POLICE BHAVAN KALABURAGI

POLICE BHAVAN KALABURAGI

25 May 2017

Kalaburagi District Reported Crimes

ಕೊಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 05.12.2015 ರಂದು ನನ್ನ ಮಗ ಜಗಧೀಶ ತಂದೆ ಅಣ್ಣಪ್ಪ ಭರಣಿ ವಯ: 25 ವರ್ಷ ಇತನ ಮೃತ ಪಟ್ಟಿದ್ದು ಸದರಿ ನನ್ನ ಮಗನ ಸಾವಿನಲ್ಲಿ ಸಂಶಯ ಕಂಡುಬರುತ್ತಿದ್ದೆ.  4 ದಿವಸಗಳ ನಂತರ ನನ್ನ ಮಗಳಾದ ವಿಜಯಲಕ್ಷ್ಮಿ ಇವಳು ನನಗೆ ತಿಳಿಸಿದ್ದೆನೆಂದರೆ ದಿನಾಂಕ 04.12.2015 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ಅಣ್ಣ ಜಗದೀಶ ಇತನು ಮನೆಯಲ್ಲಿ ಮಲಗಿದಾಗ ನಮ್ಮ ಗ್ರಾಮದ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಮನೆಗೆ ಬಂದಿದ್ದು ಆಗ ನಾನು ಅವರಿಗೆ ವಿಚಾರಿಸಲು ಅವರಲ್ಲಿ ಅಂಬರೀಶ ಇತನು ತಿಳಿಸಿದ್ದೆನೆಂದರೆ ಜಗದೀಶ ಇತನು ನನಗೆ ಲಗ್ನದ ಸಂಬಂದ 1 ಲಕ್ಷ 50 ಸಾವೀರ ರೂಪಾಯಿ ಕೊಟ್ಟಿದ್ದು ಅವನು ಕೊಟ್ಟ ಹಣಕ್ಕೆ ಕಾಗದ ಬರೆದು ಕುಡಬೇಕಾಗಿದೆ ಅಂತ ತಿಳಿಸಿದ್ದು ಆಗ ನಾನು ಅಣ್ಣ ಜಗದೀಶನಿಗೆ ಎಬ್ಬದಿಸಿದ್ದು ನಂತರ ಸದರಿ ಮೂರು ಜನರು ನಮ್ಮ ಅಣ್ಣ ಜಗದೀಶನಿಗೆ ಈಶ್ವರ ಇವರ ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತ ತಿಳಿಸಿದ್ದು. ನಂತರ ನನಗೆ ಗೊತ್ತಾಗಿದ್ದೆನೆಂದರೆ ನನ್ನ ಮಗ ಜಗದೀಶ ಇತನು ಈಶ್ವರ ಇತನ ಮನೆಗೆ ಹೋದಾಗ ಮಧ್ಯಾನ 3 ಗಂಟೆಯ ಸುಮಾರಿಗೆ ನನ್ನ ಮಗ ಜಗದೀಶ ಇತನು ಅಂಬರೀಶ ಇತನಿಗೆ ಹಣ ಕೊಟ್ಟ ಬಗ್ಗೆ ಕಾಗದ ಬರೆದು ಕುಡಲು ಕೇಳಿಕೊಂಡಿದ್ದು ಆಗ ಅಂಬರೀಶ ಇತನು ನನ್ನ ಮಗನಿಗೆ ಕಾಗದ ಬರೆದು ಕುಡಲು ನಿರಾಕರಿಸಿದಕ್ಕೆ ನನ್ನ ಮಗ ಜಗದೀಶ ಹಾಗೂ ಸದರಿ ಮೂರು ಜನರ ನಡುವೆ ಜಗಳಮಾಡುತ್ತಿದ್ದಾಗ ಈಶ್ವರ ಇತನ ಮನೆಯ ಪಕ್ಕದಲ್ಲಿರುವ ನಾಗಮ್ಮ ಗಂಡ ಬಂಡೆಪ್ಪ ರಾಜನಾಳ ಇವಳು ಹೋಗಿ ನೋಡಿದ್ದು ಆಗ ಅಂಬರೀಶ ಇತನು ಈ ರಂಡಿ ಮಗನಿಗೆ ಖಲಾಸ ಮಾಡಿದರೆ ಇವನಿಗೆ ಹಣ ಮರಳಿ ಕುಡುವದು ತಪ್ಪುತ್ತದೆ ಅಂತ ಸಚೀನ ಮತ್ತು ಈಶ್ವರ ಇವರ ಸಂಗಡ ಚಚರ್ೆ ಮಾಡಿ ಅದರಂತೆ ಅವರು ನನ್ನ ಮಗನಿಗೆ ಮಧ್ಯ ಸೇವನೆ ಮಾಡಿಸಿ ಅಂಬರೀಶ ಇತನು ಈಶ್ವರ ಇವರ ಮನೆಯಲ್ಲಿ ಇದ್ದ ಬಡಿಗೆ ತೆಗೆದುಕೊಂಡು ನನ್ನ ಮಗ ಜಗದೀಶ ಇತನ ತೆಲೆಯ ಮೇಲೆ ಜೋರಾಗಿ ಹೊಡೆದಿದ್ದು ಸದರಿಯವರು ಹೊಡೆದ ಪರಿಣಾಮ ನನ್ನ ಮಗ ಕುಸಿದು ಬಿದಿದ್ದು ಆಗ ಅಂಬರೀಶ ಮತ್ತು ಸಚೀನ ಇಬ್ಬರು ಅಲ್ಲಿಂದ ಹೋಗಿದ್ದು ಸ್ವಲ್ಪ ಸಮಯದ ನಂತರ ನನ್ನ ಮಗನಿಗೆ ಪ್ರಜ್ಞೆ ಬಂದು ಒದ್ದಾಡುತ್ತಿದ್ದಾಗ ಈಶ್ವರ ಇತನು ನನ್ನ ಮಗನಿಗೆ ಒಂದು ಅಟೋದಲ್ಲಿ ಹಾಕಿಕೊಂಡು ಕಮಲಾಪೂರದಲ್ಲಿರುವ ಶ್ರೀ ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೇಗೆ ತೆಗೆದುಕೊಂಡು ಬಂದಿರುವ ವಿಷಯ ನಂತರ ನನಗೆ ಗೊತ್ತಾಗಿ ನಾನು ಚಂದ್ರಕಾಂತ ಚಿಂಚೂರ ಇವರ ಆಸ್ಪತ್ರೆಗೆ ಹೋಗಿ ನನ್ನ ಮಗನಿಗೆ ನೋಡಿದ್ದು ಇರುತ್ತದೆ. ನನ್ನ ಮಗನಿಗೆ 1. ಅಂಬರೀಶ ತಂದೆ ಶರಣಪ್ಪ ಬಾಜಿನವರ 2. ಸಚೀನ ತಂದೆ ಚಂದ್ರಪ್ಪ ದಮ್ಮೂರ ಮತ್ತು 3. ಈಶ್ವರ ತಂದೆ ಗುರುನಾಥ ಪಸಪೂಲ ಇವರು ಕರೆದುಕೊಂಡು ಹೋಗಿ ಹಣ ವಿಷಯವಾಗಿ ನನ್ನ ಮಗನ ಸಂಗಡ ಜಗಳ ಮಾಡಿ ಸದರಿ ಮೂರು ಜನರು ಕೂಡಿಕೊಂಡು ನನ್ನ ಮಗನಿಗೆ ಬಡಿಗೆಯಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ  ಅಂತಾ ಶ್ರೀಮತಿ ಯಸುಬಾಯಿ @ ಯಶೊದಾ ಗಂಡ ಅಣ್ಣಪ್ಪ ಭರಣಿ ಸಾ;ಕಮಲಾಪೂರ ತಾ:ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದವರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 24/05/2017 ರಂದು ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಣಸಿರಸಗಿ ಸೀಮಾಂತರದಲ್ಲಿ ಇರುವ ಅಫಜಲಪೂರ ರೋಡಿಗೆ ಇರುವ ನಾಗಲಿಂಗೇಶ್ವರ ಗುಡಿ ಎದುರುಗಡೆ ಇಬ್ಬರು ತಮ್ಮ ಹತ್ತಿರ  ಅಕ್ರಮವಾಗಿ ಆಯುಧಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳಕ್ಕೆ ಹೋಗಿ ನಾಗಲಿಂಗೇಶ್ವರ ಗುಡಿ ಎದುರುಗಡೆ ಕುಳಿತು ಆರೋಪಿತರಾದ ಶ್ರೀಪಾದ ಹುನ್ನುರು ಮತ್ತು ರವಿ ಕಟ್ಟಿ ಇವರಿಗೆ ದಾಳಿ ಮಾಡಿ ಹಿಡಿದು ಅವರಿಂದ ಅಧಿಕೃತ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಹೊಂದಿದ ಒಂದು ನಾಡ ಪಿಸ್ತೂಲ ಅ:ಕಿ: 10,000/-ರೂ. ಮತ್ತು ರಿವಾಲ್ವರ ಅ:ಕಿ: 10,000/-ರೂ. ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆಯುಧಗಳು ಪ್ರಭು ತಂದೆ ಬಾಬು  ಮತ್ತು ಖಯ್ಯುಮ ಪಟೇಲ ಇವರು ಇಟ್ಟುಕೊಳ್ಳುವುದಾಗಿ ಹೇಳಿದ್ದರಿಂದ ತಮ್ಮ ಹತ್ತಿರ ಇಟ್ಟುಕೊಂಡಿರುವುದಾಗಿ ತಿಳಿಸಿದ್ದು ಇರುತ್ತದೆ.  ಸದರು ನಾಲ್ಕು ಜನರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಆಯುಧ ಇಟ್ಟುಕೊಂಡಿದ್ದರಿಂದ  ಸಿಕ್ಕಿ ಬಿದ್ದ ಶ್ರೀಪಾದ ಮತ್ತು ರವಿ ಕಟ್ಟಿ ಇವರಿಬ್ಬರಿಗೆ  ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಮುದ್ದೆ ಮಾಲಿನೊಂದಿಗೆ ಠಾಣೆಗೆ ಕರೆ ತಂದಿದ್ದು, ಸದರಿ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: