POLICE BHAVAN KALABURAGI

POLICE BHAVAN KALABURAGI

15 March 2018

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಕುಮಾರಿ ಇವರಿಗೆ  ಶಹಾಬಾದದ ಚಂದ್ರಶೇಖರ ರಾಠೋಡ ಸಾಃ ಸ್ಟೇಷನ ತಾಂಡ ಶಹಾಬಾದ ಇತನೊಂದಿಗೆ ದಿನಾಂಕಃ 30/12/2016 ರಂದು ಹಿರಿಯರ ಸಮಕ್ಷಮ ನಿಶ್ಚಿತಾರ್ಥ ಆಗಿದ್ದು ಇಲ್ಲಿಯವರೆಗೆ ಮದುವೆ ಆಗಿರುವದಿಲ್ಲಾ. ಹೀಗಿದ್ದು ದಿನಾಂಕಃ 06/03/2018 ರಂದು 11-00 ಎ ಎಮ್  ನಾನು ಒಬ್ಬಳೆ ಮನೆಯಲ್ಲಿದ್ದಾಗ  ಚಂದ್ರಶೇಖರ ರಾಠೋಡ ಮತ್ತು ಅವನಣ್ಣ ರಾಜೇಶ ರಾಠೋಡ ಇಬ್ಬರು ನಮ್ಮ ಮನೆಗೆ ಬಂದು, ನನಗೆ ನಿನ್ನ ತಾಯಿ ಮದುವೆ ಮಾಡುವದಿಲ್ಲಾ ಅಂತಾ ಹೇಳುತ್ತಿದ್ದಾಳೆ ಕೊರ್ಟ ಮ್ಯಾರೇಜ ಮಾಡಿಕೊಳ್ಳೊಣ ಅಂತಾ ಚಂದ್ರಶೇಖರ ಹೇಳಿದನು. ನಾನು ಬರುವದಿಲ್ಲಾ ಅಂತಾ ಹೇಳಿದರೂ ಬಲವಂತವಾಗಿ ಇಲ್ಲಾ ಮದುವೆ ಆಗುತ್ತೇನೆ ಬಾ ಅಂತ ಎಳೆದುಕೊಂಡು ಕರೆದುಕೊಂಡು ತಮ್ಮ ಮನೆಗೆ ಹೋದನು. ಅಲ್ಲಿ ಮನೆಯಲ್ಲಿ ಚಂದ್ರಶೇಖರ, ಅವನ ತಾಯಿ ಸೋನಾಬಾಯಿ ಮತ್ತು ರಾಜೇಶ ಸೇರಿ ಅವರ ವಾಸದ ಮನೆಯಲ್ಲಿ ಇಟ್ಟರು. ನಂತರ ಅಂದು ರಾತ್ರಿ ಚಂದ್ರಶೇಖರನು ನಾನು ಮಲಗಿದ್ದಲ್ಲಿಗೆ ಬಂದು ನಿನಗೆ ನಾನು ಮದುವೆ ಆಗುತ್ತೇನೆ,  ಬಾ ನನ್ನ ಜೊತೆ ಮಲಗು ಅಂತಾ ಒತ್ತಾಯ ಮಾಡಿದನು.  ನಾನು ಮದುವೆ ಮುಂಚೆ ನಿನ್ನ ಜೊತೆ ಮಲಗುವದಿಲ್ಲಾ ಅಂತಾ ಹೇಳಿ ನಿರಾಕರಿಸಿದೆನು.  ಅದಕ್ಕೆ ನೀನು ನನ್ನ ಜೊತೆ ಮಲಗಲಿಲ್ಲಾ ಅಂದರೆ ನಿನಗೆ  ಜೀವ ಸಹಿತ ಬಿಡುವದಿಲ್ಲಾ ಅಂತಾ ಪ್ರಾಣ ಬೆದರಿಕೆ ಹಾಕಿ ನನಗೆ  ಬಲತ್ಕಾರವಾಗಿ ಸಂಭೋಗವನ್ನು ಮಾಡಿರುತ್ತಾನೆ.  ಅವರ ಮನೆಯಲ್ಲಿಯೇ  ಇಟ್ಟುಕೊಂಡಿದ್ದು ನಾನು ನನಗೆ  ಮದುವೆ ಆಗು ಅಂದರೆ ಚಂದ್ರಶೇಖರನು ಮದುವೆ ಆಗುವದಿಲ್ಲಾ ಏನ್ ಮಾಡ್ಕೋತಿ ಮಾಡ್ಕೊ ಅಂತಾ ಹೇಳಿದ್ದು ರಾಜೇಶ ಮತ್ತು ಸೋನಾಬಾಯಿ ಚಂದ್ರಶೇಖರನಿಗೆ ಬೇರೆ ಕಡೆ ಸಂಬಂಧ ಹುಡುಕಿ ಮದುವೆ ಮಾಡುತ್ತೇವೆ  ನಿನ್ನೊಂದಿಗೆ  ಮದುವೆ ಮಾಡುವದಿಲ್ಲಾ  ರಂಡಿ ಅಂತಾ ದುರ್ಭಾಷೆಗಳಿಂದ  ಬೈಯ್ದಿರುತ್ತಾರೆ. ನನ್ನ ತಾಯಿಗೆ  ಚಂದ್ರಶೇಖರ ತಮ್ಮ ಮನೆಯಲ್ಲಿ ನನಗೆ ಇಟ್ಟಿರುವದು ಗೊತ್ತಾಗಿ ಅವಳು ಬಂದು ನನಗೆ ಕರೆದುಕೊಂಡು ಬಂದಿರುತ್ತಾರೆ. ನನಗೆ ಪ್ರಾಣ ಬೇದರಿಕೆ ಹಾಕಿ ಹಠ ಸಂಬೋಗ ಮಾಡಿದ ವಿಷಯ ತಿಳಿಸಿ  ನನ್ನ ಮನೆಯಿಂದ  ಬಲವಂತವಾಗಿ ಕರೆದುಕೊಂಡು ಹೋಗಿ ಪ್ರಾಣ ಬೆದರಿಕೆ ಹಾಕಿ ಹಠ ಸಂಬೋಗ ಮಾಡಿದ ಚಂದ್ರಶೇಖರ ಮತ್ತು ಇದಕ್ಕೆ ಸಹಕರಿಸಿ ದುರ್ಭಾಷೆಗಳಿಂದ ಬೈಯ್ದು ಮನೆಯಲ್ಲಿ ಕೂಡಿ ಹಾಕಿದ ರಾಜೇಶ ಮತ್ತು ಸೋನಾ ಬಾಯಿ ರವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಠಾಣೆ : ಶ್ರೀ ಲಕ್ಕಪ್ಪ ತಂದೆ ಶಂಕರಪ್ಪಾ ಸಾಃ ಹಸನಾಪುರ ಇವರು ಹಸನಾಪೂರ ಗ್ರಾಮದ ಸೀತರಾಮ ತಂದೆ ತಿಪ್ಪಣ್ಣ ಸುಭೇದಾರ ಈತನಿಗೆ ಫಿರ್ಯಾದಿದಾರರ ಈಗ ಸುಮಾರು  ವರ್ಷಗಳ ಹಿಂದೆ 10 ಸಾವಿರ ರೂಪಾಯಿ ಹಣ ಕೈಗಡ ಅಂತಾ ಕೊಟ್ಟಿದ್ದು, ಇಲ್ಲಿಯವರೆಗೆ ಮರಳಿ ಕೊಟ್ಟಿರುವುದಿಲ್ಲ ವಿನಾ ಕಾರಣ ತಂಟೆ ತಕರಾರು ಮಾಡುತ್ತಾ ಬಂದಿದ್ದು, ದಿನಾಂಕ 13/03/2018 ರಂದು ಸಾಯಂಕಾಲ ಫಿರ್ಯಾದಿದಾರರ ಮತ್ತು ಆತನ ಸಂಗಡ ಯಲ್ಲಾಲಿಂಗ, ಹಣಮಂತ, ಯಮನಪ್ಪ ಎಲ್ಲರೂ ಕೂಡಿ  ಹಸನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಾತಾಡುತ್ತಾ ಕುಳಿತುಕೊಂಡಾ ಅದೇ ವೇಳೆಗೆ ಸೀತರಾಮ ಸುಬೇದಾರ ಈತನು ಕಾರ ಚಲಾಯಿಸಿಕೊಂಡು ಬಂದಿದ್ದು, ಆಗ ಫಿರ್ಯಾದಿದಾರರು ಸದರಿಯವನಿಗೆ ಹಣ ಕೊಡುವಂತೆ ಕೇಳಿದಾಗ ಸುಬೇದಾರ ಈತನು ಫಿರ್ಯಾದಿಗೆ ಏ ರಂಡಿ ಮಗನೇ ನಿನಗೆ ಯಾವ ಹಣ ಕೊಡಬೇಕು ನಿನ್ನ ಹತ್ತಿರ ಅದಕ್ಕೆ ಸಾಕ್ಷಿ ಏನು ಇದೆ ಯಾವುದಾದರೂ ಕಾಗದ ಪತ್ರ ಇದ್ದರೆ ತೋರಿಸು ಊರಲ್ಲಿ ನಿಮ್ಮ ಕುರುಬರದು ಬಹಳ ಆಗಿದೆ ಮಕ್ಕಳೇ ನಾನು ಬಂದರೆ ನೀವು ಎದ್ದು ನಿಂತು ನಮಸ್ಕಾರ ಮಾಡಬೇಕು ನನ್ನ ಕಾರ ಬಂದರೆ ದಾರಿ ಬಿಡಬೇಕು ಅಂತೆಲ್ಲಾ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತಿದ್ದಿ ಅಂತಾ ಕೇಳಿದಾಗ ತಕರಾರು ಮಾಡಿದ್ದು, ನಂತರ ಪೋನ ಮಾಡಿ ತನ್ನಣ್ಣ ದೇವರಾಜ ಹಾಗೂ ಅಳಿಯ ಇಂದ್ರಜೀತ @ ವಿನೂ ಇವರುಗಳಿಗೆ ಕರೆಯಿಸಿದ್ದು, ಸದರಿಯವರು ಬಂದು ನನಗೆ ಕೈಗಳಿಂದ ಹೊಟ್ಟೆಯಲ್ಲಿ, ಬೆನ್ನಿನ ಮೇಲೆ ಸೊಂಟಕ್ಕೆ ಹೊಡೆದಿದ್ದು, ಸೀತರಾಮ ಈತನು ಕೈ ಹಿಡಿದು ಹಿಂದಕ್ಕೆ ತಿರುವಿದ್ದು, ನಂತರ ಮೂರು ಜನರೂ ಕೂಡಿಕೊಂಡು ನನಗೆ ಎಳೆದುಕೊಂಡು ತಮ್ಮ ಕಾರಿನಲ್ಲಿ ಜಬರದಸ್ತಿಯಿಂದ ಎತ್ತಿ ಹಾಕಿ ಹಸನಾಪೂರ ಕ್ರಾಸ ವರೆಗೆ ಅಪಹರಣ ಮಾಡಿಕೊಂಡು ಬಂದು ಅಲ್ಲಿ ಇನ್ನೊಮ್ಮೆ ಹಣ ಕೇಳಿದರೆ ಮತ್ತು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಭೇದರಿಕೆ ಹಾಕಿರುತ್ತಾರೆ ಸದರಿ ಸೀತರಾಮ ತಂದೆ ತಿಪ್ಪಣ್ಣ ಸುಬೇದಾರ, ಆತನ ಅಣ್ಣ ದೇವರಾಜ ತಂದೆ ತಿಪ್ಪಣ್ಣ , ಅಳಿಯನಾದ ಇಂದ್ರಜೀತ @ ವಿನೂ ತಂದೆ ಗೌಡಪ್ಪಾ ಇವರುಗಳ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಅಂಬದಾಸ ತಂದೆ ಭಾರತ ಸಾ:ಶಾಸ್ತ್ರಿ ಚೌಕ್ ಲೋಹಾರ ಗಲ್ಲಿ ಇವರು ದಿನಾಂಕ:12.03.2018 ರಂದು 8.30 ಪಿಎಂಕ್ಕೆ ನಮ್ಮ ಮನೆಯ ಮುಂದಿನ ಹೋಟೆಲ ಹತ್ತಿರ ಬರುವಾಗ ಅದೇ ವೇಳೆಗೆ ಮೊಹ್ಮದ ರಫೀಕ್ ಇತನು ಅವಾಚ್ಚವಾಗಿ ಬೈದು ಎದೆ ಮೇಲಿನ ಅಂಗಿ ಹಿಡಿದು ಕೈ ಜೊಗ್ಗಾಡುವಾಗ ಕೇಳಿದ್ದಕ್ಕೆ ಕಾಲಿನಿಂದ ಒದ್ದು ರಫೀಕ್ ಮತ್ತು ಅನ್ವರ ಹಾಗೂ ಇತತರ ಕೂಡಿಕೊಂಡು ಅವಾಚ್ಯವಗಿ ಬೈದು ಗುಂಪು ಕಟ್ಟಿಕೊಂಡು ಕೈಯಿಂದ ಮತ್ತು ಕೋಲೆ ಮಾಡುವ ಉದ್ದೇಶದಿಂದ ಕಬ್ಬಣದ ನಳದ ಪೈಪ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 11-03-2018 ರಂದು  ನನ್ನ ಅಣ್ಣ ನಭಿಲಾಲ ಮತ್ತು ನಮ್ಮ ಓಣಿಯ ಗೌಸೋದ್ದಿನ್ ತಂದೆ ಇಸ್ಮಾಯಿಲ್ ಭಾಗವಾನ ಹಾಗೂ ರೀಯಾನ ಬೇಗಂ ಗಂಡ ಇಸ್ಮಾಯಿಲ್ ಭಾಗವಾನ ರವರೇಲ್ಲರೂ ಭೋಗನಳ್ಳಿ ಗ್ರಾಮದ ಆಸೀಫ್ ತಂದೆ ಜೈನೋದ್ದಿನ್ ಗಿರಣಿ ಎಂಬಾತನು ನಡೆಸುವ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರಲ್ಲಿ ಮಾಶಾಳ ಗ್ರಾಮಕ್ಕೆ ದೇವರು ಕೇಳಲು ಮನೆಯಿಂದ ಆಸೀಪ್ ಗಿರಣಿ ಎಂಬಾತನೊಂದಿಗೆ ಹೋಗಿದ್ದು ಕಾರನ್ನು ಆಸೀಫನೆ ನಡೆಸಿಕೊಂಡು ಹೋಗಿರುತ್ತಾನೆ. ಬೆಳಿಗ್ಗೆ 09:40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಾತೋಳಿ ಗ್ರಾಮದ ಯಾರೋ ಒಬ್ಬರು ನನ್ನ ಮೋಬಾಯಿಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಲಬುರಗಿ-ಅಫಜಲಪೂರ ರೋಡಿನ ಮೇಲೆ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋದ ನಂತರ ನಿಮ್ಮ ಅಣ್ಣ ನಭಿಲಾಲ ಮತ್ತು ಗೌಸೋದ್ದಿನ್ ಭಾಗವಾನ ಹಾಗೂ ರೀಯಾನಾ ಬೇಗಂ ರವರು ಕುಳಿತು ಹೊರಟಿದ್ದ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನಲ್ಲಿ ಪಲ್ಟಿ ಯಾಗಿ ಬಿದ್ದಿರುತ್ತದೆ. ಘಟನೆ ಸಂಭವಿಸಿದ ನಂತರ ಕಾರಿನ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಅಣ್ಣ ನಭಿಲಾಲನ ಎದೆಗೆ,  ಭಾರಿ ಒಳ ಪೆಟ್ಟಾಗಿದ್ದರಿಂದ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಗೌಸೋದ್ದಿನ್ ಭಾಗವಾನ ಮತ್ತು ರೀಯಾನಾ ಬೇಗಂ ರವರಿಗೆ ಕೈ, ಕಾಲುಗಳಿಗೆ ಮತ್ತು ಶರೀರದ  ಕೆಲವು ಭಾಗಗಳಲ್ಲಿ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟುಗಳು ಆಗಿರುತ್ತವೆ ಅಂತಾ ತಿಳಿಸಿದನು ಕೂಡಲೇ ನಾನು ನಮ್ಮೂರಿನಿಂದ ಹೊರಟು ಘಟನೆ ಸ್ಥಳಕ್ಕೆ ಬಂದಿದ್ದು ನಾನು ಬರುವಷ್ಟರಲ್ಲಿ ಯಾರೋ ವ್ಯಕ್ತಿಗಳು 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದು ನಿಂತಿದ್ದರಿಂದ ನಾನು ಮತ್ತು ಘಟನೆ ಸ್ಥಳದಲ್ಲಿ ನೆರದ ಜನರೆಲ್ಲರೂ ನನ್ನ ಅಣ್ಣ ಮತ್ತು ಗೌಸೋದ್ದಿನ್ ಹಾಗೂ ರೀಯಾನಾ ಬೇಗಂ ರವರಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಕಲಬುರಗಿ ಕರೆದುಕೊಂಡು  ಹೋಗಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಅಣ್ಣನನ್ನು ಪರೀಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗ ಮಧ್ಯದಲ್ಲಿ ಸುಮಾರು ½ ಗಂಟೆಯ ಹಿಂದೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಅಂತಾ ಶ್ರೀ ಅಸ್ಪಾಕ ತಂದೆ ಮದರಸಾಬ ಖುರೇಸಿ ಸಾ: ಅತನೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:12/03/2018 ರಂದು 06-00 ಪಿಎಂ ಸುಮಾರಿಗೆ ಗಾಯಾಳು ಶಂಕರ ಬಾಚಾ ಇವರು ಕಲಬುರಗಿ ಹುಮನಾಬಾದ ರೋಡಿನ ಶರಣಪ್ಪಾ ಹೊಟೇಲ ಹತ್ತಿರ ಸಾಕ್ಷಿದಾರನಾದ ಶಿವಕುಮಾರ ಗೊಬ್ಬುರವಾಡಿ ಇವರು ಬರುವದನ್ನು ಕಾಯುತ್ತಾ ನಿಂತಾಗ ಕಲಬುರಗಿ ಕಡೆಯಿಂದ ಬೊಲೇರೊ ಜೀಪ ನಂ. ಕೆಎ:29 ಎಂ: 4415 ನೇದ್ದರ ಚಾಲಕತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಶಂಕರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶಂಕರನಿಗೆ ಎದೆಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ರಾಜಕುಮಾರ ತಂದೆ ಶಂಕರ ಬಾಚಾ ಸಾ: ಮಹಾಗಾಂವ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಫೀಕ ತಂದೆ ಬುಡೆನ ಸಾಬ ಖುರೇಷಿ ಸಾ: ಶಾಸ್ತ್ರಿ ಚೌಕ ಶಹಾಬಾದ ರವರು ದಿನಾಂಕ: 12/03/2018 ರಂದು ರಾತ್ರಿ 8-30 ಗಂಟೆಗೆ ತಾನು ದಾಬಾ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಹೊರಗಡೆ ನಿಂತಾಗ ನಮ್ಮ ಓಣಿಯ ಪ್ರಧಿಪ ತಂದೆ ದೇವಿದಾಗ ಪವಾರ , ನೇತಾಜಿ , ಜೈನತ ಸಂಗಡ 5-6 ಜನರು ಕೈಯಿಲ್ಲಿ ಬಡಿಗೆ ರಾಡು ಹಿಡಿದುಕೊಂಡು ಬಂದವರೆ ನನಗೆ ಏ ರಂಡಿ ಮಗನೆ ಓಣಿಯಲ್ಲಿ ನಿಂತುಕೊಂಡು ನಮಗೆ ದಿಟ್ಟಿಸಿ ನೋಡತಿ ರಂಡಿ ಮಗನೆ ಅಂತಾ ಬೈದು  ನನಗೆ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ರಾಂಡಕೆ ಬಚ್ಚೆ ಹಮಾರೆ ಸಾಮನೆ ಆಕಡತೇ ಬೋಸಡಿಕೆ ಅಂತಾ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದರು ಆಗ ನಾನು ಹೆದರಿ ಮನೆ ಒಳಗೆ ಓಡಿ ಹೋದರು ಕೂಡ ನನ್ನ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು ನನಗೆ ಹಿಡಿದುಕೊಂಡು ಮನೆಯ ಹೊರಗೆ ಎಳೆದುಕೊಂಡು ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ನ್ನ ತಲೆಗೆ ಹೊಡೆದು ಭಾರಿ ರಕ್ತಗಾಯಾ ಮಾಡಿದನು ಮತ್ತು ಜಗಳ ಬಿಡಿಸಲು ಬಂದ ನನ್ನ ತಮ್ಮ ಅನ್ವರನಿಗೂ ಮೈ ಕೈಗೆ ಹೊಡೆದು ಗುಪ್ತ ಗಾಯಾ ಮಾಡಿರುತ್ತಾರೆ ಜಗಳದಲ್ಲಿ ನನಗೆ ಬಲಕೈಗೆ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಸಂಜೆ ಪಟ್ಟಣ ಗ್ರಾಮದ ಹಳ್ಳದ ಬ್ರೀಡ್ಜ  ರೋಡಿನ ಮೇಲೆ ಟ್ಯಾಕ್ಟ್ರರ ಚಾಲಕ ತನ್ನ ಟ್ಯಾಕ್ಟ್ರರ ಇಂಜನ KA 39 T 2243  ಮತ್ತು ಟ್ರಾಲಿ ನಂಬರ KA 39 T 2244  ನೇದ್ದು ಮಾನವನ ಜೀವಕ್ಕೆ ಅಪಾಯವಾಗುವ ಮತ್ತು ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಹಾಗೂ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ನಿಲ್ಲಿಸಿದ್ದರಿಂದ ಮತ್ತು ನನ್ನ ತಮ್ಮ ಮಲ್ಲಿಕಾರ್ಜುನ ತಂದೆ ಶಾಂತಪ್ಪ  ನಾಟೀಕರ ಇತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಸಿಡಿ 100 KA 05 X 3352 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ಟ್ಯಾಕ್ಟ್ರರದ ಟ್ರಾಲಿಯ ಹಿಂದುಗಡೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅವನಿಗೆ ಎಡತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಬಲತಲೆಯ ಮೇಲೆ ಹರಿದ ಭಾರಿ ರಕ್ತಗಾಯ, ಮೂಗಿನಿಂದ ರಕ್ತ ಸೋರಿದ್ದು. ಎಡರಟ್ಟೆಯ ಮೇಲೆ ಅಲ್ಲಿಲ್ಲಿ ರಕ್ತಗಾಯ, ಬಲಭುಜದ ಮೇಲೆ ರಕ್ತಗಾಯ, ಎಡಮೊಳಕಾಲ ಮೇಲೆ ತರಚಿದ ರಕ್ತಗಾಯ ಮತ್ತು ಕೆಳೆಗೆ ತರಚಿದ ಗಾಯಗಳಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು ಅವನಿಗೆ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದಾಗ ಇತನಿಗೆ ಆದ ಭಾರಿ ರಕ್ತಗಾಯಗಳಿಂದ ವೈದ್ಯರು ಉಪಚರಿಸುತ್ತಿರುವ ಕಾಲಕ್ಕೆ  ಗುಣ ಮುಖ ಹೊಂದದೇ ದಿನಾಂಕ 10/03/2018 ರಂದು ರಾತ್ರಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಈರಣ್ಣಾ ತಂದೆ ಶಾಂತಪ್ಪಾ ನಾಟೀಕರ ಸಾ : ಪಟ್ಟಣ  ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಮೃತ ಸೋಫಾನರಾವ ಇತನು ಯಾವುದೋ ಕೆಲಸದ ನಿಮತ್ಯಾ ಆಳಂದ ಕಡೆಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ KA-32 EE-1169  ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ರಾತ್ರಿ ಸುಮಾರಿಗೆ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಪೆಟ್ರೋಲ್ ಪಂಪದ ಎದರುಗಡೆ ರೋಡ ಜಂಪನಲ್ಲಿ ಮುಂದೆ ಹೋಗುತ್ತಿದ್ದ ಯಾವುದೋ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಯಾವುದೇ ಇಂಡಿಕೇಟರ್ ವಗೈರೇ ಮತ್ತು ಯಾವುದೇ ಸೂಚನೆ ನೀಡದೇ ಹೋಗು ಬರುವ ವಾಹನ ಚಾಲಕರಿಗೆ ಅಪಾಯವಾಗುವ ರೀತಿಯಲ್ಲಿ ಕಾರನ್ನು ಒಮ್ಮಲೇ ರೋಡಿನ ಮೇಲೆ ನಿಲ್ಲಿಸಿದಾಗ ಮೃತ ಸೋಪನರಾವ ಇತನು ತನ್ನ ಮೋಟಾರ ಸೈಕಲ್  ಸದರಿ ಕಾರಿನ ಹಿಂದುಗಡೆ ಅಪಘಾತ ಪಡಿಸಿದ್ದರಿಂದ್ದ ಮೃತನ  ಹಣೆಗೆ ಮತ್ತು ಕುತ್ತಿಗಿಗೆ ಭಾರಿ ರಕ್ತಗಾಯವಾಗಿ ಮತ್ತು ಇತರೇ ಕಡೆಗಳಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುನೀತಾ ಗಂಡ ಸೋಫಾನರಾವ ಸೂರ್ಯವಂಶಿ ಸಾ : ಆಶ್ರಯ ಕಾಲೋನಿ ರಾಣೇಶಪೀರ ದರ್ಗಾ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 08-03-18 ರಂದು ಮೊಟಾರ ಸೈಕಲ್ ನಂ. ಕೆಎ32ಇಕ್ಯೂ1564 ನೆದ್ದರ ಮೇಲೆ ಗಂಡ ನಾಗೇಂದ್ರಪ್ಪ ಇಬ್ಬರೂ ಕೂಡಿಕೊಂಡು ಕುರಕುಂಟಾ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಾಸು ಹೋಗುವಾಗ ಬಟಗೇರಾ(ಕೆ) ಗೇಟ ಹತ್ತಿರ ಕುರಕುಂಟಾ ಕ್ರಾಸ ಹತ್ತಿರ ಒಬ್ಬ ಮೊಟಾರ ಸೈಕಲ್ ನಂ.ಕೆಎ32ಇಆರ್3186 ನೆದ್ದರ ಚಾಲಕನು ಅತಿ ವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಗಂಡ ಚಲಾಯಿಸುತ್ತಿದ್ದ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ, ಮೊಟಾರ ಸೈಕಲ್ ಸಮೇತ ಆರೋಪಿತನು ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಸುನಂದಾ ಗಂಡ ನಾಗೇಂದ್ರಪ್ಪ ರಾಜಾಪೂರ ಸಾ|| ಸಣ್ಣ ಅಗಸಿ ಸೇಡಂ, ಹಾ.ವ|| ವಿ.ಸಿ.ಎಫ್ ಕಾಲೋನಿ ಸೇಡಂ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-03-2018 ರಂದು ಅಫಜಲಪೂರ ಪಟ್ಟಣದ ದುಧನಿ ರಸ್ತೆಗೆ ಇರುವ ಸಾಮ್ರಾಟ ಪೇಟ್ರೊಲ ಪಂಪ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಾಮ್ರಾಟ ಪೇಟ್ರೊಲ ಪಂಪ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಪೆಟ್ರೊಲ ಪಂಪ ಪಕ್ಕದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ 04 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಾಳಪ್ಪ ತಂದೆ ಚಂದ್ರಾಮ ಹುಲ್ಲೂರ ಸಾ|| ಅಮೋಗಸಿದ್ದ ಗುಡಿ ಹತ್ತಿರ ಅಫಜಲಪೂರ 2) ತುಕಾರಾಮ ತಂದೆ ಲಕ್ಷ್ಮಣ ಬಂಗಿ ಸಾ|| ಅಫಜಲಪೂರ 3) ಸುರೇಶ ತಂದೆ ದುಂಡಪ್ಪ ಹಿಂಚಗೇರಾ ವಯ|| 52 ವರ್ಷ ಜಾ|| ಕುರುಬ || ಲಾರಿ ಚಾಲಕ ಸಾ|| ಅಫಜಲಪೂರ 4) ಬಸವರಾಜ ತಂದೆ ತುಳುಜಪ್ಪ ಕುಮಸಗಿ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5620/- ರೂ ಹಾಗು 52 ಇಸ್ಪೇಟ  ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಜಾತಿ ನಿಂದನೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಲಕ್ಷ್ಮಮ್ಮ ಗಂಡ ಕಾಶಪ್ಪ ಕೊಲಕುಂದಾ, ಸಾ|| ಭೂತಪೂರ, ತಾ|| ಸೇಡಂ, ಜಿ|| ಕಲಬುರಗಿ.
