POLICE BHAVAN KALABURAGI

POLICE BHAVAN KALABURAGI

22 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಚಾನ್ಸಬಾಯಿ ಗಂಡ ಮಲ್ಲಯ್ಯ ಗುತ್ತೇದಾರ ಸಾ||ಕಲ್ಲಹಂಗರಗಾ ಇವರು ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳೆ ಹೆಣ್ಣುಗಳಿದ್ದು ಕಿರಿಯ ಮಗನಾದ ಸುರೇಶನಿಗೆ ಹೊರತು ಪಡಿಸಿ ಉಳಿದವರ ಇಬ್ಬರ ಮದುವೆಯಾಗಿದ್ದು ಎಲ್ಲರು ಈಗ ಸದ್ಯ ಪುಣೆಯಲ್ಲಿ ವಾಸವಾಗಿದ್ದು ಊರಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ವಾಸವಾಗಿರುತ್ತೇವೆ. ನಮ್ಮೂರಿನಿಂದ ಚಿಂಚನಸೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಚಿಂಚನಸೂರ ಸೀಮಾಂತರದಲ್ಲಿ ನಮಗೆ 4 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಜೋಳದ ಬೆಳೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಜೋಳಕ್ಕೆ ಹಂದಿ ಹೊಡೆಯುತ್ತಿದ್ದರಿಂದ ಈಗ 2-3 ದಿವಸಳಗಳಿಂದ ನನ್ನ ಗಂಡನು ದಿನಾಲು ರಾತ್ರಿ ಹೊಲಕ್ಕೆ ಹೋಗಿ ಅಲ್ಲಿಯೇ ಮಲಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:04-02-2018 ರಂದು ರಾತ್ರಿ ನನ್ನ ಗಂಡನು ನಮ್ಮ ಹೊಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದರು, ನಂತರ ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನ ಗುಂಡಪ್ಪ ತಂದೆ ರೇವಣಪ್ಪ ಹುಬ್ಬಣಿ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಾದ ಮಲ್ಲಯ್ಯ ಇವರು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೆದ್ದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ವಿಠಲ್ ಕಮಲಾಪೂರ ಇವರ ಹೊಲದ ಹತ್ತಿರ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ನಮ್ಮೂರಿನ ಗುರುಬಸಪ್ಪ ತಂದೆ ರೇವಪ್ಪ ದಣ್ಣೂರ ಇವರೊಂದಿಗೆ ಮೊಟಾರ್ ಸೈಕಲ್ ಮೇಲೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಮೊಳಕಾಲ ಕೆಳಭಾಗಗಕ್ಕೆ ರಕ್ತಗಾಯವಾಗಿದ್ದು ಗುತ್ತಿಗೆಗೆ ಮತ್ತು ಎಡಗಡೆ ಮೇಲಕಿಗೆ ತರಚಿದಗಾಯವಾಗಿ ಬಿದ್ದಿದ್ದು. ಮಾತನಾಡಿಸಲು ಮಾತಮಾಡುವ ಸ್ಥತಿಯಲ್ಲಿ ಇರಲಿಲ್ಲ. ಅಪಘಾತ ಪಡಿಸಿದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೇದ್ದು ಕೂಡ ಅಲ್ಲಿಯೇ ಬಿದ್ದಿತ್ತು ನಂತರ ನಾನು ಅಂಬ್ಯೂಲೇನ್ಸಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡನು ಸದ್ಯ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನನ್ನ ಗಂಡನಿಗೆ ಅಪಘಾತ ಪಡಿಸಿದ ಚಾಲಕ ಹೆಸರು ಅಂಬರೀಷ ತಂದೆ ಹಣಮಂತಪ್ಪ ಚಿಂಚನಸೂರ ಸಾ||ಜವಳಗಾ(ಬಿ) ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನಿಂಗಪ್ಪ ಹಿರೆಪೂಜಾರಿ ಸಾ||ಜವಳಗಾ (ಬಿ) ಎಂದು ನನಗೆ ನಂತರ ಗೊತ್ತಾಗಿರುತ್ತದೆ. ಸದರಿ ಚಾಲಕನು ಆ ದಿಸವ ಅಪಘಾತ ಪಡಿಸಿ ಮೊಟಾರ್ ಸೈಕಲ್ ಬಿಟ್ಟು ಓಡಿಹೋಗಿದ್ದು ದಿನಾಂಕ 04-02-2018 ರಂದು ಅಪಘಾತ ಹೊಂದಿದ ಹಿನ್ನೆಲೆಯಲ್ಲಿ ಭಾರಿಗಾಯವಾಗಿದ್ದರಿಂದ ಸದರಿ ಗಾಯದ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದು ಸದರಿ ಚಿಕಿತ್ಸೆ ಫಲಕಾರಿಯಾಗದೆ ಇದ್ದುದ್ದರಿಂದ ದಿನಾಂಕ 21-03-2018 ರಂದು 0030 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಇಬ್ರಾಹೀಮ್ ತಂದೆ ಹಮೀದ್ ಪಟೇಲ ಸಾ||ಬೋಗನಳ್ಳಿ ತಾ||ಅಫಜಲಪೂರ ರವರು ದಿನಾಂಕ 19/03/2018 ರಂದು ನಮ್ಮೂರಿನಿಂದ ನಾನು ಹಾಗು ಅಣ್ಣತಮ್ಮಕ್ಕಿಯಾದ ಮಜೀದ ಪಟೇಲ ತಂದೆ ನಬಿಲಾಲ ಪಟೇಲ ಸಾ||ಬೋಗನಳ್ಳಿ ಇಬ್ಬರು ಕೂಡಿಕೊಂಡು ನನ್ನ ಅಳಿಯನ ಮೋಟಾರ ಸೈಕಲ ನಂ ಕೆಎ32 ಇಪಿ 7192 ನೇದ್ದರ ಮೇಲೆ ಕುಳಿತುಕೊಂಡು ಗಾಣಗಾಪೂರಕ್ಕೆ ಹೋಗುತಿದ್ದೇವು ಮೋಟಾರ ಸೈಕಲ ನಬಿಲಾಲನು ನಡೆಸುತಿದ್ದನು ಆನೂರ ಬಿಲ್ವಾಡ ಮದ್ಯ ಹೋಗುತಿದ್ದಾಗ  ಸಮುಯ ಸುಮಾರು 11.45 ಎಎಮ್ ಕ್ಕೆ ಎದುರುಗಡೆಯಿಂದ ಒಬ್ಬ ಕ್ರೂಜರ್ ವಾಹನ  ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ನಾವಿಬ್ಬರು ಕೆಳಗೆ ಬಿದ್ದೆವು ಅದೇ ಸಮಯದಲ್ಲಿ ಹಿಂದಿನಿಂದ ಬರುತಿದ್ದ ಲಾಲಾಪಟೇಲ ತಂದೆ ಮಶಾಕ ಪಟೇಲ, ಅಬ್ದುಲಗನಿ ತಂದೆ ಬಾಬಾಸಾಬ ಅವರಾದ ಸಾ|| ಭೋಗನಳ್ಳಿ ಇವರು ಬಂದು ಎಬ್ಬಿಸಿದ್ದು ನನಗೆ ಬಲಗಾಲ ಮೋಳಕಾಲಿಗೆ, ಹಾಗು ಮೊಳಕಾಲಿನ ಕೆಳಗೆ ಭಾರಿ ಒಳಪೆಟ್ಟು ಗಾಯವಾಗಿರುತ್ತದೆ ಕ್ರೂಜರ್ ವಾಹನ ನಂಬರ ನೋಡಲು ಕೆಎ-48 ಎಮ್ 7109 ಇದ್ದು ಚಾಲಕನ ಹೆಸರು ಯಲ್ಲಪ್ಪ ಕನ್ನಾಳ ಸಾ||ಸಾವಳಗಾ ತಾ||ಜಮಖಂಡಿ ಅಂತ ಗೊತ್ತಾಗಿರುತ್ತದೆ. ಕ್ರೂಜರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 March 2018

KALABURAGI DISTRICT REPORTED CRIMES

ಆತ್ಮಹತ್ಯೆಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟ್ನಪ್ಪ ತಂದೆ ಪದ್ಮಾಜೀ ಕಾಳೆ ಸಾ:ಶರಣಸಿರಸಗಿ ತಾ:ಜಿ:ಕಲಬುರಗಿ ಸುಮಾರು 11 ವರ್ಷಗಳಿಂದ ಶರಣಸಿರಸಗಿ ನಾಗರಕಟ್ಟೆಯ ಹತ್ತಿರ ಇರುವ ವಿಲಾಶರಾವ ವಕೀಲ ಇವರ ಹೋಲದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೇನೆ. ನನಗೆ 03 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿರುತ್ತಾರೆ. ಈಗ 05 ತಿಂಗಳ ಹಿಂದೆ ನನ್ನ ಅಣ್ಣನಾದ ಹಣಮಂತ ತಂದೆ ಪದ್ಮಾಜೀ ಕಾಳೇ ಇತನಿಗೆ ಪೊಲೀಸರು ಯಾವುದೋ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಕಲಬುರಗಿ ಜೈಲಿಗೆ ಕಳಿಸಿಕೊಟ್ಟಿದ್ದು ಆತನಿಗೆ ಜಾಮೀನು ಮಾಡಿಸಲು ನನ್ನ ಮದ್ಯಸ್ಥಿಕೆಯಿಂದ ಜಾಮೀನು ಮಾಡಲು ವಕೀಲರಿಗೆ ಹಣವನ್ನು ಕೊಟ್ಟಿದ್ದು ನನ್ನ ಅಣ್ಣ ಹಣಮಂತ ಇತನಿಗೆ ಇನ್ನು ಜಾಮೀನು ಆಗಿರುವುದಿಲ್ಲಾ. ದಿನಾಂಕ:- 18/03/2018 ರಂದು ಬೀರಲಿಂಗ ದೇವರ ಪಲ್ಲಕ್ಕಿ ಮೆರವಣಿಗೆ ಇರುವುದರಿಂದ್ದ ಮೆರವಣಿಗೆ ನೋಡಲು ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ಶರಣಸಿರಸಗಿ ಗ್ರಾಮಕ್ಕೆ ಬಂದು ಮದ್ಯಾಹ್ನ ಜಗದೇವಪ್ಪ ಕಣ್ಣಿ ಇವರ ಮನೆಯಲ್ಲಿ ನಾವೆಲ್ಲರೂ ಊಟ ಮಾಡಿ ಹೊರಗೆ ಬಂದು ನಿಂತುಕೊಂಡಾಗ ಆಗ ನನ್ನ ಅಣ್ಣನ ಹೆಂಡತಿ ಚೆನ್ನಮ್ಮಾ ಗಂಡ ಹಣಮಂತ ಕಾಳೇ ಇವಳು ಅಲ್ಲಿಗೇ ಬಂದು ನನಗೆ ಏನಪ್ಪ ನನ್ನ ಗಂಡ 5 ತಿಂಗಳ ಆದರೂ ನನ್ನ ಗಂಡನಿಗೆ ಇನ್ನು ಯಾಕೇ ಜಾಮೀನು ಮಾಡಿಸಿರುವುದಿಲ್ಲಾ ದೊಡ್ಡದಾಗಿ ಹೇಳಿ ನಮ್ಮ ಹತ್ತಿರ ಹಣ ತೆಗೆದುಕೊಂಡು ಜಾಮೀನು ಯಾಕೇ ಮಾಡಿಸಿರುವದಿಲ್ಲಾ ಅಂತಾ ಬೈಯ್ಯುತ್ತಿದ್ದಾಗ ಆಗ ನಾನು ಕೊರ್ಟನ ವಿಷಯ ಇರುತ್ತದೆ ಇನ್ನು 2-3 ದಿವಸಗಳಲ್ಲಿ ಜಾಮೀನು ಆಗುತ್ತದೆ ಅಂತಾ ಎಷ್ಟೆ ತಿಳಿ ಹೇಳಿದರೂ ಸಹಾ ಕೇಳದೆ ಒಂದೇ ಸವನೇ ಹೊಲ-ಹೊಲಸು ಹ್ಯಾಟ್ಯಾ, ಬಾಡಕೋ ಜಾಮೀನು ಮಾಡಿಸದ್ದಿದ್ದರೇ ನೀವು ಎಲ್ಲಿಯಾದರೂ ಹೋಗಿ ಸಾಯಿರಿ ನಮ್ಮ ಮನೆ ಯಾಕೇ ಹಾಳು ಮಾಡುತ್ತಿದ್ದಿರಿ ಅಂತಾ ಹೊಲ-ಹೊಲಸು ಬೈಯ್ಯುತ್ತಿದ್ದಾಗ ಆಗ ನನ್ನ ಮಗಳಾದ ಕಾವೇರಿ ಇವಳು ಚೆನ್ನಮ್ಮಾ ಇವಳಿಗೆ ಚಿಕ್ಕಮ್ಮಾ ಇಲ್ಲಿ ಊರಿನವರು ಇದ್ದಾರೆ ನಮ್ಮ ಮನೆತನದ ಮರ್ಯಾದೆ ಹೋಗುತ್ತದೆ ಹೀಗೇ ಬೈಯ್ಯತ್ತಿದ್ದೇರೆ ಹ್ಯಾಗೇ ಅಂತಾ ತಿಳಿ ಹೇಳಲು ಹೋದಾಗ ಆಗ ಚೆನ್ನಮ್ಮಾ ಇವಳು ನನ್ನ ಮಗಳಾದ ಕಾವೇರಿ ಇವಳಿಗೆ ಏ ಭೋಸಡಿ ನಿಮ್ಮ ಅಪ್ಪನಿಗೆ ಹೇಳುವುದು ಬಿಟ್ಟು ನನಗೆ ಬುದ್ದಿವಾದ ಹೇಳಲು ಬರುತ್ತಿಯಾ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮುಖದ ಮೇಲೆ ಒಂದು ಏಟು ಹೊಡೆದು ನೀನು ಮತ್ತು ನಿಮ್ಮ ಅಪ್ಪ ಇಬ್ಬರೂ ಕೂಡಿ ಎಲ್ಲಿಯಾದರೂ ಹೋಗಿ ಸಾಯಿರಿ ಅಂತಾ ಅನ್ನುತ್ತಿದ್ದಾಗ ಆಗ ಜಗದೇವಪ್ಪ ಕಣ್ಣಿ, ಬಸವರಾಜ ಕಣ್ಣಿ ಇವರು ಬಂದು ಯಾಕೇ ಜಗಳ ಮಾಡುತ್ತಿದ್ದಿರಿ ಅಂತಾ ಹೇಳಿ ಅಲ್ಲಿಂದ ನಮಗೆ ಕಳಿಸಿಕೊಟ್ಟರು ನಂತರ ನಾನು ಮತ್ತು ನನ್ನ ಮಕ್ಕಳಾದ ಕಾವೇರಿ, ನಾಗೇಶ, ಪವನ ಎಲ್ಲರೂ ಕೂಡಿ ಮನೆಗೆ ಬಂದೇವು. ಮುಂದೆ ನನ್ನ ಮಗಳಾದ ಕಾವೇರಿ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದಳು. ಬಹಳ ಸಮಯವಾದರು ಸಂಡಾಸಕ್ಕೆ ಹೋದ ನನ್ನ ಮಗಳು ಮರಳಿ ಮನೆಗೆ ಬರದೇ ಇರುವುದ್ದರಿಂದ್ದ ನಾನು ಮತ್ತು ನನ್ನ ಹೆಂಡತಿ ಸುಭದ್ರಾಬಾಯಿ ಇಬ್ಬರು ಕೂಡಿಕೊಂಡು ಹೋಲದಲ್ಲಿ ಹುಡುಕಾಡುತ್ತಾ ಹೋಗುತ್ತಿದ್ದಾಗ ನಮ್ಮ ಹೋಲದ ಮಾಲಿಕರಾದ ವಿಲಾಶರಾವ ವಕೀಲರ ಹೋಲದಲ್ಲಿದ್ದ ಹಳೆಯೆ ಮನೆಯ ಹತ್ತಿರ ಬಸರಿ ಗಿಡಕ್ಕೆ ಓಡನಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಗಿಡದಲ್ಲಿ ನೇತಾಡುತ್ತಿದ್ದಾಗ ನನ್ನ ಮಗಳು ಇನ್ನು ಜೀವಂತ ಇರುವಂತೆ ಕಂಡು ಬಂದಿದ್ದರಿಂದ್ದ ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಗಾಬರಿಗೊಂಡು ನನ್ನ ಮಗಳು ಕಾವೇರಿ ತನ್ನ ಕುತ್ತಿಗೆಗೆ ಹಾಕಿಕೊಂಡ ಓಡನಿಯನ್ನು ಕೂಡುಗೋಲನಿಂದ ಕೋಯ್ದು ನೆಲದ ಮೇಲೆ ಮಲಗಿಸಿ ಬಾಯಯಲ್ಲಿ ಸ್ವಲ್ಪ ನೀರು ಹಾಕಿದಾಗ ನನ್ನ ಮಗಳು ಸ್ವಲ್ಪ ನೀರು ಕುಡಿದು ಬಿಕ್ಕುತ್ತಾ  ಮೃತಪಟ್ಟಳು ಆಗ ಅಂದಾಜು ಮದ್ಯಾಹ್ನ 03:00 ಗಂಟೆ ಆಗಿತ್ತು. ಅವಳಿಗೆ ನೋಡಲಾಗಿ ಅವಳ ಕುತ್ತಿಗೆ ಸುತ್ತಲು ನೇಣು ಹಾಕಿಕೊಂಡ ಕಂದು ಗಟ್ಟಿದ ಗಾಯ ಇತ್ತು. ನಂತರ ನನ್ನ ಮಗಳು ಕಾವೇರಿ ಇವಳ ಶವವನ್ನು ಖಾಸಗಿ ಅಂಬುಲೆನ್ಸನಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಕಾವೇರಿ ಸಾವಿಗೆ ಕಾರಣ ನನ್ನ ಅಣ್ಣನ ಹೆಂಡತಿ ಚನ್ನಮ್ಮ ಗಂಡ  ಹಣಮಂತ ಕಾಳೆ ಇವಳೆ ಕಾರಣ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾಂತೇಶ ತಂದೆ ಶಿವಶರಣಪ್ಪ ಗುಡ್ಡೇವಾಡಿ ಸಾ||ಅಫಜಲಪೂರ ರವರ ತಮ್ಮ ಮಂಜುನಾಥ ಇವನು ಚೌಡಾಪೂರ ಗೃಹ ರಕ್ಷಕ ದಳದಲ್ಲಿ ಗೃಹ ರಕ್ಷಕ ಅಂತಾ ಕೆಲಸ ಮಾಡಿಕೊಂಡಿದ್ದು ಈಗ ಸುಮಾರಿ 15-20 ದಿವಸಗಳಿಂದ ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಕರ್ತವ್ಯ ನೀರ್ವಹಿಸುತ್ತಿದ್ದನು. ಪ್ರತಿ ದಿವಸ ಘತ್ತರಗಾ ಗ್ರಾಮಕ್ಕೆ ನಮ್ಮ ಮೋಟಾರ ಸೈಕಲ್ ನಂ ಕೆಎ-28-ಯು-3311 ನೇದ್ದರ ಮೇಲೆ ಹೋಗಿ ಬರುತ್ತಿದ್ದನು. ನಿನ್ನೆ ದಿನಾಂಕ 17-03-2018 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 09:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕಿಯ ಅಶೋಕ ಗುಡ್ಡೇವಾಡಿ ನನ್ನ ಮೋಬಾಯಿಲಗೆ ಕರೆ ಮಾಡಿ ಅಫಜಲಪೂರ-ಘತ್ತರಗಾ ರೋಡಿನ ಮೇಲೆ ಸುಲೇಕಾರ ರವರ ಹೊಲದ ಹತ್ತಿರ ರಾತ್ರಿ 08:30 ಗಂಟೆ ಸುಮಾರಿಗೆ ನಿಮ್ಮ ತಮ್ಮ ಮಂಜುನಾಥ ಘತ್ತರಗಾ ಶ್ರೀ ಭಾಗ್ಯವಂತೆ ದೇವಸ್ಥಾನದಿಂದ ಕರ್ತವ್ಯ ಮುಗಿಸಿಕೊಂಡು ಮೂಟಾರ ಸೈಕಲ್ ಮೇಲೆ ಮರಳಿ ಮನೆಗೆ ಬರುತ್ತಿದ್ದಾಗ ಅಫಜಲಪೂರ ದಿಂದ ಘತ್ತರಗಾ ಕಡೆ ಹೊರಟಿದ್ದ ಯಾವುದೊ ವಾಹನ ಹವಳಗಾ ಸಕ್ಕರೆ ಕಾರ್ಖಾನೆಗೆ ಅಥವಾ ಬೇರೆ ಎಲ್ಲಿಗೊ ಹೋಗುವ ವಾಹನ ಇರುತ್ತದೆ ಗೊತ್ತಾಗಿರುವುದಿಲ್ಲಾ. ಸದರಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮಂಜುನಾಥನ ಮೋಟಾರ ಸೈಕಲಗೆ ಡಿಕ್ಕಿ ಹೊಡೆಸಿ ಅಪಘಾತ ಪಡೆಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಸದರಿ ಘಟನೆಯಲ್ಲಿ ಮಂಜುನಾಥನಿಗೆ ಎಡಗಾಲಿನ ಹಿಂಬಡಿಯಿಂದ ತೊಡೆಯವರೆಗೆ ಅಪಘಾತಪಡೆಸಿದ ವಾಹನದ ಚಕ್ರ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಮೌಸ ಕಂಡ ಹೊರ ಬಂದಿದ್ದು ತಲೆಗೆ ಮತ್ತು ಎಡಗೈಗೆ, ಹಾಗೂ ಶರೀರದ ಇನ್ನಿತರ ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ತಿಳಿಸಿದನು. ಆಗ ನಾನು ಮತ್ತು ನಾಗರಾಜ ತಂದೆ ಮಲ್ಲಿಕಾರ್ಜುನ ಜೇವರ್ಗಿ ಇಬ್ಬರು ಸೇರಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗಿರುತ್ತೇವೆ. ನಾನು ಹೋಗುವಷ್ಟರಲ್ಲಿ ಅಶೋಕ ಗುಡ್ಡೇವಾಗಿ 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದಿದ್ದು ನಾನು ಮಂಜುನಾಥನಿಗೆ ಸದರಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ರಾತ್ರಿ 10:45 ಗಂಟೆ ಸುಮಾರಿಗೆ ಮಂಜುನಾಥನಿಗೆ ಪರಿಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಫಜಲಪೂರ ಸರಕಾರಿ ಆಸ್ಪತ್ರೆಗೆ ನನ್ನ ತಮ್ಮನಿಗೆ ಕರೆದುಕೊಂಡು ಹೋದಾಗ ಕರ್ತವ್ಯದಲ್ಲಿಯ ವೈಧ್ಯರು ಸರಿಯಾಗಿ ಚಿಕಿತ್ಸೆ ಮಾಡದೇ ಕಲಬುರಗಿಗೆ ತಗೆದುಕೊಂಡು ಹೋಗಿ ಅಂತಾ ಹೇಳಿರುತ್ತಾರೆ. ನಾನು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಗೆದುಕೊಂಡು ಹೋದಾಗ ಅಲ್ಲಿಯೂ ನಮ್ಮ ತಮ್ಮನಿಗೆ ಸರಿಯಾಗಿ ಚಿಕಿತ್ಸೆ ನೀಡದೇ ನನ್ನ ತಮ್ಮನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 17/03/2018 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಶ್ರೀಮತಿ ಮಹಾದೇವಿ ಗಂಡ ಗುರುಲಿಂಗಯ್ಯಾ ಮಠಪತಿ ಸಾ:ಅಂಕಲಗಾ ತಾ:ಜಿ:ಕಲಬುರಗಿ ಹಾವ: ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ ಮತ್ತು ಗಂಡ  ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ-32 ಇಇ-0614 ನೇದ್ದರಲ್ಲಿ  ಕಲಬುರಗಿಯಿಂದ ರಟಕಲ್ ರೇವಣಸಿದ್ದೇಶ್ವರ ದೇವರ ಗುಡಿಗೆ ಹೋಗುವ ಕುರಿತು ಮುಂಜಾನೆ 11:15 ಗಂಟೆ ಸುಮಾರಿಗೆ ಎಂ.ಆರ್.ಎಪ್ ಟೈಯರ್ ಕಂಪನಿಯ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಅದೇ ವೇಳೆಗೆ ಎದರಗಡೆಯಿಂದ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇತನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ  ಮೋಟಾರ ಸೈಕಲದ ಎದರುನಿಂದ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ನನ್ನ ಗಂಡ ಗುರಲಿಂಗಯ್ಯಾ ಇತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಫಿರ್ಯಾದಿ ಮಹಾದೇವಿ ಮತ್ತು ಕಾರ ಚಾಲಕ ಸಿದ್ದಲಿಂಗ ಇಬ್ಬರಿಗೂ ಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಈ ಮೇಲ್ಕಂಡ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇನತ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ :    ಶ್ರೀ.ಕಲ್ಯಾಣರಾವ ತಂದೆ ಮಾರುತಿ ಹಾದಿಮನಿ ಸಾ||ನರೋಣಾ ಗ್ರಾಮ ಇವರು ದಿನಾಂಕ:16-03-2018 ರಂದು ಮಧ್ಯಾಹ್ನ ನಾನು ಮತ್ತು ನಮ್ಮೂರಿನ ಗ್ರಾಮ ಪಂಚಾಯಿತಿಯ ಸದಸ್ಯರಾದ ಪ್ರಭುಲಿಂಗ ವ್ಹಿ.ಹೀರಾ ಹಾಗೂ ಸ್ನೇಹಿತರಾದ ರಾಜಕುಮಾರ ತಂದೆ ಭೀಮಶ್ಯಾ ರಾಗಿ, ರಾಜಕುಮಾರ ತಂದೆ ಮಲ್ಲೇಶಿ ಕಡ್ಡಿ ಅವರು ಕೂಡಿಕೊಂಡು ನನ್ನ ವಾಸಸ್ಥಳ ತರಬೇಕೆಂದು ನಮ್ಮೂರಿನ ಗ್ರಾಮ ಪಂಚಾಯಿತಿಯ ಕಾರ್ಯಲಯಕ್ಕೆ ಹೋದಾಗ ಅಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಇರಲಿಲ್ಲ ಮನೆಯಲ್ಲಿರುವುದಾಗಿ ತಿಳಿದುಕೊಂಡು ಮನೆಗೆ ಹೋಗಿ ವಾಸಸ್ಥಳ ಬೇಕೆಂದು ವಿನಂತಿಸಿಕೊಂಡೇವು ಅದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಿಮಗೆ ಯಾರು ಸಹಿಮಾಡಲ್ಲ ಇಡಿ ನಿಮ್ಮ ಹೊಲಗೇರಿಗೆ ನಾನು ಸಹಿ ಮಾಡುತ್ತೇನೆಂದ ಜಾತಿ ನಿಂದನೆ ಮತ್ತು ನನ್ನ ಮನಸಿಗೆ ನೊವುಂಟು ಮಾಡಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀಮತಿ.ಶರಣಮ್ಮ ಗಂಡ ರಾಚಯ್ಯ ಬಾಳಿ ಸಾ||ನರೋಣಾ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಚಂದ್ರಶೇಖರ ತಂದೆ ನಿಂಗಪ್ಪ ದಿಗ್ಗಾಂವಿ ಸಾ|| ಪಡದಳ್ಳಿ ತಾ|| ಜೇವರ್ಗಿ ರವರಿಗೆ ತಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು ಅದರ ಸರ್ವೆ ನಂ 85/4 ನೇದ್ದರಲ್ಲಿ 2 ಎಕರೆ 5 ಗುಂಟೆ ಜಮೀನು ಇದ್ದು ಅದು ನಮ್ಮ ತಂದೆಯವರಾದ ನಿಂಗಪ್ಪ ತಂ ಚಂದಪ್ಪ ದಿಗ್ಗಾವಿ ರವರ ಹೆಸರಿಗೆ ಇರುತ್ತದೆ. ಹೊಲದ ಸಲುವಾಗಿ ನಮ್ಮ ತಂದೆಯವರು ಬಳಬಟ್ಟಿ ಸೊಸೈಟಿಯಲ್ಲಿ 50,000/- ರೂಪಾಯಿ ಹಾಗೂ ಖಾಸಗಿಯಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆಯವರು ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 16-03-2018 ರಂದು ರಾತ್ರಿ 9;00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗು ತಾಯಿ ಮಲ್ಲಮ್ಮ ಹಾಗು ತಮ್ಮ ಮೌನೇಶ ರವರು ಊಟ ಮಾಡಿಕೊಂಡು ನಂತರ ನಾನು ನಮ್ಮ ತಾಯಿ ಮತ್ತು ತಮ್ಮ ಕೂಡಿ ಮನೆ ಹೊರಗೆ ಮಲಗಿಕೊಂಡೆವು, ನಮ್ಮ ತಂದೆಯವರು ಮನೆ ಒಳಗೆ ಮಲಗಿಕೊಂಡಿದ್ದರು, 10;30 ಪಿ.ಎಂ ಸುಮಾರಿಗೆ ನಮ್ಮ ತಂದೆ ಚೀರಾಡುವ ಸಪ್ಪಳ ಕೇಳಿ ನಾವೆಲ್ಲರು ಮನೆ ಒಳಗೆ ಹೋಗಿ ನೋಡಿದಾಗ ನಮ್ಮ ತಂದೆಯವರು ವಾಂತಿ ಮಾಡಿಕೊಳ್ಳುತ್ತಾ ನಾನು ವಿಷ ಸೇವನೆ ಮಾಡಿರುತ್ತೇನೆ ಅಂತಾ ಅಂದರು, ನಂತರ ನಮ್ಮ ತಂದೆಯವರಿಗೆ ಉಪಚಾರ ಕುರಿತು  ನಾವು ಮತ್ತು ನಮ್ಮ ಸಂಬಂಧಿಕನಾದ ನಿಂಗಪ್ಪ ತಂದೆ ಯಮನಪ್ಪ ಹಂಗರಗಿ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆ ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ಇಂದು ದಿನಾಂಕ 17-03-2018 ರಂದು ಬೆಳಗಿನ ಜಾವ ನಮ್ಮ ತಂದೆ ವಿಷದ ಬಾಧೆಯಿಂದ ಆಸ್ಪತ್ರೆಯಲ್ಲಿ ಉಪಚಾರಪಡೆಯುತ್ತಾ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.