ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಸಂಜೆ
ಪಟ್ಟಣ ಗ್ರಾಮದ ಹಳ್ಳದ ಬ್ರೀಡ್ಜ ರೋಡಿನ ಮೇಲೆ ಟ್ಯಾಕ್ಟ್ರರ
ಚಾಲಕ ತನ್ನ ಟ್ಯಾಕ್ಟ್ರರ ಇಂಜನ KA 39 T 2243 ಮತ್ತು ಟ್ರಾಲಿ ನಂಬರ KA 39 T 2244 ನೇದ್ದು ಮಾನವನ ಜೀವಕ್ಕೆ ಅಪಾಯವಾಗುವ ಮತ್ತು ಸಂಚಾರಕ್ಕೆ ಅಡೆ ತಡೆಯಾಗುವ
ರೀತಿಯಲ್ಲಿ ಹಾಗೂ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ನಿಲ್ಲಿಸಿದ್ದರಿಂದ ಮತ್ತು ನನ್ನ
ತಮ್ಮ ಮಲ್ಲಿಕಾರ್ಜುನ ತಂದೆ ಶಾಂತಪ್ಪ ನಾಟೀಕರ ಇತನು
ತನ್ನ ವಶದಲ್ಲಿದ್ದ ಹಿರೋ ಹೊಂಡಾ ಸಿಡಿ 100 KA 05 X 3352 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು
ಬಂದು ಟ್ಯಾಕ್ಟ್ರರದ ಟ್ರಾಲಿಯ ಹಿಂದುಗಡೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅವನಿಗೆ ಎಡತಲೆಯ
ಮೇಲೆ ಭಾರಿ ರಕ್ತಗಾಯ ಮತ್ತು ಬಲತಲೆಯ ಮೇಲೆ ಹರಿದ ಭಾರಿ ರಕ್ತಗಾಯ, ಮೂಗಿನಿಂದ ರಕ್ತ ಸೋರಿದ್ದು. ಎಡರಟ್ಟೆಯ
ಮೇಲೆ ಅಲ್ಲಿಲ್ಲಿ ರಕ್ತಗಾಯ, ಬಲಭುಜದ ಮೇಲೆ ರಕ್ತಗಾಯ, ಎಡಮೊಳಕಾಲ ಮೇಲೆ ತರಚಿದ ರಕ್ತಗಾಯ ಮತ್ತು ಕೆಳೆಗೆ
ತರಚಿದ ಗಾಯಗಳಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು ಅವನಿಗೆ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ
ತಂದು ಸೇರಿಕೆ ಮಾಡಿದಾಗ ಇತನಿಗೆ ಆದ ಭಾರಿ ರಕ್ತಗಾಯಗಳಿಂದ ವೈದ್ಯರು ಉಪಚರಿಸುತ್ತಿರುವ ಕಾಲಕ್ಕೆ ಗುಣ ಮುಖ ಹೊಂದದೇ ದಿನಾಂಕ 10/03/2018 ರಂದು ರಾತ್ರಿ ಮೃತಪಟ್ಟಿರುತ್ತಾನೆ
ಅಂತಾ ಶ್ರೀ ಈರಣ್ಣಾ ತಂದೆ ಶಾಂತಪ್ಪಾ ನಾಟೀಕರ ಸಾ : ಪಟ್ಟಣ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಮೃತ ಸೋಫಾನರಾವ ಇತನು ಯಾವುದೋ
ಕೆಲಸದ ನಿಮತ್ಯಾ ಆಳಂದ ಕಡೆಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ತನ್ನ ವಶದಲ್ಲಿದ್ದ ಮೋಟಾರ ಸೈಕಲ್
ನಂ KA-32 EE-1169 ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ
ನಡೆಸಿಕೊಂಡು ಬಂದು ರಾತ್ರಿ ಸುಮಾರಿಗೆ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಪೆಟ್ರೋಲ್ ಪಂಪದ
ಎದರುಗಡೆ ರೋಡ ಜಂಪನಲ್ಲಿ ಮುಂದೆ ಹೋಗುತ್ತಿದ್ದ ಯಾವುದೋ ಒಬ್ಬ ಕಾರ ಚಾಲಕನು ತನ್ನ ಕಾರನ್ನು
ಯಾವುದೇ ಇಂಡಿಕೇಟರ್ ವಗೈರೇ ಮತ್ತು ಯಾವುದೇ ಸೂಚನೆ ನೀಡದೇ ಹೋಗು ಬರುವ ವಾಹನ ಚಾಲಕರಿಗೆ
ಅಪಾಯವಾಗುವ ರೀತಿಯಲ್ಲಿ ಕಾರನ್ನು ಒಮ್ಮಲೇ ರೋಡಿನ ಮೇಲೆ ನಿಲ್ಲಿಸಿದಾಗ ಮೃತ ಸೋಪನರಾವ ಇತನು ತನ್ನ
ಮೋಟಾರ ಸೈಕಲ್ ಸದರಿ ಕಾರಿನ ಹಿಂದುಗಡೆ ಅಪಘಾತ
ಪಡಿಸಿದ್ದರಿಂದ್ದ ಮೃತನ ಹಣೆಗೆ ಮತ್ತು
ಕುತ್ತಿಗಿಗೆ ಭಾರಿ ರಕ್ತಗಾಯವಾಗಿ ಮತ್ತು ಇತರೇ ಕಡೆಗಳಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುನೀತಾ ಗಂಡ ಸೋಫಾನರಾವ ಸೂರ್ಯವಂಶಿ ಸಾ : ಆಶ್ರಯ ಕಾಲೋನಿ
ರಾಣೇಶಪೀರ ದರ್ಗಾ ಹತ್ತಿರ ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 08-03-18 ರಂದು ಮೊಟಾರ ಸೈಕಲ್ ನಂ. ಕೆಎ32ಇಕ್ಯೂ1564 ನೆದ್ದರ ಮೇಲೆ ಗಂಡ
ನಾಗೇಂದ್ರಪ್ಪ ಇಬ್ಬರೂ ಕೂಡಿಕೊಂಡು ಕುರಕುಂಟಾ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ
ವಾಪಾಸು ಹೋಗುವಾಗ ಬಟಗೇರಾ(ಕೆ) ಗೇಟ ಹತ್ತಿರ ಕುರಕುಂಟಾ ಕ್ರಾಸ ಹತ್ತಿರ ಒಬ್ಬ ಮೊಟಾರ ಸೈಕಲ್
ನಂ.ಕೆಎ32ಇಆರ್3186 ನೆದ್ದರ ಚಾಲಕನು ಅತಿ
ವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಗಂಡ ಚಲಾಯಿಸುತ್ತಿದ್ದ ಮೊಟಾರ ಸೈಕಲ್
ಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ, ಮೊಟಾರ ಸೈಕಲ್ ಸಮೇತ ಆರೋಪಿತನು
ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಸುನಂದಾ ಗಂಡ ನಾಗೇಂದ್ರಪ್ಪ ರಾಜಾಪೂರ ಸಾ|| ಸಣ್ಣ ಅಗಸಿ ಸೇಡಂ, ಹಾ.ವ|| ವಿ.ಸಿ.ಎಫ್ ಕಾಲೋನಿ ಸೇಡಂ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ
ಠಾಣೆ : ದಿನಾಂಕ 10-03-2018
ರಂದು ಅಫಜಲಪೂರ ಪಟ್ಟಣದ ದುಧನಿ ರಸ್ತೆಗೆ ಇರುವ ಸಾಮ್ರಾಟ ಪೇಟ್ರೊಲ ಪಂಪ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಾಮ್ರಾಟ ಪೇಟ್ರೊಲ ಪಂಪ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಪೆಟ್ರೊಲ ಪಂಪ ಪಕ್ಕದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಾಳಪ್ಪ ತಂದೆ ಚಂದ್ರಾಮ ಹುಲ್ಲೂರ ಸಾ|| ಅಮೋಗಸಿದ್ದ ಗುಡಿ ಹತ್ತಿರ ಅಫಜಲಪೂರ 2) ತುಕಾರಾಮ ತಂದೆ ಲಕ್ಷ್ಮಣ ಬಂಗಿ ಸಾ|| ಅಫಜಲಪೂರ 3) ಸುರೇಶ ತಂದೆ ದುಂಡಪ್ಪ ಹಿಂಚಗೇರಾ ವಯ|| 52 ವರ್ಷ ಜಾ|| ಕುರುಬ ಉ|| ಲಾರಿ ಚಾಲಕ ಸಾ|| ಅಫಜಲಪೂರ 4) ಬಸವರಾಜ ತಂದೆ ತುಳುಜಪ್ಪ ಕುಮಸಗಿ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5620/- ರೂ ಹಾಗು
52 ಇಸ್ಪೇಟ ಎಲೆಗಳನ್ನು ವಶಕ್ಕೆ
ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ
ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಲಕ್ಷ್ಮಮ್ಮ ಗಂಡ ಕಾಶಪ್ಪ ಕೊಲಕುಂದಾ, ಸಾ|| ಭೂತಪೂರ, ತಾ|| ಸೇಡಂ, ಜಿ|| ಕಲಬುರಗಿ.
ರವರು ದಿನಾಂಕ: 09-03-2018 ರಂದು ಸಿಂಧನಮಡು ಗ್ರಾಮ
ಪಂಚಾಯತ ಕಾರ್ಯಾಲಯದಲ್ಲಿ ಪಿ.ಡಿ.ಓ ರಾಮಪ್ಪ ಇವರು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಚೆಕ್ಗಳ ಮೇಲೆ
ಮತ್ತು ಮನೆ ಹಂಚಿಕೆಯ ದಾಖಲಾತಿಗಳ ಮೇಲೆ ಸಹಿ ಮಾಡಲು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಮ್ಮ
ಇವರಿಗೆ ಹೇಳಿದಾಗ, ಆಗ ಫಿರ್ಯಾದಿದಾರರು ನನಗೆ ಓದು ಬರಹ ಬರುವುದಿಲ್ಲ, ಓದಿ ಬರಹ ಬಲ್ಲವರಿಗೆ ಕೇಳಿ ವಿಷಯ ತಿಳಿದುಕೊಂಡು ಸಹಿ ಮಾಡುವುದಾಗಿ
ಹೇಳಿದ್ದು, ಅದಕ್ಕೆ ಪಿ.ಡಿ.ಓ ರವರು ಫಿರ್ಯಾದಿಗೆ ನೀನು ಮುದುಕಿ
ಆಗಿದ್ದಿ, ನಿನಗೆ ಕೆಲಸ ಬರುವುದಿಲ್ಲ ಅಂದರೆ ರಾಜಿನಾಮೆ ಕೊಟ್ಟು
ಹೋಗು, ನಿನ್ನಿಂದ ಈ ಕೆಲಸ ಆಗುವುದಿಲ್ಲ ಅಂತಾ ಏಕ ವಚನದಲ್ಲಿ
ಬೈಯ್ದು, ಮಾದೀಗ ಜನಾಂಗದವರಿಗೆ ಯಾಕೆ ಅಧ್ಯಕ್ಷ ಕೊಟ್ಟಿರುತ್ತಾರೆ
ಅಂತಾ ಬೈಯ್ದಿದ್ದು, ಸದರಿ ಪಿ.ಡಿ.ಓ ರಾಮಪ್ಪ ಇವರ
ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :
ಸೇಡಂ ಠಾಣೆ : ದಿನಾಂಕ: 07-03-18 ರಂದು 04:00 ಪಿ.ಎಮ್ ಕ್ಕೆ ಶ್ರೀ ಸಿಮೆಂಟ ಫ್ಯಾಕ್ಟರಿ
ಕೊಡ್ಲಾ-ಬೆನಕನಳ್ಳಿಯಲ್ಲಿನ ಕಾಖರ್ಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಾದ ಮಹ್ಮದ ಮುನೀಫ್ ಸಾ|| ಮುಜಫರಪುರ ಬಿಹಾರ ಇತನು ಕೆಲಸ ಮಾಡುವ ಸಮಯದಲ್ಲಿ ಅವನ ತಲೆಯ ಮೇಲೆ
ರಾಡಗಳು ಬಿದ್ದು ತಲೆಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಮ್
ಆಸ್ಪತ್ರೆಯಲ್ಲಿ ಹೋಗಿದ್ದು, ಆ ವೇಳೆಯಲ್ಲಿ ವೈದ್ಯರು
ಪರಿಶೀಲಿಸಿ ಮೃತಪಟ್ಟಿದ್ದ ಬಗ್ಗೆ ತಿಳಿಸಿದ್ದು, ಈ ವಿಷಯವನ್ನು
ಇಟ್ಟಿಕೊಂಡು ದಿನಾಂಕ: 08-03-18 ರಂದು 08:20 ಎ.ಎಮ್ ಸುಮಾರಿಗೆ ಮೇ|| ಪೆಟ್ರಾನ್ ಕಂಪನಿಯ ಸಬ್ ಕಾಂಟ್ರಾಕ್ಟರರಾದ ಸುನೀಲಕುಮಾರ ವಿ.
ಕಾಂಟ್ರಕ್ಟರ್ ಹತ್ತಿರ ಕೆಲಸ ಮಾಡುವ ಸುಭೋದಕುಮಾರ ಹಾಗು
ಇತರೆ ಗುತ್ತಿಗೆ ಕಾರ್ಮಿಕರು ಸುಮಾರು 45-50 ಜನ ಕಾರ್ಮಿಕರು ಪೂರ್ವದ
ಗೇಟನಿಂದ ಪೆಟ್ರಾನ್ ಆಫೀಸ್ ಕಡೆಗೆ ನುಗ್ಗಿ, ನಂತರ ಫ್ಯಾಕ್ಟರಿಯ ಟಿ
ಜಂಕ್ಷನ್ ಹತ್ತಿರ ನಿಂತಿದ್ದ ಹೊಸ ಬಸ್ಸಿಗೆ ಕಲ್ಲುಗಳಿಂದ ಹೊಡೆದು ಅದರ ಎಲ್ಲಾ ಗಾಜುಗಳನ್ನು
ಒಡೆದು ಬಸ್ಸಿಗೆ ಹಾನಿ ಮಾಡಿ ನಂತರ ಪೆಟ್ರಾನ್ ಕಂಪನಿ ಹತ್ತಿರ ಇದ್ದ ಎರಡು ವಾಹನಗಳಿಗೆ
ಕಲ್ಲುಗಳಿಂದ ಹೊಡೆದು ಹಾನಿ ಪಡಿಸಿರುತ್ತಾರೆ ಅಂತಾ ಶ್ರೀ ಮನೋಜಕುಮಾರ ಬಗೋರಿಯಾ ಎಡಿ.ಜಿ.ಎಮ್
ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿ, ತಾ|| ಸೇಡಂ, ಜಿ|| ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment