ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ
ಮಂಜುನಾಥ ತಂದೆ ಚಂದ್ರಕಾಂತ ಸಿಂಗೇ ಸಾ ಆಶ್ರಯ ಕಾಲೂನಿ
ಕಲಬುರಗಿ ರವರು ದಿನಾಂಕ 06-12-2017 ರಂದು
ಸಾಯಂಕಾಲ ನಮ್ಮ ಓಣಿಯ ಗಣೇಶ ಕೂಡಿಸುವ ಸ್ಥಳದಲ್ಲಿ ನ್ನ ಸ್ನೇಹಿತ ಮದರ ಮುಜಾವರ ಸಾ : ಡಬರಾಬಾದ
ಇಬ್ಬರು ಮಾತನಾಡುತ್ತಾ ನಿಂತುಕೊಂಡಾಗ ನಮ್ಮ ಓಣಿಯ ಇರ್ಫಾನ ತಂದೆ ಮನ್ನು ಇತನು ಬಂದು ವಿನಾಕಾರಣ ನಮ್ಮಿಬ್ಬರಿಗು
ಇಲ್ಲಿ ಯಾಕೆ ನಿಂತಿರುವಿರಿ ಅಂತಾ ನಮ್ಮೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈಯುತ್ತಿದ್ದಾಗ
ನಾನು ಯಾಕೆ ವಿನಾಕಾರಣ ಬೈಯುತ್ತಿದ್ದಿಯಾ ಅಂತಾ
ಕೇಳಲು ಇರ್ಫಾನ ಇತನು ತನ್ನ ಮನೆಗೆ ಹೋಗಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದುಕೊಂಡು ತನ್ನ
ಮಕ್ಕಳಾದ ಅಪ್ಸರ ತಂದೆ ಇರ್ಫಾನ ಫಾರುಕ ತಂದೆ ಇರಫಾನ ಇವರನ್ನು ಕರೆದುಕೊಂಡು ಬಂದನು ಅವರ ಮಕ್ಕಳು
ಬಂದವರೆ ನಮ್ಮ ತಂದೆಯೊಂದಿಗೆ ಯಾಕೆ ಜಗಳವಾಡುತ್ತಿದ್ದಿಯಾ ಅಂತಾ ಜಗಳ ತೆಗೆದು ಇರ್ಫಾನ ತಂದೆ ಮನ್ನು,
ಅಪ್ಸರ ತಂದೆ ಇರ್ಫಾನ, ಮತ್ತು ಫಾರುಕ ತಂದೆ ಇರ್ಫಾನ ಇವರು ಕೂಡಿಕೊಂಡು ನನಗೆ ದೇಡ ಮಾಕೇ ಲೌಡೆ
ಅಂದು ಜಾತಿ ನಿಂದನೆ ಮಾಡಿ ನಿಂದು ಬಹಳ ಆಗಿದೆ ಅಂತಾ ಅಂದು ತನ್ನ ಕೈಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಮತ್ತು ಎಡಗೈ ಮಣಿಕಟ್ಟಿಗೆ
ಹೊಡೆದು ರಕ್ತಗಾಯಗೊಳಿಸಿದನು ಅಪ್ಸರ ತಂದೆ ಇರ್ಫಾನ ಇತನು ಅಲ್ಲಿಯೆ ಬಿದ್ದ ಕಬ್ಬಿಣದ ಪೈಪ
ತೆಗೆದುಕೊಂಡು ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಾಯಿ
ಮಹಾದೇವಿ ಇವಳು ಬಿಡಿಸಲು ಬಂದಾಗ ಅವಳಿಗೂ ಕೂಡಾ ಇರ್ಫಾನ ಈತನು ಕಾಲಿನಿಂದ ಹೊಟ್ಟಗೆ
ಒದ್ದಿರುತ್ತಾನೆ ಅಪ್ಸರ ಮತ್ತು ಫಾರುಕ ಇವರು ಕುಡಾ ನನ್ನ ತಾಯಿಗೆ ಹಿಡಿದು ಎಳೆದಾಡಿ ಅವಮಾನ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ರೇವೂರ
ಠಾಣೆ : ದಿನಾಂಕ
06-12-2017 ರಂದು ನಾನು ಮನೆಯಲ್ಲಿ ಇದ್ದಾಗ ನನ್ನ ಕಿರಿಯ ಮಗ ಸುರೇಶನು ಅಫಜಲಪೂರ ಮತ್ತು ಕೋಗನೂರ
ಗ್ರಾಮದಲ್ಲಿ ಕೆಲಸವಿದೆ ಅಲ್ಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ನಂತರ
8-30 ಪಿಎಂ ಕ್ಕೆ ನಾನು ಮನೆಯಲ್ಲಿದ್ದಾಗ ನಮ್ಮ ಗುಡಿಸಲು
ಪಕ್ಕ ಇರುವ ಲಾಡ್ಜನ ಮಾಲಿಕರಾದ ಶ್ರೀ ಗೌಡಪ್ಪಗೌಡ ಬಿರಾದಾರ ಸಾ|| ಮದರಾ(ಬಿ)
ರವರು ಬಂದು ಸ್ಟೆಷನಗಾಣಗಾಪೂರದ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ಫೋನ ಮಾಡಿದ್ದಾನೆ ನಿನ್ನ
ಜೊತೆ ಮಾತನಾಡುತ್ತಾನೆ ನೋಡು ಅಂತಾ ಮೋಬೈಲ ಫೊನ ನನಗೆ
ಕೊಟ್ಟರು. ಆಗ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ರವರು ಫೋನನಲ್ಲಿ ತಿಳಿಸಿದ್ದೆನೆಂದರೆ
ನಾನು ಕೋಗನೂರ ಕ್ರಾಸ್ ಹತ್ತಿರ ಸ್ಟೇಷನ ಗಾಣಪೂರಕ್ಕೆ ಹೋಗಲೇಂದು ಟಂ,ಟಂ
ಗಾಗಿ ಕಾಯತ್ತಾ ಕುಳಿತಿದ್ದೆ. ಕೋಗನೂರ ಕಡೆಯಿಂದ ಕೋಗನೂರ ಕ್ರಾಸದಿಂದ ಸುಮಾರು 50 ಮೀಟರ ಅಂತರದಲ್ಲಿ ಒಂದು ಮೋಟರ ಸೈಕಲ ಮೇಲೆ ಒಬ್ಬ ವ್ಯಕ್ತಿ ಬರುತ್ತಿದ ಆತ ತಾನು
ಚಾಲಾಯಿಸುತ್ತಿದ್ದ ಮೋಟರ ಸೈಕಲನ್ನು ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಆಕಡೆ, ಈಕಡೆ ಓಡಿಸಿ ಸ್ಕಿಡಾಗಿ ಬಿದ್ದನು. ಆಗ ನಾನು ಓಡಿ ಹೋಗಿ ನೋಡಲು ಆತನು ನಿನ್ನ
ಕಿರಿಯ ಮಗ ಸುರೇಶನಿದ್ದು. ಆತನು ಮೋಟರ ಸೈಕಲ ಮೇಲಿಂದ
ಬಿದ್ದದರಿಂದ ಆತನ ಕುತ್ತಿಗೆ ಹತ್ತಿರ ತೆರಚಿದ ಗಾಯ, ಕೇಳದುಟಿಗೆ
ರಕ್ತಗಾಯ, ಎಡಪಕ್ಕೇಲುಬಿನ ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು
ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಯಿಂದ
ರಕ್ತಸ್ರಾವವಾಗುತ್ತಾ ಬಿದ್ದದನು. ನಾನು ಹತ್ತಿರ ಹೋಗಿ ನೋಡಲು ಆತನು ಮೃತಪಟ್ಟಿರುತ್ತಾನೆ. ಆತನು
ಚಲಾಯಿಸುತ್ತಿದ್ದ ಮೋಟರ ಸೈಕಲ ಟಿವಿಎಸ್ ಎಕ್ಸಲ ಕಂಪನಿಯದಿದ್ದು ನಂಬರ- ಕೆಎ-32-ಈಸಿ-3015 ಅಂತಾ ಇರುತ್ತದೆ. ನಿನ್ನ ಫೋನ ನಂಬರ ನನ್ನ ಹತ್ತಿರ
ಇರದ ಕಾರಣ ಶ್ರೀ ಗೌಡಪ್ಪಗೌಡ ಬಿರಾದಾರ ರವರ ಫೋನ ನಂಬರ ತೆಗೆದುಕೊಂಡು ಅವರಿಗೆ ಫೋನ
ಮಾಡಿರುತ್ತೇನೆ. ನೀವು ಬೇಗ ಬನ್ನಿ ಅಂತಾ ತಿಳಿಸಿದನು. ಆಗ ನಾನು ನನ್ನ ಹೆಂಡತಿ, ನನ್ನ ಹಿರಿಯ ಮಗ ರಮೇಶ,
ನನ್ನ ಅಣ್ಣ ದುರ್ಗಪ್ಪ, ಮತ್ತು ನಮಗೆ ಪರಿಚಯ ಇರುವ ದೇಲಗಾಣಗಾಪೂರ ಅಣ್ಣಪ್ಪ ತಂದೆ ಭಗವಂತ ಭಜಂತ್ರಿ
ಎಲ್ಲರೂ ಕೂಡಿಕೊಂಡು ಅಪಘಾತವಾಗಿ ನನ್ನ ಮಗ ಬಿದ್ದ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ಕುತ್ತಿಗೆ
ಹತ್ತಿರ ತೆರಚಿದ ಗಾಯ, ಕೇಳದುಟಿಗೆ ರಕ್ತಗಾಯ, ಎಡಪಕ್ಕೇಲುಬಿನ
ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು
ಮತ್ತು ಬಾಯಿಯಿಂದ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ
ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀಮತಿ ಮಂಜುಳಾ ಗಂಡ ಶಿವಶರಣಪ್ಪ ಹಚ್ಚಡ ಸಾ|| ಹರನಾಳ(ಬಿ) ತಾ|| ಜೇವರ್ಗಿ ರವರದು
ನಮ್ಮೂರ ಸಿಮಾಂತರದಲ್ಲಿ ನಮ್ಮ ಹೊಲಗಳಿದ್ದು, ಅದರ ಸರ್ವೆ
ನಂ 32/2/2 ನೇದ್ದರಲ್ಲಿ 3 ಎಕರೆ 38 ಗುಂಟೆ ಮತ್ತು ಇನ್ನೊಂದು ಹೊಲ ಸರ್ವೆ ನಂ 32/2/1 ನೇದ್ದರಲ್ಲಿ 3 ಎಕರೆ 23 ಗುಂಟೆ ಜಮೀನು ಇರುತ್ತದೆ, ಸದ್ಯ
ಆ ಹೊಲಗಳು ನಮ್ಮ ಮಾವ ದೊಡ್ಡಪ್ಪ ಹಚ್ಚಡ ಮತ್ತು ನಮ್ಮ ಅತ್ತೆ ಪಾರ್ವತಿ ಹಚ್ಚಡ ರವರ ಹೆಸರಿಗೆ ಇದ್ದು, ಅವುಗಳನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದು, ಅದರ ಉಪಭೋಗವನ್ನು ನಾವೆ ಮಾಡುತ್ತಿರುತ್ತೇವೆ, ಅದರಂತೆ ನನ್ನ ಗಂಡ ಆ ಹೊಲದ ಮೇಲೆ ಯಡ್ರಾಮಿ ಕೆ.ಜಿ.ಬಿ ಬ್ಯಾಂಕನಲ್ಲಿ
ಸರ್ವೆ ನಂ 32/2/2 ನೇದ್ದಕ್ಕೆ 42,700/- ರೂ ಮತ್ತು ಸರ್ವೆ ನಂ 32/2/1 ನೇದ್ದಕ್ಕೆ 82,700/- ರೂ, ಹಂಗರಗಾ (ಕೆ) ಸೋಸೈಟಿಯಲ್ಲಿ 15,000/- ರೂ, ಮತ್ತು ಕುಕ್ಕನೂರ
ಸೊಸೈಟಿಯಲ್ಲಿ 10,000/- ರೂ, ಹಾಗು ಇತರೆ ಖಾಸಗಿಯಾಗಿ
5,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ಆಗಾಗ ನನ್ನ ಗಂಡ ಸಾಲ ಬಹಳಾಗಿದೆ ಹೇಗೆ ತೀರಿಸುವುದು ಅಂತಾ ಚಿಂತೆ
ಮಾಡುತ್ತಿದ್ದರು, ದಿನಾಂಕ
02-12-2017 ರಂದು ರಾತ್ರಿ 9;30 ಗಂಟೆ
ಸುಮಾರಿಗೆ ನನ್ನ ಗಂಡ ಹೊಲದಿಂದ ಮನೆಗೆ ಬಂದು ನಾನು ಹೊಲದಲ್ಲಿ ವಿಷ ಕುಡದಿನಿ ಇನ್ನುಮುಂದೆ ಸಾಲ ನೀವೇ
ತೀರಿಸಬೇಕು ಅಂತಾ ಅಂದು ಒಮ್ಮೇಲೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನು, ನಂತರ ನಾನು ಮತ್ತು ನಮ್ಮ ಭಾವ ಸಿದ್ದಣ್ಣ ಹಾಗು ಮತ್ತು ನಮ್ಮ ಸಂಬಂಧಿಕನಾದ
ಪ್ರೇಮನಗೌಡ ಹಚ್ಚಡ ರವರು ಕೂಡಿಕೊಂಡು ಅಂಬುಲೆನ್ಸನಲ್ಲಿ ಹಾಕಿಕೊಂಡು ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ
ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ
ಮಾಡಿರುತ್ತೇವೆ, ಇಂದು ದಿನಾಂಕ 07-12-2017 ರಂದು ಬೆಳಿಗ್ಗೆ 7;30 ಎ.ಎಂ ಸುಮಾರಿಗೆ ನನ್ನ ಗಂಡ ಉಪಚಾರ ಫಲಿಸದೆ ಆಸ್ಪತ್ರೆಯಲ್ಲಿ ಮೃತ
ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ :
ದಿನಾಂಕ:06/12/2017 ರಂದು ಶ್ರೀ ಅಪ್ಪಾಸಾಬ ತಂದೆ ಗುರುಬಸಪ್ಪ
ಬಿರಾದಾರ ಸಾ: ವಿವೇಕಾನಂದ ನಗರ ಸಂಗಮತಾಯಿ ಲೇಔಟ ಮನೆ ನಂ.122 ಶಿವಗುರು ಸದನ ಕಲಬುರಗಿ ಇವರ ಮಗ ತುಶಾರ ಇವನು ಶಾಲೆಯಿಂದ ಬಂದು ಬಟ್ಟೆ ಬದಲಾಯಿಸಿ 2-30 ಪಿ.ಎಂಕ್ಕೆ ಹೊರಗೆ ಹೊಗಿರುತ್ತಾನೆ ಅಂತಾ
ಅಕ್ಕ-ಪಕ್ಕದವರಿಂದ ತಿಳಿದು ಬಂದಿರುತ್ತದೆ. ನಿನ್ನೆ 2-30 ಗಂಟೆಗೆ ಹೊದ ನನ್ನ ಮಗ ಮರಳಿ ಮನೆಗೆ
ಬಂದಿರುವುದಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರು ಅಲ್ಲದೆ ನಮ್ಮ ಸ್ವಂತ ಗ್ರಾಮವಾದ ಖಾನಾಪುರಕ್ಕೆ ನಮ್ಮ
ಅಣ್ಣ ಮಹಾಂತಪ್ಪ ಇವರಿಗೆ ವಿಚಾರಿಸಲು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು, ಇಲ್ಲಿಯವರೆಗೆ ನನ್ನ ಮಗ ಪತ್ತೆಯಾಗಿರುವುದಿಲ್ಲಾ, ಇಂದು ದಿನಾಂಕ:07/12/2017 ರಂದು ಚಂದ್ರಶೇಖರ ಪಾಟೀಲ ಸಿಬಿಸಿ ಶಾಲೇಗೆ
ಹೋಗಿ ವಿಚಾರಿಸಲು ನಿಮ್ಮ ಹುಡುಗ 2 ದಿವಸಗಳಿಂದ ಶಾಲೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ.
ಎಲ್ಲಾಕಡೆ ಹುಡುಕಾಡಿದರು ನನ್ನ ಮಗ ಪತ್ತೆಯಾಗಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017
ರಂದು ಮುಂಜಾನೆ ಅರ್ಜುನ
ತಂದೆ ತಿಮ್ಮಯ್ಯ ಕೆರಮಗಿ ಸಂಗಡ 06 ಜನರು ಕೂಡಿಕೊಂಡು ಶ್ರೀಮತಿ ಕಲಾವತಿ ಗಂಡ ಶಿವಕುಮಾರ
ದೇವರಮನಿ ಸಾಃ ಸಿರನೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಗೆ ಬಂದು
ನಿಮ್ಮ ತಮ್ಮ ಸಂತೋಷ ಈತನು ಕಾವೇರಿ ಇವಳಿಗೆ ಚೂಡಾಸುತ್ತಿದ್ದಾನೆ ರಂಡಿ ಅಂತಾ ಅವಾಚ್ಯ
ಶಬ್ದಗಳಿಂದ ಬೈದು, ಕೈಯಿಂದ ಹೊಡೆ ಬಡೆ ಮಾಡಿ, ಸೀರೆ
ಹಿಡಿದು ಎಳೆದಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment