ಆತ್ಮಹತ್ಯೆಮಾಡಿಕೊಳ್ಳಲು
ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟ್ನಪ್ಪ ತಂದೆ ಪದ್ಮಾಜೀ ಕಾಳೆ ಸಾ:ಶರಣಸಿರಸಗಿ ತಾ:ಜಿ:ಕಲಬುರಗಿ ಸುಮಾರು
11 ವರ್ಷಗಳಿಂದ ಶರಣಸಿರಸಗಿ ನಾಗರಕಟ್ಟೆಯ ಹತ್ತಿರ ಇರುವ ವಿಲಾಶರಾವ ವಕೀಲ ಇವರ ಹೋಲದಲ್ಲಿ ಒಕ್ಕಲುತನ
ಕೆಲಸ ಮಾಡಿಕೊಂಡಿರುತ್ತೇನೆ. ನನಗೆ 03 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು
ಮಕ್ಕಳಿರುತ್ತಾರೆ. ಈಗ 05 ತಿಂಗಳ ಹಿಂದೆ ನನ್ನ ಅಣ್ಣನಾದ ಹಣಮಂತ ತಂದೆ ಪದ್ಮಾಜೀ ಕಾಳೇ ಇತನಿಗೆ
ಪೊಲೀಸರು ಯಾವುದೋ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಕಲಬುರಗಿ ಜೈಲಿಗೆ ಕಳಿಸಿಕೊಟ್ಟಿದ್ದು ಆತನಿಗೆ
ಜಾಮೀನು ಮಾಡಿಸಲು ನನ್ನ ಮದ್ಯಸ್ಥಿಕೆಯಿಂದ ಜಾಮೀನು ಮಾಡಲು ವಕೀಲರಿಗೆ ಹಣವನ್ನು ಕೊಟ್ಟಿದ್ದು
ನನ್ನ ಅಣ್ಣ ಹಣಮಂತ ಇತನಿಗೆ ಇನ್ನು ಜಾಮೀನು ಆಗಿರುವುದಿಲ್ಲಾ. ದಿನಾಂಕ:- 18/03/2018 ರಂದು
ಬೀರಲಿಂಗ ದೇವರ ಪಲ್ಲಕ್ಕಿ ಮೆರವಣಿಗೆ ಇರುವುದರಿಂದ್ದ ಮೆರವಣಿಗೆ ನೋಡಲು ನಾನು ಮತ್ತು ನನ್ನ ಮಕ್ಕಳು
ಕೂಡಿಕೊಂಡು ಶರಣಸಿರಸಗಿ ಗ್ರಾಮಕ್ಕೆ ಬಂದು ಮದ್ಯಾಹ್ನ ಜಗದೇವಪ್ಪ ಕಣ್ಣಿ ಇವರ ಮನೆಯಲ್ಲಿ
ನಾವೆಲ್ಲರೂ ಊಟ ಮಾಡಿ ಹೊರಗೆ ಬಂದು ನಿಂತುಕೊಂಡಾಗ ಆಗ ನನ್ನ ಅಣ್ಣನ ಹೆಂಡತಿ ಚೆನ್ನಮ್ಮಾ ಗಂಡ
ಹಣಮಂತ ಕಾಳೇ ಇವಳು ಅಲ್ಲಿಗೇ ಬಂದು ನನಗೆ ಏನಪ್ಪ ನನ್ನ ಗಂಡ 5 ತಿಂಗಳ ಆದರೂ ನನ್ನ ಗಂಡನಿಗೆ
ಇನ್ನು ಯಾಕೇ ಜಾಮೀನು ಮಾಡಿಸಿರುವುದಿಲ್ಲಾ ದೊಡ್ಡದಾಗಿ ಹೇಳಿ ನಮ್ಮ ಹತ್ತಿರ ಹಣ ತೆಗೆದುಕೊಂಡು
ಜಾಮೀನು ಯಾಕೇ ಮಾಡಿಸಿರುವದಿಲ್ಲಾ ಅಂತಾ ಬೈಯ್ಯುತ್ತಿದ್ದಾಗ ಆಗ ನಾನು ಕೊರ್ಟನ ವಿಷಯ ಇರುತ್ತದೆ
ಇನ್ನು 2-3 ದಿವಸಗಳಲ್ಲಿ ಜಾಮೀನು ಆಗುತ್ತದೆ ಅಂತಾ ಎಷ್ಟೆ ತಿಳಿ ಹೇಳಿದರೂ ಸಹಾ ಕೇಳದೆ ಒಂದೇ
ಸವನೇ ಹೊಲ-ಹೊಲಸು ಹ್ಯಾಟ್ಯಾ, ಬಾಡಕೋ ಜಾಮೀನು ಮಾಡಿಸದ್ದಿದ್ದರೇ ನೀವು ಎಲ್ಲಿಯಾದರೂ ಹೋಗಿ ಸಾಯಿರಿ ನಮ್ಮ ಮನೆ
