ಕಳವು ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಸಂಗಪ್ಪ ತಂದೆ ಶರಣಪ್ಪ ಹಡಪದ ಸಾಃ ಕಕ್ಕೇರಾ ತಾಃ ಸುರಪೂರ ಹಾಃವಃ ಬಸವೇಶ್ವರ ನಗರ ಜೇವರಗಿ ಇವರು ಜೇವರಗಿಯ ಬಸವೇಶ್ವರ ನಗರ ಈಶ್ವರ ತಂದೆ ಷಣ್ಮೂಖ ಅವರಾದ ಇವರ ಮನೆ ನಂ 9/13 ರಲ್ಲಿ ಬಾಡಿಗೆಯಿಂದ ಸುಮಾರು 2 ವರ್ಷದಿಂದ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ಹೀಗಿದ್ದು ದಿ 20.05.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರೇಖಾ, ತಂದೆಯಾದ ಶರಣಪ್ಪ ಹಡಪದ, ಮತ್ತು ತಾಯಿ ಗುರುಲಿಂಗಮ್ಮ ಹಾಗೂ ಮಕ್ಕಳು ಊಟ ಮಾಡಿದ ನಂತರ ನಮ್ಮ ಮನೆಯ ಬಾಗಿಲ ಮುಚ್ಚಿ ಕೀಲಿ ಹಾಕಿ ಮನೆ ಚಾವಣಿಯ ಮೇಲೆ ಹೊಗಿ ಎಲ್ಲರೂ ಮಗಲಗಿಕೊಂಡಿರುತ್ತೆವೆ. ದಿ. 21.05.2018 ರಂದು ಬೇಳಗಿನ ಜಾವ 4.30 ಗಂಟೆಯ ಸುಮಾರಿಗೆ ನನಗೆ ಎಚ್ಚರವಾಗಿ ಕೇಳಗೆ ಬಂದಾಗ, ನಮ್ಮ ಮನೆಯ ಬಾಗಿಲು ತೆರೆದಿತ್ತು, ಬಾಗಿಲ ಕೊಂಡಿ ಮುರಿದಿದ್ದು ಇತ್ತು. ಅದನ್ನು ನೋಡಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಮತ್ತು ಮನೆಯಲ್ಲಿನ ಅಲಮಾರಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಅ.ಕಿ. 1,87,700/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 20.05.2018 ರ ರಾತ್ರಿ 11.30 ಗಂಟೆಯಿಂದ ದಿ. 21.05.2018 ರ ಬೇಳಗಿನ ಜಾವ 4.30. ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಬಾಗಿಲ ತೆರೆದು ಮನೆಯೊಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಉಮೇಶ ತಂದೆ ರಾಮಚಂದ್ರ ಪವಾರ ಸಾಃ ಕಮಲಾಪೂರ ಗ್ರಾಮ ಹಾಃವಾಃ ಪ್ಲಾಟ ನಂ 310 ಗೋಕುಲ ನಗರ 01ನೇ ಹಂತ ಜಿಡಿಎ ಕಾಲೋನಿ ಫೀಲ್ಟರ್ ಬೇಡ್ ರೋಡ್ ಹತ್ತಿರ ಕಲಬುರಗಿ ರವರು ದಿನಾಂಕ 25.05.2018 ರಂದು ನನ್ನ ತಂದೆತಾಯಿ ಇಬ್ಬರೂ ನಮ್ಮ ಸಂಬಂಧಿ ಗಣಪತ ರಾಠೋಡ್ ಇವರಿಗೆ ಹುಷಾರಿಲ್ಲದ್ದರಿಂದ ಮಾತಾಡಿಸಿಕೊಂಡು ಬರುವ ಸಲುವಾಗಿ ಹೋಗಿದ್ದ ಮನೆಯಲ್ಲಿ ನಾನು, ನನ್ನ ಹೆಂಡತಿ ಲಲಿತಾ ಹಾಗೂ ತಮ್ಮ ರಾಜೇಶ ಮೂವರು ಮನೆಯಲ್ಲಿಯೆ ಇದ್ದೆವು. ರಾತ್ರಿ ಅಂದಾಜು 2.30 ಗಂಟೆಯವರೆಗೆ ನಾನು ಎಚ್ಚೆರವಾಗಿಯೆ ಇದ್ದು ಆ ವೇಳೆಯಲ್ಲಿ ನನ್ನ ತಮ್ಮ ರಾಜೇಶನು ಮನೆಯ ಬಾಗಿಲು ತೆರೆದುಕೊಂಡು ಅಭ್ಯಾಸ ಮಾಡುತ್ತಿದ್ದು ಅವನು ಮಲಗುವಾಗ ಮನೆಯ ಬಾಗಿಲನ್ನು ಹಾಕದೆ ಹಾಗೆ ಬಾಗಿಲನ್ನು ಸ್ವಲ್ಪ ಮುಂದೆ ಮಾಡಿ ಮಲಗಿಕೊಂಡಿದ್ದು, ರಾತ್ರಿ 3.00 ರಿಂದ ಬೆಳಿಗ್ಗೆ 6.00
ಗಂಟೆಯ
ಅವಧಿಯಲ್ಲಿ
ಯಾರೋ
ಕಳ್ಳರು
ನಮ್ಮ
ಮನೆಯಲ್ಲಿ
ಬಂದು
ಮನೆಯ
ಬೆಡ್
ರೂಂದಲ್ಲಿದ್ದ
ಅಲಮಾರಿಯ
ಚಾವಿಂಯನ್ನು
ತೆಗೆದುಕೊಂಡು
ಅಲಮಾರಿನಲ್ಲಿಟ್ಟಿದ್ದ ಬಂಗಾರದ ಮತ್ತು
ಬೆಳ್ಳೀಯ ಆಭರಣಗಳ ಅ.ಕಿ. 3,08,000/- ರೂಪಾಯಿ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment