POLICE BHAVAN KALABURAGI

POLICE BHAVAN KALABURAGI

25 May 2017

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 05.12.2015 ರಂದು ನನ್ನ ಮಗ ಜಗಧೀಶ ತಂದೆ ಅಣ್ಣಪ್ಪ ಭರಣಿ ವಯ: 25 ವರ್ಷ ಇತನ ಮೃತ ಪಟ್ಟಿದ್ದು ಸದರಿ ನನ್ನ ಮಗನ ಸಾವಿನಲ್ಲಿ ಸಂಶಯ ಕಂಡುಬರುತ್ತಿದ್ದೆ.  4 ದಿವಸಗಳ ನಂತರ ನನ್ನ ಮಗಳಾದ ವಿಜಯಲಕ್ಷ್ಮಿ ಇವಳು ನನಗೆ ತಿಳಿಸಿದ್ದೆನೆಂದರೆ ದಿನಾಂಕ 04.12.2015 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ಅಣ್ಣ ಜಗದೀಶ ಇತನು ಮನೆಯಲ್ಲಿ ಮಲಗಿದಾಗ ನಮ್ಮ ಗ್ರಾಮದ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಮನೆಗೆ ಬಂದಿದ್ದು ಆಗ ನಾನು ಅವರಿಗೆ ವಿಚಾರಿಸಲು ಅವರಲ್ಲಿ ಅಂಬರೀಶ ಇತನು ತಿಳಿಸಿದ್ದೆನೆಂದರೆ ಜಗದೀಶ ಇತನು ನನಗೆ ಲಗ್ನದ ಸಂಬಂದ 1 ಲಕ್ಷ 50 ಸಾವೀರ ರೂಪಾಯಿ ಕೊಟ್ಟಿದ್ದು ಅವನು ಕೊಟ್ಟ ಹಣಕ್ಕೆ ಕಾಗದ ಬರೆದು ಕುಡಬೇಕಾಗಿದೆ ಅಂತ ತಿಳಿಸಿದ್ದು ಆಗ ನಾನು ಅಣ್ಣ ಜಗದೀಶನಿಗೆ ಎಬ್ಬದಿಸಿದ್ದು ನಂತರ ಸದರಿ ಮೂರು ಜನರು ನಮ್ಮ ಅಣ್ಣ ಜಗದೀಶನಿಗೆ ಈಶ್ವರ ಇವರ ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತ ತಿಳಿಸಿದ್ದು. ನಂತರ ನನಗೆ ಗೊತ್ತಾಗಿದ್ದೆನೆಂದರೆ ನನ್ನ ಮಗ ಜಗದೀಶ ಇತನು ಈಶ್ವರ ಇತನ ಮನೆಗೆ ಹೋದಾಗ ಮಧ್ಯಾನ 3 ಗಂಟೆಯ ಸುಮಾರಿಗೆ ನನ್ನ ಮಗ ಜಗದೀಶ ಇತನು ಅಂಬರೀಶ ಇತನಿಗೆ ಹಣ ಕೊಟ್ಟ ಬಗ್ಗೆ ಕಾಗದ ಬರೆದು ಕುಡಲು ಕೇಳಿಕೊಂಡಿದ್ದು ಆಗ ಅಂಬರೀಶ ಇತನು ನನ್ನ ಮಗನಿಗೆ ಕಾಗದ ಬರೆದು ಕುಡಲು ನಿರಾಕರಿಸಿದಕ್ಕೆ ನನ್ನ ಮಗ ಜಗದೀಶ ಹಾಗೂ ಸದರಿ ಮೂರು ಜನರ ನಡುವೆ ಜಗಳಮಾಡುತ್ತಿದ್ದಾಗ ಈಶ್ವರ ಇತನ ಮನೆಯ ಪಕ್ಕದಲ್ಲಿರುವ ನಾಗಮ್ಮ ಗಂಡ ಬಂಡೆಪ್ಪ ರಾಜನಾಳ ಇವಳು ಹೋಗಿ ನೋಡಿದ್ದು ಆಗ ಅಂಬರೀಶ ಇತನು ಈ ರಂಡಿ ಮಗನಿಗೆ ಖಲಾಸ ಮಾಡಿದರೆ ಇವನಿಗೆ ಹಣ ಮರಳಿ ಕುಡುವದು ತಪ್ಪುತ್ತದೆ ಅಂತ ಸಚೀನ ಮತ್ತು ಈಶ್ವರ ಇವರ ಸಂಗಡ ಚಚರ್ೆ ಮಾಡಿ ಅದರಂತೆ ಅವರು ನನ್ನ ಮಗನಿಗೆ ಮಧ್ಯ ಸೇವನೆ ಮಾಡಿಸಿ ಅಂಬರೀಶ ಇತನು ಈಶ್ವರ ಇವರ ಮನೆಯಲ್ಲಿ ಇದ್ದ ಬಡಿಗೆ ತೆಗೆದುಕೊಂಡು ನನ್ನ ಮಗ ಜಗದೀಶ ಇತನ ತೆಲೆಯ ಮೇಲೆ ಜೋರಾಗಿ ಹೊಡೆದಿದ್ದು ಸದರಿಯವರು ಹೊಡೆದ ಪರಿಣಾಮ ನನ್ನ ಮಗ ಕುಸಿದು ಬಿದಿದ್ದು ಆಗ ಅಂಬರೀಶ ಮತ್ತು ಸಚೀನ ಇಬ್ಬರು ಅಲ್ಲಿಂದ ಹೋಗಿದ್ದು ಸ್ವಲ್ಪ ಸಮಯದ ನಂತರ ನನ್ನ ಮಗನಿಗೆ ಪ್ರಜ್ಞೆ ಬಂದು ಒದ್ದಾಡುತ್ತಿದ್ದಾಗ ಈಶ್ವರ ಇತನು ನನ್ನ ಮಗನಿಗೆ ಒಂದು ಅಟೋದಲ್ಲಿ ಹಾಕಿಕೊಂಡು ಕಮಲಾಪೂರದಲ್ಲಿರುವ ಶ್ರೀ ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೇಗೆ ತೆಗೆದುಕೊಂಡು ಬಂದಿರುವ ವಿಷಯ ನಂತರ ನನಗೆ ಗೊತ್ತಾಗಿ ನಾನು ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೆಗೆ ಹೋಗಿ ನನ್ನ ಮಗನಿಗೆ ನೋಡಿದ್ದು ಇರುತ್ತದೆ. ನನ್ನ ಮಗನಿಗೆ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಕರೆದುಕೊಂಡು ಹೋಗಿ ಹಣ ವಿಷಯವಾಗಿ ನನ್ನ ಮಗನ ಸಂಗಡ ಜಗಳ ಮಾಡಿ ಸದರಿ ಮೂರು ಜನರು ಕೂಡಿಕೊಂಡು ನನ್ನ ಮಗನಿಗೆ ಬಡಿಗೆಯಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ  ಅಂತಾ ಶ್ರೀಮತಿ ಯಸುಬಾಯಿ @ ಯಶೊದಾ ಗಂಡ ಅಣ್ಣಪ್ಪ ಭರಣಿ ಸಾ;ಕಮಲಾಪೂರ ತಾ:ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 24/05/2017 ರಂದು ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಣಸಿರಸಗಿ ಸೀಮಾಂತರದಲ್ಲಿ ಇರುವ ಅಫಜಲಪೂರ ರೋಡಿಗೆ ಇರುವ ನಾಗಲಿಂಗೇಶ್ವರ ಗುಡಿ ಎದುರುಗಡೆ ಇಬ್ಬರು ತಮ್ಮ ಹತ್ತಿರ  ಅಕ್ರಮವಾಗಿ ಆಯುಧಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳಕ್ಕೆ ಹೋಗಿ ನಾಗಲಿಂಗೇಶ್ವರ ಗುಡಿ ಎದುರುಗಡೆ ಕುಳಿತು ಆರೋಪಿತರಾದ ಶ್ರೀಪಾದ ಹುನ್ನುರು ಮತ್ತು ರವಿ ಕಟ್ಟಿ ಇವರಿಗೆ ದಾಳಿ ಮಾಡಿ ಹಿಡಿದು ಅವರಿಂದ ಅಧಿಕೃತ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಹೊಂದಿದ ಒಂದು ನಾಡ ಪಿಸ್ತೂಲ ಅ:ಕಿ: 10,000/-ರೂ. ಮತ್ತು ರಿವಾಲ್ವರ ಅ:ಕಿ: 10,000/-ರೂ. ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆಯುಧಗಳು ಪ್ರಭು ತಂದೆ ಬಾಬು  ಮತ್ತು ಖಯ್ಯುಮ ಪಟೇಲ ಇವರು ಇಟ್ಟುಕೊಳ್ಳುವುದಾಗಿ ಹೇಳಿದ್ದರಿಂದ ತಮ್ಮ ಹತ್ತಿರ ಇಟ್ಟುಕೊಂಡಿರುವುದಾಗಿ ತಿಳಿಸಿದ್ದು ಇರುತ್ತದೆ.  ಸದರು ನಾಲ್ಕು ಜನರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಇಟ್ಟುಕೊಂಡಿದ್ದರಿಂದ  ಸಿಕ್ಕಿ ಬಿದ್ದ ಶ್ರೀಪಾದ ಮತ್ತು ರವಿ ಕಟ್ಟಿ ಇವರಿಬ್ಬರಿಗೆ  ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಮುದ್ದೆ ಮಾಲಿನೊಂದಿಗೆ ಠಾಣೆಗೆ ಕರೆ ತಂದಿದ್ದು, ಸದರಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 May 2017

KALABURAGI DISTRICT REPRTED CRIMES

ಕೊಲೆ ಯತ್ನ ಪ್ರಕರಣ:-
ಸೇಡಂ ಪೊಲೀಸ್ ಠಾಣೆ:- ದಿನಾಂಕ:23-05-2017  ರಂದು ಶ್ರೀ  ಮೊಹ್ಮದ್ ಮತೀನ್ ತಂದೆ ಮೊಹ್ಮದ್ ಮಲಂಗ, , ಸಾ:ಶಹಾಬಾದ ರವರು ತಮ್ಮ ಹೇಳಿಕೆ ಫಿರ್ಯಾದಿಯಲ್ಲಿ ತಾನು ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಹೋಗಿಬರುವ ಕುರಿತು ತನ್ನ ಫಾರಚೂನರ್ ಕಾರ ನಂಬರ್ KA32N9544 ಉಪಯೋಗಿಸುತ್ತಿದ್ದು. ಹೀಗೆ ದಿ:20-05-2017 ರಂದು ಎಂದಿನಂತೆ ಶ್ರೀ.ಸಿಮೆಂಟ್ ಫ್ಯಾಕ್ಟರಿಗೆ ತನ್ನ ಫಾರಚೂನರ ಕಾರಿನಲ್ಲಿ ಶ್ರೀ ಸಿಮೆಂಟ್ ಕಂಪನಿಯ ಗೇಟ್ ಮುಂದುಗಡೆ ನಿಂತಾಗ ಬೆನಕನಹಳ್ಳಿ ಗ್ರಾಮದ 20 ರಿಂದ 25 ಜನರು ಬಂದು ನಿಮ್ಮೊಂದಿಗೆ ಮಾತಾಡಬೇಕಾಗಿದೆ ನೀವು ನಮ್ಮೊಂದಿಗೆ ನಮ್ಮ ಊರಿಗೆ ಬನ್ನಿ ಎಂದಾಗ ನಾನು ನನ್ನ ಕಾರಿನಲ್ಲಿ ಬರುತ್ತೇನೆ ನೀವು ನಡೆಯಿರಿ ಎಂದರೊ ಅವರುಗಳು ನನ್ನ ಮಾತು ಕೇಳದೇ ನನಗೆ ಜಬರದಸ್ತಿಯಿಂದ ನನ್ನನ್ನು ಅಪಹರಿಸಿ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು, ನಂತರ ನನ್ನ ಫಾರಚೂನರ ಕಾರ ಚಾಲಕ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇತನಿಗೆ ಹೆದರಿಸಿ ಆತನಿಗೆ ಸಹ ಕರೆದುಕೊಂಡು ನನ್ನ ಕಾರ ತೆಗೆದುಕೊಂಡು ಇಬ್ಬರಿಗೊ ಬೆನಕನಹಳ್ಳಿ ಗ್ರಾಮದ ದರ್ಗಾದ ಮುಂದುಗಡೆ ಕರೆದುಕೊಂಡು ಬಂದು ನಿಲ್ಲಿಸಿ ಆ 20-25 ಜನರಲ್ಲಿ ಕೆಲವು ಜನರು ನನಗೆ ನೋಡಿ “ ಅವಛ್ಯ ಶಬ್ದಗಳಿಂದ ಬಯ್ಯುತ್ತಾ ಈತ  ನನ್ನ ಮಗನಿಗೆ ಹಾವು ಕಚ್ಚಿದಾಗ ಹಾವು ಕಚ್ಚಿದ್ದ ಜಾಗಕ್ಕೆ ದಸ್ತಿ ಕಟ್ಟಿದ್ದರಿಂದ ನನ್ನ ಮಗ ಸತ್ತಿರುತ್ತಾನೆ ಇವನಿಗೆ ಬಿಡಬ್ಯಾಡರಿ” ಅಂತ ಹೇಳುತ್ತಾ 5-6 ಜನ ನನಗೆ ಹಿಡಿದುಕೊಂಡು ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿದರು. ಹಾಗೊ ಉಳಿದವರು ಹೊಟ್ಟೆಯಲ್ಲಿ ಬೆನ್ನಿಗೆ, ಮುಖಕ್ಕೆ, ಬಲಗಣ್ಣಿಗೆ, ಭುಜಕ್ಕೆ ಹೊಡೆದು ಭಾರಿ ಗುಪ್ತ ಪೆಟ್ಟು ಪಡೆಯಿಸದರು. ನಂತರ ಕೆಲವು ಜನರು  ಕಾರು ನಡೆಯಿಸುತ್ತಿದ್ದ ನನ್ನ ಅಳಿಯ ಮುಸ್ತಾಕ ಅಹ್ಮದ್ ಪಟೇಲ್ ಇವನಿಗೆ ಸಹ ಹೊಡೆದು ಗುಪ್ತ ಪೆಟ್ಟು ಮಾಡಿ ನಮಗೆ ಕೊಲೆ ಮಾಡಲು ಪ್ರಯತ್ನ ಮಾಡಿ. ನನ್ನ ಹತ್ತಿರ ಇದ್ದ ಎ.ಟಿ.ಎಮ್. ಕಾರ್ಡ, ಪ್ಯಾನ ಕಾರ್ಡ, ಡ್ರೈವಿಂಗ್ ಲೈಸೆನ್ಸ, ಮೂರು ಮೊಬೈಲ್ ಫೋನಗಳು ಹಾಗೂ ನನ್ನ ಅಳಿಯನ ಹತ್ತಿರ ಇದ್ದ ಒಂದು ಮೊಬೈಲ್ ಫೋನ ತೆಗೆದುಕೊಂಡಿರುತ್ತಾರೆ. ನಂತರ ನಮಗೆ ದರ್ಗಾದಲ್ಲಿ ಕೂಡಿ ಹಾಕಿ. ಫಾರಚೂನರ್ ಕಾರನ್ನು ಅದೇ ಜನರು ಕಲ್ಲುಗಳಿಂದ ಕಾರಿನ ಗ್ಲಾಸ್ ಒಡೆದು ಹಾಕಿರುತ್ತಾರೆ. ನಾನು ಶ್ರೀಸಿಮೆಂಟ್ ಕಂಪನಿಯಲ್ಲಿ ಕಾಂಟ್ರಕ್ಟರ್ ಕೆಲಸ ಮಾಡುತ್ತಿದ್ದ ಬಗ್ಗೆ ಸಹಿಸದ ಕೆಲವರು ನನ್ನ ಜೊತೆ ವೈಶಮ್ಯ ಬೆಳೆಯಿಸಿ ಈ ರೀತಿ ಹೊಡೆಬಡೆ ಮಾಡಿ ನನಗೆ ಕೊಲೆ ಯತ್ನ ಪ್ರಯತ್ನಿಸಿದವರ ವಿರುದ್ದ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:-

ಶಹಾಬಾದ ನಗರ ಪೊಲೀಸ್ ಠಾಣೆ :- ದಿನಾಂಕ: 23/05/2017 ರಂದು ಶ್ರೀಮತಿ ಸಕ್ರಿಬಾಯಿ ಗಂಡ ಜಗನ್ನ ರಾಠೋಡ ಸಾ: ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 20/05/2017 ರಂದು ಮುಂಜಾನೆ ತನ್ನ ಮಗನಾದ ದೀಪಕ ವಯಾ: 34 ವರ್ಷ ಇತನು ಶಹಾಬಾದನ ಬಜಾರಕ್ಕೆ ಹೋಗುತ್ತಿದ್ದಾಗ ಮಡ್ಡಿ ಏರಿಯಾದ ಕಟ್ಟಿಗೆ ಅಡ್ಡಾದ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬರುತ್ತಿದ್ದ ಕ್ರೋಜರ ನಂಬರ ಕೆ.ಎ. 32 ಎ 3489 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮಗ ದೀಪಕ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನ ಎರಡು ಕಾಲುಗಳಿಗೆ ರಕ್ತಗಾಯಾ ಮತ್ತು ತರಚಿದಂತಾ ಬಲಗಡೆ ಹಣೆ ಗುಪ್ತಪೆಟ್ಟಾಗಿ ಸ್ಥಳದಲ್ಲಿ ಬೇಹುಷ ಆಗಿದ್ದು . ಅಪಘಾತದ ನಂತರ ಕ್ರೋಜರ ಚಾಲಕನು ತನ್ನ ಕ್ರೋಜರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ತನ್ನ ಮಗನಿಗೆ ಅಪಘಾತ ಪಡಿಸಿದ ಕ್ರೋಜರ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಪಿರ್ಯಾದಿ ಸಾರಂಶದ ಮೇಲಿಂದ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

23 May 2017

KALABURAGI DISTRICT REPORTED CRIMES

ಮಟಕಾ ಜೂಜುಕೋರರ ಬಂಧನ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ:22/05/2017 ರಂದು ಶ್ರೀ ಸಂಜೀವಕುಮಾರ ಪಿಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಕಲಬುರಗಿ ರವರು  ಠಾಣೆ ವ್ಯಾಪ್ತಿಯ ರಿಂಗ್‌ ರೋಡ ಡಬರಬಾದ ಕ್ರಾಸ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬನು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಾತ್ಮಿ ಮೇರೆಗೆ ಠಾನೆಯ ಹೋಗಿ  ಠಾಣೆಯ  ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ ಮಟಕಾ ಜೂಜಾಟ ನಡೆಸುತ್ತಿದ್ದ 1) ಖುಸ್ರೊ ತಂದೆ ರಶಿದ ಮಿಯಾ ಸಾ:ಆಶ್ರಯ ಕಾಲೋನಿ ಜಾಫರಬಾದ ಈತನಿಗೆ ದಸ್ತಗೀರ ವಾಡಿ ವಿಚಾರಿಸಲಾಗಿ ತಾನು ಮಟಕಾ ಚೀಟಿಗಳನ್ನು ಬರೆದು ಹಸನ್ ಸೋಲಾಪುರಿ ಸಾ:ಎಮ್‌ಎಸ್‌‌ಕೆ ಮಿಲ್‌ ಕಲಬುರಗಿ ಇತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿ ಖುಸ್ರೋ ಈತನಿಂದ ಒಂದು ಬಾಲ್‌ ಪೆನ್‌, 1 ಮಟಕಾ ಬರೆದ ಚೀಟಿ, ನಗದು ಹಣ 1260/-ರೂಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ಠಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳುಸಾಗಾಟಗಾರರ ಬಂಧನ

ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 22-05-2017 ರಂದು ಠಾಣೆವ್ಯಾಪ್ತಿಯ ಮೈನಾಳ ಗ್ರಾಮದ ಹತ್ತಿರ ಅಕ್ರವಾಗಿ ಟಿಪ್ಪರ ಮೂಲಕ ಮರಳನ್ನು ಕಳ್ಳತನ ಮಾಡುತ್ತಿರುವ  ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಶಬಾದ ಪೊಲೀಸ್ ಠಾಣೆಯವರು ಋಆಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮರಳನ್ನು ಟಿಪ್ಪರನಲ್ಲಿ ತುಂಬಿಕೊಂಡು ಕಳ್ಳತನ ಮಾಡುತ್ತಿದ್ದ ಟಿಪ್ಪರ ನಂ ಎಪಿ 23/ ಯು 8029 ನೇದ್ದನ್ನು ವಶಪಡಿಸಿಕೊಂಡು ಸದರಿ ಟಿಪ್ಪರ ಚಾಲಕ ಮತ್ತು ಇನ್ನೊಬ್ಬನನ್ನು ವಶಕ್ಕೆ ಪಡೆದುಕೊಂಡು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡುತ್ತಿದ್ದ ಸದರಿಯವರ ವಿರುದ್ದ ಫರಹತಾಬಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.