ಪತ್ರಿಕಾ ಪ್ರಕಟಣೆ
ದಿನಾಂಕ 22-11-2017 ರಂದು ಕಲಬುರಗಿ ನಗರದಲ್ಲಿ
ಪದ್ಮಾವತಿ ಚಲನಚಿತ್ರದ ಬಿಡುಗಡೆಯನ್ನು ವಿರೋದಿಸಿ ಒಂದು ಸಮುದಾಯದ ಜನಾಂಗದವರು ಪರವಾನಿಗೆ ಇಲ್ಲದೆ
ಪ್ರತಿಭಟನಾ ಮೇರವಣೀಗೆಯನ್ನು ಶಹಾಬಜಾರ ಕಟಗರಪೂರದ ಬಾಲಾಜಿ ಮಂದಿರದಿಂದ ಪ್ರಾರಂಭಿಸಿ ಶಹಾಬಜಾರ
ನಾಕಾ, ಪ್ರಕಾಶ ಟಾಕೀಜ, ಚೌಕ ಸರ್ಕಲ್, ಸೂಪರ್ ಮಾರ್ಕೆಟ , ಜಗತ್ ವೃತ್ತದ
ಮುಖಾಂತರ ಸರ್ದಾರ ವಲ್ಲಾಬಾಯಿ ಪಟೇಲ ವೃತ್ತದಿಂದ ಪ್ರತಿಭಟನೆ ಮಾಡಿ ಪ್ರತಿಭಟನೆಕಾರರು ತಮ್ಮ
ಕೈಯಲ್ಲಿ ಕಾನೂನು ಬಾಹಿರವಾಗಿ ಖಡ್ಗ (ತಲವಾರು) ಗಳನ್ನು ಪ್ರದರ್ಶಿಸಿ ಮಾನ್ಯ ಜಿಲ್ಲಾಧಿಕಾರಿಗಳ
ಕಛೇರಿ ಎದುರಗಡೆ ಬಂದು ಒಂದು ಪ್ರತಿಕೃತಿ ದಹನ ಮಾಡಿರುತ್ತಾರೆ. ಈ ರೀತಿ ಕಾನೂನು ಬಾಹಿರವಾಗಿ
ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಒಂದು ಭಯದ ವಾತಾವರಣ
ಸೃಷ್ಠಿಸಿರುವುದರಿಂದ ಸದರಿ ಘಟನೆ ಕುರಿತು ನಗರದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ.
ಈ ಕುರಿತಂತೆ ಘಟನೆ ದಿವಸ ಮಾರಕಾಸ್ತ್ರಗಳನ್ನು
ಪ್ರದರ್ಶನ ಮಾಡಿದ ಆರೋಪಿಗಳನ್ನು ಪೊಟೋ ಮತ್ತು ವಿಡಿಯೋ ಸಾಕ್ಷಿಯನ್ನಾಗಿ ಇಟ್ಟುಕೊಂಡು ಅವರನ್ನು
ಗುರ್ತಿಸಿ ಎಲ್ಲಾ 8 ಜನ ಆರೋಪಿತರನ್ನು ಬಂಧಿಸಿ
ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನ ಬಾಹಿರವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವ
ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಹಾಜರಪಡಿಸಲಾಗಿದೆ.
ಈ ಘಟನೆಯಲ್ಲಿ ಬೇಜವಾಬ್ದಾರಿಯನ್ನು
ಪ್ರದರ್ಶಿಸಿದ ಇಬ್ಬರೂ ಎಎಸ್ಐ ಗಳನ್ನು ಅಮಾನತ್ತಗೊಳಿಸಲಾಗಿದೆ. ಹಾಗೂ ಸಂಬಂಧಪಟ್ಟ ಚೌಕ, ಬ್ರಹ್ಮಪೂರ ಮತ್ತು ಸ್ಟೇಷನ್ ಬಜಾರ್ ಆರಕ್ಷಕ
ನಿರೀಕ್ಷಕರವರ ವಿರುದ್ದ ಭವಿಷ್ಯದಲ್ಲಿ ಇಂತಹ ಘಟನೆ ಮರುಘಟಿಸದಂತೆ ಎಚ್ಚರವಾಗಿ ಕರ್ತವ್ಯ
ನಿರ್ವಹಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
ಮುಂಬರುವ
ದಿನಗಳಲ್ಲಿ ಪ್ರತಿಭಟನಾಕಾರರು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ
ಉಂಟು ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂತ
ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಯಪಡಿಸಲಾಗಿದೆ.
No comments:
Post a Comment