POLICE BHAVAN KALABURAGI

POLICE BHAVAN KALABURAGI

24 November 2017

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
       ದಿನಾಂಕ 22-11-2017 ರಂದು ಕಲಬುರಗಿ ನಗರದಲ್ಲಿ ಪದ್ಮಾವತಿ ಚಲನಚಿತ್ರದ ಬಿಡುಗಡೆಯನ್ನು ವಿರೋದಿಸಿ ಒಂದು ಸಮುದಾಯದ ಜನಾಂಗದವರು ಪರವಾನಿಗೆ ಇಲ್ಲದೆ ಪ್ರತಿಭಟನಾ ಮೇರವಣೀಗೆಯನ್ನು ಶಹಾಬಜಾರ ಕಟಗರಪೂರದ ಬಾಲಾಜಿ ಮಂದಿರದಿಂದ ಪ್ರಾರಂಭಿಸಿ ಶಹಾಬಜಾರ ನಾಕಾ, ಪ್ರಕಾಶ ಟಾಕೀಜ, ಚೌಕ ಸರ್ಕಲ್, ಸೂಪರ್ ಮಾರ್ಕೆಟ , ಜಗತ್ ವೃತ್ತದ ಮುಖಾಂತರ ಸರ್ದಾರ ವಲ್ಲಾಬಾಯಿ ಪಟೇಲ ವೃತ್ತದಿಂದ ಪ್ರತಿಭಟನೆ ಮಾಡಿ ಪ್ರತಿಭಟನೆಕಾರರು ತಮ್ಮ ಕೈಯಲ್ಲಿ ಕಾನೂನು ಬಾಹಿರವಾಗಿ ಖಡ್ಗ (ತಲವಾರು) ಗಳನ್ನು ಪ್ರದರ್ಶಿಸಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರಗಡೆ ಬಂದು ಒಂದು ಪ್ರತಿಕೃತಿ ದಹನ ಮಾಡಿರುತ್ತಾರೆ. ಈ ರೀತಿ ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಒಂದು ಭಯದ ವಾತಾವರಣ ಸೃಷ್ಠಿಸಿರುವುದರಿಂದ ಸದರಿ ಘಟನೆ ಕುರಿತು ನಗರದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
      ಈ ಕುರಿತಂತೆ ಘಟನೆ ದಿವಸ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಿದ ಆರೋಪಿಗಳನ್ನು ಪೊಟೋ ಮತ್ತು ವಿಡಿಯೋ ಸಾಕ್ಷಿಯನ್ನಾಗಿ ಇಟ್ಟುಕೊಂಡು ಅವರನ್ನು ಗುರ್ತಿಸಿ ಎಲ್ಲಾ 8 ಜನ ಆರೋಪಿತರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನ ಬಾಹಿರವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಹಾಜರಪಡಿಸಲಾಗಿದೆ.
     ಈ ಘಟನೆಯಲ್ಲಿ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ ಇಬ್ಬರೂ ಎಎಸ್ಐ ಗಳನ್ನು ಅಮಾನತ್ತಗೊಳಿಸಲಾಗಿದೆ. ಹಾಗೂ ಸಂಬಂಧಪಟ್ಟ ಚೌಕ, ಬ್ರಹ್ಮಪೂರ ಮತ್ತು ಸ್ಟೇಷನ್ ಬಜಾರ್ ಆರಕ್ಷಕ ನಿರೀಕ್ಷಕರವರ ವಿರುದ್ದ ಭವಿಷ್ಯದಲ್ಲಿ ಇಂತಹ ಘಟನೆ ಮರುಘಟಿಸದಂತೆ ಎಚ್ಚರವಾಗಿ ಕರ್ತವ್ಯ ನಿರ್ವಹಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
     ಮುಂಬರುವ ದಿನಗಳಲ್ಲಿ ಪ್ರತಿಭಟನಾಕಾರರು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂತ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಯಪಡಿಸಲಾಗಿದೆ. 