ಯಾಕೇ ಹಾಳು ಮಾಡುತ್ತಿದ್ದಿರಿ ಅಂತಾ ಹೊಲ-ಹೊಲಸು ಬೈಯ್ಯುತ್ತಿದ್ದಾಗ ಆಗ ನನ್ನ ಮಗಳಾದ ಕಾವೇರಿ
ಇವಳು ಚೆನ್ನಮ್ಮಾ ಇವಳಿಗೆ ಚಿಕ್ಕಮ್ಮಾ ಇಲ್ಲಿ ಊರಿನವರು ಇದ್ದಾರೆ ನಮ್ಮ ಮನೆತನದ ಮರ್ಯಾದೆ
ಹೋಗುತ್ತದೆ ಹೀಗೇ ಬೈಯ್ಯತ್ತಿದ್ದೇರೆ ಹ್ಯಾಗೇ ಅಂತಾ ತಿಳಿ ಹೇಳಲು ಹೋದಾಗ ಆಗ ಚೆನ್ನಮ್ಮಾ ಇವಳು
ನನ್ನ ಮಗಳಾದ ಕಾವೇರಿ ಇವಳಿಗೆ ಏ ಭೋಸಡಿ ನಿಮ್ಮ ಅಪ್ಪನಿಗೆ ಹೇಳುವುದು ಬಿಟ್ಟು ನನಗೆ ಬುದ್ದಿವಾದ
ಹೇಳಲು ಬರುತ್ತಿಯಾ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮುಖದ ಮೇಲೆ ಒಂದು ಏಟು ಹೊಡೆದು ನೀನು
ಮತ್ತು ನಿಮ್ಮ ಅಪ್ಪ ಇಬ್ಬರೂ ಕೂಡಿ ಎಲ್ಲಿಯಾದರೂ ಹೋಗಿ ಸಾಯಿರಿ ಅಂತಾ ಅನ್ನುತ್ತಿದ್ದಾಗ ಆಗ
ಜಗದೇವಪ್ಪ ಕಣ್ಣಿ, ಬಸವರಾಜ ಕಣ್ಣಿ ಇವರು ಬಂದು ಯಾಕೇ ಜಗಳ ಮಾಡುತ್ತಿದ್ದಿರಿ ಅಂತಾ ಹೇಳಿ ಅಲ್ಲಿಂದ ನಮಗೆ
ಕಳಿಸಿಕೊಟ್ಟರು ನಂತರ ನಾನು ಮತ್ತು ನನ್ನ ಮಕ್ಕಳಾದ ಕಾವೇರಿ, ನಾಗೇಶ, ಪವನ
ಎಲ್ಲರೂ ಕೂಡಿ ಮನೆಗೆ ಬಂದೇವು. ಮುಂದೆ ನನ್ನ ಮಗಳಾದ ಕಾವೇರಿ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ
ಅಂತಾ ಮನೆಯಿಂದ ಹೋದಳು. ಬಹಳ ಸಮಯವಾದರು ಸಂಡಾಸಕ್ಕೆ ಹೋದ ನನ್ನ ಮಗಳು ಮರಳಿ ಮನೆಗೆ ಬರದೇ
ಇರುವುದ್ದರಿಂದ್ದ ನಾನು ಮತ್ತು ನನ್ನ ಹೆಂಡತಿ ಸುಭದ್ರಾಬಾಯಿ ಇಬ್ಬರು ಕೂಡಿಕೊಂಡು ಹೋಲದಲ್ಲಿ
ಹುಡುಕಾಡುತ್ತಾ ಹೋಗುತ್ತಿದ್ದಾಗ ನಮ್ಮ ಹೋಲದ ಮಾಲಿಕರಾದ ವಿಲಾಶರಾವ ವಕೀಲರ ಹೋಲದಲ್ಲಿದ್ದ ಹಳೆಯೆ
ಮನೆಯ ಹತ್ತಿರ ಬಸರಿ ಗಿಡಕ್ಕೆ ಓಡನಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಗಿಡದಲ್ಲಿ
ನೇತಾಡುತ್ತಿದ್ದಾಗ ನನ್ನ ಮಗಳು ಇನ್ನು ಜೀವಂತ ಇರುವಂತೆ ಕಂಡು ಬಂದಿದ್ದರಿಂದ್ದ ಆಗ ನಾನು ಮತ್ತು
ನನ್ನ ಹೆಂಡತಿ ಇಬ್ಬರು ಗಾಬರಿಗೊಂಡು ನನ್ನ ಮಗಳು ಕಾವೇರಿ ತನ್ನ ಕುತ್ತಿಗೆಗೆ ಹಾಕಿಕೊಂಡ
ಓಡನಿಯನ್ನು ಕೂಡುಗೋಲನಿಂದ ಕೋಯ್ದು ನೆಲದ ಮೇಲೆ ಮಲಗಿಸಿ ಬಾಯಯಲ್ಲಿ ಸ್ವಲ್ಪ ನೀರು ಹಾಕಿದಾಗ ನನ್ನ
ಮಗಳು ಸ್ವಲ್ಪ ನೀರು ಕುಡಿದು ಬಿಕ್ಕುತ್ತಾ
ಮೃತಪಟ್ಟಳು ಆಗ ಅಂದಾಜು ಮದ್ಯಾಹ್ನ 03:00 ಗಂಟೆ ಆಗಿತ್ತು. ಅವಳಿಗೆ ನೋಡಲಾಗಿ ಅವಳ
ಕುತ್ತಿಗೆ ಸುತ್ತಲು ನೇಣು ಹಾಕಿಕೊಂಡ ಕಂದು ಗಟ್ಟಿದ ಗಾಯ ಇತ್ತು. ನಂತರ ನನ್ನ ಮಗಳು ಕಾವೇರಿ ಇವಳ
ಶವವನ್ನು ಖಾಸಗಿ ಅಂಬುಲೆನ್ಸನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಕಾವೇರಿ
ಸಾವಿಗೆ ಕಾರಣ ನನ್ನ ಅಣ್ಣನ ಹೆಂಡತಿ ಚನ್ನಮ್ಮ ಗಂಡ ಹಣಮಂತ ಕಾಳೆ ಇವಳೆ ಕಾರಣ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ಮಹಾಂತೇಶ ತಂದೆ ಶಿವಶರಣಪ್ಪ ಗುಡ್ಡೇವಾಡಿ ಸಾ||ಅಫಜಲಪೂರ ರವರ
ತಮ್ಮ ಮಂಜುನಾಥ ಇವನು ಚೌಡಾಪೂರ ಗೃಹ ರಕ್ಷಕ ದಳದಲ್ಲಿ ಗೃಹ ರಕ್ಷಕ ಅಂತಾ ಕೆಲಸ ಮಾಡಿಕೊಂಡಿದ್ದು ಈಗ ಸುಮಾರಿ 15-20 ದಿವಸಗಳಿಂದ
ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಕರ್ತವ್ಯ ನೀರ್ವಹಿಸುತ್ತಿದ್ದನು. ಪ್ರತಿ ದಿವಸ
ಘತ್ತರಗಾ ಗ್ರಾಮಕ್ಕೆ ನಮ್ಮ ಮೋಟಾರ ಸೈಕಲ್ ನಂ ಕೆಎ-28-ಯು-3311 ನೇದ್ದರ ಮೇಲೆ ಹೋಗಿ ಬರುತ್ತಿದ್ದನು. ನಿನ್ನೆ ದಿನಾಂಕ 17-03-2018 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 09:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕಿಯ ಅಶೋಕ ಗುಡ್ಡೇವಾಡಿ ನನ್ನ ಮೋಬಾಯಿಲಗೆ ಕರೆ ಮಾಡಿ ಅಫಜಲಪೂರ-ಘತ್ತರಗಾ ರೋಡಿನ ಮೇಲೆ ಸುಲೇಕಾರ ರವರ ಹೊಲದ ಹತ್ತಿರ ರಾತ್ರಿ 08:30 ಗಂಟೆ ಸುಮಾರಿಗೆ ನಿಮ್ಮ ತಮ್ಮ ಮಂಜುನಾಥ ಘತ್ತರಗಾ ಶ್ರೀ ಭಾಗ್ಯವಂತೆ ದೇವಸ್ಥಾನದಿಂದ ಕರ್ತವ್ಯ ಮುಗಿಸಿಕೊಂಡು ಮೂಟಾರ ಸೈಕಲ್ ಮೇಲೆ ಮರಳಿ ಮನೆಗೆ ಬರುತ್ತಿದ್ದಾಗ ಅಫಜಲಪೂರ ದಿಂದ ಘತ್ತರಗಾ ಕಡೆ ಹೊರಟಿದ್ದ ಯಾವುದೊ ವಾಹನ ಹವಳಗಾ ಸಕ್ಕರೆ ಕಾರ್ಖಾನೆಗೆ ಅಥವಾ ಬೇರೆ ಎಲ್ಲಿಗೊ ಹೋಗುವ ವಾಹನ ಇರುತ್ತದೆ ಗೊತ್ತಾಗಿರುವುದಿಲ್ಲಾ. ಸದರಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮಂಜುನಾಥನ ಮೋಟಾರ ಸೈಕಲಗೆ ಡಿಕ್ಕಿ ಹೊಡೆಸಿ ಅಪಘಾತ ಪಡೆಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಸದರಿ ಘಟನೆಯಲ್ಲಿ ಮಂಜುನಾಥನಿಗೆ ಎಡಗಾಲಿನ ಹಿಂಬಡಿಯಿಂದ ತೊಡೆಯವರೆಗೆ ಅಪಘಾತಪಡೆಸಿದ ವಾಹನದ ಚಕ್ರ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಮೌಸ ಕಂಡ ಹೊರ ಬಂದಿದ್ದು ತಲೆಗೆ ಮತ್ತು ಎಡಗೈಗೆ, ಹಾಗೂ ಶರೀರದ ಇನ್ನಿತರ ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ತಿಳಿಸಿದನು. ಆಗ ನಾನು ಮತ್ತು ನಾಗರಾಜ ತಂದೆ ಮಲ್ಲಿಕಾರ್ಜುನ ಜೇವರ್ಗಿ ಇಬ್ಬರು ಸೇರಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಿರುತ್ತೇವೆ. ನಾನು ಹೋಗುವಷ್ಟರಲ್ಲಿ ಅಶೋಕ ಗುಡ್ಡೇವಾಗಿ 108 ವಾಹನಕ್ಕೆ
ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದಿದ್ದು ನಾನು ಮಂಜುನಾಥನಿಗೆ ಸದರಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ರಾತ್ರಿ 10:45 ಗಂಟೆ ಸುಮಾರಿಗೆ ಮಂಜುನಾಥನಿಗೆ ಪರಿಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಫಜಲಪೂರ ಸರಕಾರಿ ಆಸ್ಪತ್ರೆಗೆ ನನ್ನ ತಮ್ಮನಿಗೆ ಕರೆದುಕೊಂಡು ಹೋದಾಗ ಕರ್ತವ್ಯದಲ್ಲಿಯ ವೈಧ್ಯರು ಸರಿಯಾಗಿ ಚಿಕಿತ್ಸೆ ಮಾಡದೇ ಕಲಬುರಗಿಗೆ ತಗೆದುಕೊಂಡು ಹೋಗಿ ಅಂತಾ ಹೇಳಿರುತ್ತಾರೆ. ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಗೆದುಕೊಂಡು ಹೋದಾಗ ಅಲ್ಲಿಯೂ ನಮ್ಮ ತಮ್ಮನಿಗೆ ಸರಿಯಾಗಿ ಚಿಕಿತ್ಸೆ ನೀಡದೇ ನನ್ನ ತಮ್ಮನು ಮೃತಪಟ್ಟಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment