POLICE BHAVAN KALABURAGI

POLICE BHAVAN KALABURAGI

24 March 2018

KALABURAGI DISTRICT REPORTED CRIMES

ಸಾರ್ವಜನಿಕರೆಗೆ ತೊಂದರೆ ನೀಡಿದ ಪ್ರಕರಣ ;
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಪಾರುಕ್ ಪದಾಧಿಕಾರಿಗಳು ಎಸ್.ಡಿ.ಪಿ.ಐ ಎಮ್.ಎಸ್.ಕೆ. ಮೀಲ್ ಕಲಬುರಗಿ ಇವರು ಇಂದು ದಿನಾಂಕ 23.03.2018 ರಂದು ರಾತ್ರಿ 8 ಗಂಟೆಗೆ ಎಮ್.ಎಸ್.ಕೆ.ಮೀಲ್ ದಲ್ಲಿ ಪಕ್ಷದ ಕಾರ್ಯಲಯ ಉದ್ಘಾಟನೆ  ಮಾಡುವದು ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕುರಿತು ಠಾಣೆಗೆ ಅರ್ಜಿ ಸಲ್ಲಿಸಿದ್ದು, ಸದರಿಯವರಿಗೆ ಯಾವುದೆ ತೆರನಾದ  ರಾಲಿಯನ್ನು ಮಾಡದಂತೆ ತಿಳಿಸಿದ್ದು ಸದರಿಯವರು ಸಲ್ಲಿಸಿದ ಅರ್ಜಿಯಂತೆ ಬ/ಬ ಕರ್ತವ್ಯ ನಿರ್ವಹಿಸು ಕುರಿತು ನಾನು, ನಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 8 ಗಂಟೆಯ ಸುಮಾರಿಗೆ ಎಮ್.ಎಸ್.ಕೆ.ಮೀಲ್ ಗೇಟ ಹತ್ತಿರ ಹೋಗಿದ್ದು. ಸದರಿ ಸಂಘಟನೆಯ ಪದಾಧಿಕಾರಿಗಳಾದ 1. ಮಹ್ಮದ ಮೊಸೀನ್ ಎಸ್.ಡಿ.ಪಿ.ಐ ಪಕ್ಷದ 2. ಮಹ್ಮದ ಶಮಶೋದಿನ್, 3 ಮಹ್ಮದ ಏಜಾಜ ವೈಸ ಪ್ರಸಿಡೆಂಟ್, 4 ಸೈಯದ ಜಾಕೀರ, 5 ಮಹ್ಮದ ಫಾರುಕ ಮದಿನಾ ಕಾಲೋನಿ ಗ್ರೀನ್ ಸರ್ಕಲ್, 6. ಅಬ್ದುಲ ರಹೀಮ ಪಟೇಲ, 7 ಶಾಹೀದ ಹಾಗೂ ಇನ್ನೂ ಕೆಲವರು ಕೂಡಿಕೊಂಡು ಎಮ್.ಎಸ್.ಕೆ.ಮೀಲ್ ಗೇಟ ದಿಂದ ರಾತ್ರಿ 9 ಗಂಟೆಯ ಸುಮಾರಿಗೆ, ಮೊಟಾರ ಸೈಕಲ ನಂ ಕೆಎ 32 ಇಜಿ 7110, ಮೋಟಾರ ಸೈಕಲ ನಂ ಕೆಎ 32 ಇಜೆ. 1140, ಕೆಎ 32 ಇಜೆ 0387 ಕೆಎ 32 ಎಸ್ 5552 ಕೆಎ 32 ಇಎಫ್ 3013 ಕೆಎ 25 ಹೆಚ್ 9990 ಕೆಎ 32 ಜೆ 7566, ಕೆಎ 32 ಇಎ 8576, ಕೆಎ 32 ಇಎಫ್ 8460, ಕೆಎ 32 ಇಡಿ 8849, ಕೆಎ 32 ಇಡಿ 7063, ಕೆಎ 32 ಕ್ಯೂ 5748, ಕೆಎ 33 ಹೆಚ್. 1944, ಕೆಎ 35, ಡಬ್ಲೂ 4158 ಮತ್ತು ಅಟೊ ನಂ ಕೆಎ 32 ಬಿ 4017, ಹಾಗೂ ಮಹ್ಮದ ಮೋಸಿನ್ ಇತನ ಕಾರ ಹಾಗೂ ಇನ್ನೂ ಕೆಲವು ಮೊಟಾರ ಸೈಕಲ ತೆಗೆದುಕೊಂಡು ರಾತ್ರಿ 9:00 ಗಂಟೆಗೆ ಎಮ್.ಎಸ್.ಕೆ.ಮೀಲ್ ಗೇಟ ದಿಂದ ಮದಿನಾ ಕಾಲೋನಿ ಅಟೊ ಸ್ಟಾಂಡವರೆಗೆ ಮೊಟಾರ ಸೈಕಲ, ಅಟೊ ಮತ್ತು ಕಾರ ತೆಗೆದುಕೊಂಡು ರಾಲಿ ಹೊರಟು ರಸ್ತೆಯ ಮೇಲೆ ಸಂಚರಿಸುವ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡತಡೆಯನ್ನೂಂಟು ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಟ್ಸಪ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ಎನ್. ತಾಂಬೇ ಮುಖ್ಯ ಅಧೀಕ್ಷಕರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ 002QQ  ಅಫಜಲಪೂರ ರವರು ತಮ್ಮ ಕೇಂದ್ರದ ಕೊಠಡಿ ಸಂಖ್ಯೆ 01 ರಲ್ಲಿ ಕೋಣೆ ಮೇಲ್ವಿಚಾರಕರಾಗಿ ಶ್ರೀ ಭೀಮಣ್ಣ ಹುಣಶ್ಯಾಳ ಸ.ಪ್ರೌ.ಶಾಲೆ ತೆಲ್ಲರೂ ರವರು ಕಾರ್ಯನಿರ್ವಹಿಸುತ್ತಿದ್ದರು. ಪರೀಕ್ಷ ಪ್ರಾರಂಭವಾಗಿ ಸುಮಾರು 11 ಗಂಟೆಗೆ ಪರೀಕ್ಷೆ ಬರೆಯುತ್ತಿದ್ದ ವಿಧ್ಯಾರ್ಥಿಯಾದ ಅಬ್ಬಾಸಲಿ ತಂದೆ ಲಾಲಸಾಬ ಮುಲ್ಲಾ ನೋಂದಣಿ ಸಂಖ್ಯೆ 20180090171 ಈ ವಿಧ್ಯಾರ್ಥಿಯು ಕೋಣೆಯಲ್ಲಿ ಕಿಟಕಿಯ ಬದಿಗೆ ಪರೀಕ್ಷೆ ಬರೆಯುತ್ತಿದ್ದ ಆ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಕಿಟಕಿಯಲ್ಲಿ ಅಬ್ಬಾಸಅಲಿಗೆ ಕೇಳಿ ಅವನ ಪ್ರಶ್ನೆ ಪತ್ರಿಕೆಯ ಒಂದು ಪುಟದ ಫೋಟೊವನ್ನು ತಗೆದುಕೊಂಡಿರುತ್ತಾನೆ. ಸದರಿ ಫೋಟೊ ತಗೆದುಕೊಂಡ ವ್ಯಕ್ತಿಗೆ ಪರೀಕ್ಷ ಬರೆಯುತ್ತಿದ್ದ ಅಬ್ಬಾಸಲಿ ಮುಲ್ಲಾ ಇತನು ಸಹಕರಿಸಿರುತ್ತಾನೆ. ಇದರಿಂದ ಸದರಿ ಕನ್ನಡ ಪ್ರಶ್ನೆ ಪತ್ರಿಕೆ ವಾಟ್ಸಪ್ ಮುಖಾಂತ ಸೋರಿಕೆ ಆಗಿರುತ್ತದೆ ಎಲ್ಲಾ ಘಟನೆಗಳು ಪರಿಕ್ಷೆ ಮುಗಿಯುವ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ. ಕಾರಣ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮೋಬೈಲ ಮೂಲಕ ಫೋಟೊ ತೆಗೆದುಕೊಂಡು ಹೋಗಿ ವ್ಯಾಟ್ಸಪ ಮೂಲಕ ಸೋರಿಕೆ ಮಾಡಿದ ಅಪರಿಚಿತ ವ್ಯಕ್ತಿಯ ಮೇಲೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕಾರ ನೀಡಿದ ವಿಧ್ಯಾರ್ಥಿಯಾದ ಅಬ್ಬಾಸಲಿ ಲಾಲಸಾಬ ಮುಲ್ಲಾ ರಾಹುಲ ಗಾಂಧಿ ಪ್ರೌಡ ಶಾಲೆ ಅಫಜಲಪೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಚಿದಾನಂದ ತಂದೆ ನರಸಪ್ಪ ಹೂಗಾರ ಸಾ|| ಅಂಕಲಗಾ ತಾ: ಜೇವರಗಿ ಇವರು ದಿನಾಂಕ: 21/03/2018 ರಂದು 9:00 ಪಿ.ಎಂಕ್ಕೆ ನಾನು ನನ್ನ ಹೆಂಡತಿ ಶೈಲಾಶ್ರೀ ಊಟ ಮಾಡಿಕೊಂಡು 10:00 ಪಿ.ಎಂ ಸುಮಾರಿಗೆ ಮನೆ ಕಿಲಿ ಹಾಕಿಕೊಂಡು ಮನೆಯ ಮಾಳಗಿ ಮೇಲೆ ಮಲಗಿಕೊಂಡೆವು. ನಂತರ ನಾನು ಇಂದು 4:00 ಎ.ಎಂಕ್ಕೆ ಮಾಳಿಗೆ ಮೆಲಿಂದ ಇಳಿದು ಕೆಳಗಡೆ ಬಂದಾಗ ಬಾಗಿಲುಗಳು ತೆರೆದಿದ್ದವು ಅದನ್ನು ನೋಡಿ ನಾನು ಗಾಬರಿಯಾಗಿ ನನ್ನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಮನೆಯ ಬಾಗಿಲದ ಕೀಲಿ ಮುರಿದು ಒಳಗಡೆ ಇನ್ನೊಂದು ರೂಮಿನಲ್ಲಿ ಇದ್ದ ತಿಜೋರಿಯ ಕೀಲಿ ಮುರಿದಿದ್ದು ನೋಡಲಾಗಿ ತಿಜೋರಿಯಲ್ಲಿ ಇಟ್ಟ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 3,12, 000/- ರೂ ಕಿಮ್ಮತಿನದು ನಮ್ಮ ಮನೆಯಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಿನ್ನೆ ರಾತ್ರಿ ದಿನವೆ ನಮ್ಮೂರಿನ ಶಿವಾನಂದ ತಂದೆ ಬಲವಂತ್ರಾಯ ಲಕ್ಕುಂಡಿ ಇವರ ಕಿರಾಣಿ ಅಂಗಡಿಯ ಕಿಲಿ ಮುರಿದು ಗಲ್ಲಾದಲ್ಲಿ ಇದ್ದ 78000/- ರೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ದಿನಾಂಕ : 21/03/2018 ರ 10 ಪಿ.ಎಂ ದಿಂದ 22/03/2018 ರ 4:00 ಎ.ಎಂದ ಅವಧಿಯಲ್ಲಿ ನಮ್ಮಮನೆಯ ಕೀಲಿ ಮುರಿದು ಮತ್ತು ಶಿವಾನಂದ ಲಕ್ಕುಂಡಿಯವರ ಕಿರಾಣಿ ಅಂಗಡಿಯ ಕೀಲಿ ಮುರಿದು ಒಟ್ಟು 3,90,000/- ಸಾವಿರ ಕಿಮ್ಮತ್ತಿನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಲಕ್ಷ್ಮಿಪುತ್ರ ತಂದೆ ಬಸವರಾಜ ಮಡ್ಡಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ  ರವರ ತಂದೆಯಾದ ಬಸವರಾಜ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ನಮ್ಮೂರ ಸಿಮಾಂತರದ ಸರ್ವೆ ನಂ 161 ರಲ್ಲಿ 3 ಎಕರೆ 27 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು  ಕೃಷಿ ಚಟುವಟಿಕೆಗಾಗಿ ಎಸ್.ಬಿ ಐ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಅಲ್ಲದೆ ವಯಕ್ತಿಕವಾಗಿಯೂ ಸಾಲ ಮಾಡಿಕೊಂಡಿದ್ದು, ಬ್ಯಾಂಕಿನವರು ಸಾಲ ತಿರಿಸಬೆಕೆಂದು ಆಗಾಗ ಮನೆಗೆ ಬಂರುತ್ತಿದ್ದು ಅಲ್ಲದೆ ಜಮೀನಿನಲ್ಲಿ ಬೆಳೆ ಸರಿಯಾಗಿ ಬೆಳೆಯದೆ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಿಬೇಕೆಂದು ಚಿಂತಿಸುತ್ತಾ ಇಂದು ದಿನಾಂಕ 22/03/2018 ರಂದು 8.00 ಎ.ಎಮಕ್ಕೆ ನಮ್ಮೂರಿನ ಸಿದ್ದಗೌಡ ,ಮಾಲಿ ಪಾಟೀಲ ಇವರ ಹೋಲದಲ್ಲಿರುವ ರೆಷ್ಮಿ ಶೇಡದಲ್ಲಿನ ಕಬ್ಬಿಣ್ಣದ ಯಂಗಲ್ ಪಟ್ಟಿಗೆ ತನ್ನ ದೋತ್ರಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಚಾನ್ಸಬಾಯಿ ಗಂಡ ಮಲ್ಲಯ್ಯ ಗುತ್ತೇದಾರ ಸಾ||ಕಲ್ಲಹಂಗರಗಾ ಇವರು ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳೆ ಹೆಣ್ಣುಗಳಿದ್ದು ಕಿರಿಯ ಮಗನಾದ ಸುರೇಶನಿಗೆ ಹೊರತು ಪಡಿಸಿ ಉಳಿದವರ ಇಬ್ಬರ ಮದುವೆಯಾಗಿದ್ದು ಎಲ್ಲರು ಈಗ ಸದ್ಯ ಪುಣೆಯಲ್ಲಿ ವಾಸವಾಗಿದ್ದು ಊರಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ವಾಸವಾಗಿರುತ್ತೇವೆ. ನಮ್ಮೂರಿನಿಂದ ಚಿಂಚನಸೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಚಿಂಚನಸೂರ ಸೀಮಾಂತರದಲ್ಲಿ ನಮಗೆ 4 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಜೋಳದ ಬೆಳೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಜೋಳಕ್ಕೆ ಹಂದಿ ಹೊಡೆಯುತ್ತಿದ್ದರಿಂದ ಈಗ 2-3 ದಿವಸಳಗಳಿಂದ ನನ್ನ ಗಂಡನು ದಿನಾಲು ರಾತ್ರಿ ಹೊಲಕ್ಕೆ ಹೋಗಿ ಅಲ್ಲಿಯೇ ಮಲಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:04-02-2018 ರಂದು ರಾತ್ರಿ ನನ್ನ ಗಂಡನು ನಮ್ಮ ಹೊಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದರು, ನಂತರ ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನ ಗುಂಡಪ್ಪ ತಂದೆ ರೇವಣಪ್ಪ ಹುಬ್ಬಣಿ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಾದ ಮಲ್ಲಯ್ಯ ಇವರು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೆದ್ದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ವಿಠಲ್ ಕಮಲಾಪೂರ ಇವರ ಹೊಲದ ಹತ್ತಿರ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ನಮ್ಮೂರಿನ ಗುರುಬಸಪ್ಪ ತಂದೆ ರೇವಪ್ಪ ದಣ್ಣೂರ ಇವರೊಂದಿಗೆ ಮೊಟಾರ್ ಸೈಕಲ್ ಮೇಲೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಮೊಳಕಾಲ ಕೆಳಭಾಗಗಕ್ಕೆ ರಕ್ತಗಾಯವಾಗಿದ್ದು ಗುತ್ತಿಗೆಗೆ ಮತ್ತು ಎಡಗಡೆ ಮೇಲಕಿಗೆ ತರಚಿದಗಾಯವಾಗಿ ಬಿದ್ದಿದ್ದು. ಮಾತನಾಡಿಸಲು ಮಾತಮಾಡುವ ಸ್ಥತಿಯಲ್ಲಿ ಇರಲಿಲ್ಲ. ಅಪಘಾತ ಪಡಿಸಿದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೇದ್ದು ಕೂಡ ಅಲ್ಲಿಯೇ ಬಿದ್ದಿತ್ತು ನಂತರ ನಾನು ಅಂಬ್ಯೂಲೇನ್ಸಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡನು ಸದ್ಯ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನನ್ನ ಗಂಡನಿಗೆ ಅಪಘಾತ ಪಡಿಸಿದ ಚಾಲಕ ಹೆಸರು ಅಂಬರೀಷ ತಂದೆ ಹಣಮಂತಪ್ಪ ಚಿಂಚನಸೂರ ಸಾ||ಜವಳಗಾ(ಬಿ) ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನಿಂಗಪ್ಪ ಹಿರೆಪೂಜಾರಿ ಸಾ||ಜವಳಗಾ (ಬಿ) ಎಂದು ನನಗೆ ನಂತರ ಗೊತ್ತಾಗಿರುತ್ತದೆ. ಸದರಿ ಚಾಲಕನು ಆ ದಿಸವ ಅಪಘಾತ ಪಡಿಸಿ ಮೊಟಾರ್ ಸೈಕಲ್ ಬಿಟ್ಟು ಓಡಿಹೋಗಿದ್ದು ದಿನಾಂಕ 04-02-2018 ರಂದು ಅಪಘಾತ ಹೊಂದಿದ ಹಿನ್ನೆಲೆಯಲ್ಲಿ ಭಾರಿಗಾಯವಾಗಿದ್ದರಿಂದ ಸದರಿ ಗಾಯದ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದು ಸದರಿ ಚಿಕಿತ್ಸೆ ಫಲಕಾರಿಯಾಗದೆ ಇದ್ದುದ್ದರಿಂದ ದಿನಾಂಕ 21-03-2018 ರಂದು 0030 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಇಬ್ರಾಹೀಮ್ ತಂದೆ ಹಮೀದ್ ಪಟೇಲ ಸಾ||ಬೋಗನಳ್ಳಿ ತಾ||ಅಫಜಲಪೂರ ರವರು ದಿನಾಂಕ 19/03/2018 ರಂದು ನಮ್ಮೂರಿನಿಂದ ನಾನು ಹಾಗು ಅಣ್ಣತಮ್ಮಕ್ಕಿಯಾದ ಮಜೀದ ಪಟೇಲ ತಂದೆ ನಬಿಲಾಲ ಪಟೇಲ ಸಾ||ಬೋಗನಳ್ಳಿ ಇಬ್ಬರು ಕೂಡಿಕೊಂಡು ನನ್ನ ಅಳಿಯನ ಮೋಟಾರ ಸೈಕಲ ನಂ ಕೆಎ32 ಇಪಿ 7192 ನೇದ್ದರ ಮೇಲೆ ಕುಳಿತುಕೊಂಡು ಗಾಣಗಾಪೂರಕ್ಕೆ ಹೋಗುತಿದ್ದೇವು ಮೋಟಾರ ಸೈಕಲ ನಬಿಲಾಲನು ನಡೆಸುತಿದ್ದನು ಆನೂರ ಬಿಲ್ವಾಡ ಮದ್ಯ ಹೋಗುತಿದ್ದಾಗ  ಸಮುಯ ಸುಮಾರು 11.45 ಎಎಮ್ ಕ್ಕೆ ಎದುರುಗಡೆಯಿಂದ ಒಬ್ಬ ಕ್ರೂಜರ್ ವಾಹನ  ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ನಾವಿಬ್ಬರು ಕೆಳಗೆ ಬಿದ್ದೆವು ಅದೇ ಸಮಯದಲ್ಲಿ ಹಿಂದಿನಿಂದ ಬರುತಿದ್ದ ಲಾಲಾಪಟೇಲ ತಂದೆ ಮಶಾಕ ಪಟೇಲ, ಅಬ್ದುಲಗನಿ ತಂದೆ ಬಾಬಾಸಾಬ ಅವರಾದ ಸಾ|| ಭೋಗನಳ್ಳಿ ಇವರು ಬಂದು ಎಬ್ಬಿಸಿದ್ದು ನನಗೆ ಬಲಗಾಲ ಮೋಳಕಾಲಿಗೆ, ಹಾಗು ಮೊಳಕಾಲಿನ ಕೆಳಗೆ ಭಾರಿ ಒಳಪೆಟ್ಟು ಗಾಯವಾಗಿರುತ್ತದೆ ಕ್ರೂಜರ್ ವಾಹನ ನಂಬರ ನೋಡಲು ಕೆಎ-48 ಎಮ್ 7109 ಇದ್ದು ಚಾಲಕನ ಹೆಸರು ಯಲ್ಲಪ್ಪ ಕನ್ನಾಳ ಸಾ||ಸಾವಳಗಾ ತಾ||ಜಮಖಂಡಿ ಅಂತ ಗೊತ್ತಾಗಿರುತ್ತದೆ. ಕ್ರೂಜರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 March 2018

KALABURAGI DISTRICT REPORTED CRIMES

ಆತ್ಮಹತ್ಯೆಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟ್ನಪ್ಪ ತಂದೆ ಪದ್ಮಾಜೀ ಕಾಳೆ ಸಾ:ಶರಣಸಿರಸಗಿ ತಾ:ಜಿ:ಕಲಬುರಗಿ ಸುಮಾರು 11 ವರ್ಷಗಳಿಂದ ಶರಣಸಿರಸಗಿ ನಾಗರಕಟ್ಟೆಯ ಹತ್ತಿರ ಇರುವ ವಿಲಾಶರಾವ ವಕೀಲ ಇವರ ಹೋಲದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇನೆ. ನನಗೆ 03 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿರುತ್ತಾರೆ. ಈಗ 05 ತಿಂಗಳ ಹಿಂದೆ ನನ್ನ ಅಣ್ಣನಾದ ಹಣಮಂತ ತಂದೆ ಪದ್ಮಾಜೀ ಕಾಳೇ ಇತನಿಗೆ ಪೊಲೀಸರು ಯಾವುದೋ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಕಲಬುರಗಿ ಜೈಲಿಗೆ ಕಳಿಸಿಕೊಟ್ಟಿದ್ದು ಆತನಿಗೆ ಜಾಮೀನು ಮಾಡಿಸಲು ನನ್ನ ಮದ್ಯಸ್ಥಿಕೆಯಿಂದ ಜಾಮೀನು ಮಾಡಲು ವಕೀಲರಿಗೆ ಹಣವನ್ನು ಕೊಟ್ಟಿದ್ದು ನನ್ನ ಅಣ್ಣ ಹಣಮಂತ ಇತನಿಗೆ ಇನ್ನು ಜಾಮೀನು ಆಗಿರುವುದಿಲ್ಲಾ. ದಿನಾಂಕ:- 18/03/2018 ರಂದು ಬೀರಲಿಂಗ ದೇವರ ಪಲ್ಲಕ್ಕಿ ಮೆರವಣಿಗೆ ಇರುವುದರಿಂದ್ದ ಮೆರವಣಿಗೆ ನೋಡಲು ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ಶರಣಸಿರಸಗಿ ಗ್ರಾಮಕ್ಕೆ ಬಂದು ಮದ್ಯಾಹ್ನ ಜಗದೇವಪ್ಪ ಕಣ್ಣಿ ಇವರ ಮನೆಯಲ್ಲಿ ನಾವೆಲ್ಲರೂ ಊಟ ಮಾಡಿ ಹೊರಗೆ ಬಂದು ನಿಂತುಕೊಂಡಾಗ ಆಗ ನನ್ನ ಅಣ್ಣನ ಹೆಂಡತಿ ಚೆನ್ನಮ್ಮಾ ಗಂಡ ಹಣಮಂತ ಕಾಳೇ ಇವಳು ಅಲ್ಲಿಗೇ ಬಂದು ನನಗೆ ಏನಪ್ಪ ನನ್ನ ಗಂಡ 5 ತಿಂಗಳ ಆದರೂ ನನ್ನ ಗಂಡನಿಗೆ ಇನ್ನು ಯಾಕೇ ಜಾಮೀನು ಮಾಡಿಸಿರುವುದಿಲ್ಲಾ ದೊಡ್ಡದಾಗಿ ಹೇಳಿ ನಮ್ಮ ಹತ್ತಿರ ಹಣ ತೆಗೆದುಕೊಂಡು ಜಾಮೀನು ಯಾಕೇ ಮಾಡಿಸಿರುವದಿಲ್ಲಾ ಅಂತಾ ಬೈಯ್ಯುತ್ತಿದ್ದಾಗ ಆಗ ನಾನು ಕೊರ್ಟನ ವಿಷಯ ಇರುತ್ತದೆ ಇನ್ನು 2-3 ದಿವಸಗಳಲ್ಲಿ ಜಾಮೀನು ಆಗುತ್ತದೆ ಅಂತಾ ಎಷ್ಟೆ ತಿಳಿ ಹೇಳಿದರೂ ಸಹಾ ಕೇಳದೆ ಒಂದೇ ಸವನೇ ಹೊಲ-ಹೊಲಸು ಹ್ಯಾಟ್ಯಾ, ಬಾಡಕೋ ಜಾಮೀನು ಮಾಡಿಸದ್ದಿದ್ದರೇ ನೀವು ಎಲ್ಲಿಯಾದರೂ ಹೋಗಿ ಸಾಯಿರಿ ನಮ್ಮ ಮನೆ ಯಾಕೇ ಹಾಳು ಮಾಡುತ್ತಿದ್ದಿರಿ ಅಂತಾ ಹೊಲ-ಹೊಲಸು ಬೈಯ್ಯುತ್ತಿದ್ದಾಗ ಆಗ ನನ್ನ ಮಗಳಾದ ಕಾವೇರಿ ಇವಳು ಚೆನ್ನಮ್ಮಾ ಇವಳಿಗೆ ಚಿಕ್ಕಮ್ಮಾ ಇಲ್ಲಿ ಊರಿನವರು ಇದ್ದಾರೆ ನಮ್ಮ ಮನೆತನದ ಮರ್ಯಾದೆ ಹೋಗುತ್ತದೆ ಹೀಗೇ ಬೈಯ್ಯತ್ತಿದ್ದೇರೆ ಹ್ಯಾಗೇ ಅಂತಾ ತಿಳಿ ಹೇಳಲು ಹೋದಾಗ ಆಗ ಚೆನ್ನಮ್ಮಾ ಇವಳು ನನ್ನ ಮಗಳಾದ ಕಾವೇರಿ ಇವಳಿಗೆ ಏ ಭೋಸಡಿ ನಿಮ್ಮ ಅಪ್ಪನಿಗೆ ಹೇಳುವುದು ಬಿಟ್ಟು ನನಗೆ ಬುದ್ದಿವಾದ ಹೇಳಲು ಬರುತ್ತಿಯಾ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮುಖದ ಮೇಲೆ ಒಂದು ಏಟು ಹೊಡೆದು ನೀನು ಮತ್ತು ನಿಮ್ಮ ಅಪ್ಪ ಇಬ್ಬರೂ ಕೂಡಿ ಎಲ್ಲಿಯಾದರೂ ಹೋಗಿ ಸಾಯಿರಿ ಅಂತಾ ಅನ್ನುತ್ತಿದ್ದಾಗ ಆಗ ಜಗದೇವಪ್ಪ ಕಣ್ಣಿ, ಬಸವರಾಜ ಕಣ್ಣಿ ಇವರು ಬಂದು ಯಾಕೇ ಜಗಳ ಮಾಡುತ್ತಿದ್ದಿರಿ ಅಂತಾ ಹೇಳಿ ಅಲ್ಲಿಂದ ನಮಗೆ ಕಳಿಸಿಕೊಟ್ಟರು ನಂತರ ನಾನು ಮತ್ತು ನನ್ನ ಮಕ್ಕಳಾದ ಕಾವೇರಿ, ನಾಗೇಶ, ಪವನ ಎಲ್ಲರೂ ಕೂಡಿ ಮನೆಗೆ ಬಂದೇವು. ಮುಂದೆ ನನ್ನ ಮಗಳಾದ ಕಾವೇರಿ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದಳು. ಬಹಳ ಸಮಯವಾದರು ಸಂಡಾಸಕ್ಕೆ ಹೋದ ನನ್ನ ಮಗಳು ಮರಳಿ ಮನೆಗೆ ಬರದೇ ಇರುವುದ್ದರಿಂದ್ದ ನಾನು ಮತ್ತು ನನ್ನ ಹೆಂಡತಿ ಸುಭದ್ರಾಬಾಯಿ ಇಬ್ಬರು ಕೂಡಿಕೊಂಡು ಹೋಲದಲ್ಲಿ ಹುಡುಕಾಡುತ್ತಾ ಹೋಗುತ್ತಿದ್ದಾಗ ನಮ್ಮ ಹೋಲದ ಮಾಲಿಕರಾದ ವಿಲಾಶರಾವ ವಕೀಲರ ಹೋಲದಲ್ಲಿದ್ದ ಹಳೆಯೆ ಮನೆಯ ಹತ್ತಿರ ಬಸರಿ ಗಿಡಕ್ಕೆ ಓಡನಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಗಿಡದಲ್ಲಿ ನೇತಾಡುತ್ತಿದ್ದಾಗ ನನ್ನ ಮಗಳು ಇನ್ನು ಜೀವಂತ ಇರುವಂತೆ ಕಂಡು ಬಂದಿದ್ದರಿಂದ್ದ ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಗಾಬರಿಗೊಂಡು ನನ್ನ ಮಗಳು ಕಾವೇರಿ ತನ್ನ ಕುತ್ತಿಗೆಗೆ ಹಾಕಿಕೊಂಡ ಓಡನಿಯನ್ನು ಕೂಡುಗೋಲನಿಂದ ಕೋಯ್ದು ನೆಲದ ಮೇಲೆ ಮಲಗಿಸಿ ಬಾಯಯಲ್ಲಿ ಸ್ವಲ್ಪ ನೀರು ಹಾಕಿದಾಗ ನನ್ನ ಮಗಳು ಸ್ವಲ್ಪ ನೀರು ಕುಡಿದು ಬಿಕ್ಕುತ್ತಾ  ಮೃತಪಟ್ಟಳು ಆಗ ಅಂದಾಜು ಮದ್ಯಾಹ್ನ 03:00 ಗಂಟೆ ಆಗಿತ್ತು. ಅವಳಿಗೆ ನೋಡಲಾಗಿ ಅವಳ ಕುತ್ತಿಗೆ ಸುತ್ತಲು ನೇಣು ಹಾಕಿಕೊಂಡ ಕಂದು ಗಟ್ಟಿದ ಗಾಯ ಇತ್ತು. ನಂತರ ನನ್ನ ಮಗಳು ಕಾವೇರಿ ಇವಳ ಶವವನ್ನು ಖಾಸಗಿ ಅಂಬುಲೆನ್ಸನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಕಾವೇರಿ ಸಾವಿಗೆ ಕಾರಣ ನನ್ನ ಅಣ್ಣನ ಹೆಂಡತಿ ಚನ್ನಮ್ಮ ಗಂಡ  ಹಣಮಂತ ಕಾಳೆ ಇವಳೆ ಕಾರಣ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾಂತೇಶ ತಂದೆ ಶಿವಶರಣಪ್ಪ ಗುಡ್ಡೇವಾಡಿ ಸಾ||ಅಫಜಲಪೂರ ರವರ ತಮ್ಮ ಮಂಜುನಾಥ ಇವನು ಚೌಡಾಪೂರ ಗೃಹ ರಕ್ಷಕ ದಳದಲ್ಲಿ ಗೃಹ ರಕ್ಷಕ ಅಂತಾ ಕೆಲಸ ಮಾಡಿಕೊಂಡಿದ್ದು ಈಗ ಸುಮಾರಿ 15-20 ದಿವಸಗಳಿಂದ ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಕರ್ತವ್ಯ ನೀರ್ವಹಿಸುತ್ತಿದ್ದನು. ಪ್ರತಿ ದಿವಸ ಘತ್ತರಗಾ ಗ್ರಾಮಕ್ಕೆ ನಮ್ಮ ಮೋಟಾರ ಸೈಕಲ್ ನಂ ಕೆಎ-28-ಯು-3311 ನೇದ್ದರ ಮೇಲೆ ಹೋಗಿ ಬರುತ್ತಿದ್ದನು. ನಿನ್ನೆ ದಿನಾಂಕ 17-03-2018 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 09:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕಿಯ ಅಶೋಕ ಗುಡ್ಡೇವಾಡಿ ನನ್ನ ಮೋಬಾಯಿಲಗೆ ಕರೆ ಮಾಡಿ ಅಫಜಲಪೂರ-ಘತ್ತರಗಾ ರೋಡಿನ ಮೇಲೆ ಸುಲೇಕಾರ ರವರ ಹೊಲದ ಹತ್ತಿರ ರಾತ್ರಿ 08:30 ಗಂಟೆ ಸುಮಾರಿಗೆ ನಿಮ್ಮ ತಮ್ಮ ಮಂಜುನಾಥ ಘತ್ತರಗಾ ಶ್ರೀ ಭಾಗ್ಯವಂತೆ ದೇವಸ್ಥಾನದಿಂದ ಕರ್ತವ್ಯ ಮುಗಿಸಿಕೊಂಡು ಮೂಟಾರ ಸೈಕಲ್ ಮೇಲೆ ಮರಳಿ ಮನೆಗೆ ಬರುತ್ತಿದ್ದಾಗ ಅಫಜಲಪೂರ ದಿಂದ ಘತ್ತರಗಾ ಕಡೆ ಹೊರಟಿದ್ದ ಯಾವುದೊ ವಾಹನ ಹವಳಗಾ ಸಕ್ಕರೆ ಕಾರ್ಖಾನೆಗೆ ಅಥವಾ ಬೇರೆ ಎಲ್ಲಿಗೊ ಹೋಗುವ ವಾಹನ ಇರುತ್ತದೆ ಗೊತ್ತಾಗಿರುವುದಿಲ್ಲಾ. ಸದರಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮಂಜುನಾಥನ ಮೋಟಾರ ಸೈಕಲಗೆ ಡಿಕ್ಕಿ ಹೊಡೆಸಿ ಅಪಘಾತ ಪಡೆಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಸದರಿ ಘಟನೆಯಲ್ಲಿ ಮಂಜುನಾಥನಿಗೆ ಎಡಗಾಲಿನ ಹಿಂಬಡಿಯಿಂದ ತೊಡೆಯವರೆಗೆ ಅಪಘಾತಪಡೆಸಿದ ವಾಹನದ ಚಕ್ರ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಮೌಸ ಕಂಡ ಹೊರ ಬಂದಿದ್ದು ತಲೆಗೆ ಮತ್ತು ಎಡಗೈಗೆ, ಹಾಗೂ ಶರೀರದ ಇನ್ನಿತರ ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ತಿಳಿಸಿದನು. ಆಗ ನಾನು ಮತ್ತು ನಾಗರಾಜ ತಂದೆ ಮಲ್ಲಿಕಾರ್ಜುನ ಜೇವರ್ಗಿ ಇಬ್ಬರು ಸೇರಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಿರುತ್ತೇವೆ. ನಾನು ಹೋಗುವಷ್ಟರಲ್ಲಿ ಅಶೋಕ ಗುಡ್ಡೇವಾಗಿ 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದಿದ್ದು ನಾನು ಮಂಜುನಾಥನಿಗೆ ಸದರಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ರಾತ್ರಿ 10:45 ಗಂಟೆ ಸುಮಾರಿಗೆ ಮಂಜುನಾಥನಿಗೆ ಪರಿಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಫಜಲಪೂರ ಸರಕಾರಿ ಆಸ್ಪತ್ರೆಗೆ ನನ್ನ ತಮ್ಮನಿಗೆ ಕರೆದುಕೊಂಡು ಹೋದಾಗ ಕರ್ತವ್ಯದಲ್ಲಿಯ ವೈಧ್ಯರು ಸರಿಯಾಗಿ ಚಿಕಿತ್ಸೆ ಮಾಡದೇ ಕಲಬುರಗಿಗೆ ತಗೆದುಕೊಂಡು ಹೋಗಿ ಅಂತಾ ಹೇಳಿರುತ್ತಾರೆ. ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಗೆದುಕೊಂಡು ಹೋದಾಗ ಅಲ್ಲಿಯೂ ನಮ್ಮ ತಮ್ಮನಿಗೆ ಸರಿಯಾಗಿ ಚಿಕಿತ್ಸೆ ನೀಡದೇ ನನ್ನ ತಮ್ಮನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.