KALABURAGI DISTRICT REPORTED CRIMES

ಇಸ್ಪೀಟ ಜೂಜಾದಲ್ಲಿ ನಿರತವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ:23.11.2017 ರಂದು ಗೋಗಿ ಕೆ ಗ್ರಾಮದ ಶರಣಬಸವೇಶ್ವರ ದೆವರ ಗುಡಿಯ ಕಟ್ಟೆಯ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರವೆಂಬ ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಆರೋಪಿತರಾದ  1. ಬಂಡೇಪ್ಪ ತಂದೆ ಇಂದ್ರಶೆನ ನಾಟಿಕಾರ 2. ಶರಣಯ್ಯ ತಂದೆ ಶಿವಯ್ಯ ಗುತ್ತೇದಾರ 3. ಶರಣಬಸಪ್ಪ ತಂದೆ ಶಿವರಾಮ ಮಾಂಗ 4. ಗುಣಪುತ್ರ ತಂದೆ ಗುರುಪಾದಪ್ಪ ಜಮದಿ 5. ಅನೀಲ ತಂದೆ ಹಣಮಂತ ಮಾಂಗ 6. ಲಕ್ಮ್ಮಿಕಾಂತ ತಂದೆ ಅಂಬಾರಾಯ ಜಮಾದಾರ 7. ನಾಗೇಂದ್ರಪ್ಪ ತಂದೆ ಸಿದ್ರಾಮಪ್ಪ ಬಲಖೇಡ ಸಾ: ಎಲ್ಲರು ಗೋಗಿ ಕೆ ತಾ.ಜಿ:ಕಲಬುರಗಿ ಇವರುಗಳನ್ನು ವಶಕ್ಕೆ ಪಡೆದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1050 ರೂಪಾಯಿಗಳು ಹಾಗೂ 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು  ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ:19-05-2017 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕಮಲಾಬಾಯಿ ಕೂಡಿ ಜೇವರಗಿ ತಾಲೂಕಿನ ಜಮಖಂಡಿ ಗ್ರಾಮಕ್ಕೆ  ದೇವರ ದರ್ಶನಕ್ಕೆ ಹೋಗಿ ಅಂದು ಅಲ್ಲೆ ವಸತಿ ಮಾಡಿ ಮರುದಿನ ದಿನಾಂಕ: 20/05/2017 ರಂದು ಮುಂಜಾನೆ ಒಂದು ಟಂಟಂದಲ್ಲಿ ಹೊರಟು ವಸ್ತಾರಿ ಗ್ರಾಮ್ಕಕೆ 09.30 ಎ ಎಮ್ ಕ್ಕೆ ಬಂದು ಮತ್ತೆ ಮಯೂರ ಗ್ರಾಮಕ್ಕೆ ಹೋಗುಸವ ಸಲುವಾಗಿ ವಸ್ತಾರಿ ಬಸ್ ನಿಲ್ದಾಣದ ಹತ್ತೀರ ನಿಂತಾಗ ಒಂದು ಕುಕನೂರ ಕಡೆಯಿಂದ ಒಂದು ಸೈಕಲ್ ಮೋಟಾರ್ ಬಂದಿತು. ಅದರ ಚಾಲಕನು ತನ್ನ ಸೈಕಲ್ ಮೋಟಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಹೆಂಡತಿಗೆ ಢಿಕ್ಕಿ ಹೊಡೆದಾಗ ಅವಳು ಕೆಳಗಡೆ ಬಿದ್ದಳು. ಆಗ ಸಮಯ 10.00 ಎ ಎಮ್ ಆಗಿತ್ತು. ಅವಳ ತಲೆಯ ಹಿಂಭಾಗಕ್ಕೆ ಮತ್ತು ಎಡ ಮುಂಡಿಗೆ, ಬಲಗೈ ಮುಂಡಿಗೆ  ಭಾರೀ ಗುಪ್ತಗಾಯಗಳಾದವು. ನಂತರ ಆ ಸೈಕಲ್ ಮೋಟಾರ್ ನಂ ನೋಡಲಾಗಿ ಕೆಎ-32 ಇಎಮ್-6359 ಅಂತಾ ಇತ್ತು. ನನ್ನ ಹೆಂಡತಿಗೆ ಗಾಯ ಆಗಿದ್ದನ್ನು ನೋಡಿ ನಿಲ್ಲಿಸದೇ ಹಾಗೆ ತೆಗೆದುಕೊಂಡು ಹೋದನು. ನಂತರ ಯಾರೋ ಫೋನ ಮಾಡಿದ್ದರಿಂದ 108 ಅಂಬ್ಯುಲೆನ್ಸ ಅಲಲಿಗೆ ಬಂದಿತು. ನನ್ನ ಹೆಂಡತಿಯನ್ನು ಅದರಲ್ಲಿ ಹಾಕಿಕೊಂಡು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಂತರ ಸೋಲಾಪೂರ ಮಾರ್ಕಂಡೆ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಂತರ ಮತ್ತೆ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ದಿನಾಂಕ: 13/06/2017 ರಂದು ಸೇರಿಕೆ ಮಾಡಿದೇವು. ನನ್ನ ಹೆಂಡತಿ ಹತ್ತೀರ ಯಾರೂ ಇಲ್ಲದ್ದಕ್ಕೆ ನಾನು ಠಾಣೆಗೆ ಬಂದಿರುವದಿಲ್ಲಾ. ದಿನಾಂಕ 22/06/2017 ರಂದು ಶ್ರೀಮತಿ ಕಮಲಾಬಾಯಿ ಗಂಡ ಶಿವಶರಣ ಇವಳು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ನನ್ನ ಹೆಂಡತಿಗೆ ಢಿಕ್ಕಿ ಹೊಡೆದ ಸೈಕಲ್ ಮೋಟಾರ್ ನಂ ಕೆಎ-32 ಇಎಮ್-6359 ನೇದ್ರ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಶ್ರೀ ಶಿವಶರಣ ತಂದೆ ಹುಸನಪ್ಪ ಜಮಖಂಡಿ ಸಾ|| ಮಯೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನ್ಯಾಲಯದಲ್ಲಿ ಸಾಕ್ಷಿ ನುಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಹಾದೇವಿ ಗಂಡ ಶಂಕರಲಿಂಗ ಪೂಜಾರಿ ಸಾ||ಉಡಚಣಹಟ್ಟಿ ಹಾ||||ನಾಗರಳ್ಳಿ ತಾ||ಜೆವರ್ಗಿ ರವರ ಗಂಡ ಈಗ 4 ವರ್ಷದ ಹಿಂದೆ ಅನಾರೊಗ್ಯದಿಂದ ಮೃತಪಟ್ಟಿದ್ದು ಇರುತ್ತದೆ. ನನಗೆ 3 ಜನ ಹೆಣ್ಣು ಮಕ್ಕಳಿರುತ್ತಾರೆ.ನನ್ನ ಗಂಡನ ಮನೆಯರು ನನ್ನ ಗಂಡನ ಹೆಸರಿನಲ್ಲಿರುವ 2 ಎಕರೆ ಜಮೀನು ನನ್ನ ಉಪಜೀವನಕ್ಕೆ ನೀಡಿರುತ್ತಾರೆ. ನನ್ನ ಗಂಡ ಮೃತ ಪಟ್ಟ ನಂತರ ನನ್ನ ಗಂಡನ ಮನೆಯವರು ನನಗೆ ಕಿರುಕುಳ ನೀಡಿದ್ದರಿಂದ 2014 ನೇ ಸಾಲಿನಲ್ಲಿ ನಮ್ಮ ಭಾವನಾದ ಶರಣಪ್ಪ ತಂದೆ ಕೆಂಚಪ್ಪ ಪೂಜಾರಿ ಹಾಗು ಅವರ ಮನೆಯವರ ಮೇಲೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 277/2014 ಕಲಂ 498 (ಎ). 307. 504 ಸಂ 34 ಐಪಿಸಿ ನೇದ್ದರ ಪ್ರಕಾರ ಕೇಸ ದಾಖಲಾಗಿದ್ದು, ಇರುತ್ತದೆ ನಾನು ಸದರಿ ಕೇಸಿನ ಫೀರ್ಯಾದಿದಾರಳಿರುತ್ತೇನೆ. ಸದರಿ ಪ್ರಕರಣದ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಸಧ್ಯ ನಾನು ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಯಾದ ಜೇವರ್ಗಿ ತಾಲೂಕಿನ ನಾಗರಳ್ಳಿ ಗ್ರಾಮದ  ನಮ್ಮ ತಂದೆ ತಾಯಿಯೊಂದಿಗೆ ಇರುತ್ತೇನೆ. ನನ್ನ ಗಂಡನ ಹೆಸರಿನಲಿದ್ದ 2 ಎಕರೆ ಹೊಲದಲ್ಲಿ ನಾನು ತೊಗರಿ ಬೇಳೆ ಹಾಕಿದ್ದು ಇರುತ್ತದೆ  ದಿನಾಂಕ 17/11/2017 ರಂದು ನಾನು ನಮ್ಮ ತಂದೆ ತಾಯಿಯೊಂದಿಗೆ ಉಡಚಣ ಹಟ್ಟಿ ಗ್ರಾಮಕ್ಕೆ ಬಂದು ನನ್ನ ಗಂಡನ ಹೆಸರಿನಲ್ಲಿರುವ ಹೊಲ ಸರ್ವೇ ನಂ 361 ನೇದ್ದರಲ್ಲಿ ಹೋಗಿ 1.00 ಪಿಎಮ್ ಸುಮಾರಿಗೆ  ತೊಗರಿ ಬೆಳೆಯಲ್ಲಿ ಕೆಲಸ ಮಾಡುತಿದ್ದಾಗ ನಮ್ಮ ಹೊಲದ ಹತ್ತಿರ ಹೊಲದವರಾದ ಮಲ್ಲಪ್ಪ ತಂದೆ ಭೀರಣ್ಣ ಬಂಡಗಾರ ರವರು ನಾವು ಹೊಲಕ್ಕೆ ಬಂದಿದ್ದು ನೋಡಿ ನಮ್ಮ ಹತ್ತಿರ ಬಂದು ಮಾತನಾಡುತಿದ್ದರು ಅದೇ ಸಮಯಕ್ಕೆ  ನಮ್ಮ ಭಾವನಾದ ಶರಣಪ್ಪ ತಂದೆ ಕೆಂಚಪ್ಪ ಪೂಜಾರಿ ಈತನು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಬೋಸಡಿ ನಮ್ಮ ಮೇಲೆ ಪೊಲೀಸ್ ಕೇಸ ಮಾಡಿ ಕೊರ್ಟದಾಗ ಸಾಕ್ಷಿ ನುಡಿತಿ ಮುಂದಿನ ದಿನಾಂಕಕ್ಕ ನೀ ಕೊರ್ಟಗೆ ಬಂದು ನಮ್ಮ ವಿರುದ್ದ ಸಾಕ್ಷಿ ಹೇಳ್ದಿ ನಿನ್ನ ಜೀವಾನೆ ತಗಿತಿನಿ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ನಮ್ಮ ತಂದೆ ತಾಯಿ ಹಾಗು ಮಲ್ಲಪ್ಪ ಬಂಡಗಾರ ರವರು ಸದರಿ ಶರಣಪ್ಪನಿಗೆ  ಬುದ್ದಿ ಹೇಳಿ ಕಳುಯಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯರಿಗೆ ಮತ್ತು ವಿದ್ಯಾಥಿನಿಯರಿಗೆ ಚುಡಾಯಿಸಿ ಕಿರುಕಳ ನೀಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ಶ್ರೀಮತಿ ಶ್ರೀಧೇವಿ ಮ ಎ.ಎಸ್.ಐ ಅಫಜಲಪೂರ  ಠಾಣೆ ರವರು ದಿನಾಂಕ 23-11-2017 ರಂದು ಮದ್ಯಾಹ್ನ ಅಫಜಲಪೂರ ಪಟ್ಟಣದ ತಹಸಿಲ ಆಫೀಸ್ ಹತ್ತಿರ ಬಂದಾಗ, ತಹಸಿಲ್ ಆಫೀಸ್ ಮುಂದೆ ಎರಡು ಜನರು ನಿಂತುಕೊಂಡು ರಸ್ತೆಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ /ಯುವತಿಯರಿಗೆ ಚುಡಾಯಿಸುವುದು ಮಾಡುತ್ತಿದ್ದರು., ಆಗ ನಾನು ಸದರಿಯವರನ್ನು ನನ್ನ ಜೋತೆಗೆ ಇದ್ದ ಸುರೇಶ ಹೆಚ್.ಸಿ-394 ರವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತಮ್ಮ ಹೆಸರು 1) ಸಿದ್ದು @ ಸಿದ್ದಪ್ಪ ತಂದೆ ಶಿವಶರಣ ಜಳಕಿ ಸಾ|| ಎಮ್.ಜಿ ನಗರ ಅಫಜಲಪೂರ 2) ಅಬಿ ತಂದೆ ಬಸಪ್ಪ ಲಸ್ಕರ ಸಾ|| ವಡ್ಡರ ಕಾಲೋನಿ ಅಫಜಲಪೂರ ಅಂತ ಏರು ದ್ವನಿಯಲ್ಲಿ ತಿಳಿಸಿದನು. ಸದರಿಯವರು ಕಾಲೇಜ ವಿದ್ಯಾರ್ಥಿನಿಯರಿಗೆ ಹಾಗೂ ಯುವತಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಶ್ರೀಧೇವಿ ಮ ಎ.ಎಸ್.ಐ ಅಫಜಲಪೂರ  ಠಾಣೆ ರವರು ದಿನಾಂಕ 23-11-2017 ರಂದು ಮದ್ಯಾಹ್ನ  ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ, ಬಸ್ ನಿಲ್ದಾಣದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಬಸ್ ನಿಲ್ದಾಣದಲ್ಲಿ ಹೋಗಿ ಬರುವ ವಿದ್ಯಾರ್ಥಿನಿಯರಿಗೆ/ಯುವತಿಯರಿಗೆ ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಸದರಿಯವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಿರಣಕುಮಾರ ತಂದೆ ಸಂತೋಬಾ ಕಟ್ಟಿಮನಿ ಸಾ|| ಅಂಬಿಕಗರ ಚೌಡಯ್ಯ ನಗರ ಅಫಜಲಪೂರ ಅಂತ ತಿಳಿಸಿದನು. ಸದರಿಯವನು ಕಾಲೇಜ ವಿದ್ಯಾರ್ಥಿನಿಯರಿಗೆ ಹಾಗೂ ಯುವತಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ಹಿಡಿದುಕೊಂಡು  ಅಫಜಲಪೂರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ಪ್ರಾಂಶುಪಾಲರು  ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಇರುವದಿಂದ ವಿದ್ಯಾರ್ಥಿಗಳು /ವಿದ್ಯಾರ್ಥಿನಿ ಯರಿಗೆ  ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿದ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆ ಯಾಗದಂತೆ ನೋಡಿಕೊಂಡು ಬರಲು ನಮ್ಮ ಠಾಣೆಯ ಶ್ರೀ ಅಂಬಣ್ಣ ಹೆಚ್.ಸಿ 413 ಮತ್ತು ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ  ಮತ್ತು ನಮ್ಮ ಠಾಣೆಯ ಶ್ರೀ ಕೀಶೋರ ಪಿಸಿ 1010 ಕೂಡಿಕೊಂಡು ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 23.11.2017 ರಂದು ಮಧ್ಯಾನ 2 ಗಂಟೆಗೆ ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋದಾಗ ಗುಡಿಯ ಆವರಣದ ಉತ್ತರ ದಿಕ್ಕಿನ ಕಡೆಗೆ ಇರುವ ಬಾಗಿಲ ಹತ್ತಿರ ಒಬ್ಬ ನಿಂತುಕೊಂಡು ಬಾಗಿಲದಿಂದ ಗುಡಿ ಒಳಗೆ ಮತ್ತು ಗುಡಿಯಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡುತ್ತಿರುವದನ್ನು ನೋಡಿ ಸದರಿವನನ್ನು ವಶಕ್ಕೆ ತೆಗೆದುಕೊಂಡು  ಅವನ ಹೆಸರು ವಿಳಾಸ ವಿಚಾರಿಸಲು ಮಲ್ಲಿನಾಥ ತಂದೆ ಬಸವರಾಜ ಹುಗ್ಗಿ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡಿದ್ದರಿಂದ ಸದರಿಯವನ ವಿರುಧ್ದ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ರಾಂಶವೆನೆಂದರೆ,  ಠಾಣಾ ವ್ಯಾಪ್ತಿಯಲ್ಲಿ ಬರುವ
ಪ್ರಾಂಶುಪಾಲರು ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಇರುವದಿಂದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿಧ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿಧ್ಯಾರ್ಥಿನಿಯರಿಗೆ ತೊಂದರೆ ಯಾಗುವಂತೆ ನೋಡಿಕೊಂಡು ಬರಲು ನಮ್ಮ ಠಾಣೆಯ ಶ್ರೀ ಪ್ರಮೋದ ಪಿಸಿ 249 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ಇಂದು ದಿನಾಂಕ 23.11.2017 ರಂದು ಸಾಯಂಕಾಲ 4 ಗಂಟೆಗೆ ನಾನು ನಮ್ಮ ಠಾಣೆಯ ಶ್ರೀ ಶಿವಲಿಂಗಪ್ಪ ಹೆಚ್.ಸಿ 06 ಕೂಡಿಕೊಂಡು ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋದಾಗ ಗುಡಿಯ ಆವರಣದ ದಕ್ಷಿಣ ದಿಕ್ಕಿನ ಕಡೆಗೆ ಇರುವ ಬಾಗಿಲ ಹತ್ತಿರ ಒಬ್ಬ ಹುಡುಗ ನಿಂತುಕೊಂಡು ಬಾಗಿಲದಿಂದ ಗುಡಿ ಒಳಗೆ ಮತ್ತು ಗುಡಿಯಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡುತ್ತಿರುವದನ್ನು ನೋಡಿ ನಾನು, ಶ್ರೀ ಶಿವಲಿಂಗಪ್ಪ ಹೆಚ್.ಸಿ 06 ಮತ್ತು ಶ್ರೀ ಪ್ರಮೋದ ಪಿಸಿ 249 ಕೂಡಿಕೊಂಡು ದಾಳಿ ಮಾಡಿ ಸದರಿ ಹುಡುಗನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಾಬು ತಂದೆ ಲೊಹಿತ ಸರಡಗಿ ಸಾ: ಹೊನ್ನಕಿರಣಗಿ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಸದರಿಯವನು ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡಿದ್ದರಿಂದ ಸದರಿಯವನ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಗೊಲ್ಲಾಳಪ್ಪ ತಂದೆ ಭೀಮರಾಯ ದ್ಯಾಮಗೊಂಡ ಸಾ:ಮಂದೇವಾಲ ತಾ|| ಜೇವರ್ಗಿ ಇವರು ದಿನಾಂಕ: 23-11-2017 ರಂದು 3-30 ಪಿ.ಎಮ್ ಕ್ಕೆ ನಮ್ಮೂರ ಇರ್ಷಾದ ಬಾಗವಾನ ಇವನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ: 23-11-2017 ರಂದು ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಸು ಅಂದಾಜು 40-45 ವರ್ಷ ಇವನು ನಮ್ಮೂರ ಬಸ್ಸ ತಂಗುದಾಣದಲ್ಲಿ ಅವನಿಗೆ ಹಸಿವೆಯಿಂದ, ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದಾಗ ನಾನು ಮತ್ತು ನಮ್ಮೂರ ಬಸವರಾಜ ಪೊಲೀಸ ಪಾಟೀಲ ಇಬ್ಬರ ಕೂಡಿ ನಮ್ಮೂರ ಬಸ್ಸ ತಂಗುದಾಣಕ್ಕೆ ಬಂದು ನೋಡಲಾಗಿ ತಂಗುದಾಣದ ಕಟ್ಟದ ಒಳಗಡೆ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಸು ಅಂದಾಜು 40-45 ವರ್ಷ ವಯಸ್ಸಿನವನು ಮೃತಪಟ್ಟಿದ್ದು ಮೃತನು ಮಾನಸಿಕ ಅಸ್ವಸ್ಥನಿದ್ದು, ದಿನಾಲು ಅಲ್ಲಿ ಇಲ್ಲಿ ಬಿಕ್ಷೆ ಬೇಡಿ ತಿರುಗಾಡುತ್ತಿದ್ದನು, ಇಂದು ಬಿಸಿಲಿನ ತಾಪಕ್ಕೆ ಹಾಗೂ ಹಸಿವೆಯಿಂದ ಇಲ್ಲವೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಮೃತಪಟ್ಟ  ವ್ಯಕ್ತಿಯ ಚಹರೆ, ಕೊಲು ಮುಖ, ಸಾದಾ ಕಪ್ಪು ಬಣ್ಣ ಮುಖದ ಮೇಲೆ ಬಿಳಿ ಮತ್ತು ಕಪು್ಉ ಮಿಶ್ರಿತ ಕೂದಲು, ಸಾದಾರಣ ಮೈಕಟ್ಟು, ಮೈ ಮೇಲೆ ಒಂದು ಕಂದು ಬಣ್ಣದ ನೈಟ ಪ್ಯಾಂಟ ಇರುತ್ತದೆ ಮಾನ್ಯರವರವರು ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 22-11-2017 ರಂದು ಶಿರವಾಳ ಗ್ರಾಮದ ಶ್ರೀ ಅಂಬೀಗರ  ಚೌಡಯ್ಯನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿರವಾಳ ಗ್ರಾಮದ ಅಂಬಿಗರ ಚೌಡಯ್ಯನ ಗುಡಿಯ ಹತ್ತಿರ ಸ್ವಲ್ಪ ದೂರು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಣ್ಣಾರಾಯ ತಂದೆ ಶಂಕರ ಅಂಜುಟಗಿ ಸಾ|| ಶಿರವಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 960/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಉಡಗಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ 1) ಚಂದರ್ ತಂದೆ ಕೃಷ್ಣಜೀ ಮರಾಠ 2) ಭಾಗಣ್ಣ ತಂದೆ ಚಂದ್ರರೆಡ್ಡಿ ಬೆನಕನಳ್ಳಿ, ಸಾ: ಇಬ್ಬರು ಅಡಕಿ ಗ್ರಾಮ ತಾ: ಸೇಡಂ ಅಂತಾ ತಿಳಿಸಿದ್ದು ಆರೋಪಿತರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 6020/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಚಿಂಚೋಳಿ  ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ ಸಿದ್ದರಾಮ ತಂದೆ ಶ್ಯಾಮರಾಯ ಪಪ್ಪಾಣಿ  ಸಾ : ಯಡ್ಡಳ್ಳಿ ತಾ : ಸೇಡಂ. ಅಂತಾ ತಿಳಿಸಿದ್ದು ಆರೋಪಿತನಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4000/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 22-11-2017 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಧನಗರಗಲ್ಲಿ ಬಡಾವಣೆಯ ಲೌ ಚೌಕ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ನೋಡಲು ಲೌ ಚೌಕ ಪಕ್ಕದಲ್ಲಿರುವ ಒಂದು ಮನೆ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಸೋಮಶೇಖರ ತಂದೆ ಹಣಮಂತಪ್ಪ ವಾಗದ್ದರಗಿ ಸಾ: ಲೌ ಚೌಕ ಹತ್ತಿರ ಧನಗರಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1710/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 180 ಎಮ್.ಎಲ್.ದ 8 ಓಲ್ಡ ಟವರಿನ್(ಓಟಿ) ವಿಸ್ಕಿ ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 68.ರೂ 56 ಪೈಸೆ. ಒಟ್ಟು 548 ರೂ.48 ಪೈಸೆ. ಮತ್ತು ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2,250/-.ರೂ 40 ಪೈಸೆ. ಹೀಗೆ ಒಟ್ಟು 2798/- ರೂ 88 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 1710/- ರೂ ಇದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಶಿವಪ್ಪ ತಂದೆ ಹುಚ್ಚಪ್ಪ ಆಲಮೇಲಕರ್ ಸಾ|| ಗೌರ (ಬಿ) ತಾ|| ಅಫಜಲಪೂರ ರವರು ಮಲ್ಲಾಬಾದ ಗ್ರಾಮದಲ್ಲಿ ತಮ್ಮ ತಾಯಿಯ ತಮ್ಮನಾದ ರಮೇಶ ತಂದೆ ಭೀಮಶಾ ದೋಡ್ಡಮನಿ ಎಂಬಾತನಿದ್ದು, ಅವನು ವಕೀಲ ವೃತ್ತಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 22-11-2017 ರಂದು ಬೆಳಿಗ್ಗೆ ನಾನು ನನ್ನ ಹೊಸ ಮೋಟರ ಸೈಕಲ ಹೀರೊ ಸ್ಪೇಂಡರ್ ನೇದ್ದರ ಮೇಲೆ ನನ್ನ ವಯಕ್ತಿಕ ಕೆಲಸದ ಸಲುವಾಗಿ ಕಲಬುರಗಿಗೆ ಹೋಗಿದ್ದೆನು. ಕಲಬುರಗಿಯಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರದಿಂದ ಹೋಗುತ್ತಿದ್ದೆನು. ಅದೆ ಸಮಯಕ್ಕೆ ನನಗಿಂತ ಮುಂಚೆ ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿದ ಟ್ಯಾಕ್ಟರ ಅಫಜಲಪೂರದ ಕಡೆಗೆ ಹೊರಟಿತ್ತು. ಆಗ ಕಲಬುರಗಿ ಕಡೆಯಿಂದ ಅಫಜಲಪೂರದ ಕಡೆಗೆ ಒಂದು ಕಾರ ನಂ ಕೆಎ-32 ಎಮ್-7903 ನೇದ್ದು ನನ್ನ ಮೋಟರ ಸೈಕಲ ದಾಟಿ ಸ್ವಲ್ಪ ಮುಂದೆ ಹೋದಾಗ, ಕಬ್ಬು ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ ಚಾಲಕನು ರೋಡಿನ ಮದ್ಯದಿಂದ ತನ್ನ ಟ್ಯಾಕ್ಟರ ನಡೆಸಿಕೊಂಡು ಹೊರಟಿದ್ದು ಒಮ್ಮೆಲೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿದಾಗ ಟ್ಯಾಕ್ಟರ ಹಿಂದೆ ಹೊರಟಿದ್ದ ಕಾರು ಹೋಗಿ ಟ್ಯಾಕ್ಟರ ಹಿಂದಿನ ಟ್ರೈಲಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿತು. ಆಗ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರ ಅಫಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊದನು. ನಂತರ ನಾನು ಕಾರಿನಲ್ಲಿ ಇದ್ದವರನ್ನು ನೋಡಲು ನನ್ನ ಸೋದರಮಾವನಾದ ರಮೇಶ ತಂದೆ ಭೀಮಶಾ ದೋಡ್ದಮನಿ ಮು|| ಮಲ್ಲಾಬಾದ ಮತ್ತು ಕಲಬುರಗಿಯ ವಕೀಲರಾದ ಶ್ರೀರಂಗಾ ಖೇಡಗಿಕರ್ ಹಾಗೂ ಕಾರಿನ ಚಾಲಕ ಮತ್ತು ಇನ್ನು ಒಬ್ಬ ವ್ಯೆಕ್ತಿ ಇದ್ದು, ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶ್ರೀರಂಗಾ ಎಂಬುವವರ ಹಣೆಯ ಮದ್ಯಭಾಗದಲ್ಲಿ ಭಾರಿ ರಕ್ತಗಾಯವಾಗಿ ಕುತ್ತಿಗೆ ಕಾರಿನ ಮುಂದಿನ ಡ್ಯಾಸ ಬೋರ್ಡ ಮತ್ತು ಸೀಟಗಳ ಮದ್ಯದಲ್ಲಿ ಸಿಕ್ಕು ಸ್ಥಳದಲ್ಲಿಯೆ ಮೃತಪಟ್ಟಿದ್ದನು. ನನ್ನ ಸೋದರಮಾವ ಶ್ರೀರಂಗಾ ರವರ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಅವನ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯವಾಗಿ ಎದೆಗೆ ಒಳಪೆಟ್ಟುಗಳಾಗಿ ಅವರು ಸಹ ಸ್ಥಳದಲ್ಲಿ ಕಾರಿನಲ್ಲಿಯೆ ಮೃತಪಟ್ಟಿದ್ದನು. ಕಾರಿನ ಚಾಲಕನಿಗೂ ಮತ್ತು ಚಾಲಕನ ಹಿಂಬಾಗದಲ್ಲಿ ಕುಳಿತಿದ್ದವನಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದಂತೆ ಕಂಡು ಬಂದಿರುತ್ತದೆ. ಅಷ್ಟರಲ್ಲಿ ರೋಡಿಗೆ ಹೋಗುವವರು ಯಾರೊ ಒಬ್ಬರು ಅಂಬ್ಯುಲೆನ್ಸ ವಾಹನಕ್ಕೆ ಪೋನ್ ಮಾಡಿದ್ದರಿಂದ ಸ್ಥಳಕ್ಕೆ ಅಂಬ್ಯೂಲೆನ್ಸ ವಾಹನದವರು ಬಂದಾಗ, ನಾನು ಮತ್ತು ಅಂಬ್ಯೂಲೆನ್ಸದವರು ಗಾಯಹೊಂದಿದ ಇಬ್ಬರಿಗೂ ಅಂಬ್ಯೂಲೆನ್ಸದಲ್ಲಿ ಹಾಕಿ ಚಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು ದಿನಾಂಕ 22-11-2017 ರಂದು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರ ಟ್ಯಾಕ್ಟರ ನಂ ಕೆಎ-32 ಟಿಎ-3503 ನೇದ್ದರ ಚಾಲಕನು ರೋಡಿನ ಮದ್ಯದಲ್ಲಿ ನಡೆಸಿಕೊಂಡು ಹೊರಟು, ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಕಾರು ಟ್ಯಾಕ್ಟರ ಹಿಂಬಾಗದ ಎರಡನೆ ಟ್ರೈಲಿಗೆ ಹಿಂದೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿರುತ್ತದೆ. ಈ ಅಫಘಾತಕ್ಕೆಕಾರಣನಾದ ಟ್ಯಾಕ್ಟರ ಚಾಲಕನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ರುದ್ರಪ್ಪ ಹೆಚ್.ಸಿ- 545 ಅಫಜಲಪೂರ ಠಾಣೆ  ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿ, ಆರೋಪಿತರನ್ನು / ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು  ಅಫಜಲಪೂರ ಠಾಣೆಯ ಗುನ್ನೆ ನಂ 221/2016 ಕಲಂ 379 ಐಪಿಸಿ ಸಿಸಿ ನಂ 225/17 ನೇದ್ದರಲ್ಲಿ ಆರೋಪಿತರಾದ 1) ಗಂಗಾಧರ ತಂದೆ ಭೀಮಶಾ ಭಜಂತ್ರಿ ಸಾ|| ದುಧನಿ ಹಾ|| || ಅಫಜಲಪೂರ 2) ಶಿವರಾಜ @ ಸುರೇಶ ತಂದೆ ರೇವಣಸಿದ್ದಪ್ಪ ಹಿರೆಕುರುಬರ ಸಾ|| ನಾಗೂರ  ಹಾ:ವ ಅಫಜಲಪೂರ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 24-04-2017, 27-05-2017, 23-06-2017, 26-07-2017,13-09-2017, 15-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದು, ಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದರಿ ಆರೋಪಿತರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜಾ ಬಂಧಿ ಮೃತಪಟ್ಟ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 22-11-2017 ರಂದು ಕೇಂದ್ರ ಕಾರಾಗೃಹದ ಸಜಾ ಬಂಧಿ ಸಂಖ್ಯೆ 108 ಬೀರಪ್ಪ ತಂದೆ ಹಣಮಂತಪ್ಪ ವಃ 27 ವರ್ಷ ಜಾಃ ಕುರುಬ ಸಾಃ ಅಲಬನೂರ ತಾಃ ಸಿಂಧನೂರ ಜಿಃ ರಾಯಚೂರ ಈತನು ಗೌರವಾನ್ವಿತ ಅಪರ ಜಿಲ್ಲಾ ಸತ್ರ ನ್ಯಾಯಾಲಯ ರಾಯಚೂರ ಇವರ ಸ್ಪೇಷಲ್.ಸಿ ಪೋಸ್ಕೋ ನಂ 07/2015( ಸಿಂದನೂರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ) ರಲ್ಲಿ ದಿನಾಂಕ 01/06/2017 ರಂದು ಸಾದಾ ಶಿಕ್ಷೆ ಹಾಗೂ ದಂಡ ರೂ 11000/-ರೂ ದಂಡ ಕಟ್ಟಲು ತಪ್ಪಿದಲ್ಲಿ 01 ವರ್ಷ 05 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂದಿಯು ರಾಯಚೂರ ಜಿಲ್ಲಾ ಕಾರಾಗೃಹದಿಂದ ವರ್ಗಾವಣೆಯಾಗಿ ದಿನಾಂಕ 28/06/2017 ರಂದು ಈ ಸಂಸ್ಥೆಯಲ್ಲಿ ದಾಖಲಾಗಿ ಶಿಕ್ಷೆ ಅನುಭವಿಸುತ್ತಿದ್ದನು. ಸದರಿ ಬಂದಿಯು ದಿನಾಂಕ 22/11/2017 ರಂದು ಕೋಠಾ ಸಃ 06 ರಲ್ಲಿ ಬೆಳಗಿನ ಜಾವ 5.30ರ ಸಮಯದಲ್ಲಿ ತನಗೆ ತೀವ್ರ ದೆ ನೊವಾಗುತ್ತಿದೆ ಅಂತಾ ಸಹ ಬಂದಿಗಳಿಗೆ ತಿಳಿಸಿದ ಮೇರೆಗೆ ಪಹರೆ ಸಿಬ್ಬಂದಿಯವರು ಕರ್ತವ್ಯ ನಿರತ ಜೈಲರರವರಿಗೆ ವಾಕಿಟಾಕಿ ಮೂಲಕ  ಕುರಿತು ವರದಿ ಮಾಡಿರುತ್ತಾರೆ. ಸದರಿ ವಿಷಯವನ್ನು ವಾಕಿಟಾಕಿ ಮೂಲಕ ಆಲಿಸಿದ ಮುಖ್ಯ ಅಧಿಕ್ಷಕರು ಸದರಿ ಬಂದಿಗೆ ತಕ್ಷಣವೇ ಹೊರ ಆಸ್ಪತ್ರೆಗೆ ಕಳುಹಿಸುವಂತೆ ಜೈಲರ ರವರಿಗೆ ಆದೇಶಿದ ಮೇರೆಗೆ ತಕ್ಷಣವೇ ಹೆಚ್ಚಿನ ಉಪಚಾರ ಕುರಿತುಜೈಲು ಸಿಬ್ಬಂದಿ ಬೆಂಗಾವಲು ಮೂಲಕ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ. ಸದರಿ ಬಂದಿಗೆ ತಪಾಸಣೆ ಮಾಡಿರುವ ಜಯದೇವ ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸದರಿ ಬಂದಿಯು ಚಿಕಿತ್ಸೆಗೆ ಸ್ಪಂದಿಸದೆ ಸಮಯ 8.30 ಕ್ಕೆ ಮೃತಪಟ್ಟಿರುತ್ತಾನೆಂದು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಎಂದು ಬೆಂಗಾವಲು ಸಿಬ್ಬಂದಿಯವರು ಸಮಯ 8.35 ಕ್ಕೆ ಈ ಸಂಸ್ಥೆಯ ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಸಿಂದನೂರ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಶವ ತನಿಖೆಯನ್ನು ವಿಡಿಯೋ ಚಿತ್ರಿಕರಣದೊಂದಿಗೆ ಗೌರವಾನ್ವಿತ 2 ನೇ ಅಪರ ಜೆಎಮ್ ಎಫ್ ಸಿ ನ್ಯಾಯಾಲಯ ಕಲಬುರಗಿ ರವರ ಸಮ್ಮುಖದಲ್ಲಿ ಮಾಡಿಸಲು ಹಾಗೂ ಮೆಜೆಸ್ಟ್ರೀಯಲ್ ತನಿಖೆಯನ್ನು ಮಾಡಿಸಿಕೊಡಲು ಸಹ ಕೋರಿದೆ. ಬಂದಿಯ ಹೆಸರಿನ ವಿವರಣಾ ಪಟ್ಟಿ ಈ ಪತ್ರದೊಂದಿಗೆ ಲಗತ್ತಿಸಿದೆ.  ಘನ ಸರ್ಕಾರದ ಪತ್ರ ಸಂಖ್ಯೆ 4ಡಿ/249/ಪಿಆರ್.ಎ/2009 ದಿನಾಂಕ: 09-01-2009 ರ ಹಾಗೂ ಡೈರೆಕ್ಟರ ಜನರಲ್ ಮತ್ತು ಇನ್ಸಪೆಕ್ಟರ ಜನರಲ್ ಆಫ್ ಪೊಲೀಸ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಕಾ ಮತ್ತು ಸು-ಮಿಶ್ರ/01/2008 ದಿನಾಂಕ:25-09-2009 ರಂತೆ  ಸದರಿ ಮೃತ ಬಂದಿಗೆ ಸಂಬಂಧಿಸಿದಂತೆ ವರದಿಗಳಾದ ಶವಪಂಚನಾಮೆ, ಮರಣೋತ್ತರ ಪರೀಕ್ಷೆ ವರದಿ, ಮರಣೊತ್ತರ ಪರೀಕ್ಷೆ ಸಂಧರ್ಭದಲ್ಲಿ ಚಿತ್ರಿಕರಿಸಿದ ವಿಡಿಯೋ, ಚಿತ್ರಿಕರಣದ ಸಿಡಿ ಯನ್ನು  ಹಾಗೂ ಮ್ಯಾಜೆಸ್ಟ್ರೀಯಲ್ ವಿಚಾರಣಾ ವರದಿಯಗಳನ್ನು ನೇರವಾಗಿ ಗೌರವಾನ್ವಿತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರಿಗೆ ಒಪ್ಪಿಸಿ ಸದರಿ ಮಾಹಿತಿಯನ್ನು ಈ ಕಛೇರಿಗೆ ಕಳುಹಿಸಿಕೊಡಲು ಕೋರಿದೆ ಅಂತಾ ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.