POLICE BHAVAN KALABURAGI

POLICE BHAVAN KALABURAGI

09 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಚಂದ್ರಶಾ ತಂದೆ ಚನ್ನಮಲ್ಲಪ್ಪ ಅಲ್ದೆ ಸಾ: ಬಡದಾಳ ರವರ ಅಕ್ಕಳಾದ ಶಿವಲೀಲಾ ಅನ್ನು ಹಿರೇ ರೂಗಿ ಗ್ರಾಮದ ಚಂದ್ರಕಾಂತ ತಂದೆ ಸಿದ್ದಪ್ಪ ಬಡಿಗೇರ ವಯ: 34 ವರ್ಷ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ದಿನಾಂಕ 07-12-17 ರಂದು ನಮ್ಮೂರಿನ ಶ್ರೀ ಚನ್ನಮಲ್ಲೇಶ್ವರ ದೇವರ ಜಾತ್ರೆ ಇದ್ದುದ್ದರಿಂದ ನನ್ನ ಅಕ್ಕ ಶೀವಲೀಲಾ ಇವಳು ಮೂರು ನಾಲ್ಕು ದಿನಗಳ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ ನನ್ನ ಅಕ್ಕಳ ಗಂಡನಾದ ಚಂದ್ರಕಾಂತನು ನಾನು ಜಾತ್ರೆಗೆ ಬರುತ್ತೇನೆ ನಮ್ಮೂರಿಗೆ ಬಾ ಇಬ್ಬರು ಕೂಡಿಕೊಂಡು ಸಾಯಂಕಾಲ ಮೋಟಾರ ಸೈಕಲ್ ಮೇಲೆ ಬಡದಾಳ ಗ್ರಾಮಕ್ಕೆ ಹೋಗೊನ  ಅಂತಾ ಹೇಳಿದ್ದರಿಂದ ನಾನು ನಿನ್ನೆ ಬೆಳಿಗ್ಗೆ ಹಿರೇ ರೂಗಿ ಗ್ರಾಮಕ್ಕೆ ಹೋಗಿದ್ದು ದಿನಾಂಕ 07-12-2017 ರಂದು ಸಾಯಂಕಾಲ ನಾನು ಮತ್ತು ನಮ್ಮ ಮಾವ ಚಂದ್ರಕಾಂತ ಇಬ್ಬರು ಮೋಟಾರ ಸೈಕಲ್ ನಂ ಕೆಎ-28-.ಹೆಚ್-6724 ನೇದ್ದರ ಮೇಲೆ ಹಿರೇ ರೂಗಿ ಗ್ರಾಮದಿಂದ ಹೊರಟಿರುತ್ತೇವೆ. ನಮ್ಮ ಮಾವ ಮೋಟಾರ ಸೈಕಲ್ ನಡೆಸುತ್ತಿದ್ದು ನಾನು ಹಿಂದಿನ ಶೀಟಿನಲ್ಲಿ ಕುಳಿತ್ತಿದ್ದೇನೆ ಸಾಯಂಕಾಲ 07:15 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಅಫಜಲಪೂರ ಪಟ್ಟಣ ದಾಟಿ ಧುದನಿ ರೋಡಿಗೆ ಬಸ್ ನಿಲ್ದಾಣ ಹತ್ತಿರ ಹೋಗುತ್ತಿದ್ದಾಗ ಎದುರುಗಡೆ ಟ್ರ್ಯಾಕ್ಟರ ನಂ ಎಮ್.ಹೆಚ್.-45-ಎಫ್-6713 ನೇದ್ದು ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿಕೊಂಡು ಧುದನಿ ಕಡೆಗೆ ಹೊರಟಿತ್ತು ಹಿಂದಿನ ಟ್ರೈಲಿ ನಂ ಎಮ್.ಹೆಚ್.-45--6713 ನೇದ್ದು ಇತ್ತು ಸದರಿ ಟ್ರ್ಯಾಕ್ಟರ ಚಾಲಕ ಮುಂದೆ ತನ್ನ ಟ್ರ್ಯಾಕ್ಟರ ನಡೆಸಿಕೊಂಡು ಹೋರಟ್ಟಿದ್ದು ನಾವು ಟ್ರ್ಯಾಕ್ಟರ ಹಿಂದೆ ಹೊರಟಿದ್ದೇವು. ಆಗ ಸದರಿ ಟ್ರ್ಯಾಕ್ಟರ ಚಾಕಲನು ಟ್ರ್ಯಾಕ್ಟರಗೆ ಅಡ್ಡಲಾಗಿ ರೋಡಿನ ಪಕ್ಕದಿಂದ ದನಗಳು ರೋಡಿನ ಮೇಲೆ ಬಂದಿದ್ದರಿಂದ ತನ್ನ ಟ್ರ್ಯಾಕ್ಟರ ಅನ್ನು ನಿರ್ಲಕ್ಷತನದಿಂದ ಒಮ್ಮೇಲೆ ಬ್ರೇಕ್ ಹಾಕಿ ಹಿಂದೆ ನಿಂತಿದ್ದ ನಮ್ಮ ಮೋಟಾರ ಸೈಕಲ್ ನೋಡದೇ ಹಿಂದಕ್ಕೆ ನಡೆಸಿದ್ದರಿಂದ ಸದರಿ ಟ್ರ್ಯಾಕ್ಟರ ಹಿಂದಿನ ಟ್ರೈಲಿ ನಮ್ಮ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭಂವಿಸಿರುತ್ತದೆ. ಆಗ ನಾನು ಜೋರಾಗಿ ಚೀರಿದ್ದರಿಂದ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಅಪಘಾತದಲ್ಲಿ ನಮ್ಮ ಮಾವನ ಮುಖಕ್ಕೆ ಮತ್ತು ತಲೆಗೆ ಭಾರಿ ರಕ್ತಗಾಯಗಳಾಗಿರುತ್ತವೆ  ನಮ್ಮ ಮಾವನಿಗೆ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ರಾತ್ರಿ 08:45 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಗೊಬ್ಬುರ (ಬಿ) ಗ್ರಾಮದ ದಾಟಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08/12/2017 ರಂದು ಬೆಳಿಗ್ಗೆ ನಮ್ಮ ತಮ್ಮ ಸುಭಾಷಚಂದ್ರ ಹಾಗು ಬಸವರಾಜ ಅಂದೊಡಗಿ ಇಬ್ಬರು ಬಸವರಾಜನ ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಬಡದಾಳ ಗ್ರಾಮ ಶಾಲೆಗೆ ಹೋಗಿರುತ್ತಾರೆ ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಜೆವರ್ಗಿ(ಬಿ) ಗ್ರಾಮದ ಶಾಲೆಯಲ್ಲಿ ಕರ್ತವ್ಯದಲಿದ್ದಾಗ  ಮಾದಾಬಾಳ ತಾಂಡಾದ ಲಕ್ಷ್ಮಿ ನಗರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸಲಿಂಗಪ್ಪ ಪೂಜಾರಿ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಮದ್ಯಾಹ್ನ 1.45 ಗಂಟೆ ಸುಮಾರಿಗೆ ನಮ್ಮ ಶಾಲೆಯ ಹತ್ತಿರ ಅಫಜಲಪೂರ ದುದನಿ ರೋಡಿನ ಮೇಲೀಂದ ನಿಮ್ಮ ತಮ್ಮ ಸುಭಾಷಚಂದ್ರ ಮತ್ತು ಬಸವರಾಜ ಅಂದೊಡಗಿರವರು ಮೋಟರ್ ಸೈಕಲ್ ನಂ ಕೆಎ-32 ಇಸಿ-9425 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೊರಟಾಗ ಅವರ ಹಿಂದಿನಿಂದ ಕಾರ ನಂ ಕೆಎ-32 ಸಿ-7742 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ನಾನು ಓಡಿ ಹೋಗುವಷ್ಟರಲ್ಲಿ ಕಾರಿನ ಚಾಲಕನು ಕಾರಿನಿಂದ ಇಳಿದು ಓಡಿ ಹೋಗಿರುತ್ತಾನೆ. .ಸದರಿ ಘಟನೆಯಲ್ಲಿ ನಿಮ್ಮ ತಮ್ಮನಾದ ಸುಭಾಷಂದ್ರನಿಗೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಬಸವರಾಜನಿಗೂ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ  ಚಿಕಿತ್ಸೆಗಾಗಿ 108 ವಾಹನದಲ್ಲಿ ಕಳುಹಿಸಿಕೊಡಲಾಗಿರುತ್ತದೆ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ಅಫಜಲಪೂರಕ್ಕೆ ಬಂದು ಭೀಮರಾಯ ನಾಗೂರ, ಶಿವಲಿಂಗಪ್ಪ ಜೋಗುರ, ಸುರೇಶ ಅಂದೋಡಗಿ ಮತ್ತಿತರರು ಘಟನೆಯ ಸ್ಥಳಕ್ಕೆ ಹೋಗಿ ನೋಡಿದ್ದು ನಿಜವಿದ್ದು ಸದರಿ ಘಟನೆಯಲ್ಲಿ ಗಾಯ ಹೊಂದಿದ ಬಸವರಾಜ ಅಂದೋಡಗಿ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ಗೊಬ್ಬುರ(ಕೆ) ಗ್ರಾಮದ ಹತ್ತಿರ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಶರಣಬಸಪ್ಪ ತಂದೆ ಗಣಪತರಾವ ಕಣ್ಣಿ ಸಾ|| ಮಲ್ಲಿಕಾರ್ಜುನ ಚೌಕ  ಹತ್ತಿರ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-12-2017 ಮಿಣಜಗಿ ತಾಂಡಾದ ಬಸ್ ನಿಲ್ದಾಣದ ಹತ್ತಿರ ಅಪ್ಪಾಜಿ ಗುರುಕುಲ ಸ್ಕೂಲ ವ್ಯಾನ ನಂ ಕೆಎ-32 ಎಮ್-9236 ನೇದ್ದರ ಚಾಲಕ ನು ತನ್ನ ವಾಹನವನ್ನು ಅಲಕ್ಷ್ಯ ತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ರಾಮಜಿ ತಂದೆ ಶೇವೂ ರಾಠೋಡ ಸಾಃ ಮಿಣಜಗಿ ತಾಂಡಾ ತಾ.ಜಿಃ ಕಲಬುರಗಿ ರವರ ಮಗನಾದ ಸುರಜ್ ವಯಾಃ 07 ವರ್ಷ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-12-2017 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮಕ್ಕೆ ಹೋಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿ ದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ದತ್ತು ತಂದೆ ಭಾಗಪ್ಪ ಜಮಾದಾರ ಸಾ||ಚಿಂಚೋಳಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 600/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017 ರಂದು ಶ್ರೀಮತಿ ಮಲ್ಲಮ್ಮ ಗಂಡ ಸೈಬಣ್ಣ ತಳವಾರ ಸಾಃ ಫರಹತಾಬಾದ ಗ್ರಾಮ ತಾ.ಜಿಃ ಕಲಬುರಗಿ ರವರ  ಮಗಳಾದ ಕುಮಾರಿ ಭಾಗ್ಯವಂತಿ ವಯಾಃ 19 ವರ್ಷ ಇವಳು ಸಂಡಾಸಕ್ಕೆ ಹೊಗಿ ಬರುತ್ತೇ ನೆಂದು ಹೇಳಿ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡು ಕಾಡಲಾಗಿ ಸಿಕ್ಕಿರುವುದಿಲ್ಲ. ಪತ್ತೆ ಮಾಡಿ ಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

08 December 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಂಜುನಾಥ ತಂದೆ ಚಂದ್ರಕಾಂತ ಸಿಂಗೇ ಸಾ ಆಶ್ರಯ ಕಾಲೂನಿ ಕಲಬುರಗಿ  ರವರು ದಿನಾಂಕ 06-12-2017 ರಂದು ಸಾಯಂಕಾಲ ನಮ್ಮ ಓಣಿಯ ಗಣೇಶ ಕೂಡಿಸುವ ಸ್ಥಳದಲ್ಲಿ ನ್ನ ಸ್ನೇಹಿತ ಮದರ ಮುಜಾವರ ಸಾ : ಡಬರಾಬಾದ ಇಬ್ಬರು ಮಾತನಾಡುತ್ತಾ ನಿಂತುಕೊಂಡಾಗ ನಮ್ಮ ಓಣಿಯ ಇರ್ಫಾನ ತಂದೆ ಮನ್ನು ಇತನು ಬಂದು ವಿನಾಕಾರಣ ನಮ್ಮಿಬ್ಬರಿಗು ಇಲ್ಲಿ ಯಾಕೆ ನಿಂತಿರುವಿರಿ ಅಂತಾ ನಮ್ಮೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ವಿನಾಕಾರಣ  ಬೈಯುತ್ತಿದ್ದಿಯಾ ಅಂತಾ ಕೇಳಲು ಇರ್ಫಾನ ಇತನು ತನ್ನ ಮನೆಗೆ ಹೋಗಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದುಕೊಂಡು ತನ್ನ ಮಕ್ಕಳಾದ ಅಪ್ಸರ ತಂದೆ ಇರ್ಫಾನ ಫಾರುಕ ತಂದೆ ಇರಫಾನ ಇವರನ್ನು ಕರೆದುಕೊಂಡು ಬಂದನು ಅವರ ಮಕ್ಕಳು ಬಂದವರೆ ನಮ್ಮ ತಂದೆಯೊಂದಿಗೆ ಯಾಕೆ ಜಗಳವಾಡುತ್ತಿದ್ದಿಯಾ ಅಂತಾ ಜಗಳ ತೆಗೆದು ಇರ್ಫಾನ ತಂದೆ ಮನ್ನು, ಅಪ್ಸರ ತಂದೆ ಇರ್ಫಾನ, ಮತ್ತು ಫಾರುಕ ತಂದೆ ಇರ್ಫಾನ ಇವರು ಕೂಡಿಕೊಂಡು ನನಗೆ ದೇಡ ಮಾಕೇ ಲೌಡೆ ಅಂದು ಜಾತಿ ನಿಂದನೆ ಮಾಡಿ ನಿಂದು ಬಹಳ ಆಗಿದೆ ಅಂತಾ ಅಂದು  ತನ್ನ ಕೈಲ್ಲಿದ್ದ  ಕೊಡಲಿಯಿಂದ ನನ್ನ ತಲೆಗೆ ಮತ್ತು ಎಡಗೈ ಮಣಿಕಟ್ಟಿಗೆ ಹೊಡೆದು ರಕ್ತಗಾಯಗೊಳಿಸಿದನು ಅಪ್ಸರ ತಂದೆ ಇರ್ಫಾನ ಇತನು ಅಲ್ಲಿಯೆ ಬಿದ್ದ ಕಬ್ಬಿಣದ ಪೈಪ ತೆಗೆದುಕೊಂಡು ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಾಯಿ ಮಹಾದೇವಿ ಇವಳು ಬಿಡಿಸಲು ಬಂದಾಗ ಅವಳಿಗೂ ಕೂಡಾ ಇರ್ಫಾನ ಈತನು ಕಾಲಿನಿಂದ ಹೊಟ್ಟಗೆ ಒದ್ದಿರುತ್ತಾನೆ ಅಪ್ಸರ ಮತ್ತು ಫಾರುಕ ಇವರು ಕುಡಾ ನನ್ನ ತಾಯಿಗೆ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 06-12-2017 ರಂದು ನಾನು ಮನೆಯಲ್ಲಿ ಇದ್ದಾಗ ನನ್ನ ಕಿರಿಯ ಮಗ ಸುರೇಶನು ಅಫಜಲಪೂರ ಮತ್ತು ಕೋಗನೂರ ಗ್ರಾಮದಲ್ಲಿ ಕೆಲಸವಿದೆ ಅಲ್ಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ನಂತರ 8-30 ಪಿಎಂ ಕ್ಕೆ ನಾನು ಮನೆಯಲ್ಲಿದ್ದಾಗ ನಮ್ಮ ಗುಡಿಸಲು ಪಕ್ಕ ಇರುವ ಲಾಡ್ಜನ ಮಾಲಿಕರಾದ ಶ್ರೀ ಗೌಡಪ್ಪಗೌಡ ಬಿರಾದಾರ ಸಾ|| ಮದರಾ(ಬಿ) ರವರು ಬಂದು ಸ್ಟೆಷನಗಾಣಗಾಪೂರದ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ಫೋನ ಮಾಡಿದ್ದಾನೆ ನಿನ್ನ ಜೊತೆ ಮಾತನಾಡುತ್ತಾನೆ ನೋಡು ಅಂತಾ ಮೋಬೈಲ ಫೊನ ನನಗೆ  ಕೊಟ್ಟರು. ಆಗ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ರವರು ಫೋನನಲ್ಲಿ ತಿಳಿಸಿದ್ದೆನೆಂದರೆ ನಾನು ಕೋಗನೂರ ಕ್ರಾಸ್ ಹತ್ತಿರ ಸ್ಟೇಷನ ಗಾಣಪೂರಕ್ಕೆ ಹೋಗಲೇಂದು ಟಂ,ಟಂ ಗಾಗಿ ಕಾಯತ್ತಾ ಕುಳಿತಿದ್ದೆ. ಕೋಗನೂರ ಕಡೆಯಿಂದ ಕೋಗನೂರ ಕ್ರಾಸದಿಂದ ಸುಮಾರು 50 ಮೀಟರ ಅಂತರದಲ್ಲಿ ಒಂದು ಮೋಟರ ಸೈಕಲ ಮೇಲೆ ಒಬ್ಬ ವ್ಯಕ್ತಿ ಬರುತ್ತಿದ ಆತ ತಾನು ಚಾಲಾಯಿಸುತ್ತಿದ್ದ ಮೋಟರ ಸೈಕಲನ್ನು ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಆಕಡೆ, ಈಕಡೆ ಓಡಿಸಿ ಸ್ಕಿಡಾಗಿ ಬಿದ್ದನು. ಆಗ ನಾನು ಓಡಿ ಹೋಗಿ ನೋಡಲು ಆತನು ನಿನ್ನ ಕಿರಿಯ ಮಗ ಸುರೇಶನಿದ್ದು. ಆತನು ಮೋಟರ ಸೈಕಲ ಮೇಲಿಂದ  ಬಿದ್ದದರಿಂದ ಆತನ ಕುತ್ತಿಗೆ ಹತ್ತಿರ ತೆರಚಿದ ಗಾಯ, ಕೇಳದುಟಿಗೆ ರಕ್ತಗಾಯ, ಎಡಪಕ್ಕೇಲುಬಿನ ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಾ ಬಿದ್ದದನು. ನಾನು ಹತ್ತಿರ ಹೋಗಿ ನೋಡಲು ಆತನು ಮೃತಪಟ್ಟಿರುತ್ತಾನೆ. ಆತನು ಚಲಾಯಿಸುತ್ತಿದ್ದ ಮೋಟರ ಸೈಕಲ ಟಿವಿಎಸ್ ಎಕ್ಸಲ ಕಂಪನಿಯದಿದ್ದು ನಂಬರ- ಕೆಎ-32-ಈಸಿ-3015 ಅಂತಾ ಇರುತ್ತದೆ. ನಿನ್ನ ಫೋನ ನಂಬರ ನನ್ನ ಹತ್ತಿರ ಇರದ ಕಾರಣ ಶ್ರೀ ಗೌಡಪ್ಪಗೌಡ ಬಿರಾದಾರ ರವರ ಫೋನ ನಂಬರ ತೆಗೆದುಕೊಂಡು ಅವರಿಗೆ ಫೋನ ಮಾಡಿರುತ್ತೇನೆ. ನೀವು ಬೇಗ ಬನ್ನಿ ಅಂತಾ ತಿಳಿಸಿದನು. ಆಗ ನಾನು ನನ್ನ ಹೆಂಡತಿ, ನನ್ನ ಹಿರಿಯ ಮಗ ರಮೇಶ, ನನ್ನ ಅಣ್ಣ ದುರ್ಗಪ್ಪ, ಮತ್ತು ನಮಗೆ ಪರಿಚಯ ಇರುವ ದೇಲಗಾಣಗಾಪೂರ ಅಣ್ಣಪ್ಪ ತಂದೆ ಭಗವಂತ ಭಜಂತ್ರಿ ಎಲ್ಲರೂ ಕೂಡಿಕೊಂಡು ಅಪಘಾತವಾಗಿ ನನ್ನ ಮಗ ಬಿದ್ದ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ಕುತ್ತಿಗೆ ಹತ್ತಿರ ತೆರಚಿದ ಗಾಯ, ಕೇಳದುಟಿಗೆ ರಕ್ತಗಾಯ, ಎಡಪಕ್ಕೇಲುಬಿನ ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ  ಮಂಜುಳಾ ಗಂಡ ಶಿವಶರಣಪ್ಪ ಹಚ್ಚಡ ಸಾ|| ಹರನಾಳ(ಬಿ) ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ನಮ್ಮ ಹೊಲಗಳಿದ್ದು, ಅದರ ಸರ್ವೆ ನಂ 32/2/2 ನೇದ್ದರಲ್ಲಿ 3 ಎಕರೆ 38 ಗುಂಟೆ ಮತ್ತು ಇನ್ನೊಂದು ಹೊಲ ಸರ್ವೆ ನಂ 32/2/1 ನೇದ್ದರಲ್ಲಿ 3 ಎಕರೆ 23 ಗುಂಟೆ ಜಮೀನು ಇರುತ್ತದೆ, ಸದ್ಯ ಆ ಹೊಲಗಳು ನಮ್ಮ ಮಾವ ದೊಡ್ಡಪ್ಪ ಹಚ್ಚಡ ಮತ್ತು ನಮ್ಮ ಅತ್ತೆ ಪಾರ್ವತಿ ಹಚ್ಚಡ ರವರ ಹೆಸರಿಗೆ ಇದ್ದು, ಅವುಗಳನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದು, ಅದರ ಉಪಭೋಗವನ್ನು ನಾವೆ ಮಾಡುತ್ತಿರುತ್ತೇವೆ, ಅದರಂತೆ ನನ್ನ ಗಂಡ ಆ ಹೊಲದ ಮೇಲೆ ಯಡ್ರಾಮಿ ಕೆ.ಜಿ.