿ ನನ್ನ ಹೆಂಡತಿ ಕೂಡಾ ಬಟ್ಟೆ ಅಂಗಡಿ ತೆರೆಯಲು ನಮ್ಮ  ಮಕ್ಕಳನ್ನು ಕರೆದುಕೊಂಡು ಹೋರಟು, ಮನೆಯನ್ನು ಇಬ್ಬರು ಕೂಡಿ ಕೀಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ. ನನಗೆ ನನ್ನ ಹೆಂಡತಿ ಸ್ವಾತಿ ಇವಳು 03-30 ಪಿ.ಎಮಕ್ಕೆ ಫೋನ್ ಮಾಡಿ ನಮ್ಮ ಮನೆ ಕಳ್ಳತನವಾಗಿದೆ ನಾನು ಬಟ್ಟೆ ಅಂಗಡಿಯಿಂದ ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮೇನ್ ಡೋರ್ ಬಾಗಿಲಿಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು, ಒಳಗೆ ಬೆಡ್ ರೂಮಗೆ ಹೋಗಿ ನೋಡಲು ಟ್ರಜರಿ ಬಾಗಿಲ ಲಾಕ್ ಮುರಿದು ಒಳಗಡೆ ಎಲ್ಲಾ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಬೇಗನೆ ಮನೆಗೆ ಬರುವಂತೆ ತಿಳಿಸಿದ ಮೇರೆಗೆ ಆಗ ನಾನು ಸಂಜೆಗೆ. 5-00 ಗಂಟೆಗೆ ಕಮಲಾಪೂರದಿಂದ ಮರಳಿ ಕಲಬುರಗಿಗೆ ಬಂದು ಮನೆಯನ್ನು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು ಬೆಡರೂಮಿನಲ್ಲಿದ್ದ ಲಾಕರ ತೆಗೆದಿದ್ದು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು ಆಗ ನಾನು ಮತ್ತು ನನ್ನ ಹೆಂಡತಿ ಶ್ರಿಮತಿ ಸ್ವಾತಿ ಜಾಧವ ಕೂಡಿಕೊಂಡು ಪರಿಶೀಲನೆ ಮಾಡಿ ನೋಡಲಾಗಿ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು ಅಕಿ.2,36,500/-ರೂಪಾಯಿ ಬೆಲೆಬಾಳುವದು ಕಳ್ಳತನವಾಗಿತು. ಅಷ್ಟರಲ್ಲಿ ವಿಷಯ ತಿಳಿದು ನಮ್ಮ ಮನೆಯ ಪಕ್ಕದವರಾದ ಆನಂದ ಹಾಗೂ ಗುರುನಾಥ ಕುಲಕರ್ಣಿರವರು ಬಂದು ನೋಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-05-2018 ರಂದು ಮುಂಜಾನೆ ವೇಳೆಯಲ್ಲಿ ನನ್ನ ಮಗ ಪ್ರೇಮಕುಮಾರ ಈತನು ಕಿಣ್ಣಿಸಡಕ ಗ್ರಾಮದ ನನ್ನ ಮನೆಯಿಂದ ಊಟ ಮಾಡಿಕೊಂಡು ಕೂಲಿಕೆಲಸಕ್ಕೆ ಕಮಲಾಪೂರ ಕಡೆ ಹೋಗುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 26-05-2018 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದರಿಂದ ನಾನು ನನ್ನ ಮನೆಯಲ್ಲಿದ್ದಾಗ ನಮ್ಮೂರ ಸಚೀನ ಹೋಸಮನಿ ಈತನು ಗಾಬರಿಯಲ್ಲಿ ಓಡುತ್ತಾ ನನ್ನ ಮನೆಗೆ ಬಂದು ನಮ್ಮೂರ ಹೆದ್ದಾರಿಯ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ಕಲಬುರಗಿ -ಹುಮನಾಬಾದ ಹೆದ್ದಾರಿ ಮೇಲಿಂದ ನಡೆದುಕೊಂಡು ಬರುತ್ತಿರುವಾಗ ನನ್ನ ಮಗ ಪ್ರೇಮಕುಮಾರ ಈತನಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದನು ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಇವರಿಗೆ ತಿಳಿಸಿ ನಾವೆಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಸಚೀನ ಹೋಸಮನಿ ಹೇಳಿದಂತೆ ನನ್ನ ಮಗ ಪ್ರೇಮಕುಮಾರ ಈತನಿಗೆ ಕಿಣ್ಣಿಸಡಕ ಹೆದ್ದಾರಿಯ ಸಮೀಪ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ರೋಡಿನ ಮೇಲೆ ಅಪಘಾತವಾಗಿ ಬಿದ್ದಿದ್ದು. ನಂತರ ನನ್ನ ಮಗನಿಗೆ ನೋಡಲು ಆತನ ತೆಲೆಯ ಹಿಂಭಾಗಕ್ಕ ಭಾರಿ ರಕ್ತಗಾಯವಾಗಿ ತೆಲೆ ಒಡೆದು ಸ್ಥಳದಲ್ಲೆ ಮೃತಪಟ್ಟಿದ್ದನು ನಂತರ ನಾನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಕೂಡಿ ಖಾಸಗಿ ವಾಹನದಲ್ಲಿ ನನ್ನ ಮಗನ ಶವವನ್ನು ಕಲಬುರಗಿ ಸರಕಾರಿ ದಾವಾಖಾನೆಯಲ್ಲಿ ತಂದಿರುತ್ತೇನೆ ನನ್ನ ಮಗನಿಗೆ ರಾತ್ರಿ 8-15 ಗಂಟೆ ಸುಮಾರಿಗೆ ಅಪಘಾತವಾಗಿರವಹುದು. ಕಾರಣ ನಿನ್ನೆ ದಿನಾಂಕ 26-05-2018 ರಂದು ರಾತ್ರಿ 8-15 ಪಿ.ಎಮ್ ಕ್ಕೆ ಕಿಣ್ಣಿಸಡಕ ಹೆದ್ದಾರಿ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಸಮೀಪದಿಂದ ನಡೆದುಕೊಂಡು ಬರುತ್ತಿದ್ದ ನನ್ನ ಮಗನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ರಕ್ತಗಾಯ ಪಡಿಸಿ ಮೃತ ಪಡಿಸಿ ವಾಹನ ಸಮೇತ ಓಡಿ ಹೋದ ವಾಹನ ಮತ್ತು ಚಾಲಕನಿಗೆ ಪತ್ತೆ ಮಾಡಬೇಕು ಮತ್ತು ಸದರಿ ವಿಷಯದಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸಿದ್ದಮ್ಮ ಗಂಡ ಬಕ್ಕಣ್ಣ ಸೋನಾದಿ ಸಾ: ಕಿಣ್ಣಿಸಡಕ ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಹಮದ ಅಲಿ ತಂದೆ ಲಾಡ್ಲೇಸಾಬ ಡಲಾಯತ ಸಾ : ಟಿನಾಪಲ್ ಸ್ಕೂಲ ಹತ್ತಿರ ಖಾಜಾ ಕಾಲೂನಿ ಕಲಬುರಗಿ ಮತ್ತು ನನ್ನ ಗೆಳೆಯ ಡಾ;ಅಬ್ದುಲ ಮಜೀದ ಇಬ್ಬರು  ಖಾಸಾ ಗೆಳೆಯರಿದ್ದು. ಆತನ ಅಕ್ಕಳಾದ ಸಾಲೆಹಾ ತಶ್ಲೀಮ   ಇವರ ಮದುವೆಯು ಮೌಲನಾ ಅಬ್ದುಲ ಖದೀರ  ಉಮ್ರೀ  ಇವರೊಂದಿಗೆ ಆಗಿ 27 ವರ್ಷ  ಗತಿಸಿದ್ದು  ಅವರಿಗೆ 3 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳಿರುತ್ತಾರೆ . ಮದುವೆಯಾಗಿ 5-6 ವರ್ಷ ಚನ್ನಾಗಿದ್ದು ತದನಂತರ ಆತನು ತನ್ನ ಹೆಂಡತಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುತಿದ್ದನು ಹೀಗಾಗಿ ನಾನು ಮತ್ತು ಡಾ; ಅಬ್ದುಲ ಮಜೀದ  ತಿಳಿಹೇಳುತಿದ್ದೇವು .ಅಲ್ಲದೆ ಮೌಲನಾ ಅಬ್ದುಲ ಖದೀರ ಉಮ್ರೀ ಇತನಿಗೆ ಒಟ್ಟು 3 ಮದುವೆಗಳಾಗಿದ್ದು ಸಾಲೇಹಾ ತಶ್ಲೀಮ ಇವರು ಮೊದಲನೆ ಹೆಂಡತಿಯಾಗಿರುತ್ತಾರೆ.ಇವರು 2  ಮದುವೆ ಯಾಕೆ ಆಗಿರುತ್ತಿ ಅಂತಾ ಕೇಳಿದಕ್ಕೆ  ಅವಳೊಂದಿಗೆ ಜಗಳ ಮಾಡುತಿದ್ದು ನಾನು ಮತ್ತು ಡಾ;ಅಬ್ದುಲ ಮಜೀದ ತಿಳಿ ಹೇಳುತಿದ್ದೇವು ಹೀಗಾಗಿ ಆಗಾಗ ನನಗೆ ತುಮ ಕೌನ ಹೈಬೇ ಬೋಸಡಿ ಹಮಾರಿ ಫ್ಯಾಮಿಲಿಮೇ ಪಂಚಾಯತ ಕರನೆ ವಾಲೆ ಎಂದು ನನ್ನೊಂದಿಗೆ ತಕರಾರು ಮಾಡಿ ನನ್ನ ಮೇಲೆ ದ್ವೇಷ ಸಾಧಿಸುತಿದ್ದನು. ಅವನ್ನ ಇನ್ನೊಬ್ಬ ಹೆಂಡತಿ ನಾಂದೇಡ ಮುಖೆಡದಲ್ಲಿ ವಾಸವಾಗಿರುತ್ತಾಳೆ ಇನ್ನೊಬ್ಬ ಹೆಂಡತಿ ಮಜಾಹಿರ ನಗರದಲ್ಲಿ ಇನ್ನೊಬ್ಬ ಹೆಂಡತಿ ಇರುತ್ತಾಳೆ ಹೀಗಾಗಿ ಆತನು ಅಲ್ಲಿಯೇ ವಾಸವಾಗಿರುತ್ತಾನೆ. ಮತ್ತು ವರ್ಷ ಕ್ಕೆ ಒಂದು ಬಾರಿ ಸೌದಿ, ಕುವೈತಗಳಿಗೆ ಹೋಗಿ ಬರುತ್ತಾನೆ. ಹೀಗಿದ್ದು ದಿನಾಂಕ. 23-5-2018 ರಂದು ಸಂಜೆ ಖಾಜಾ ಕಾಲೂನಿಯ ಹೊಟೆಲ್ ಹತ್ತಿರ ನನ್ನ ಗೆಳೆಯ ಡಾ; ಅಬ್ದುಲ ಮಜೀದ ಇತನು ನನಗೆ ಹೇಳಿದ್ದೇನೆಂದರೆ  ತನ್ನ ಅಕ್ಕಳ ಗಂಡ ಮೌಲನಾ ಅಬ್ದುಲ ಖದೀರ ಉಮ್ರೀ ಇತನು  ದಿನಾಂಕ. 26-5-2018 ರಂದು ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮಹೀಬೂಬ ಸೇಠ ಇವರ ಮನೆಯಲ್ಲಿ ತಮ್ಮ ಗಂಡ ಹೆಂಡತಿಯ ಪಂಚಾಯತಿ ಮಾಡುವದಿದೆ ಬರುವದಕ್ಕೆ ಹೇಳಿರುತ್ತಾರೆ ಬರಬೇಕು ಅಂತಾ ಹೇಳಿದನ್ನು ಅದಕ್ಕೆ ನಾನು ಬರುತ್ತೇನೆಂದು ತಿಳಿಸಿದ್ದು. ದಿನಾಂಕ. 26-5-2018 ರಂದು ಸಂಜೆ. 6-15 ಪಿ.ಎಂ.ಕ್ಕೆ. ನಾನು   ಇಂಡಸ್ಟ್ರೀಯಲ್ ಗೇಟ ಹತ್ತಿರ ನಿಂತಿದ್ದು ಡಾ; ಅಬ್ದುಲ ಮಜೀದ ಮತ್ತು ಆತನ ಅಕ್ಕ ಸಾಲೆಯಾ ತ ಸಲೀಮ ಇಬ್ಬರು ಇರಫಾನನ ಆಟೋರಿಕ್ಷಾದಲ್ಲಿ ಬಂದರು ಆಗ ನಾನು ಕೂಡಾ  ಅವರ ಆಟೋರಿಕ್ಷಾದಲ್ಲಿ ಕುಳಿತುಕೊಂಡೇನು ಸಂಜೆ. 6-30 ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ  ಮಹಿಬೂಬ ಸೇಠ ಇವರ ಮನೆ ಹತ್ತಿರ ಹೋಗುತ್ತಿದ್ದಂತೆ ಒಂದು ಕಾರ ನಮ್ಮ ಆಟೋರಿಕ್ಷಾದ ಎದರುಗಡೆ ಬಂದ ನಿಂತಿದ್ದು ಕಾರನಿಂದ 5-6 ಜನರು ಇಳಿದರು. ಅವರಲ್ಲಿ ಮೌಲನಾ ಅಬ್ದುಲ ಖದೀರ ಉಮ್ರೀ ಇತನು  ತನ್ನ ಸಂಗಡಿಗರೊಂದಿಗೆ ನಮ್ಮ ಆಟೋದ ಹತ್ತಿರ ಬಂದಾಗ ನಾವು ಕೂಡಾ ಆಟೊದಿಂದ ಕೆಳಗೆ ಇಳಿದಾಗ ಮೌಲನಾ ಅಬ್ದುಲ ಖದೀರ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತುಮ ಕೌನ ಹೈಬೇ   ಬೋಸಡಿಕೆ ಮೇರೆ   ಐರ್ ಮೇರೆ ಬಿವಿಕೆ ಬಿಚಮೆ ಪಂಚಾಯತ ಕರನೆವಾಲೆ ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೊಡೆದಾಗ ನಾನು ಅವನಿಗೆ ನೂಕಿ ಕೊಟ್ಟೆನು ಆಗ ಅವನು ಒಂದು ಸಲಿಕೆ ಕಾವಿನಿಂದ ಜೋರಾಗಿ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಅವನ ಸಂಗಡ 2 ಜನರು ಕೂಡಾ ಕಟ್ಟಿಗೆ ಬಡಿಗೆಯಿಂದ ಹೊಡೆಯ ಹತ್ತಿದ್ದರು ಇನ್ನೂಳಿದ 2-3 ಜನರು ನನಗೆ ಕೆಳಗೆ ಹಾಕಿ ಕಾಲಿನಿಂದ ಒದೆಯ ಹತ್ತಿದ್ದು ಆಗ ಅಬ್ದುಲ ಖದೀರನು ನನಗೆ  ಕೊಲೆ ಮಾಡುವ ಉದ್ದೇಶದಿಂದ ಪುನಾ ನನ್ನ ಎಡಗಾಲು ತೊಡೆಗೆ ಹಾಗೂ ತಲೆಯ ಮೇಲೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಾಗ ನನ್ನ ಹೆಡಕಿಗೆ ಬೆನ್ನಲ್ಲಿ ಗುಪ್ತ ಪೆಟ್ಟಾಗಿರುತ್ತವೆ ಆಗ ನಾನು ಚೀರಾಡುವಾಗ ನನ್ನ ಸಂಗಡ ಇದ್ದ ಡಾ;ಅಬ್ದುಲ ಮಜೀದ , ಸಾಲೆಯಾ ತಶ್ಲೀಮ ಹಾಗೂ ಆಟೋಚಾಲಕ ಇರಫಾನ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಕೊಲೆ ಮಾಡುತಿದ್ದರು. ಆಗ ಅವರು ನನಗೆ ಸಾಲೆ ಆಜ್ ಬಚಗಯಾ ಅಯಿಂದ ಹಮಾರಿ ಪಂಚಾಯತ ಆಯೇತೋ ಖತಮ ಕರದುಂಗಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 May 2018

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ  ಸಂಗಪ್ಪ ತಂದೆ  ಶರಣಪ್ಪ  ಹಡಪದ ಸಾಃ ಕಕ್ಕೇರಾ ತಾಃ ಸುರಪೂರ ಹಾಃವಃ ಬಸವೇಶ್ವರ ನಗರ ಜೇವರಗಿ ಇವರು ಜೇವರಗಿಯ ಬಸವೇಶ್ವರ ನಗರ  ಈಶ್ವರ ತಂದೆ ಷಣ್ಮೂಖ  ಅವರಾದ ಇವರ ಮನೆ ನಂ 9/13 ರಲ್ಲಿ ಬಾಡಿಗೆಯಿಂದ ಸುಮಾರು 2 ವರ್ಷದಿಂದ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆಹೀಗಿದ್ದು ದಿ 20.05.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರೇಖಾ, ತಂದೆಯಾದ ಶರಣಪ್ಪ  ಹಡಪದ, ಮತ್ತು ತಾಯಿ ಗುರುಲಿಂಗಮ್ಮ ಹಾಗೂ ಮಕ್ಕಳು ಊಟ ಮಾಡಿದ ನಂತರ  ನಮ್ಮ ಮನೆಯ ಬಾಗಿಲ  ಮುಚ್ಚಿ  ಕೀಲಿ ಹಾಕಿ ಮನೆ ಚಾವಣಿಯ ಮೇಲೆ ಹೊಗಿ ಎಲ್ಲರೂ ಮಗಲಗಿಕೊಂಡಿರುತ್ತೆವೆ. ದಿ. 21.05.2018 ರಂದು ಬೇಳಗಿನ ಜಾವ  4.30 ಗಂಟೆಯ ಸುಮಾರಿಗೆ  ನನಗೆ ಎಚ್ಚರವಾಗಿ ಕೇಳಗೆ ಬಂದಾಗ, ನಮ್ಮ ಮನೆಯ ಬಾಗಿಲು ತೆರೆದಿತ್ತು, ಬಾಗಿಲ ಕೊಂಡಿ ಮುರಿದಿದ್ದು ಇತ್ತುಅದನ್ನು ನೋಡಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಮತ್ತು ಮನೆಯಲ್ಲಿನ ಅಲಮಾರಿಯಲ್ಲಿದ್ದ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು .ಕಿ. 1,87,700/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 20.05.2018 ರಾತ್ರಿ 11.30 ಗಂಟೆಯಿಂದ ದಿ. 21.05.2018 ಬೇಳಗಿನ ಜಾವ 4.30. ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಬಾಗಿಲ ತೆರೆದು ಮನೆಯೊಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಚೌಕ ಠಾಣೆ : ಶ್ರೀ ಉಮೇಶ ತಂದೆ ರಾಮಚಂದ್ರ ಪವಾರ ಸಾಃ ಕಮಲಾಪೂರ ಗ್ರಾಮ ಹಾಃವಾಃ ಪ್ಲಾಟ ನಂ 310 ಗೋಕುಲ ನಗರ 01ನೇ ಹಂತ ಜಿಡಿಎ ಕಾಲೋನಿ ಫೀಲ್ಟರ್ ಬೇಡ್ ರೋಡ್ ಹತ್ತಿರ ಕಲಬುರಗಿ ರವರು ದಿನಾಂಕ 25.05.2018 ರಂದು ನನ್ನ ತಂದೆತಾಯಿ ಇಬ್ಬರೂ ನಮ್ಮ ಸಂಬಂಧಿ ಗಣಪತ ರಾಠೋಡ್ ಇವರಿಗೆ ಹುಷಾರಿಲ್ಲದ್ದರಿಂದ ಮಾತಾಡಿಸಿಕೊಂಡು ಬರುವ ಸಲುವಾಗಿ ಹೋಗಿದ್ದ ಮನೆಯಲ್ಲಿ ನಾನು, ನನ್ನ ಹೆಂಡತಿ ಲಲಿತಾ ಹಾಗೂ ತಮ್ಮ ರಾಜೇಶ ಮೂವರು ಮನೆಯಲ್ಲಿಯೆ ಇದ್ದೆವು. ರಾತ್ರಿ ಅಂದಾಜು 2.30 ಗಂಟೆಯವರೆಗೆ ನಾನು ಎಚ್ಚೆರವಾಗಿಯೆ ಇದ್ದು ವೇಳೆಯಲ್ಲಿ ನನ್ನ ತಮ್ಮ ರಾಜೇಶನು ಮನೆಯ ಬಾಗಿಲು ತೆರೆದುಕೊಂಡು ಅಭ್ಯಾಸ ಮಾಡುತ್ತಿದ್ದು ಅವನು ಮಲಗುವಾಗ ಮನೆಯ ಬಾಗಿಲನ್ನು ಹಾಕದೆ ಹಾಗೆ ಬಾಗಿಲನ್ನು ಸ್ವಲ್ಪ ಮುಂದೆ ಮಾಡಿ ಮಲಗಿಕೊಂಡಿದ್ದು, ರಾತ್ರಿ 3.00 ರಿಂದ ಬೆಳಿಗ್ಗೆ 6.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯಲ್ಲಿ ಬಂದು ಮನೆಯ ಬೆಡ್ ರೂಂದಲ್ಲಿದ್ದ ಅಲಮಾರಿಯ ಚಾವಿಂಯನ್ನು ತೆಗೆದುಕೊಂಡು ಅಲಮಾರಿನಲ್ಲಿಟ್ಟಿದ್ದ ಬಂಗಾರದ ಮತ್ತು ಬೆಳ್ಳೀಯ ಆಭರಣಗಳ .ಕಿ. 3,08,000/- ರೂಪಾಯಿ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