ರವರು ದಿನಾಂಕ: 09-03-2018 ರಂದು ಸಿಂಧನಮಡು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಿ.ಡಿ.ಓ ರಾಮಪ್ಪ ಇವರು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಚೆಕ್ಗಳ ಮೇಲೆ ಮತ್ತು ಮನೆ ಹಂಚಿಕೆಯ ದಾಖಲಾತಿಗಳ ಮೇಲೆ ಸಹಿ ಮಾಡಲು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಮ್ಮ ಇವರಿಗೆ ಹೇಳಿದಾಗ, ಆಗ ಫಿರ್ಯಾದಿದಾರರು ನನಗೆ ಓದು ಬರಹ ಬರುವುದಿಲ್ಲ, ಓದಿ ಬರಹ ಬಲ್ಲವರಿಗೆ ಕೇಳಿ ವಿಷಯ ತಿಳಿದುಕೊಂಡು ಸಹಿ ಮಾಡುವುದಾಗಿ ಹೇಳಿದ್ದು, ಅದಕ್ಕೆ ಪಿ.ಡಿ.ಓ ರವರು ಫಿರ್ಯಾದಿಗೆ ನೀನು ಮುದುಕಿ ಆಗಿದ್ದಿ, ನಿನಗೆ ಕೆಲಸ ಬರುವುದಿಲ್ಲ ಅಂದರೆ ರಾಜಿನಾಮೆ ಕೊಟ್ಟು ಹೋಗು, ನಿನ್ನಿಂದ ಈ ಕೆಲಸ ಆಗುವುದಿಲ್ಲ ಅಂತಾ ಏಕ ವಚನದಲ್ಲಿ ಬೈಯ್ದು, ಮಾದೀಗ ಜನಾಂಗದವರಿಗೆ ಯಾಕೆ ಅಧ್ಯಕ್ಷ ಕೊಟ್ಟಿರುತ್ತಾರೆ ಅಂತಾ ಬೈಯ್ದಿದ್ದು, ಸದರಿ ಪಿ.ಡಿ.ಓ ರಾಮಪ್ಪ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :
ಸೇಡಂ ಠಾಣೆ : ದಿನಾಂಕ: 07-03-18 ರಂದು 04:00 ಪಿ.ಎಮ್ ಕ್ಕೆ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿಯಲ್ಲಿನ ಕಾಖರ್ಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಾದ ಮಹ್ಮದ ಮುನೀಫ್ ಸಾ|| ಮುಜಫರಪುರ ಬಿಹಾರ ಇತನು ಕೆಲಸ ಮಾಡುವ ಸಮಯದಲ್ಲಿ ಅವನ ತಲೆಯ ಮೇಲೆ ರಾಡಗಳು ಬಿದ್ದು ತಲೆಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಹೋಗಿದ್ದು, ಆ ವೇಳೆಯಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿದ್ದ ಬಗ್ಗೆ ತಿಳಿಸಿದ್ದು, ಈ ವಿಷಯವನ್ನು ಇಟ್ಟಿಕೊಂಡು ದಿನಾಂಕ: 08-03-18 ರಂದು 08:20 ಎ.ಎಮ್ ಸುಮಾರಿಗೆ ಮೇ|| ಪೆಟ್ರಾನ್ ಕಂಪನಿಯ ಸಬ್ ಕಾಂಟ್ರಾಕ್ಟರರಾದ ಸುನೀಲಕುಮಾರ ವಿ. ಕಾಂಟ್ರಕ್ಟರ್ ಹತ್ತಿರ ಕೆಲಸ ಮಾಡುವ ಸುಭೋದಕುಮಾರ ಹಾಗು  ಇತರೆ ಗುತ್ತಿಗೆ ಕಾರ್ಮಿಕರು ಸುಮಾರು 45-50 ಜನ ಕಾರ್ಮಿಕರು ಪೂರ್ವದ ಗೇಟನಿಂದ ಪೆಟ್ರಾನ್ ಆಫೀಸ್ ಕಡೆಗೆ ನುಗ್ಗಿ, ನಂತರ ಫ್ಯಾಕ್ಟರಿಯ ಟಿ ಜಂಕ್ಷನ್ ಹತ್ತಿರ ನಿಂತಿದ್ದ ಹೊಸ ಬಸ್ಸಿಗೆ ಕಲ್ಲುಗಳಿಂದ ಹೊಡೆದು ಅದರ ಎಲ್ಲಾ ಗಾಜುಗಳನ್ನು ಒಡೆದು ಬಸ್ಸಿಗೆ ಹಾನಿ ಮಾಡಿ ನಂತರ ಪೆಟ್ರಾನ್ ಕಂಪನಿ ಹತ್ತಿರ ಇದ್ದ ಎರಡು ವಾಹನಗಳಿಗೆ ಕಲ್ಲುಗಳಿಂದ ಹೊಡೆದು ಹಾನಿ ಪಡಿಸಿರುತ್ತಾರೆ ಅಂತಾ ಶ್ರೀ ಮನೋಜಕುಮಾರ ಬಗೋರಿಯಾ ಎಡಿ.ಜಿ.ಎಮ್ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿ, ತಾ|| ಸೇಡಂ, ಜಿ|| ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.