ಬಿ ಬ್ಯಾಂಕನಲ್ಲಿ ಸರ್ವೆ ನಂ 32/2/2 ನೇದ್ದಕ್ಕೆ 42,700/- ರೂ ಮತ್ತು ಸರ್ವೆ ನಂ 32/2/1 ನೇದ್ದಕ್ಕೆ 82,700/- ರೂ, ಹಂಗರಗಾ (ಕೆ) ಸೋಸೈಟಿಯಲ್ಲಿ 15,000/- ರೂ, ಮತ್ತು ಕುಕ್ಕನೂರ ಸೊಸೈಟಿಯಲ್ಲಿ 10,000/- ರೂ, ಹಾಗು ಇತರೆ ಖಾಸಗಿಯಾಗಿ 5,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ಆಗಾಗ ನನ್ನ ಗಂಡ ಸಾಲ ಬಹಳಾಗಿದೆ ಹೇಗೆ ತೀರಿಸುವುದು ಅಂತಾ ಚಿಂತೆ ಮಾಡುತ್ತಿದ್ದರು, ದಿನಾಂಕ 02-12-2017 ರಂದು ರಾತ್ರಿ 9;30 ಗಂಟೆ ಸುಮಾರಿಗೆ ನನ್ನ ಗಂಡ ಹೊಲದಿಂದ ಮನೆಗೆ ಬಂದು ನಾನು ಹೊಲದಲ್ಲಿ ವಿಷ ಕುಡದಿನಿ ಇನ್ನುಮುಂದೆ ಸಾಲ ನೀವೇ ತೀರಿಸಬೇಕು ಅಂತಾ ಅಂದು ಒಮ್ಮೇಲೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನು, ನಂತರ ನಾನು ಮತ್ತು ನಮ್ಮ ಭಾವ ಸಿದ್ದಣ್ಣ ಹಾಗು ಮತ್ತು ನಮ್ಮ ಸಂಬಂಧಿಕನಾದ ಪ್ರೇಮನಗೌಡ ಹಚ್ಚಡ ರವರು ಕೂಡಿಕೊಂಡು ಅಂಬುಲೆನ್ಸನಲ್ಲಿ ಹಾಕಿಕೊಂಡು ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ಇಂದು ದಿನಾಂಕ 07-12-2017 ರಂದು ಬೆಳಿಗ್ಗೆ 7;30 .ಎಂ ಸುಮಾರಿಗೆ ನನ್ನ ಗಂಡ ಉಪಚಾರ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:06/12/2017 ರಂದು ಶ್ರೀ ಅಪ್ಪಾಸಾಬ ತಂದೆ ಗುರುಬಸಪ್ಪ ಬಿರಾದಾರ ಸಾ: ವಿವೇಕಾನಂದ ನಗರ ಸಂಗಮತಾಯಿ ಲೇಔಟ ಮನೆ ನಂ.122 ಶಿವಗುರು ಸದನ ಕಲಬುರಗಿ ಇವರ  ಮಗ ತುಶಾರ ಇವನು  ಶಾಲೆಯಿಂದ ಬಂದು ಬಟ್ಟೆ ಬದಲಾಯಿಸಿ 2-30 ಪಿ.ಎಂಕ್ಕೆ ಹೊರಗೆ ಹೊಗಿರುತ್ತಾನೆ ಅಂತಾ ಅಕ್ಕ-ಪಕ್ಕದವರಿಂದ ತಿಳಿದು ಬಂದಿರುತ್ತದೆ. ನಿನ್ನೆ 2-30 ಗಂಟೆಗೆ ಹೊದ ನನ್ನ ಮಗ ಮರಳಿ ಮನೆಗೆ ಬಂದಿರುವುದಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರು  ಅಲ್ಲದೆ ನಮ್ಮ ಸ್ವಂತ ಗ್ರಾಮವಾದ ಖಾನಾಪುರಕ್ಕೆ ನಮ್ಮ ಅಣ್ಣ ಮಹಾಂತಪ್ಪ ಇವರಿಗೆ ವಿಚಾರಿಸಲು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು, ಇಲ್ಲಿಯವರೆಗೆ ನನ್ನ ಮಗ ಪತ್ತೆಯಾಗಿರುವುದಿಲ್ಲಾ, ಇಂದು ದಿನಾಂಕ:07/12/2017 ರಂದು ಚಂದ್ರಶೇಖರ ಪಾಟೀಲ ಸಿಬಿಸಿ ಶಾಲೇಗೆ ಹೋಗಿ ವಿಚಾರಿಸಲು ನಿಮ್ಮ ಹುಡುಗ 2 ದಿವಸಗಳಿಂದ ಶಾಲೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ಎಲ್ಲಾಕಡೆ ಹುಡುಕಾಡಿದರು ನನ್ನ ಮಗ ಪತ್ತೆಯಾಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017 ರಂದು ಮುಂಜಾನೆ ಅರ್ಜುನ ತಂದೆ ತಿಮ್ಮಯ್ಯ ಕೆರಮಗಿ ಸಂಗಡ 06 ಜನರು ಕೂಡಿಕೊಂಡು ಶ್ರೀಮತಿ ಕಲಾವತಿ ಗಂಡ ಶಿವಕುಮಾರ ದೇವರಮನಿ ಸಾಃ ಸಿರನೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಗೆ ಬಂದು  ನಿಮ್ಮ ತಮ್ಮ ಸಂತೋಷ ಈತನು ಕಾವೇರಿ ಇವಳಿಗೆ ಚೂಡಾಸುತ್ತಿದ್ದಾನೆ ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆ ಬಡೆ ಮಾಡಿ, ಸೀರೆ ಹಿಡಿದು ಎಳೆದಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 December 2017

KALABURAGI DISTRICT REPORTED CRIMES

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.12.2017 ರಂದು ಸಾಯಂಕಾಲ 5 ಗಂಟೆಯಿಂದ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗೋವಾ ಹೊಟೇಲ ಹತ್ತಿರ ಮುಖ್ಯ ರಸ್ತೆಯ ಮೇಲೆ ಶ್ರೀಮತಿ ಅಕ್ಕಮಾಹಾದೇವಿ ಪಿ.ಎಸ್.ಐ. ಮತ್ತು , ನಮ್ಮ ಠಾಣೆಯ ಶ್ರೀ ಎ. ಪೌಲ ಎ.ಎಸ್.ಐ. ಶ್ರೀ ಶಿವಪುತ್ತಪ್ಪ ಎ.ಎಸ್.ಐ. ಶ್ರೀ ಮಲ್ಲಿನಾಥ ಹೆಚ್.ಸಿ 355 ಮತ್ತು ಶ್ರೀ ಪ್ರಮೋದ ಪಿಸಿ 249 ರವರನ್ನು ಸಂಗಡ ಕರೆದುಕೊಂಡು ರಸ್ತೆಯ ಮೇಲೆ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶಿಲನೆ ಮಾಡಿಕೊಂಡಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆಎ 32 ಇಎಚ್ 6333 ಪಲ್ಸರ 180 ನೇದ್ದರ ಚಾಲಕನು ಮೋಟಾರ ಸೈಕಲ ತೆಗೆದುಕೊಂಡು ಇಬ್ಬರು ಹುಡುಗರು ಬಂದಿದ್ದು ಆಗ ನಾನು ಸದರಿ ಮೋಟಾರ ಸೈಕಲ ಚಾಲಕನಿಗೆ ಮೊಟಾರ ಸೈಕಲ ದಾಖಲಾತಿಗಳನ್ನು ಹಾಜರ ಪಡಿಸಲು ಸೂಚಿಸಿದ್ದು ಆಗ ಸದರಿ ಮೊಟಾರ ಸೈಕಲ ಮೇಲೆ ಬಂದ ಇಬ್ಬರು ಹುಡುಗರು ಪೊಲೀಸರಿಗೆ ಬೇರೆ ಕೆಲಸ ಇಲ್ಲವೆ ವಿನಾಕಾರಣ ತೊಂದರೆ ಮಾಡುತ್ತಾರೆ. ಅಂತ ಏರು ದ್ವನಿಯಲ್ಲಿ ಅವಾಚ್ಯವಾಗಿ ಮಾತನಾಡುತ್ತಾ ಒಮ್ಮೆಲೆ ನನ್ನ ಮೈ ಮೇಲೆ ಬಂದಿದ್ದು ಆಗ ನನ್ನ ಜೋತೆಯಲ್ಲಿ ಇದ್ದ ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ನಿಧಾನವಾಗಿ ಮಾತನಾಡು ಏಕೆ ಚಿರಾಡುತ್ತಿ ನಿಮ್ಮ ಮೋಟಾರ ಸೈಕಲ ದಾಖಲಾತಿಗಳು ತೋರಿಸಿ ಅಂತ ಹೇಳಿದ್ದು ಆಗ ಸದರಿಯವರು ನೀವು ಯಾರು ನಮಗೆ ತಡೆಯುವವರು ಅಂತ ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ನೂಕಿ ಕೊಟ್ಟು ನಮ್ಮ ಕೈಗಳಲ್ಲಿದ ಪೈನ ಬುಕ್ಕಗಳನ್ನು ಬಿಸಾಡಿ ನಮ್ಮ ಕರ್ತವ್ಯಕ್ಕೆ ಅಡತಡೆ ಮಾಡಿ ತಮ್ಮ ಮೋಟಾರ ಸೈಕಲ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಅಶೋಕ ತಂದೆ ದತ್ತಪ್ಪ ದಯಾಗೊಂಡ ಸಾ: ಪಟ್ಟಣ ತಾ:ಜ: ಕಲಬುರಗಿ 2) ಉದಯ ತಂದೆ ಚಂದ್ರಕಾಂತ ಪಡಸಾವಳೆ ಸಾ: ಝಳಕಿ ಹಾ:ವ: ಹೀರಾಪೂರ ಕಣ್ಣಿ ಮಾರ್ಕೇಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಗೆ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ರಾತ್ರಿ 8:30 ಗಂಟೆಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟದರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 06-12-2017   ರಂದು  ಹೊನಗುಂಟಾ  ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ  ಕಲ್ಯಾಣಿ  ಎ.ಎಸ್.ಐ ಶಹಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ರವರ ಮಾರ್ಗದರ್ಶನದಲ್ಲಿ  ಹೊನಗುಂಟಾ ಗ್ರಾಮದ ಬ್ರೀಡ್ಜ ಕೆಳಗಿನ ಹಳ್ಳದ ರಸ್ತೆಯಲ್ಲಿ 4-00 ಗಂಟೆಗೆ ಹೋದಾಗ ಕಾಗಿಣಾ ನದಿ ಕಡೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ  ಬರುತ್ತಿದ್ದು, ಅದನ್ನು ನೋಡಿ ನಿಲ್ಲಿಸುವಾಗ ಚಾಲಕನು ಟ್ಯಾಕ್ಟರ ನಿಲ್ಲಿಸಿ ಓಡಿ ಹೋದನು.  ಅವನಿಗೆ ನೋಡಿದರೆ ಗುರ್ತಿಸುತ್ತೇನೆ.  ಅದರ ನಂಬರ   ಪರಿಶೀಲಿಸಿ ನೋಡಲಾಗಿ ಮಶಿ ಫರಗೂಷನ ಟ್ಯಾಕ್ಟರ ಮರಳು ತುಂಬಿದ್ದು ಅದರ ನಂಬರ ಕೆ.ಎ. 32 ಟಿ 5411 – 5412 ಇದ್ದು ಅದರ ಅ.ಕಿ 2 ಲಕ್ಷ ರೂ. ಅದರಲ್ಲಿದ್ದ ಮರಳು ಅ.ಕಿ 1000/- ರೂ.  ಮರಳು ತುಂಬಿದ ಟ್ಯಾಕ್ಟರ  ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಟ್ಯಾಕ್ಟರ ಚಾಲಕ ಮತ್ತು ಮಾಲಕ ಇಬ್ಬರೂ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಅಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರ್ಯಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ  ತಂದೆ ತಿಮ್ಮಯ್ಯ ಕೇರಮಗಿ ಸಾಃ ಸಿರನೂರ ತಾ.ಜಿಃ ಕಲಬುರಗಿ ರವರ  ತಂಗಿಯಾದ ರೇಣುಕಾ ಇವಳಿಗೆ ಸುಮಾರು 2-3 ದಿವಸಗಳಿಂದ ಆರೋಪಿ ಸಂತೋಷ ಈತನು ಚೂಡಾಸುತ್ತಿದ್ದರಿಂದ ದಿನಾಂಕ 05/12/2017 ರಂದು ಫಿರ್ಯಾದಿದಾರರ ಕೇಳಲು ಹೊದಾಗ ಸಂತೊಷ ಸಂಗಡ ಇನ್ನೂ 07 ಜನರು ಕೂಡಿಕೊಂಡು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